HOME » NEWS » State » IT IS TRUE THAT CORONAVIRUS INFECTS RAMESH JARKIHOLI LAWYER JAGDISHS WRITE A LETTER TO POLISH COMMISSIONER MAK

Ramesh Jarkiholi CD Case; ಕೊರೋನಾ ಎಂದು ಆರೋಪಿ ರಮೇಶ್​ ಜಾರಕಿಹೊಳಿ ನಾಟಕವಾಡುತ್ತಿದ್ದಾರೆಯೇ?; ವಕೀಲ ಜಗದೀಶ್​ ಪತ್ರ!

ರಮೇಶ್​ ಜಾರಕಿಹೊಳಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುವ ಹಾಗೆ ನಾಟಕವಾಡುತ್ತಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವೆಂಟಿಲೇಟರ್ ಮಾಸ್ಕ್ ಬದಲು ಬಟ್ಟೆ ಮಾಸ್ಕ್ ಹಾಕಿ ಮಾಜಿ ಸಚಿವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಕೀಲ ಜಗದೀಶ್​ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

news18-kannada
Updated:April 6, 2021, 6:40 PM IST
Ramesh Jarkiholi CD Case; ಕೊರೋನಾ ಎಂದು ಆರೋಪಿ ರಮೇಶ್​ ಜಾರಕಿಹೊಳಿ ನಾಟಕವಾಡುತ್ತಿದ್ದಾರೆಯೇ?; ವಕೀಲ ಜಗದೀಶ್​ ಪತ್ರ!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್ ಜಾರಕಿಹೊಳಿ.
  • Share this:
ಬೆಂಗಳೂರು (ಏಪ್ರಿಲ್ 06); ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸೋಮವಾರ ಎಸ್​ಐಟಿ ಎದುರು ವಿಚಾರಣೆಗೆ ಹಾಜರ್​ ಆಗಬೇಕಿತ್ತು. ಆದರೆ, ದಿಢೀರ್​ ಬೆಳವಣಿಗೆಯಲ್ಲಿ ರಮೇಶ್​ ಜಾರಕಿಹೊಳಿ ಅವರಿಗೆ ಕೊರೋನಾ ಸೋಂಕು ತಗುಲಿದ್ದು ಅವರು ಗೋಕಾಕ್​ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಮಾಹಿತಿಗಳು ನಿನ್ನೆ ರಾತ್ರಿ ಹರಿದಾಡಲು ಆರಂಭಿಸಿದ್ದವು. ಈ ಸಂಬಂಧ ರಮೇಶ್ ಜಾರಕಿಹೊಳಿ ಐಸಿಯು ನಲ್ಲಿ ದಾಖಲಾಗಿರುವ ಒಂದು ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ, ಇದು ನಾಟಕ ಎಂದು ದೂರಿರುವ ಸಂತ್ರಸ್ತೆಯ ವಕೀಲ ಜಗದೀಶ್​, "ಮಾಜಿ ಸಚಿವ ಆರೋಪಿ ರಮೇಶ್​ ಜಾರಕಿಹೊಳಿ ಬಂಧನದ ಭೀತಿಯಿಂದಾಗಿ ಕೊರೋನಾ ಸೋಂಕಿನ ವೇಷ ಧರಿಸಿ ನಾಟಕವಾಡುತ್ತಿದ್ದಾರೆ" ಎಂದು ಪೊಲೀಸ್​ ಆಯುಕ್ತ ಕಮಲ್​ ಪಂಥ್​ಗೆ ಪತ್ರ ಬರೆದಿದ್ದಾರೆ.

ರಮೇಶ್​ ಜಾರಕಿಹೊಳಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ನಾಟಕ ಎಂದು ಪತ್ರದಲ್ಲಿ ದೂರಿರುವ ವಕೀಲ ಜಗದೀಶ್​, "ರಮೇಶ್​ ಜಾರಕಿಹೊಳಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುವ ಹಾಗೆ ನಾಟಕವಾಡುತ್ತಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವೆಂಟಿಲೇಟರ್ ಮಾಸ್ಕ್ ಬದಲು ಬಟ್ಟೆ ಮಾಸ್ಕ್ ಹಾಕಿ ಮಾಜಿ ಸಚಿವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಕಲಿ ಕೊರೋನಾ ವರದಿ ನೀಡಲಾಗಿದೆ. ಪ್ರಭಾವ ಬಳಸಿ ದಿಕ್ಕು ತಪ್ಪಿಸಲಾಗುತ್ತಿದೆ. ಹೀಗಾಗಿ ಪೊಲೀಸ್​ ಆಯುಕ್ತರು ರಮೇಶ್ ಜಾರಕಿಹೋಳಿಗೆ ನಿಜವಾಗಿಯೂ ಕೊರೋನಾ ಪಾಸಿಟಿವ್ ಇದೆಯಾ ಎಂದು ಚೆಕ್ ಮಾಡಿ ವರದಿ ನೀಡಬೇಕು" ಎಂದು ಮನವಿ ಮಾಡಿದ್ದಾರೆ.

ಅಸಲಿಗೆ ಮಾರ್ಚ್ 30ರಂದು ಕೊಲ್ಹಾಪುರ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದಿದ್ದ ರಮೇಶ್ ಜಾರಕಿಹೊಳಿ ನಂತರ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ, ಏಪ್ರಿಲ್ 1ರಂದು ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಲಾಗಿದ್ದು, ಸೋಂಕು ದೃಢ ಪಟ್ಟಿದೆ. 4 ದಿನ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇದ್ದ ರಮೇಶ್​ ಜಾರಕಿಹೊಳಿಗೆ ನಿನ್ನೆ ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಗೋಕಾಕ್ ತಾಲೂಕು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ramesh Jarkiholi CD Case: ರಮೇಶ್ ಜಾರಕಿಹೊಳಿಗೆ ಕೊರೋನಾ ಸೋಂಕು; ಐಸಿಯುನಲ್ಲಿ ದಾಖಲಾಗಿರೋ ವಿಡಿಯೋ ಬಿಡುಗಡೆ!

ಗೋಕಾಕ್ ತಾಲೂಕು ಆಸ್ಪತ್ರೆಯ ವೈದ್ಯ ರವೀಂದ್ರ ಅಂಟಿನ್ ಈ ಬಗ್ಗೆ ಮಾಧ್ಯಗಳಿಗೆ ಮಾಹಿತಿ ನೀಡಿದ್ದು, "ಹೊರ ರಾಜ್ಯಕ್ಕೆ ಹೋಗಿ ಬಂದಿದ್ದರಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ನಿನ್ನೆ ಸಂಜೆ ಉಸಿರಾಟ ಸಮಸ್ಯೆ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸದ್ಯ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಬಿಪಿ ಹಾಗೂ ಸಕ್ಕರೆ ಕಾಯಿಲೆ ಇರೋದ್ರಿಂದ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಸದ್ಯ ರಮೇಶ ಜಾರಕಿಹೊಳಿ ಸ್ಥಿತಿರವಾಗಿದ್ದು, ಐಸಿಯುನಲ್ಲಿ ನೀಡಲಾಗುತ್ತಿದೆ. ಕೊವಿಡ್ ವಾರ್ಡ್ ನಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.ಆದರೆ, ರಮೇಶ್​ ಜಾರಿಕಿಹೊಳಿ ಅವರಿಗೆ ನಿಜಕ್ಕೂ ಕೊರೋನಾ ಪಾಸಿಟಿವ್ ಆಗಿದೆಯೇ? ಅಥವಾ ಇದೆಲ್ಲಾ ನಾಟಕವೇ? ವಕೀಲ ಜಗದೀಶ್​ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತ ಸತ್ಯಾಸತ್ಯತೆಯನ್ನು ಪೊಲೀಸ್ ಇಲಾಖೆ ಬಯಲಿಗೆ ಎಳೆಯುತ್ತದೆಯೇ? ಎಂಬುದನ್ನು ಕಾದುನೋಡಬೇಕು.
Published by: MAshok Kumar
First published: April 6, 2021, 6:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories