Tambula Prashne: ಮಳಲಿಯಲ್ಲಿ ಇದ್ದಿದ್ದು ಮಂದಿರವೋ, ಮಸೀದಿಯೋ? ತಾಂಬೂಲ ಪ್ರಶ್ನೆಯಲ್ಲಿ ರಹಸ್ಯ ಬಯಲು!

ಮಂಗಳೂರಿನ ಮಳಲಿ ಮಸೀದಿ ಕುರಿತಂತೆ ತಾಂಬೂಲ ಪ್ರಶ್ನೆ ನಡೆದಿದೆ. ಹಾಗಿಾದರೆ ತಾಂಬೂಲ ಪ್ರಶ್ನೆಯಲ್ಲಿ ಏನಾಯ್ತು? ಮಸೀದಿಯಲ್ಲಿ ದೈವ ಸ್ಥಾನವಿತ್ತಾ? ಅಲ್ಲಿ ಮಸೀದಿ ಹೇಗೆ ಬಂತು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಜನ ಕೂಡ ಕಾತರರಾಗಿದ್ದರು. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ…

ಇಂದು ನಡೆದ ತಾಂಬೂಲ ಪ್ರಶ್ನೆ (ಚಿತ್ರ ಕೃಪೆ: ANI)

ಇಂದು ನಡೆದ ತಾಂಬೂಲ ಪ್ರಶ್ನೆ (ಚಿತ್ರ ಕೃಪೆ: ANI)

  • Share this:
ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಂಗಳೂರಿನ (Mangaluru) ಮಳಲಿ (Malali) ಮಸೀದಿಯ (Masjid) ಕುರಿತಾದ ತಾಂಬೂಲ ಪ್ರಶ್ನೆ (Tambula Prashne) ಶಾಸ್ತ್ರ ಇದೀಗ ಮುಕ್ತಾಯವಾಗಿದೆ. ಇದೀಗ ಕೇರಳದ (Kerala) ಪ್ರಖ್ಯಾತ ಜ್ಯೋತಿಷಿ (Astrologer) ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆದಿದೆ. ತಾಂಬೂಲ ಪ್ರಶ್ನೆಯಲ್ಲಿ ಏನಾಯ್ತು? ಮಸೀದಿಯಲ್ಲಿ ದೈವ (God) ಸ್ಥಾನವಿತ್ತಾ? ಅಲ್ಲಿ ಮಸೀದಿ ಹೇಗೆ ಬಂತು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ (Answer) ತಿಳಿದುಕೊಳ್ಳಲು ಜನ ಕೂಡ ಕಾತರರಾಗಿದ್ದರು. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ…

ಮಸೀದಿಯಲ್ಲಿ ಗೋಚರಿಸಿತಂತೆ ದೈವಸ್ಥಾನ

ದಕ್ಷಿಣ  ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಮಳಲಿ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ಇಂದು ಬೆಳಗ್ಗೆ 8 ಗಂಟೆಯಿಂದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿತ್ತು. ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆ ಇದೀಗ ಮುಕ್ತಾಯವಾಗಿದೆ. ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಿದ್ದಾರೆ.ಈ ಹಿಂದೆ ಇದೇ ಜಾಗದಲ್ಲಿ ಮಠ ಇತ್ತಂತೆ

ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ಆದರೆ ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ ಅಂತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ವಿವಾದದಿಂದಾಗಿ ದೇವಾಲಯ ನಾಶಪಡಿಸಿ, ಮಸೀದಿ ಕಟ್ಟಲಾಗಿದೆ. ಹೀಗಾಗಿ ಇಲ್ಲಿ ದೇವಾಲಯವನ್ನು ಮರುಸ್ಥಾಪಿಸಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ದಿಢೀರ್ ಸೇತುವೆ ಕುಸಿದು 30 ಅಡಿ ರಾಜಕಾಲುವೆಗೆ ಬಿದ್ರು 7 ಕಾರ್ಮಿಕರು

ಅಷ್ಟಮಂಗಲ ಪ್ರಶ್ನೆ ನಡೆಸುವಂತೆ ಸಲಹೆ

ಆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ , ಈ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ದೈವಸಾನಿಧ್ಯವಿತ್ತೇ, ಪೂರ್ವದಲ್ಲಿ ಯಾವ ರೀತಿ ಆರಾಧನೆ ನಡೆಯುತ್ತಿತ್ತು ಎಂಬ ನಿಟ್ಟಿನಲ್ಲಿ ನಾವು ಇಂದು ತಾಂಬೂಲ ಪ್ರಶ್ನೆ ಇರಿಸಿದ್ದೇವೆ‌. ಈ ನಿಟ್ಟಿನಲ್ಲಿ ಇಲ್ಲಿ ಶೈವ ಆರಾಧನೆ ಇತ್ತು ಎಂದು ಗೋಚರವಾಗಿದೆ. ಆದರೆ ಕೂಲಂಕಷ ಚರಿತ್ರೆಯನ್ನು ಅರಿಯಲು ತಾಂಬೂಲ ಪ್ರಶ್ನಾ ಚಿಂತನೆಯಿಂದಲೇ ಸಾಧ್ಯವಿಲ್ಲ. ಅದಕ್ಕಾಗಿ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಬೇಕಾಗಿದೆ ಅಂತ ಸಲಹೆ ನೀಡಿದ್ದಾರೆ.

ದೇಗುಲ ಅಭಿವೃದ್ಧಿ ಆದರೆ ಗ್ರಾಮ ಅಭಿವೃದ್ಧಿ

ಇನ್ನು ಇಲ್ಲಿ ಪೂರ್ವದಲ್ಲಿ ಗುರುಮಠದ ಅಧೀನದಲ್ಲಿ ಶೈವ ಆರಾಧನೆಯ ಸಾನಿಧ್ಯವಿತ್ತು ಎಂದು ತೋರಿ ಬಂದಿದೆ. ಅದೇ ತರಹದಲ್ಲಿ ಇಲ್ಲಿ ಆರಾಧನೆಗೊಂಡ ಉಪಾಧಿಯಾಗಿ ಕೆಲವೊಂದು ವಸ್ತುಗಳು ಕೆಲವು ಮಠಗಳಲ್ಲಿ, ದೇವಾಲಯಗಳಲ್ಲಿ ಆರಾಧನೆ ಗೊಳ್ಳತ್ತಿವೆ ಎಂದು ಗೋಚರವಾಗಿದೆ‌ ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಾನಿಧ್ಯದ ಜೀರ್ಣೋದ್ಧಾರ ಆಗಬೇಕು, ಇದು ಆದಲ್ಲಿ ಈ ಗ್ರಾಮವೂ ಅಭಿವೃದ್ಧಿ ಆಗಲಿದೆ. ಯಾರಿಗೂ ತೊಂದರೆ ಆಗದಂತೆ ಈ ಸಾನಿಧ್ಯ ಜೀರ್ಣೋದ್ಧಾರ ಆಗಬೇಕು. ಇದಕ್ಕಾಗಿ ಎಲ್ಲರ ಸಹಕಾರ, ಪ್ರಾರ್ಥನೆ ಅಗತ್ಯ ಅಂತ ದೈವಜ್ಞ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.

ತಾಂಬೂಲ ಪ್ರಶ್ನೆಗೆ ಎಸ್‌ಡಿಪಿಐ ವಿರೋಧ

ಇನ್ನು ಮಳಲಿ ಮಸೀದಿ ಕುರಿತಾಗಿ ಹಿಂದೂಪರ ಸಂಘಟನೆಗಳು ತಾಂಬೂಲ ಪ್ರಶ್ನೆ ಕೇಳಿದ್ದಕ್ಕೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿದೆ. ದಾವಣಗೆರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಡಿಪಿಐ ರಾಜ್ಯ ಪ್ರಧಾನಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ,  ಕೊರೋನಾ ಬಂದಾಗ ತಾಂಬೂಲ ಪ್ರಶ್ನೆ ಕೇಳುವವರು ಎಲ್ಲಿ ಹೋಗಿದ್ರು ಅಂತ ಪ್ರಶ್ನಿಸಿದ್ದಾರೆ. ಎಲ್ಲೋ ಮಸೀದಿಯೊಂದರ ಜಾಗದಲ್ಲಿ ದೇವರಿದ್ದಾನೆ ಅಂತ ತಾಂಬೂಲ ಪ್ರಶ್ನೆ ಬಂದಿದೆ. ಆದರೆ ದೇವರು ಎಲ್ಲಾ ಕಡೆ ಇದ್ದಾನೆ. ಹಾಗಂತ ಜಿಲ್ಲಾಡಳಿತ, ಕಚೇರಿ ಎಸ್ಪಿ ಕಚೇರಿ ಅದನ್ನೆಲ್ಲಾ ದೇವಸ್ಥಾನ ಮಾಡೋಕೆ ಹೋಗ್ತಿರಾ ಅಂತ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Dowry Caseನಲ್ಲಿ ಸಿಲುಕಿ ನರಳಾಡಿದ್ದ 80ರ ವೃದ್ಧೆ! ಕೊನೆಗೂ ಆಪಾದನೆಯಿಂದ ಅಜ್ಜಿಗೆ ಮುಕ್ತಿ

“ಜನರನ್ನು ದಾರಿ ತಪ್ಪಿಸುವ ಹುನ್ನಾರ”

ಬಿಜೆಪಿ ತಪ್ಪುಗಳನ್ನ ಮುಚ್ಚಿ ಹಾಕುವುದಕ್ಕೆ ಈ ರೀತಿ ಭಾವನಾತ್ಮಕ ವಿಚಾರ ತಂದು ಜನರನ್ನ ದಾರಿ ತಪ್ಪಿಸುತ್ತಿದೆ. ತಾಂಬೂಲು ಪ್ರಶ್ನೆ ಕೇಳುವವರು ಸಿಎಂ ಸೀಟಿಗೆ 2500 ಕೋಟಿ ರೂಪಾಯಿ ಇಟ್ಟಿದ್ದು ತಾಂಬೂಲ ಪ್ರಶ್ನೆಯಲ್ಲಿ ಬರ್ಲಿಲ್ವಾ? 40% ವಿಚಾರವಾಗಿ ಗುತ್ತೆದಾರ ಸಂಘ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ, ಇದರ ಬಗ್ಗೆ ತಾಂಬೂಲ ಪ್ರಶ್ನೆ ಬರ್ಲಿಲ್ವಾ? ಜನರನ್ನ ಡೈವರ್ಟ್ ಮಾಡಲು ಬಿಜೆಪಿ ಇಂತ ಭಾವನಾತ್ಮಕ ವಿಚಾರ ತರ್ತಾ ಇದಾರೆ ಅಂತ ಅವರು ಆರೋಪಿಸಿದ್ದಾರೆ.
Published by:Annappa Achari
First published: