ಬೆಂಗಳೂರು: ಸಿದ್ದರಾಮಯ್ಯ (Siddaramaiah) ಬಗ್ಗೆ ಎಲ್ಲರಿಗೂ ಗೊತ್ತು. ಡಿ. ದೇವರಾಜ ಅರಸು (D. Devaraj Urs) ಬಳಿಕ 5 ವರ್ಷ ಸಂಪೂರ್ಣ ಆಡಳಿತ ನಡೆಸಿದ ಮುಖ್ಯಮಂತ್ರಿ (CM) ಎಂಬ ಖ್ಯಾತಿ ಪಡೆದವರು ಮಾಜಿ ಸಿಎಂ ಸಿದ್ದರಾಮಯ್ಯ. ಇಂದಿರಾ ಕ್ಯಾಂಟೀನ್ (Indira Canteen), 1 ರೂಪಾಯಿಗೆ ಅಕ್ಕಿ (Rice) ಸೇರಿದಂತೆ ಹಲವು ಮಹತ್ವದ ಯೋಜನೆಗಳ ಮೂಲಕ ಕನ್ನಡಿಗರ ಮನಗೆದ್ದ ಸಿದ್ದರಾಮಯ್ಯ ಜೀವನವೂ (Life) ಯಾವ ಸಿನಿಮಾಗಿಂತ (Cinema) ಕಡಿಮೆ ಇಲ್ಲ. ಹಳ್ಳಿಯಲ್ಲಿ ಬೆಳೆದ ಸಿದ್ದರಾಮಯ್ಯ ವಿಧಾನಸೌಧದವರೆಗೆ (Vidhanasoudha) ಚಾಪು ಮೂಡಿಸಿದವರು. ಇದೀಗ ಸಿದ್ದರಾಮಯ್ಯ ಜೀವನಗಾಥೆ (Life Story) ತೆರೆ ಮೇಲೆ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅವರ ಜೀವನದ ಕಥೆಯನ್ನು (Biography) ಸಿನಿಮಾ ಮಾಡಲು ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ಒಬ್ಬರು ಸಿದ್ದರಾಮಯ್ಯ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
‘ಸಿದ್ದರಾಮೋತ್ಸವ’ ಬಳಿಕ ಮತ್ತೊಂದು ಮೆಗಾ ಪ್ಲಾನ್
ಸಿದ್ದರಾಮೋತ್ಸವ ಬಳಿಕ ಮತ್ತೊಂದು ಬಿಗ್ ಇವೆಂಟ್ ಮಾಡಲು ಸಿದ್ದರಾಮಯ್ಯ ಅಭಿಮಾನಿಗಳು ರೆಡಿಯಾಗ್ತಿದ್ದಾರೆ. ವಿಧಾನಸಭಾ ಚುನಾವಣೆ ಹೊಸ್ತಿಲ್ಲಲಿ ಸಿದ್ದರಾಮಯ್ಯ ಅವರನ್ನ ಮತ್ತಷ್ಟು ಪರಿಣಾಮಕಾರಿಯಾಗಿ ಬಿಂಬಿಸಲು ಪ್ಲಾನ್ ಮಾಡಲಾಗಿದೆ.
ತೆರೆಗೆ ಬರಲಿದೆ ಸಿದ್ದರಾಮಯ್ಯ ಜೀವನಗಾಥೆ
ಸಿದ್ದರಾಮಯ್ಯ ಲೈಫ್ ಜರ್ನಿ ಬಗ್ಗೆ ಮೂವಿ ಮಾಡಲು ಮುಂದಾಗಿರುವ ಸಿದ್ದರಾಮಯ್ಯ ಟೀಮ್, ಈಗಾಗಲೇ ಸಿದ್ದರಾಮಯ್ಯ ಅವರ ಜೊತೆ ಎರಡು ಬಾರಿ ಚರ್ಚೆ ನಡೆಸಿದ್ಯಂತೆ. ಸುಮಾರು 20 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡಿರುವ ಸಿದ್ದರಾಮಯ್ಯ ಟೀಮ್, ಈಗಾಗಲೇ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Sidddaramaiah: ಮದುವೆ ಮಂಟಪದಲ್ಲಿ ಆಪ್ತರ ಪರ ಮತ ಕೇಳಿ ಡಿಕೆಶಿಗೆ ಟಾಂಗ್ ಕೊಟ್ರಾ ಸಿದ್ದರಾಮಯ್ಯ?
ಗಡ್ಡಧಾರಿ ಸಿದ್ದರಾಮಯ್ಯ ಪಾತ್ರ!
ಸಿದ್ದರಾಮಯ್ಯ ಗಡ್ಡ ಇರೋ ರೀತಿಯಲ್ಲಿ ಸಿನಿಮಾ ದಲ್ಲಿ ಬಿಂಬಿಸಲು ಪ್ಲಾನ್ ಮಾಡಲಾಗಿದೆ. ಈ ಹಿಂದೆ ಡಿಸಿಎಂ ಆಗಿದ್ದಾಗ ಸಿದ್ದರಾಮಯ್ಯ ಗಡ್ಡ ಬಿಟ್ಟಿದ್ದರು. ಕ್ರಾಂತಿಕಾರಿ ಲುಕ್ನಲ್ಲಿ ಕಂಗೊಳಿಸಿದ್ದರು. ಇದೇ ರೀತಿ ಸಿದ್ದರಾಮಯ್ಯ ಪಾತ್ರ ಚಿತ್ರಿಸಲು ಪ್ಲಾನ್ ಮಾಡಲಾಗಿದೆ.
ಸಿದ್ದರಾಮಯ್ಯ ಪಾತ್ರದಲ್ಲಿ ವಿಜಯ್ ಸೇತುಪತಿ?
ಸಿದ್ದರಾಮಯ್ಯ ಪಾತ್ರ ನಿರ್ವಹಿ,ಲು ದಕ್ಷಿಣ ಭಾರತದ ಸೂಪರ್ ಸ್ಟಾರ್ ಒಬ್ಬರನ್ನು ಅಪ್ರೋಚ್ ಮಾಡಲಾಗುತ್ತಿದೆಯಂತೆ. ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಫಿಲ್ಮ್ ಗಳು ಮಾಡಿರುವ ಸೂಪರ್ ಸ್ಟಾರ್ ವಿಜೇಯ್ ಸೇತುಪತಿ ಅವರನ್ನು ಹೀರೋ ಮಾಡಲು ಟೀಮ್ ಪ್ಲಾನ್ ಮಾಡಿಕೊಂಡಿದೆ.
ಜನವರಿಯಿಂದಲೇ ಶುರುವಾಗುತ್ತಾ ಚಿತ್ರೀಕರಣ?
ಸಿದ್ದರಾಮಯ್ಯ ನಿವಾಸದಲ್ಲಿ ಗುರುವಾರ ಈ ಬಗ್ಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು, ಮಾಜಿ ಸಚಿವರು ಹಾಗೂ ಪ್ರಮುಖರು ಚರ್ಚೆ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿಯಲ್ಲಿ ಸಿನಿಮಾ ಮೂಹರ್ತಕ್ಕೆ ಸಮಯ ನಿಗಧಿ ಆಗಲಿದೆ.
ತಮ್ಮ ಬಯೋಪಿಕ್ ಸಿನಿಮಾ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಇನ್ನು ಚುನಾವಣಾ ಸಮಯದಲ್ಲಿ ಇವೆಲ್ಲ ಬೇಕಾ ಅಂತ ಸಿದ್ದರಾಮಯ್ಯ ಪ್ರಶ್ನಿಸಿದ್ದಾರಂತೆ. 20 ಕೋಟಿ ವ್ಯರ್ಥ ಮಾಡಿ ಸಿನಿಮಾ ಮಾಡುವುದು ಏಕೆ ಅಂತ ಪ್ರಶ್ನಿಸಿದ್ದಾರಂತೆ. ಆದರೆ ನಿಮ್ಮ ಲೈಫ್ ಜರ್ನಿಯಿಂದ ನಮಗೆ ಪ್ಲಸ್ ಆಗುತ್ತೆ, ಇಡೀ ರಾಜ್ಯಾದ್ಯಂತ ನಿಮಗೆ ಅಭಿಮಾನಿಗಳು. ಅವರು ಈ ಸಿನಿಮಾದಿಂದ ಇನ್ಸ್ಪ್ಪೈರ್ ಆಗ್ತಾರೆ ಅಂತ ಅವರ ಬಣದ ಶಾಸಕರು ಮನವಿ ಮಾಡಿದ್ದಾರಂತೆ.
ಸಿನಿಮಾಕ್ಕೆ ನಿರ್ದೇಶಕ, ನಿರ್ಮಾಪಕರು ಯಾರು?
ಇನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಹುಡುಗ ಈ ಸಿನಿಮಾದ ನಿರ್ದೇಶಕರಾಗಲಿದ್ದಾರಂತೆ. ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತ ಶಿವರಾಜ್ ತಂಗಡಗಿ ನಿರ್ಮಾಣದ ಹೊಣೆ ಹೊತ್ತಿದ್ದಾರಂತೆ. ಮತ್ತೊಂದೆಡೆ ಮೈಸೂರಿನ ನಾಗರಾಜ್ ಎಂಬ ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬರಿಂದಲೂ ಸಿನಿಮಾ ಮಾಡೋ ಬೇಡಿಕೆ ಇದೆಯಂತೆ. ರಾಮಗೋಪಾಲ್ ವರ್ಮ ಮೂಲಕ ಸಿನಿಮಾ ಮಾಡುವುದಾಗಿ ನಾಗರಾಜ್ ಹೇಳಿದ್ದಾರಂತೆ. ಆದರೆ ಸಿದ್ದರಾಮಯ್ಯ ಅವರು ಯಾವುದಕ್ಕೂ ಗ್ರೀನ್ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ