• Home
  • »
  • News
  • »
  • state
  • »
  • Ramesh Jarkiholi: H D ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿದ್ದು ನಿಜ; ಬಿಜೆಪಿ ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ- ರಮೇಶ್​ ಜಾರಕಿಹೊಳಿ

Ramesh Jarkiholi: H D ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿದ್ದು ನಿಜ; ಬಿಜೆಪಿ ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ- ರಮೇಶ್​ ಜಾರಕಿಹೊಳಿ

ಹೆಚ್​.ಡಿ ಕುಮಾರಸ್ವಾಮಿ, ರಮೇಶ್​ ಜಾರಕಿಹೊಳಿ

ಹೆಚ್​.ಡಿ ಕುಮಾರಸ್ವಾಮಿ, ರಮೇಶ್​ ಜಾರಕಿಹೊಳಿ

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಮಾತುಕತೆ ಆಗಿರೋದು ನಿಜ. ನಿತ್ಯ ಫೋನ್ ನಲ್ಲಿ ಮಾತನಾಡುತ್ತೇವೆ. ಆದರೇ ನಾನು ಬಿಜೆಪಿ ಬಿಡೋ ಪ್ರಶ್ನೆಯೇ ಇಲ್ಲ. ಇವರೆಗೆ ಮಂತ್ರಿ ಮಾಡಿ ಎಂದು ಯಾರ ಮನೆಗೆ ಹೋಗಿಲ್ಲ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

  • Share this:

ಬೆಳಗಾವಿ (ನ.19): 2023ರ ವಿಧಾನಸಭೆ ಚುನಾವಣೆ (Assembly Election) ಸಮೀಪಿಸುತ್ತಿದ್ದಂತೆ ಮತ್ತೆ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ರಮೇಶ್ ಜಾರಕಿಹೊಳಿ (Ramesh Jarkiholi) ಜೆಡಿಎಸ್ ಸಂಪರ್ಕದಲ್ಲಿ ಇದ್ದಾರೆ ಎಂಬ ವದಂತಿಗೆ  ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಪಕ್ಷಕ್ಕೆ ಪರೋಕ್ಷ ಎಚ್ಚರಿಕೆಯನ್ನು ರಮೇಶ್​ ಜಾರಕಿಹೊಳಿ ರವಾನೆ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಎಳೆಬೈಲ್ ಗ್ರಾಮದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಕೆಲ ವಿಚಾರದಲ್ಲಿ ಮನಸ್ಸಿಗೆ ನೋವಾಗಿ ಕಳೆದ 1 ವರ್ಷಗಳಿಂದ ಮಾಧ್ಯಮಗಳಿಂದ ದೂರವಿದೆ.


ನಾನು ಬಿಜೆಪಿ ಬಿಡೋ ಪ್ರಶ್ನೆಯೇ ಇಲ್ಲ


ಆದ್ರೆ ಈಗ ಒಂದು ವಿಚಾರವನ್ನು ಸ್ಪಷ್ಟ ಮಾಡುತ್ತೇನೆ.  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜೊತೆಗೆ ಮಾತುಕತೆ ಆಗಿರೋದು ನಿಜ. ನಿತ್ಯ ಫೋನ್ ನಲ್ಲಿ ಮಾತನಾಡುತ್ತೇವೆ. ಆದರೇ ನಾನು ಬಿಜೆಪಿ ಬಿಡೋ ಪ್ರಶ್ನೆಯೆ ಇಲ್ಲ. ಇವರೆಗೆ ಮಂತ್ರಿ ಮಾಡಿ ಎಂದು ಯಾರ ಮನೆಗೆ ಹೋಗಿಲ್ಲ. ನಾನು ಲಾಭಿ ಮಾಡುವ ಪ್ರಶ್ನೆಯೆ ಇಲ್ಲ. ನಾನು ಹೇಳಿದರೂ ಸತತವಾಗಿ ರಮೇಶ ಜಾರಕಿಹೊಳಿ ದೆಹಲಿಗೆ ಹೋಗಿ ಲಾಭಿ ಮಾಡ್ತಿದ್ದಾರೆ ಅಂತಾ ಬರ್ತಿದೆ.


It is true that Ramesh Jarakiholi discussed with HD Kumaraswamy, there is no question of leaving the BJP party
ಹೆಚ್​.ಡಿ ಕುಮಾರಸ್ವಾಮಿ, ರಮೇಶ್​ ಜಾರಕಿಹೊಳಿ


ಹೈಕಮಾಂಡ್‌ ಯಾವಾಗ ಮಂತ್ರಿ ಮಾಡ್ತಾರೆ ಮಾಡಲಿ


ನಾನು ಲಾಭಿ ಮಾಡುವ ಮನುಷ್ಯನಲ್ಲ. ಸರ್ಕಾರ ಮಾಡಿದವರು ನಾವು, ನಾನು ಅಲ್ಲ ನಾವು. ನಾನು ಹೋಗಿ ಬಯೋಡೇಟಾ ತಗೆದುಕೊಂಡು ಮಂತ್ರಿ ಮಾಡಿ ಎನ್ನುವ ಕೆಳಮಟ್ಟಿಗೆ ಇಳಿದಿಲ್ಲ. ಹೈಕಮಾಂಡ್‌ ಯಾವಾಗ ಮಂತ್ರಿ ಮಾಡ್ತಾರೆ ಮಾಡಲಿ ಬೇಕಾದ್ರೆ ಬಿಡಲಿ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.


ರಮೇಶ್ ಜಾರಕಿಹೊಳಿ & ಹೆಚ್‌ಡಿಕೆ ಉದ್ದೇಶ ಒಂದೇ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು!


ನಾನು ಮತ್ತೊಮ್ಮೆ ಹೇಳ್ತೀನಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಂದು ಸರ್ಕಾರ ಮಾಡಲೇಬೇಕು. ಹೆಚ್.ಡಿ‌‌ ಕುಮಾರಸ್ವಾಮಿಗೆ ನಾನು ಒಂದೇ ಹೇಳಿದ್ದೀನಿ. ಕುಮಾರಣ್ಣ ಯಾವುದೇ ಕಾರಣಕ್ಕೂ ನಾನು ಬರುವುದಿಲ್ಲ. ನಿನ್ನ ಉದ್ದೇಶ ನೀನು ಮಾಡು, ನನ್ನ ಉದ್ದೇಶ ನಾನು ಮಾಡ್ತೀನಿ ಎಂದು ಹೇಳಿದ್ದಾರೆ.


ನಾನು ಬಿಜೆಪಿಯಲ್ಲಿ ಮಾಡ್ತೀನಿ ನೀನು ಜೆಡಿಎಸ್ 


ನಮ್ಮ ಇಬ್ಬರ ಉದ್ದೇಶ ಒಂದೇ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಹೆಚ್‌.ಡಿ‌‌ ಕುಮಾರಸ್ವಾಮಿ ಉದ್ದೇಶ ಸಹ ಕಾಂಗ್ರೆಸ್ ಬರಬಾರದು ಅಂತ ಇದೆ. ರಮೇಶ್ ಜಾರಕಿಹೊಳಿ ಉದ್ದೇಶವೂ ಕಾಂಗ್ರೆಸ್ ಸರ್ಕಾರ ಬರಬಾರದು. ನಾನು ಬಿಜೆಪಿಯಲ್ಲಿ ಮಾಡ್ತೀನಿ ನೀನು ಜೆಡಿಎಸ್ ನಲ್ಲಿ ಮಾಡು ಅಷ್ಟು ಹೇಳಿದ್ದೀನಿ ಎಂದು ರಮೇಶ ಜಾರಕಿಹೊಳಿ ಹೇಳಿದರು


ಇದನ್ನೂ ಓದಿ: Satish Jarkoholi: ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಯೂನಿವರ್ಸಿಟಿ ವಿಸಿ; ಸತೀಶ್​ ಜಾರಕಿಹೊಳಿ ವ್ಯಂಗ್ಯ


ಚ್‌ಡಿಕೆ ಜೊತೆ ಮಾತನಾಡುವ ಸಂದರ್ಭ ಏಕೆ ಬಂತು ಎಂದು ಮಾಧ್ಯಮಗಳ ಪ್ರಶ್ನೆ. ಅವರ ಕುಟುಂಬದವರು ಹಾಗೂ ನಮ್ಮ ಜೊತೆ 1994ರಿಂದ ಸಂಬಂಧ ಇದೆ. 1994ರಲ್ಲೇ ದೇವೇಗೌಡರು ನನ್ನ ಪಕ್ಷಕ್ಕೆ ಕರೆದಿದ್ರು ಮಂತ್ರಿ ಮಾಡ್ತೀನಿ ಅಂದಿದ್ರು. ನಾನು 1999ರಲ್ಲಿ ಎಂಎಲ್‌ಎ ಆಗಿದ್ದು. ಆದ್ರೆ 1994ರಲ್ಲೇ ದೇವೇಗೌಡರು ನಮ್ಮ ಪಕ್ಷಕ್ಕೆ ಸೇರು ಮಂತ್ರಿ ಮಾಡ್ತೀನಿ ಅಂದಿದ್ರು. ಆಗ ಕಾಂಗ್ರೆಸ್ ಬಿಡಲ್ಲ ಅಂತಾ ಹೇಳಿದ್ದೆ. ಅನಿವಾರ್ಯ ಕಾರಣದಿಂದ ಕಾಂಗ್ರೆಸ್ ಬಿಡಬೇಕಾಯಿತು. ಕಾಂಗ್ರೆಸ್ ಪಕ್ಷ ನನಗೇನೂ ಕೆಟ್ಟದ್ದು ಮಾಡಿಲ್ಲ. ರಾಜ್ಯದಲ್ಲಿ ಲೀಡರ್ ಇರುವರೆಗೂ ಕಾಂಗ್ರೆಸ್ ಸರ್ವನಾಶ ಆಗೋದು ನಕ್ಕಿ (ಪಕ್ಕಾ). ಕಾಂಗ್ರೆಸ್ ಪಕ್ಷದ ಲೀಡರ್ ನಡವಳಿಕೆ ನೋಡಿದರೆ ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಜಾರಕಿಹೊಳಿ ಹೇಳಿದ್ರು.

Published by:ಪಾವನ ಎಚ್ ಎಸ್
First published: