ಡಿಸಿಎಂ ಆಯ್ತು, ಶ್ರೀರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯೂ ಡೌಟು...!

ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿರುವ ರಾಮುಲು ಅವರಿಗೆ ನೆರೆಯ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಿಗಲಿದೆ. ಆದರೆ ಇದರ ಜತೆ ಬಳ್ಳಾರಿ ಜಿಲ್ಲೆಯೂ ಬೇಕೆಂಬುದು ರಾಮುಲು ಇಚ್ಚೆ. ಆದರೆ ಶಾಸಕ ಸ್ಥಾನ ರಾಜೀನಾಮೆ ನೀಡಿರುವ ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಮುಂದೆ ಸಚಿವ ಸ್ಥಾನ ನೀಡಿದರೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಿಂಗ್ ಕೊಡಬೇಕಾಗುತ್ತದೆ.

G Hareeshkumar | news18
Updated:August 28, 2019, 8:37 PM IST
ಡಿಸಿಎಂ ಆಯ್ತು, ಶ್ರೀರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯೂ ಡೌಟು...!
ಸಚಿವ ಬಿ ಶ್ರೀರಾಮುಲು
  • News18
  • Last Updated: August 28, 2019, 8:37 PM IST
  • Share this:
ಬಳ್ಳಾರಿ (ಆ.28) : ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೆ ಡಿಸಿಎಂ ಗದ್ದಲ ಇನ್ನೂ ನಿಂತಿಲ್ಲ. ರಾಮುಲುಗೆ ಡಿಸಿಎಂ ಸ್ಥಾನ ತಪ್ಪಿದ್ದಕ್ಕೆ ರಾಜ್ಯದಾದ್ಯಂತ ಅಭಿಮಾನಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೀಗ ರಾಮುಲುಗೆ ಮತ್ತೊಂದು ಶಾಕ್ ಎದುರಾಗಿದೆ. ಬಳ್ಳಾರಿ ಜಿಲ್ಲೆ ಮೂಲದವರಾದ್ರೂ ಬಳ್ಳಾರಿ ಉಸ್ತುವಾರಿ ಸಿಗೋದು ಡೌಟು! ಕೊಟ್ಟು ವಾಪಾಸ್ ಪಡೆಯೋದಕ್ಕಿಂತ ಕೊಡದೇ ಇರೋದು ವಾಸಿ ಎನ್ನೋದು ಹೈಕಮಾಂಡ್ ಪ್ಲಾನ್.

ಶ್ರೀರಾಮುಲುಗೆ ಡಿಸಿಎಂ ಸ್ಥಾನ ತಪ್ಪಿದ್ದರಿಂದ ಅಭಿಮಾನಿಗಳ ಆಕ್ರೋಶ ಹೆಚ್ಚಾಗುವ ಸಂದರ್ಭದಲ್ಲಿ ಇದೀಗ ರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಗೂ ಕೊಕ್ ಕೊಡುವ ಸಾಧ್ಯತೆಯಿದೆ. ವಾಲ್ಮೀಕಿ ಪ್ರಭಾವಿ ನಾಯಕ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿದೆ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದೇಳುತ್ತಲೇ ತನ್ನ ಬೇಸರವನ್ನು ನುಂಗುತ್ತಿರುವ ರಾಮುಲುಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರಶ್ನಾತೀತ ನಾಯಕನಾಗಿ ಬಿಜೆಪಿಯಲ್ಲಿ ಬೆಳೆದಿರುವ ರಾಮುಲು ಇದೀಗ ತನ್ನೂರು ಜಿಲ್ಲೆ ಉಸ್ತುವಾರಿ ಸಿಗೋದು ಅನುಮಾನವಾಗಿದೆ.

ಇದನ್ನೂ ಓದಿ : ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್​​​ಗೆ ತಡೆ : ಗೊಂದಲ ನಿವಾರಣೆಗೆ ಮುಂದಾದ ಶಿಕ್ಷಣ ಸಚಿವರು

ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿರುವ ರಾಮುಲು ಅವರಿಗೆ ನೆರೆಯ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಿಗಲಿದೆ. ಆದರೆ ಇದರ ಜತೆ ಬಳ್ಳಾರಿ ಜಿಲ್ಲೆಯೂ ಬೇಕೆಂಬುದು ರಾಮುಲು ಇಚ್ಚೆ. ಆದರೆ ಶಾಸಕ ಸ್ಥಾನ ರಾಜೀನಾಮೆ ನೀಡಿರುವ ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಮುಂದೆ ಸಚಿವ ಸ್ಥಾನ ನೀಡಿದರೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಿಂಗ್ ಕೊಡಬೇಕಾಗುತ್ತದೆ. ಈ ಕಾರಣಕ್ಕೆ ರಾಮುಲುಗೆ ಬಳ್ಳಾರಿ ಉಸ್ತುವಾರಿ ಕೊಡಲು ಪಕ್ಷ ಹಿಂದೇಟು ಹಾಕುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ಮುಂದೆ ಕಣ್ಣೀರು ಹಾಕಿ ಬಳ್ಳಾರಿ ಉಸ್ತುವಾರಿ ಬೇಕೆಂದು ಕೇಳಿದ್ದಾರೆ. ಆದರೆ ರಾಯಚೂರು ಕೊಡ್ತೇನೆ, ಬಳ್ಳಾರಿ ಕಷ್ಟವೆಂದು ಹೇಳಿದ್ದಾರಂತೆ. ಈ ಬಗ್ಗೆ ಪಕ್ಷ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡುತ್ತಾರೆ.

ವಿಧಾನಸಭಾ ಚುನಾವಣೆ ಮುಂಚೆ ಯಡಿಯೂರಪ್ಪ ಮುಖ್ಯಮಂತ್ರಿ, ಶ್ರೀರಾಮುಲು ಉಪ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿತ್ತು. ಆದರೆ ಮೈತ್ರಿ ಸರ್ಕಾರದ ಪತನ ನಂತರ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆದರೂ, ರಾಮುಲುಗೆ ಸಚಿವ ಸ್ಥಾನಕ್ಕಷ್ಟೆ ಸೀಮಿತಗೊಳಿಸಿ ಡಿಸಿಎಂ ಸ್ಥಾನ ನೀಡಲಿಲ್ಲ. ಈ ಹಿಂದೇ ಇದೇ ಬಿಜೆಪಿ ಹೈಕಮಾಂಡ್ ಸಿದ್ದರಾಮಯ್ಯ ಸ್ಪರ್ಧಿಸಿದ್ದು ಬಾದಾಮಿ ಕ್ಷೇತ್ರದಲ್ಲಿ ರಾಮುಲು ಕಣಕ್ಕಿಳಿಸಿ ಪ್ರಭಾವಿ ನಾಯಕನನ್ನಾಗಿ ಗುರುತಿಸಿದ್ದರು. ಆದರೀಗ ಅದೇ ಬಿಜೆಪಿ ಹೈಕಮಾಂಡ್ ಡಿಸಿಎಂ ಸ್ಥಾನ ನೀಡದೇ ಇರುವುದು ರಾಮುಲು ಅರ್ಥವಾಗುತ್ತಿಲ್ಲ. ಮೇಲಾಗಿ ಅಭಿಮಾನಿಗಳು, ಬೆಂಬಲಿಗರು ರಾಜ್ಯದಾದ್ಯಂತ ಪ್ರತಿಭಟನೆ ಮುಂದುವರೆಸಿದ್ದಾರೆ. ಇನ್ನ ಬಳ್ಳಾರಿಗೆ ಈ ಹಿಂದೆ ಇದೇ ಡಿಕೆಶಿ ಜಿಲ್ಲಾ ಉಸ್ತುವಾರಿಯಾಗಿದ್ದರು. ಅವರ ನಂತರ ಸ್ಥಳೀಯರಾದ ರಾಮುಲು ಸಚಿವರಾಗಲಿ ಎಂದು ಜನರು ಒತ್ತಾಯಿಸುತ್ತಾರೆ.

ಇದನ್ನೂ ಓದಿ : ಝೀರೋ ಟ್ರಾಫಿಕ್​ನಿಂದ ಜನರಿಗೆ ತೊಂದರೆಯಾಗುತ್ತೆ, ನನಗೆ ಆ ಸೌಲಭ್ಯವೇ ಬೇಡ : ಡಿಸಿಎಂ ಅಶ್ವಥ್ ನಾರಾಯಣ್

ರಾಮುಲು ಈ ಹಿಂದೆ ಬಳ್ಳಾರಿ ಜಿಲ್ಲೆ ಜತೆ ಗದಗ ಜಿಲ್ಲೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಬಳ್ಳಾರಿ ಉಸ್ತುವಾರಿ ನೀಡಿದರೆ ಮುಂದೆ ಆನಂದ್ ಸಿಂಗ್ ಮತ್ತೆ ಕೊಡಬೇಕಾಗುತ್ತದೆ. ಆಗ ರಾಮುಲು ಅವರಿಂದ ವಾಪಾಸ್ ಪಡೆದರು ಎಂಬ ಅಪವಾದ ಬರಬಾರದು ಎಂದು ಸಿಎಂ ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ. ಆದರೆ ರಾಮುಲು ಕಣ್ಣೀರಿಗೆ ಯಡಿಯೂರಪ್ಪ ಕರಗುತ್ತಾರಾ? ಇದಕ್ಕೆ ಹೈಕಮಾಂಡ್ ಏನನ್ನುತ್ತೋ ಕಾದು ನೋಡಬೇಕು.ವರದಿ : ಶರಣು ಹಂಪಿ

First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ