Basavaraj Bommai: ಸಿಎಂ ಆದಷ್ಟು ಸುಲಭವಲ್ಲ ಬೊಮ್ಮಾಯಿಗೆ ಸಂಪುಟ ವಿಸ್ತರಣೆ, ದಿನದಿನಕ್ಕೂ ಸಚಿವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ!

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೇ ದಿನದಲ್ಲಿ ಹಿರಿಯ ನಾಯಕರು ಸಂಪುಟಕ್ಕೆ ಸೇರೋಲ್ಲಾ ಅಂತ ಹಠ ಹಿಡಿದಿರೋ ಟೀಮ್ ಒಂದು ಕಡೆ ಆದ್ರೆ ಸಚಿವ ಆಕಾಂಕ್ಷಿಗಳ ಪರ ಅವರ ಸಮುದಾಯದ ಸ್ವಾಮೀಜಿಗಳು ಕೂಡ ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ. 

ಬಸವರಾಜ​​ ಬೊಮ್ಮಾಯಿ.

ಬಸವರಾಜ​​ ಬೊಮ್ಮಾಯಿ.

  • Share this:
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದಾರೆ... ಆದ್ರೆ ತಮ್ಮ ಸಚಿವ ಸಂಪುಟದ ರಚನೆ ಮಾಡೊದ್ ದೊಡ್ಡ ತಲೆನೋವು ಆಗುವ ಸಾಧ್ಯತೆ ಹೆಚ್ಚಾಗ್ತಾಯಿದೆ... ಹೌದು ಕೇಸರಿ ಪಾಳಯದಲ್ಲಿ ಸಚಿವ ಸಂಪುಟ ಬಿಕ್ಕಟ್ಟು ಹೆಚ್ಚಾಗಿದೆ , ಆ ಲಕ್ಷಣಗಳು ದಿನ ದಿನಕ್ಕು ಜಾಸ್ತಿ ಆಗ್ತಾಯಿದೆ. ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಮುಂದಿನ ಎರಡು ವಾರ ಸಂಪುಟ ರಚನೆ ಆಗಲ್ಲ ಅನ್ನೋ ಮಾತು ಕೇಳಿ ಬಂದಿದೆ . ಇಂದು ಸಿಎಂ  ಬೊಮ್ಮಾಯಿರವರು ದೆಹಲಿಗೆ ತೆರಳಿದ್ರೂ ಕ್ಯಾಬಿನೆಟ್ ಬಗ್ಗೆ ಚರ್ಚೆ ಮಾಡಲ್ಲ ಅಂತ ಹೇಳಿದ್ದಾರೆ . ರಾಜ್ಯದ ಕೆಲ ವಿಚಾರಗಳಿವೆ ಆ ಕುರಿತು ಅಷ್ಟೇ ಮೋದಿ ಜೊತೆಗೆ ಮಾತನಾಡ್ತಿನಿ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಇನ್ನು  ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೇ ದಿನದಲ್ಲಿ ಹಿರಿಯ ನಾಯಕರು ಸಂಪುಟಕ್ಕೆ ಸೇರೋಲ್ಲಾ ಅಂತ ಹಠ ಹಿಡಿದಿರೋ ಟೀಮ್ ಒಂದು ಕಡೆ ಆದ್ರೆ ಸಚಿವ ಆಕಾಂಕ್ಷಿಗಳ ಪರ ಅವರ ಸಮುದಾಯದ ಸ್ವಾಮೀಜಿಗಳು ಕೂಡ ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ.  ಮತ್ತೊಂದು ಕಡೆ  ಮಂತ್ರಿ ಭಾಗ್ಯಕ್ಕಾಗಿ ಕೆಲವು ಮಾಜಿ ಮಂತ್ರಿ ಗಳು ಮತ್ತ ಶಾಸಕರು ಸಿಎಂ ಬೊಮ್ಮಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆ  ಸುತ್ತಾ ಸುತ್ತಿದ್ದಾರೆ.

ಇದನ್ನ ನೋಡಿದ್ರೆ ಸಿಎಂ ಬೊಮ್ಮಾಯಿಗೆ ಸಂಪುಟ ವಿಸ್ತರಣೆ ತಲೆನೋವಾಗುವ ಲಕ್ಷಣಗಳು ಕಣ್ತಾಯಿದೆ ಎಂದು ಹೇಳಬಹುದು... ಸಿಎಂ ಆಗಿ ಬೊಮ್ಮಾಯಿ  ಪದಗ್ರಹಣ ಮಾಡಿದ ಎರಡನೇ ದಿನದಲ್ಲೇ ಸಚಿವ ಸಂಪುಟ ವಿಸ್ತರಣೆ ಕೂಗು ಹೆಚ್ಚಾಗ್ತಿದೆ. ಈಗಾಗಲೆ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ನೇಮಕ ವಾಗುವುದಕ್ಕೆ ಯಡಿಯೂರಪ್ಪನವರ ಕೃಪಕಟಾಕ್ಷವೇ ಕಾರಣ ಅಂತ ಪಕ್ಷದ ಕೆಲ  ಹಿರಿಯ ನಾಯಕರುಗಳು ಅಸಮಧಾನಗೊಂಡಿದ್ದಾರೆಂದು ಪಕ್ಷದಲ್ಲೇ ಜೋರಾಗಿ ಚರ್ಚೆ ಆಗ್ತಿದೆ. ಹೀಗಿರುವಾಗ ಮಾಜಿ ಸಚಿವ ಜಗದೀಶ್ ಶೆಟ್ಟರ್ ಸಂಪುಟ ಸೇರೋದಿಲ್ಲಾ ಅನ್ನೋ ಹೇಳಿಕೆ ಸಿಎಂ ಬೊಮ್ಮಾಯಿ ಸೇರಿದಂತೆ ಹೈಕಮಾಂಡ್ ನಾಯಕರಿಗೂ  ತಲೆ ನೋವಾಗುವ ಎಲ್ಲಾ ಸಾಧ್ಯತೆ ಇದೆ. ಇನ್ನೂ ಬೊಮ್ಮಯಿ ಸಂಪುಟ ಸೇರಲ್ಲ ಅಂತ ಜಗದೀಶ್ ಶೆಟ್ಟರ್ ಹೇಳಿಕೆ  ಈಗ ಪಕ್ಷದಲ್ಲಿ ಭಾರಿ ಚರ್ಚೆ ಆಗ್ತಿದೆ...

ಇದನ್ನೂ ಓದಿ: ರಾಜೀನಾಮೆ ಬಳಿಕವೂ ಪವರ್ ಸೆಂಟರ್ ಆದ ಬಿಎಸ್​ವೈ; ರಾಜಾಹುಲಿ ಸುತ್ತ ಮಂತ್ರಿ ಆಕಾಂಕ್ಷಿಗಳ ಪ್ರದಕ್ಷಿಣೆ

ಒಂದಷ್ಟು ಬಿಜೆಪಿ ನಾಯಕರು ದೆಹಲಿಗೆ ಹೋಗಿದ್ದಾರೆ , ಉಮೇಶ್ ಕತ್ತಿ , ಅಶೋಕ್ , ಅರವಿಂದ್ ಬೆಲ್ಲದ್, ಸಿಪಿ ಯೋಗೇಶ್ವರ್, ದೆಹಲಿಗೆ ಹೋಗಿ  ಹೈ ಕಮಾಂಡ್ ಮಟ್ಟದಲ್ಲಿ ಲಾಬಿ ಶುರು ಮಾಡಿದ್ದಾರೆ.. ಈ ಮಧ್ಯ  ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಈಶ್ವರಪ್ಪ ಮಾತ್ರ ಶೆಟ್ಟರ ರೀತಿ ನಾನು ನಿರ್ಧಾರ ಮಾಡೋಲ್ಲಾ ಹೈಕಮಾಂಡ್ ನಾಯಕರು ಹೇಳಿದಂತೆ ಕೇಳ್ತಿನಿ ಯಾವ ಸ್ಥಾನ ಕೊಟ್ರು ನಿಭಾಯಿಸ್ತಿನಿ ಅಂತಾ ಸಚಿವ ಸ್ಥಾನದ ಆಕಾಂಕ್ಷಿ ರೇಸ್ ನಲ್ಲಿ ನಾನು ಇದ್ದಿನಿ ಅಂತ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.. ಈಗಾಗಲೇ ಹಿರಿಯ ನಾಯಕರಿಗೆ ಹಾಗೂ ಸಚಿವರಾಗಿದ್ದವರನ್ನು ಕ್ಯಾಬಿನೆಟ್ ನಿಂದ ಕೈಬಿಡಲಾಗುತ್ತೆ ಎಂದು ಚರ್ಚೆಯಾಗುತ್ತಿದ್ದು, ಹಿರಿಯ ಶಾಸಕರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡ್ಬೇಕು ಅಂತ ಹೈ ಕಮಾಂಡ್ ನಾಯಕರು ಕೂಡ ಡಿಸೈಡ್ ಮಾಡಿದ್ದಾರಂತೆ.

ಸಚಿವರಾಗಲು ಈಗಾಗಲೇ ಲಾಬಿ ಶುರುವಾಗಿದ್ದು ರೇಣುಕಾಚಾರ್ಯ , ಸೋಮಶೇಖರ್ ರೆಡ್ಡಿ , ಸುನೀಲ್ ಕುಮಾರ್ ಮತ್ತು ಶಿವಮೊಗ್ಗದ ಜಿಲ್ಲೆಯ ಅರಗ ಜ್ಞಾನೇಂದ್ರ ,ರಾಮದಾಸ್ , ತಿಪ್ಪಾರೆಡಿ  ಸೇರಿದಂತೆ ಹಲವು ನಾಯಕರು ಸಿಎಂ ಮತ್ತು ಪಕ್ಷದ ಹಿರಿಯರನ್ನು ಭೇಟಿ ಮಾಡಿ ಸಮಾಲೋಚನೆ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋ ವಿಚಾರ ಗೊತ್ತಾಗ್ತಿದ್ದಂತೆ ಹಲವು ನಾಯಕರ ಅಭಿಮಾನಿಗಳು ಹಾಗೂ ಸಮುದಾಯದ ಸ್ವಾಮೀಜಿಗಳು ಅವರ ಪರ ಬ್ಯಾಟಿಂಗ್ ಮಾಡೋಕೆ ಶುರುಮಾಡ್ತಿದ್ದಾರೆ. ಮುಖ್ಯಮಂತ್ರಿ ಗೊಂದಲ ಬಗೆಹರಿದಿದೆ, ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು ಆದ್ರೆ ಸಿಎಂ ಸ್ಥಾನ ಬಸವರಾಜ ಬೊಮ್ಮಾಯಿಯವರಿಗೆ ಸಿಕ್ಕಿದೆ.

ಇದನ್ನೂ ಓದಿ: Tokyo Olympics: ಒಲಿಂಪಿಕ್ಸ್ ಕ್ರೀಡಾಪಟುಗಳ ಆಹಾರ ಪದ್ಧತಿ ಹೇಗಿದೆ? ಸಾಮಾನ್ಯ ಜನರೂ ಇದನ್ನು ಅನುಸರಿಸಬಹುದಾ?

ಸದ್ಯ ಸಂಪುಟದಲ್ಲಿ ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ ಕೊಡಬೇಕು ಜೊತೆಗೆ ವಲಸೆ ಬಂದಿರುವವ ಎಲ್ಲರನ್ನೂ ಪರಿಗಣಿಬೇಕು, ಕಡೆಗಣಿಸಬಾರದು ಅಂತಾ ಸರೂರಿನ ರೇವಣ ಸಿದ್ದೇಶ್ವರ ಗುರುಪೀಠದ ಶಾಂತಮಯ ಶಿವಾಚಾರ್ಯ  ರವರು ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ, ಇನ್ನೂ ಸಿಎಂ ರೇಸ್ ನಲ್ಲಿದ್ದ ಅರವಿಂದ ಬೆಲ್ಲದ್ ಹಾಗೂ ಮುರುಗೇಶ್ ನಿರಾಣಿಗೆ ನಿರಾಸೆ ಎದುರಾಗಿದ್ದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೆ ಸಚಿವ ಸಂಪುಟದಲ್ಲಿ ಪವರ್ ಫುಲ್ ಖಾತೆಗಳ ಸಿಗಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.  ನೂತನ ಸಿಎಂ ಬೊಮ್ಮಾಯಿ ಬಗ್ಗೆ ಮಾಜಿ ಸಚಿವ ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿಯವರು ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಇವತ್ತು ಪ್ರವಾಹ ಪೀಡಿತ ಜಿಲ್ಲೆಗಳಿಗೆ ತೆರಳಿ ಹಾನಿಯಾದ  ಪ್ರದೇಶದಗಳ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡ್ತಿದ್ದಾರೆ. ಇನೂ ದೆಹಲಿವ ವಿಚಾರದ ಬಗ್ಗೆ ವರಿಷ್ಟರನ್ನು ಭೇಟಿ ಮಾಡಲು ಮಾತ್ರ ಹೋಗಿದ್ದು ಅಂತಾ ಜಾರಿಕೊಂಡಿದ್ದು ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ಬದ್ದನಾಗಿರ್ತಿನಿ ಅಂತ ನಿರಾಣೆ ಹೇಳಿದ್ರೆ. ಇತ್ತ ಶ್ರೀರಾಮುಲು ನನಗೆ ಯಾವುದೇ ಮುನಿಸಿಲ್ಲ , ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ದ ಎಂದಿದ್ದಾರೆ . ಮತ್ತೊಂದು ಕಡೆ ವಲಸಿಗರು ನಮ್ಮ ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿದೆ ಅಂತ ಭರವಸೆ ಇಟ್ಟುಕೊಂಡಿದ್ದಾರೆ.

ಈ ಸರ್ಕಾರ ಬರಲು ಅವರೇ ಮುಖ್ಯ ಕಾರಣ ಅನ್ನೋ ಮರೆಯೊಗಿಲ್ಲ..ಒಟ್ನಾಲಿ ಕಮಲ ಪಾಳಯದಲ್ಲಿ  ಕ್ಯಾಬಿನೆಟ್ ವಿಚಾರಕ್ಕೆ ಒಂದಾದ ನಂತ್ರ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು,  ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವುದಕ್ಕಾಗಿ ಬಿಎಸ್ವೈ ವಿರೋಧಿ ಬಣ ಹಾಗೂ ಆಪ್ತ ಬಣ ಒತ್ತಡವನ್ನ ಹಾಕುತ್ತಿದ್ದು, ಸಿಎಂ ಬೊಮ್ಮಯಿ ಸಂಪುಟದಲ್ಲಿ ಯಾರಿಗೆ ಮಂತ್ರಿ ಭಾಗ್ಯ ಸಿಗುತ್ತೆ ಅನೋದನ್ನ ಕಾದುನೋಡ್ಬೇಕಾಗಿದೆ.
Published by:Soumya KN
First published: