Farmers Protest: ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವವರು ರೈತರೇ ಅಲ್ಲ; ಸಿ.ಟಿ. ರವಿ ಹೇಳಿಕೆ

ಕೆಲಸವನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅವರಿಗೆ ಸತ್ಯ ಗೊತ್ತಿದ್ದೂ ವಿರೋಧ ಮಾಡುತ್ತಿದ್ದಾರೆ. ರೈತರೇ ಭಾಗಿಯಾಗಿರೋ ಪ್ರತಿಭಟನೆಗೆ ವಿರೋಧ ಪಕ್ಷಗಳು ಬೆಂಬಲಿಸಲಿ. ಆದರೆ, ರೈತರ ಹೆಸರಲ್ಲಿ ಬೇರೆಯವರು ಮಾಡೋ ಪ್ರತಿಭಟನೆಗೆ ಬೆಂಬಲ ಬೇಡ" ಎಂದು ತಿಳಿಸಿದ್ದಾರೆ. ಕೆಲಸವನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅವರಿಗೆ ಸತ್ಯ ಗೊತ್ತಿದ್ದೂ ವಿರೋಧ ಮಾಡುತ್ತಿದ್ದಾರೆ. ರೈತರೇ ಭಾಗಿಯಾಗಿರೋ ಪ್ರತಿಭಟನೆಗೆ ವಿರೋಧ ಪಕ್ಷಗಳು ಬೆಂಬಲಿಸಲಿ. ಆದರೆ, ರೈತರ ಹೆಸರಲ್ಲಿ ಬೇರೆಯವರು ಮಾಡೋ ಪ್ರತಿಭಟನೆಗೆ ಬೆಂಬಲ ಬೇಡ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

 ಸಿ.ಟಿ. ರವಿ

ಸಿ.ಟಿ. ರವಿ

  • Share this:
    ನವ ದೆಹಲಿ (ಫೆಬ್ರವರಿ 05); ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ. ರೈತರ ಹೆಸರಿನಲ್ಲಿ ಬೇರೆಯವರು ರಾಜಕೀಯ ಲಾಭಕ್ಕಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಇಂದು ಕಿಡಿಕಾರಿದ್ದಾರೆ. ಕೃಷಿ ಕಾಯ್ದೆಯನ್ನು ವಿರೋಧಿಸಿ ಪಂಜಾಬ್ ಮತ್ತು ಹರಿಯಾಣ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರ ವಲಯದ ಸಿಂಘು ಗಡಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಈ ಹೋರಾಟಕ್ಕೆ ಇಡೀ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಬಿಜೆಪಿ ನಾಯಕರು ಈವರೆಗೆ ಇದನ್ನು ರೈತ ಹೋರಾಟ ಎನ್ನಲು ಮುಂದಾಗಿಲ್ಲ. ಬದಲಾಗಿ ಇದು ವಿರೋಧ ಪಕ್ಷಗಳು ನಡೆಸುತ್ತಿರುವ ರಾಜಕೀಯ ತಂತ್ರದ ಹೋರಾಟ ಎಂದೇ ಹಣಿಯಲು ಮುಂದಾಗುತ್ತಿದ್ದಾರೆ. ಇದೀಗ ಆ ಸಾಲಿಗೆ ಸಿ.ಟಿ. ರವಿ ಸಹ ಸೇರ್ಪಡೆಯಾಗಿದ್ದಾರೆ.

    ದಿನೇ ದಿನೇ ಉಗ್ರ ಸ್ವರೂಪ ಪಡೆಯುತ್ತಿರುವ ರೈತ ಹೋರಾಟದ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಸಿ.ಟಿ. ರವಿ, "ದೇಶದ ರೈತರು ಚಳುವಳಿಯ ಭಾಗವಾಗಿಲ್ಲ. ರೈತರ ಹೆಸರಲ್ಲಿ ರಾಜಕೀಯ, ದೇಶ ವಿರೋಧಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಹತ್ತಾರು ಭಾರಿ ಪ್ರಶ್ನೆ ಕೇಳಿದ್ದೇವೆ. ಮೂರು ಕಾಯ್ದೆಗಳಲ್ಲಿ ರೈತ ವಿರೋಧಿ ನೀತಿ ಎಲ್ಲಿದೆ ಎಂದು ಆದರೆ, ಉತ್ತರ ಸಿಕ್ಕಿಲ್ಲ.

    ದೇಶದಲ್ಲೇ ಅತಿ ಹೆಚ್ಚು ರೈತರ ಪರ ಕೆಲಸ ಮಾಡಿರೋದು ಬಿಜೆಪಿ ಸರ್ಕಾರ. ಕಾಂಟ್ರಾಕ್ಟ್ ಫಾರ್ಮಿಂಗ್ ರೈತರ ಹೆಸರಲ್ಲಿ ಹರಾಜಕತೆ ಅಲ್ಲ. ರೋಹಿತ್ ಮೋವೆ ಹತ್ಯೆ ಸೇರಿದಂತೆ ಹಲವು ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ರು. ಸಿಎಎ ನಲ್ಲಿ ಪಾಕಿಸ್ತಾನಕ್ಕೆ ಓಡಿಸ್ತಾರೆ ಅಂತ ಪ್ರಚೋದನೆ ಮಾಡಿ‌ ಪ್ರತಿಭಟನೆ ಕೂತರು. ಈ ಆಕ್ಟ್ ತಂದು ಏಳು ತಿಂಗಳು ಆಯ್ತು. ಆದರೂ ಬಹುತೇಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಜನರು, ರೈತರು ನಮ್ಮ ಸರ್ಕಾರದ ಪರ ನಿಂತಿದ್ದಾರೆ.

    ಕೆಲಸವನ್ನು ಸೃಷ್ಟಿಸುವ ಕಾರಣಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅವರಿಗೆ ಸತ್ಯ ಗೊತ್ತಿದ್ದೂ ವಿರೋಧ ಮಾಡುತ್ತಿದ್ದಾರೆ. ರೈತರೇ ಭಾಗಿಯಾಗಿರೋ ಪ್ರತಿಭಟನೆಗೆ ವಿರೋಧ ಪಕ್ಷಗಳು ಬೆಂಬಲಿಸಲಿ. ಆದರೆ, ರೈತರ ಹೆಸರಲ್ಲಿ ಬೇರೆಯವರು ಮಾಡೋ ಪ್ರತಿಭಟನೆಗೆ ಬೆಂಬಲ ಬೇಡ" ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: Farmers Protest: ದೇಶದ ರೈತ ಹೋರಾಟವನ್ನು ನಟ-ನಟಿಯರು ಕಲಾವಿದರು, ಸಾಹಿತಿಗಳು ಬೆಂಬಲಿಸಬೇಕು; ಸಿದ್ದರಾಮಯ್ಯ ಕರೆ

    ಇದೇ ಸಂದರ್ಭದಲ್ಲಿ ಪ್ರೋ. ಭಗವಾನ್​ ಮುಖಕ್ಕೆ ಮಸಿ ಬಳಿದ ಪ್ರಕರಣದ ಬಗ್ಗೆಯೂ ಮಾತನಾಡಿರುವ ಸಿ.ಟಿ ರವಿ, "ಮಸಿ ಬಳಿಯುವ ಕ್ರಮವನ್ನ ನಾವು ಸಮರ್ಥಿಸುವುದಿಲ್ಲ. ಆದರೆ, ಭಗವಾನ್ ಅವರು ಮಾತಾಡಿರುವುದನ್ನ ಅವರ ತಂದೆ ತಾಯಿಗಳು, ಅವರ ಮಕ್ಕಳು ಒಪ್ಪಲ್ಲ. ಈ ರೀತಿಯ ಹೇಳಿಕೆ ಪಾಕಿಸ್ತಾನದಲ್ಲಿ ನೀಡಿದ್ರೆ ಭಗವಾನ್ ಅವರ ತಲೆಯನ್ನ ತೆಗೆಯುತ್ತಿದ್ದರು. ಭಾಗವಾನ್ ಭಾರತದಲ್ಲಿದ್ದಾರೆ. ಅವರ ಪುಣ್ಯ. ಭಾರತ ಆಗಿದ್ದಕ್ಕೆ ಬರೀ ಮಸಿ ಬಳಿದಿದ್ದಾರೆ.

    ಪಾಕಿಸ್ತಾನದಂತ ಮನಸ್ಥಿತಿ ಭಾರತದಲ್ಲಿದ್ದಿದ್ದರೆ ಭಗವಾನ್ ಏಲ್ಲಿ ಉಳಿಯುತ್ತಿದ್ದರು.. ಇಷ್ಟರೊಳಗೆ ಅವರ ಫೋಟೋಗೆ ಹಾರ ಹಾಕಿಸಿಕೊಳ್ಳುತ್ತಿದ್ದರು. ಮಾತಾಡಿಯೂ ಬದುಕಬಹುದಾದ ದೇಶ ಭಾರತ. ಇಂಥಹ ವಾತಾವರಣದಲ್ಲಿದ್ದು ಇಲ್ಲಿ ಆರಾಧಿಸುವ ದೇವರ ಬಗ್ಗೆ ಮಾತನಾಡಿದ್ದು ತಪ್ಪು. ನಮ್ಮ ಸಹನೆಯನ್ನ ದೌರ್ಬಲ್ಯ ಎಂದುಕೊಳ್ಳಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.
    Published by:MAshok Kumar
    First published: