HD Kumaraswamy: ಭೂ ಮಾಫಿಯಾವನ್ನು ನಿಯಂತ್ರಿಸಲಾಗಲ್ಲ ಎಂದು ಹೇಳುವುದು ಸರ್ಕಾರದ ಹೊಣೆಗೇಡಿತನ; ಕುಮಾರಸ್ವಾಮಿ ಚಾಟಿ

ಇಂದು ಭೂಮಾಫಿಯಾದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವವರು ಯಾರು? ಪಕ್ಷಗಳ ಹಿಂಬಾಲಕರು, ಬಾಲಬಡುಕರೇ ಅಲ್ಲವೇ? ಅವರಿಗೆ ಪ್ರೋತ್ಸಾಹ ಕೊಡುವಾಗ ಕೊಟ್ಟು ಈಗ 'ನಿಯಂತ್ರಿಸಲಾಗುತ್ತಿಲ್ಲ,' ಎಂದು ಹೇಳಿಕೊಳ್ಳುವುದು ಹೊಣೆಗೇಡಿತನ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

 • Share this:
  ಬೆಂಗಳೂರು (ಮಾರ್ಚ್​ 12); ರಾಜ್ಯ ರಾಜಧಾನಿಯಲ್ಲಿ ಭೂ ಮಾಫಿಯಾಗಳು ದಿನದಿಂದ ದಿನಕ್ಕೆ ಬೆಳಯುತ್ತಲೆ ಇದೆ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಈ ಬಗ್ಗೆ ಸಾಕಷ್ಟು ಧ್ವನಿ ಎತ್ತಿತ್ತು. ಆದರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾತನಾಡಿದ್ದ ಕಂದಾಯ ಸಚಿವ ಆರ್​. ಅಶೋಕ್​, "ಭೂ ಮಾಫಿಯಾವನ್ನು ನಮ್ಮಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಭೂ ಮಾಫಿಯಾ ಕುರಿತು ಸರ್ಕಾರದ ಈ ನಡೆ ಮತ್ತು ಸಚಿವರ ಹೇಳಿಕೆಯ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, "ಸರ್ಕಾರದ ಭೂಮಿ ಉಳಿಸಿಕೊಳ್ಳಲಾಗದೆ ಅಸಹಾಯಕತೆ ತೋರುವವರು ಅಧಿಕಾರದಲ್ಲಿದ್ದು ಉಪಯೋಗವೇನು?" ಎಂದು ಆಕ್ರೋಶ ಹೊರಹಾಕಿದ್ದಾರೆ.

  ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಕಂದಾಯ ಸಚಿವರ ಉತ್ತರವೊಂದನ್ನು ಗಮನಿಸಿದೆ. 'ಭೂ ಮಾಫಿಯಾ ವಿರುದ್ಧ ವಿರೋಧ ಪಕ್ಷದಲ್ಲಿದ್ದಾಗ ಮಾತನಾಡಿದ ನಮಗೇ ಈಗ ಕೈಕಟ್ಟಿಹಾಕಿದಂತಾಗಿದೆ. ಅದನ್ನು ನಿಯಂತ್ರಿಸುವುದು ಅಸಾಧ್ಯ' ಎಂದು ಸಚಿವರು ಹೇಳಿದ್ದಾರೆ. ವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ಮಾತನಾಡಿರುವ ಸಚಿವರು, ಅದರ ಹಿಂದಿನ ಕಾರಣವನ್ನೂ ಪ್ರಸ್ತಾಪಿಸಿದಿದ್ದರೆ ಚನ್ನಾಗಿರುತ್ತಿತ್ತು.  ಇಂದು ಭೂಮಾಫಿಯಾದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವವರು ಯಾರು? ಪಕ್ಷಗಳ ಹಿಂಬಾಲಕರು, ಬಾಲಬಡುಕರೇ ಅಲ್ಲವೇ? ಅವರಿಗೆ ಪ್ರೋತ್ಸಾಹ ಕೊಡುವಾಗ ಕೊಟ್ಟು ಈಗ 'ನಿಯಂತ್ರಿಸಲಾಗುತ್ತಿಲ್ಲ,' ಎಂದು ಹೇಳಿಕೊಳ್ಳುವುದು ಹೊಣೆಗೇಡಿತನ. ಇಂಥ ಮಾತುಗಳು ಭೂಮಾಫಿಯಾಕ್ಕೆ ಪ್ರೇರಕ. ಭೂಮಿ ನುಂಗುವ ದಂಧೆ ಬೆಳೆಯಲು ಎರಡೂ ರಾಷ್ಟ್ರೀಯ ಪಕ್ಷಗಳ ಪಾಲು ಸಮಾನ" ಎಂದು ವಾಗ್ದಾಳಿ ನಡೆಸಿದ್ದಾರೆ.  ಮತ್ತೊಂದು ಟ್ವೀಟ್​ನಲ್ಲಿ, "ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅವರು ಮತ್ತೆ ಅದೇ ಸ್ಥಾನದಲ್ಲಿ ಬಂದು ಕೂರುತ್ತಾರೆ,' ಎಂದೂ ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಈ ಮಟ್ಟಿನ ಭಂಡತನ ತೋರಲು ರಾಜಕಾರಣಿಗಳು ಹುಟ್ಟುಹಾಕಿದ ವಿಷಮ ವ್ಯವಸ್ಥೆಯೇ ಕಾರಣ. ಸರ್ಕಾರ ಅಸಹಾಯಕತೆ ಪ್ರದರ್ಶಿಸಿ, ದುರ್ವ್ಯವಸ್ಥೆ ಪ್ರೋತ್ಸಾಹಿಸದೇ ಶುದ್ಧೀಕರಣ ನಡೆಸಬೇಕು.

  ಇದನ್ನೂ ಓದಿ: Ramesh Jarkiholi CD Case: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆಗೆ ಸೌಮೇಂದು ಮುಖರ್ಜಿ ನೇತೃತ್ವದ ಏಳು ಜನರ ಎಸ್​ಐಟಿ ತಂಡ ರಚನೆ

  ಒಂದು ಅವ್ಯವಸ್ಥೆ ವಿರುದ್ಧ ಸರ್ಕಾರ ಕಠಿಣ ನೀತಿ ರೂಪಿಸಿ ಅದನ್ನು ಜಾರಿ ಮಾಡಲು ಹೊರಟು ನಿಂತರೆ ಯಾವ ಮಾಫಿಯಾ ಏನು ಮಾಡಲು ಸಾಧ್ಯ? ಅದಕ್ಕೆ ಇಚ್ಛಾಶಕ್ತಿ ಬೇಕಷ್ಟೆ. ಸ್ವಹಿತಾಸಕ್ತಿ ಹೊಂದಿರುವವರು ಮಾತ್ರ ವ್ಯವಸ್ಥೆ ಸರಿಪಡಿಸಲಾಗದ ಮಾತಾಡುತ್ತಾರೆ. ಸರ್ಕಾರದ ಭೂಮಿ ಉಳಿಸಿಕೊಳ್ಳಲಾಗದೆ ಅಸಹಾಯಕತೆ ತೋರುವವರು ಅಧಿಕಾರದಲ್ಲಿದ್ದು ಉಪಯೋಗವೇನು?" ಎಂದು ಪ್ರಶ್ನೆ ಮಾಡಿದ್ದಾರೆ.
  Published by:MAshok Kumar
  First published: