• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivalinge Gowda: ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ತೊರೆದು ‘ಕೈ’ ಹಿಡಿಯೋದು ಬಹುತೇಕ ಫಿಕ್ಸ್‌! ಆಡಿಯೋ ವೈರಲ್‌

Shivalinge Gowda: ಶಾಸಕ ಶಿವಲಿಂಗೇಗೌಡ ಜೆಡಿಎಸ್‌ ತೊರೆದು ‘ಕೈ’ ಹಿಡಿಯೋದು ಬಹುತೇಕ ಫಿಕ್ಸ್‌! ಆಡಿಯೋ ವೈರಲ್‌

ಜೆಡಿಎಸ್‌ ಶಾಸಕ ಶಿವಲಿಂಗೇಗೌಡ

ಜೆಡಿಎಸ್‌ ಶಾಸಕ ಶಿವಲಿಂಗೇಗೌಡ

ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು ಜೆಡಿಎಸ್ ಪಕ್ಷ ತೊರೆದು ಶೀಘ್ರದಲ್ಲಿಯೇ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ವದಂತಿ ಹಬ್ಬಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಆಡಿಯೋವೊಂದು ವೈರಲ್ ಆಗಿದೆ. ಈ ಆಡಿಯೋದಲ್ಲಿ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ಹಾಸನ: ವಿಧಾನಸಭಾ ಚುನಾವಣೆ (Karnataka Assembly Election) ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ನಾಯಕರ ಜೊತೆ ಕಾರ್ಯಕರ್ತರು ಕೂಡ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ನಿರ್ಧಾರ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವೊಬ್ಬರು ಪಕ್ಷದಲ್ಲಿದ್ದರೂ ಇಲ್ಲದಂತೆ ವರ್ತಿಸುತ್ತಾರೆ. ಸಮಯ ಸಂದರ್ಭ ನೋಡಿಕೊಂಡು ಸೂಕ್ತ ಪಕ್ಷಕ್ಕೆ ಸೇರಿಬಿಡುತ್ತಾರೆ. ಆ ಪೈಕಿ (Arasikere MLA) ಅರಸೀಕೆರೆ ಶಾಸಕ ಶಿವಲಿಂಗೇಗೌಡ (KM Shivalinge Gowda) ಕೂಡ ಒಬ್ಬರು.


ಹೌದು.. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಕಳೆದ ಒಂದು ವರ್ಷದಿಂದ ಮೌನವಾಗಿದ್ದರು. ಜೆಡಿಎಸ್ ಪಕ್ಷದ ಯಾವುದೇ ಕೆಲಸ ಕಾರ್ಯಗಳಿಗೆ ಭಾಗಿಯಾಗುತ್ತಿರಲಿಲ್ಲ. ಒಂದ್ಕಡೆ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಂತಹ ಯಾವುದೇ ವದಂತಿಗಳಿಗೆ ಪ್ರತಿಕ್ರಿಯೆ ನೀಡದ ಶಾಸಕ ಶಿವಲಿಂಗೇಗೌಡ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜೆಡಿಎಸ್ ಪಕ್ಷ ತೊರೆಯುವ ಕುರಿತು ಮಾತನಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಶಿವಲಿಂಗೇಗೌಡ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದೆ.


ಇದನ್ನೂ ಸೇರಿಸಿ: JDS MLA: ಕಾಂಗ್ರೆಸ್‌ ಕದ ತಟ್ಟಿದ ಶಾಸಕ ಶಿವಲಿಂಗೇಗೌಡ! ಜೆಡಿಎಸ್‌ನಲ್ಲಿ ಸೈಲೆಂಟ್‌, ಪಕ್ಷದ ಕಾರ್ಯಕ್ರಮದಿಂದಲೂ ದೂರ!


‘ಕಾಂಗ್ರೆಸ್‌ ಸೇರಿದ್ರೆ 50 ಸಾವಿರ ಲೀಡ್‌ಲ್ಲಿ ಗೆಲ್ತೀನಿ’


ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು ಜೆಡಿಎಸ್ ಪಕ್ಷ ತೊರೆದು ಶೀಘ್ರದಲ್ಲಿಯೇ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ವದಂತಿ ಹಬ್ಬಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಆಡಿಯೋವೊಂದು ವೈರಲ್ ಆಗಿದೆ. ಈ ಆಡಿಯೋದಲ್ಲಿ ಶಿವಲಿಂಗೇಗೌಡ ಮಾತಾಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ, ‘ಯಾವನಲ್ಲ, ಯಾವನಪ್ಪ ಬಂದ್ರೂ ನಾನು ಕಾಂಗ್ರೆಸ್ ಸೇರಿದ್ರೆ ಐವತ್ತು ಸಾವಿರ ಲೀಡಲ್ಲಿ ಗೆಲ್ತೀನಿ’ ಎಂದು ಹೇಳಿದ್ದಾರೆ. ಕಾರ್ಯಕರ್ತರ ಜೊತೆ ಮಾತನಾಡುವಾಗ ಎಚ್‌ಡಿ ರೇವಣ್ಣ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರು ಹೆಸರು ಎತ್ತದೇ ಶಿವಲಿಂಗೇಗೌಡ ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.


ಕಳೆದ ಒಂದು ವರ್ಷದಿಂದ ಶಿವಲಿಂಗೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿ ದೊಡ್ಡಮಟ್ಟದಲ್ಲಿ ಹಬ್ಬಿದ್ದರೂ ಶಾಸಕರು ಮಾತ್ರ ಈ ಗಾಳಿಸುದ್ದಿಗಳಿಗೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಈಗಲೂ ಕೂಡ ಶಿವಲಿಂಗೇಗೌಡ ಆಡಿಯೋ ಕುರಿತು ಮೌನವಾಗಿದ್ದು, ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಶಿವಲಿಂಗೇಗೌಡ ಅವರು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆಗಲೂ ಶಾಸಕ ಶಿವಲಿಂಗೇಗೌಡ ಅವರು ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.


ಇದನ್ನೂ ಓದಿ: HD Kumaraswamy: ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ ಮಾಜಿ ಸಿಎಂ ಹೆಚ್​​ಡಿಕೆಗೆ ಸೂರಜ್​ ರೇವಣ್ಣ ಟಾಂಗ್​


ಅರಸೀಕೆರೆಯಲ್ಲಿ ಜೆಡಿಎಸ್‌ ಕಾರ್ಯ ಚುರುಕು


ಇನ್ನೊಂದೆಡೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ತಾನು ಪಕ್ಷ ತೊರೆಯುತ್ತೇನೆ ಎಂಬ ಕುರಿತು ಈವೆರೆಗೆ ಯಾವುದೇ ಸುಳಿವು ನೀಡದಿದ್ದರೂ ಎಚ್‌ಡಿ ರೇವಣ್ಣ, ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖರಿಗೆ ಶಿವಲಿಂಗೇ ಗೌಡ ಜೆಡಿಎಸ್‌ನಲ್ಲೇ ಉಳಿಯುತ್ತಾರೆ ಎಂಬ ಬಗ್ಗೆ ಯಾವುದೇ ವಿಶ್ವಾಸವಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂದೇ ನಿರ್ಧರಿಸುವ ಜೆಡಿಎಸ್ ನಾಯಕರು ಈಗಾಗಲೇ ಅರಸಿಕೆರೆ ಕ್ಷೇತ್ರದಲ್ಲಿ ಶಿವಲಿಂಗೇಗೌಡರನ್ನು ಬಿಟ್ಟೇ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.


ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ, ಎಚ್‌ಡಿ ರೇವಣ್ಣ ಪದೇ ಪದೇ ಅರಸೀಕೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಗಳನ್ನು ಮಾಡಿದ್ದಾರೆ. ಯಾರೇ ಹೋದರೂ, ಯಾರೇ ಬಂದರೂ ಅರಸೀಕೆರೆ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ ಎಂದು ಜೆಡಿಎಸ್ ನಾಯಕರು ಹೇಳಿದ್ದು, ಹೀಗಾಗಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್‌ ಸೇರಿದರೂ ಆ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯೇ ಗೆಲ್ಲಬೇಕು ಎಂದು ಇನ್ನಿಲ್ಲದಂತೆ ಶ್ರಮ ವಹಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

Published by:Avinash K
First published: