HOME » NEWS » State » IT IS DESIRABLE TO DIG BORDER ISSUE AGAIN AND AGAIN DEMAND FOR SEPARATE STATE IS NOT UNDESIRABLE SAYS VENKTESH MURTY HK

ಗಡಿ ವಿಷಯದಲ್ಲಿ ರಾಜಕೀಯ ಬೇಡ; ಪ್ರತ್ಯೇಕತೆಯ ಕೂಗು ಸಮ್ಮತವಲ್ಲ: ಎಚ್.ಎಸ್. ವೆಂಕಟೇಶಮೂರ್ತಿ

ಪ್ರಾದೇಶಿಕ ಅಸಮತೋಲನೆಯ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಸಲ್ಲ. ಅಖಂಡ ಕರ್ನಾಟಕ ರಚನೆಗಾಗಿ ಹತ್ತಾರು ವರ್ಷ ಹೋರಾಟ ಮಾಡಿದ್ದೇವೆ. ಇದನ್ನು ಉಳಿಸಿಕೊಂಡು, ಕನ್ನಡತನ ಬೆಳೆಸಿಕೊಂಡು ಹೋಗಬೇಕು.

G Hareeshkumar | news18-kannada
Updated:February 4, 2020, 4:59 PM IST
ಗಡಿ ವಿಷಯದಲ್ಲಿ ರಾಜಕೀಯ ಬೇಡ; ಪ್ರತ್ಯೇಕತೆಯ ಕೂಗು ಸಮ್ಮತವಲ್ಲ: ಎಚ್.ಎಸ್. ವೆಂಕಟೇಶಮೂರ್ತಿ
ಎಚ್.ಎಸ್.ವೆಂಕಟೇಶ್ ಮೂರ್ತಿ
  • Share this:
ಕಲಬುರ್ಗಿ(ಫೆ. 04): ಗಡಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದೇಶದ ಐಕ್ಯತೆಗೆ ಕಂಟಕ. ಪದೇ ಪದೇ ಗಡಿ ಕ್ಯಾತೆ ತೆಗೆಯೋದರಿಂದ ದೇಶದ ಅಖಂಡತೆಗೆ ಧಕ್ಕೆ ಬರುತ್ತದೆ ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಭಾಗಿಯಾಗಲು ಆಗಮಿಸಿದ ಸಂದರ್ಭದಲ್ಲಿ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ರಾಜ್ಯದಲ್ಲಿ ಇಂಗ್ಲೀಷ್ ಶಾಲೆ ತೆಗೆದಿರೋದು ದೊಡ್ಡ ದುರಂತ. ಅದೇ ರೀತಿ ನೆರೆ ರಾಜ್ಯಗಳ ಗಡಿಯಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚುತ್ತಿರೋದು ಆತಂಕಕಾರಿ ವಿಷಯವಾಗಿದೆ. ರಾಜ್ಯದ ಒಳಗೆ ಮತ್ತು ಹೊರಗೆ ಎರಡೂ ಕಡೆ ಕನ್ನಡದ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ. ಕನ್ನಡ ಉಳಿಸಲು ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ ಎಂದರು.

ಪ್ರಾದೇಶಿಕ ಅಸಮತೋಲನೆಯ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಕೂಗು ಸಲ್ಲ. ಅಖಂಡ ಕರ್ನಾಟಕ ರಚನೆಗಾಗಿ ಹತ್ತಾರು ವರ್ಷ ಹೋರಾಟ ಮಾಡಿದ್ದೇವೆ. ಇದನ್ನು ಉಳಿಸಿಕೊಂಡು, ಕನ್ನಡತನ ಬೆಳೆಸಿಕೊಂಡು ಹೋಗಬೇಕು. ಪ್ರಾದೇಶಿಕ ಅಸಮತೋಲನ ಹೊಡೆದೋಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕನ್ನಡ ಉಳಿಯಬೇಕಾದರೆ ಮಕ್ಕಳಲ್ಲಿ ಕನ್ನಡದ ಜಾಗೃತಿ ಅತ್ಯಗತ್ಯ. ಕಲ್ಯಾಣ ಕರ್ನಾಟಕದ ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ಸರ್ವಾಧ್ಯಕ್ಷತೆ ಶ್ರೇಷ್ಠ ಗೌರವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಸಾಹಿತಿ ಗೀತಾ ನಾಗಭೂಷಣರಿಂದ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ, ಪ್ರಚಾರದ ಸಿಡಿ ಬಿಡುಗಡೆ

ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿಸಿರೋದು ನನ್ನ ಭಾಗ್ಯ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರ್ಗಿಯಲ್ಲಿ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲು ಬಂದ ನನ್ನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಕಲಬುರ್ಗಿ ಜನರ ಪ್ರೀತಿಗೆ ನಾನು ತಲೆಬಾಗುವೆ. ಅತ್ಯಂತ ಖುಷಿಯಿಂದ ಸಮ್ಮೇಳನದಲ್ಲಿ ಭಾಗಿಯಾಗುವೆ. ಸಮ್ಮೇಳನಕ್ಕೆ ಮಹಿಳೆಯರು, ಮಕ್ಕಳು ಎಲ್ಲರನ್ನೂ ಕರೆತನ್ನಿ. ಮಕ್ಕಳಲ್ಲಿ ಕನ್ನಡ ಪ್ರೇಮ ಹುಟ್ಟಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು.
Youtube Video
First published: February 4, 2020, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories