Karnataka Politics: ಮತ್ತೊಂದು ಜೆಡಿಎಸ್ ವಿಕೆಟ್ ಪತನ; ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಫಿಕ್ಸ್

ಈಗಾಗಲೇ ರಾಜ್ಯದ ಎಲ್ಲಾ ಬಿಜೆಪಿ ನಾಯಕರ ಜೊತೆ ಚರ್ಚೆ ಯಾಗಿದೆ. ಬಿಜೆಪಿ ಸೇರೋದು ಅಂತಿಮವಾಗಿದೆ. ಚುನಾವಣೆಯ ದಿನಾಂಕ ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆಯೇ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಬಸವರಾಜ್​ ಹೊರಟ್ಟಿ ಹೇಳಿದ್ದಾರೆ

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

  • Share this:
ಹುಬ್ಬಳ್ಳಿ (ಏ.3):  ಹಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಗಾಸಿಪ್ (Gossip) ಸುದ್ದಿಗೆ ಇದೀಗ ರೆಕ್ಕೆ - ಪುಕ್ಕ ಬಂದಿದೆ. ಸಭಾಪತಿ ಬಸವರಾಜ ಹೊರಟ್ಟಿ (Basavaraj Horahatti) ಬಿಜೆಪಿ ಸೇರ್ಪಡೆಯಾಗುತ್ತಾರೆ ಅನ್ನೋ ವಿಚಾರ ಅಧಿಕೃತವಾಗಿ ಖಾತ್ರಿಯಾಗಿದೆ. ವಿಧಾನ ಪರಿಷತ್ ನ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧೆ ಮಾಡೋದಾಗಿ ಹೊರಟ್ಟಿ ಅಧಿಕೃತವಾಗಿ ಘೋಷಿಸಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ (Election) ಗೆದ್ದು, ಸಭಾಪತಿ ಸ್ಥಾನದಲ್ಲಿ ಮುಂದುವರೆಯೋ ವಿಶ್ವಾಸದಲ್ಲಿ ಹೊರಟ್ಟಿ ಇದ್ದಾರೆ. ಬಸವರಾಜ ಹೊರಟ್ಟಿ ಹಿರಿಯ ಪರಿಷತ್ ಸದಸ್ಯರು, ಸದ್ಯ ಸಭಾಪತಿಗಳೂ ಹೌದು. ಸತತ 42 ವರ್ಷಗಳ ಕಾಲ ಪರಿಷತ್ (Parishath) ಸದಸ್ಯರಾಗಿ ಕಾರ್ಯನಿರ್ವಹಿಸಿರೋ ಹೊರಟ್ಟಿ, ಮತ್ತೊಂದು ಚುನಾವಣೆ ಎದುರಿಸಿ ಗೆದ್ದು ಬರೋ ಮೂಲಕ ದಾಖಲೆ ನಿರ್ಮಿಸೋ ತವಕದಲ್ಲಿದ್ದಾರೆ.

ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಖಚಿತ

ಇಲ್ಲಿಯವರೆಗೂ ಪಕ್ಷೇತರರಾಗಿ ಮತ್ತು ಜನತಾ ಪರಿವಾರದಿಂದ ಆಯ್ಕೆಯಾಗಿದ್ದ ಹೊರಟ್ಟಿ ಅವರು ಮುಂಬರುವ ಚುನಾವಣೆಯ ದೃಷ್ಟಿಯಿಂದ ಬಿಜೆಪಿಯತ್ತ ಮುಖಮಾಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಹುಬ್ಬಳ್ಳಿಗೆ ಬಂದಾಗ ಅವರ ಜೊತೆ ಹೊರಟ್ಟಿ ಕೇಶವಕೃಪಾಕ್ಕೂ ಹೋಗಿದ್ದರು. ಬಿಜೆಪಿ ಸೇರ್ಪಡೆಯಾಗ್ತಾರೇ ಅಂತ ಅಂದೇ ಸುದ್ದಿ ಹುಟ್ಟಿಕೊಂಡಿತ್ತು. ಇಂದು ಅದು ಅಧಿಕೃತವಾಗಿ ಖಾತ್ರಿಯಾಗಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಖಚಿತವಾಗಿದೆ. ಹುಬ್ಬಳ್ಳಿಯಲ್ಲಿ ಸ್ವತಃ ಅವರೇ ಈ ವಿಷಯವನ್ನು ಖಚಿತಪಡಿಸಿದ್ದು, ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಹಲವು ದಿನಗಳಿಂದ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಅನ್ನೋ ಮಾತಿತ್ತು. ಈ ನಡುವೆ ಹೊರಟ್ಟಿ ಅವರಿಗೆ 75 ವರ್ಷ ವಯಸ್ಸಾಗಿದ್ದು, ಕಳಂಕಿತರು ಅನ್ನೋ ಪಟ್ಟ ಕಟ್ಟಿಕೊಂಡವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳೋ ಅವಶ್ಯಕತೆ ಇಲ್ಲ ಎಂದು ಬಿಜೆಪಿಯ ಕೆಲ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೇ ಪತ್ರ ಬರೆದಿದ್ದರು. ಈ ಬೆಳವಣಿಗೆಯ ಬೆನ್ನ ಹಿಂದೆಯೇ ನಾನು ಬಿಜೆಪಿ ಸೇರ್ಪಡೆಯಾಗಲಿರೋದಾಗಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಸವರಾಜಪಥ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದ ನಂತರ ಮಾತನಾಡಿದ ಅವರು, ಶೀಘ್ರವೇ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆ ಆರಂಭಿಸಿದ್ದೇನೆ. ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತುಕತೆ ಆಗಿದೆ.

ಇದನ್ನೂ ಓದಿ; Congress Leaders: ಮೋದಿ ವಿರುದ್ಧ ಸಿಡಿದೆದ್ದ 'ಕೈ' ನಾಯಕರು; ಬೆಲೆ ಏರಿಕೆ ವಿರುದ್ಧ ಸಮರ ಸಾರಿದ ಸಿದ್ದು-ಡಿಕೆಶಿ

ಬಿಜೆಪಿ ಸೇರ್ಪಡೆಗೆ ರೆಡಿಯಾಗಿದ್ದಾರೆ ಹೊರಟ್ಟಿ

ನಡ್ಡಾ ಸೇರಿದಂತೆ ಯಡಿಯೂರಪ್ಪನವರು ಸಹ ಮಾತಾಡಿದ್ದಾರೆ.
ಎಲ್ಲ ನಾಯಕರೂ ಸಹ ಬಿಜೆಪಿ ಸೇರ್ಪಡೆಗೆ ಸಹಮತ ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಿಜೆಪಿ ಸೇರಲಿದ್ದೇನೆ ಎಂದರು.  ಹೊರಟ್ಟಿಗೆ ವಯಸ್ಸಾಗಿದೆ, ಕಳಂಕಿತರಾಗಿರೋ ಅವರಿಗೆ ಟಿಕೇಟ್ ನೀಡಬೇಡಿ ಎಂದು ಜೆಪಿ ನಡ್ಡಾ ಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಹೊರಟ್ಟಿ, ಅದು ಅವರ ವೈಯಕ್ತಿಕ ವಿಚಾರ. ಪತ್ರ ಬರೆದಿರೋದ್ರ ಬಗ್ಗೆ ಮತ್ತು ಬರೆದೋರ ಬಗ್ಗೆ ನಾನೇನು ಹೇಳಲಿ ಎಂದು ಪ್ರಶ್ನಿಸಿದರು. ಅವರು ಏನೇ ಪತ್ರ ಬರೆಯಲಿ ಅದಕ್ಕೂ ನನಗೂ ಸಂಬಂಧವಿಲ್ಲ. ಈಗಾಗಲೇ ರಾಜ್ಯದ ಎಲ್ಲಾ ಬಿಜೆಪಿ ನಾಯಕರ ಜೊತೆ ಚರ್ಚೆ ಯಾಗಿದೆ. ಬಿಜೆಪಿ ಸೇರೋದು ಅಂತಿಮವಾಗಿದೆ. ಚುನಾವಣೆಯ ದಿನಾಂಕ ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆಯೇ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದಿದ್ದಾರೆ.

ಕುಮಾರಸ್ವಾಮಿಯಿಂದಲೂ ಗ್ರೀನ್ ಸಿಗ್ನಲ್

ಬಿಜೆಪಿ ಸೇರ್ಪಡೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲೇ ಇದ್ದರೂ ಇನ್ನಷ್ಟು ದಿನಗಳ ಕಾಲ ಪರಿಷತ್ ನಲ್ಲಿ ಇರಬೇಕು ಅನ್ನೋದು ಕುಮಾರಸ್ವಾಮಿ ಇಚ್ಛೆಯಾಗಿದೆ. ಅವರಿಗೂ ಸಹ ನಾನು ಮನವೊಲಿಕೆ ಮಾಡಿದ್ದು, ಅವರೂ ಬಿಜೆಪಿ ಪಕ್ಷ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಬಿಜೆಪಿ ಸೇರೋದು ಪಕ್ಕಾ ಎಂದು ಹೊರಟ್ಟಿ ತಿಳಿಸಿದ್ದಾರೆ.
ಒಟ್ಟಾರೆ ಕಳೆದ ಎಂಟು ತಿಂಗಳುಗಳಿಂದ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗ್ತಾರೆ ಅಂತ ಹರಿದಾಡ್ತಿದ್ದ ಸುದ್ದಿಗೆ ಇಂದು ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ. ಸಭಾಪತಿಯಾಗಿ ಮುಂದುವರೆಯಬೇಕೆಂದರೆ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗೋದು ಅನಿವಾರ್ಯವಾಗಿದೆ.

ಇದನ್ನೂ ಓದಿ: "BJP ಅಂದರೆ ಬಲ್ಲಿದ ಜನರ ಪಕ್ಷ"! ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್

ಒಂದು ವೇಳೆ ಜೆಡಿಎಸ್ ನಲ್ಲಿಯೇ ಮುಂದುವರೆದರೇ, ಪಕ್ಷೇತರರಾಗಿ ಗೆದ್ದರೂ ಸಭಾಪತಿ ಸ್ಥಾನದಲ್ಲಿ ಮುಂದುವರಿಕೆಯೋಕೆ ಆಗಲ್ಲ. ಹೀಗಾಗಿ ಸಭಾಪತಿ ಸ್ಥಾನದಲ್ಲಿ ಮುಂದುವರೆಸೋ ಭರವಸೆ ಪಡೆದೇ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
Published by:Pavana HS
First published: