ಶಿವಮೊಗ್ಗ(ಅಕ್ಟೋಬರ್. 28): ಕೊರೋನಾ ಸಮಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಕಷ್ಟ ಎಂಬ ಅಭಿಪ್ರಾಯ ಗ್ರಾಮೀಣ ಭಾಗದ ಜನರಲ್ಲೇ ಇದೆ. ಅದರೂ ಸಹ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ತಯಾರಿದ್ದೇವೆ. ಆದರೆ, ಪ್ರಾರ್ಥನೆ ಮಾಡುತ್ತೇವೆ ಕೊರೋನಾ ಸಮಯದಲ್ಲಿ ಗ್ರಾಮೀಣ ಪ್ರದೇಶದ 6021 ಗ್ರಾಮ ಪಂಚಾಯತ್ ಚುನಾವಣೆ ನಡೆಸಿದರೆ, ಕೊರೋನಾ ಸಮಸ್ಯೆ ಹೆಚ್ಚಾಗಬಹುದು ಎಂಬ ಭಯ ಗ್ರಾಮೀಣ ಭಾಗದಲ್ಲಿ ಜನರಲ್ಲಿ ರೈತರಲ್ಲಿ ಇದೆ. ಕೋರ್ಟ್ ಮತ್ತು ಚುನಾವಣೆ ಆಯೋಗ ಚುನಾವಣೆಯನ್ನು ಸ್ಪಲ್ಪ ಮುಂದಕ್ಕೆ ಹಾಕಿದರೇ ಒಳ್ಳೆಯದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಕೊರೋನಾ ಸಮಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಕಷ್ಟ ಎಂಬ ಅಭಿಪ್ರಾಯ ಗ್ರಾಮೀಣ ಭಾಗದ ಜನರಲ್ಲೇ ಇದೆ. ಆದರೂ ಸಹ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ತಯಾರಿದೆ ಎಂದರು.
ಕೋರ್ಟ್ ಮತ್ತು ಚುನಾವಣಾ ಆಯೋಗ ಏನು ಹೇಳುತ್ತೇ ಅದಕ್ಕೆ ನಾವು ಬದ್ಧವಾಗಿರಬೇಕಾಗುತ್ತೇ. ಇದಕ್ಕಾಗಿಯೇ ನಾವು ಪ್ರಾರ್ಥನೆ ಮಾಡುತ್ತೇವೆ, ಕೋರ್ಟ್ ಮತ್ತು ಚುನಾವಣೆ ಆಯೋಗ ಚುನಾವಣೆಯನ್ನು ಸ್ಪಲ್ಪ ಮುಂದಕ್ಕೆ ಹಾಕಿದರೇ ಒಳ್ಳೆಯದು. ಇದು ಕೇವಲ ಬಿಜೆಪಿ ಪಕ್ಷದ ಪ್ರಾರ್ಥನೆ ಅಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಅಭಿಪ್ರಾಯ ಸಹ ಇದೆ ಆಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಾಲ್ಕು ವಿಧಾನ ಪರಿಷತ್ ಚುನಾವಣೆ ಮತ್ತು ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿಗೆ ಬೆಂಬಲ ಸಿಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರುಗಳ ಹೇಳಿಕೆಗಳು, ವೈಯುಕ್ತಿಕ ಟೀಕೆಗಳು ನಿಜಕ್ಕೂ ಕೂಡ ಒಬ್ಬ ನುರಿತ ರಾಜಕಾರಣಿ ಮಾಡುವಂತ ಟೀಕೆಗಳು ಅಲ್ಲ. ವೈಯುಕ್ತಿಕವಾಗಿ ಅವರ ಬಳಸುತ್ತಿರುವ ಭಾಷೆ ನಮಗೆ ಹೇಳುವುದಕ್ಕೆ ನಾಚಿಕೆ ಆಗುತ್ತೇ, ಕಾಂಗ್ರೇಸ್ ನವರ ಹೇಳಿಕೆಗಳು ಅವರು ಕಡಿಮೆ ವೋಟು ತೆಗೆದುಕೊಳ್ಳುವುದಕ್ಕೆ ಅವರ ಭಾಷೆ ಉತ್ತರ ಕೊಡುತ್ತೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : Murder: ಆಸ್ತಿ ಪಾಲು ಕೇಳಿದ್ದಕ್ಕೆ ಅಣ್ಣನ ಮಗನನ್ನೆ ಕೊಂದ ಚಿಕ್ಕಪ್ಪ ; ಕೊಲೆ ಮಾಡಿ ನಾಪತ್ತೆ ದೂರು ಕೊಟ್ಟ ಕಿರಾತಕ ಬಂಧನ
ಸೋಲುತ್ತೇವೆ ಎಂದಾಗ ಕಾಂಗ್ರೆಸ್ ನವರು ಆರೋಪ ಮಾಡುತ್ತಾರೆ. ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಪ್ರಶ್ನೆಗೆ ಈಶ್ವರಪ್ಪ ಈ ರೀತಿ ಪ್ರತಿಕ್ರಿಯೆಸಿದಿದ್ದಾರೆ. ಕಾಂಗ್ರೆಸ್ ನವರು ಸೋಲುತ್ತೇವೆ ಎಂದು ಈ ಮೂಲಕ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ