Chandrashekhar Guruji: ನಾಳೆ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ, ಹುಟ್ಟೂರಿನಲ್ಲಿ ನೀರವ ಮೌನ

ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಹತ್ಯೆಯಾದ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ನಾಳೆ ಹುಬ್ಬಳ್ಳಿಯಲ್ಲಿ ಅವರ ಹೊಲದಲ್ಲಿಯೇ ನಡೆಯಲಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ ಇಬ್ಬರೂ ಆರೋಪಿಗಳನ್ನು ಬಂಧಿಸಿರೋ ಪೊಲೀಸರು, ತೀವ್ರ ವಿಚಾರಣೆ ಮುಂದುವರೆಸಿದ್ದಾರೆ.

ಚಂದ್ರಶೇಖರ್ ಗುರೂಜಿ

ಚಂದ್ರಶೇಖರ್ ಗುರೂಜಿ

  • Share this:
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ (Hubballi) ಮಟ್ಟಿಗೆ ಇದೊಂದು ಭಯಾನಕ ಹತ್ಯೆ (Murder). 60 ಬಾರಿ ಚುಚ್ಚಿ ಚುಚ್ಚಿ ಕೊಂದ್ರೂ ಆ ಪಾಪಿಗಳ ಮನಸ್ಸು ಕರಗಿಲ್ಲ. ಚಂದ್ರಶೇಖರ ಗುರೂಜಿ (Chandrashekhar) ಸತ್ತಿದ್ದಾರೆ ಅಂತ ಖಾತ್ರಿಯಾದ ಮೇಲೆಯೇ ಆರೋಪಿಗಳು ಎಸ್ಕೇಪ್ (Escape) ಆಗಿದ್ದಾರೆ. ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ (Hotel) ಕೊಲೆ ನಡೆದ ನಂತರ ಚಂದ್ರಶೇಖರ ಗುರೂಜಿ ಮೃತದೇಹವನ್ನು ಕಿಮ್ಸ್ ನಲ್ಲಿ (Kims) ಇಡಲಾಗಿದ್ದು, ನಾಳೆ ಹುಬ್ಬಳ್ಳಿಯಲ್ಲಿ ಸುಳ್ಳ ರಸ್ತೆಯಲ್ಲಿರೋ ಹೊಲದಲ್ಲಿ ನೆರವೇರಿಸಲಾಗುತ್ತಿದೆ. ಸರಳ ವಾಸ್ತು (Sarala Vastu) ಮೂಲಕ ಕರ್ನಾಟಕ (Karnataka) ಸೇರಿ ನೆರೆ ರಾಜ್ಯಗಳಲ್ಲಿಯೂ ಖ್ಯಾತಿ ಪಡೆದಿದ್ದ ಚಂದ್ರಶೇಖರ ಗುರೂಜಿ ಹತ್ಯೆ ನಡೆದಿದೆ. ತನ್ನ ಸಹೋದರನ ಮೊಮ್ಮಗನ ಅಂತ್ಯಕ್ರಿಯೆಗೆಂದು ಬಂದಿದ್ದ ಗುರೂಜಿ ತಾವೇ ಅಂತ್ಯವಾಗಿದ್ದಾರೆ. ಎರಡು ದಿನಗಳ ಹಿಂದೆ ಬಂದು ಇಲ್ಲಿಯೇ ವಾಸ್ತವ್ಯ ಮಾಡಿದ್ದ ಚಂದ್ರಶೇಖರ್ ಗುರೂಜಿ, ಆಸ್ತಿ ವಿಚಾರವಾಗಿ ಮಾತನಾಡಲು ಮಹಾಂತೇಶ್ ಶಿರೂರ ಮತ್ತು ಮಂಜುನಾಥನನ್ನು ಹೋಟೆಲ್ ಗೆ ಕರೆಸಿದ್ದುದೇ ಅವರ ಜೀವಕ್ಕೆ ಮುಳುವಾಗಿದೆ.

ಗುರೂಜಿ ಹತ್ಯೆಗೆ ವ್ಯವಸ್ಥಿತ ಸಂಚು

ಕಳೆದ ಕೆಲ ದಿನಗಳ ಹಿಂದೆಯೇ ಗುರೂಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು, ಅವರಾಗಿಯೇ ಫೋನ್ ಮಾಡಿದ್ದರಿಂದ ಪ್ಲಾನ್ ಮಾಡಿಕೊಂಡೇ ಹೋಗಿದ್ದಾರೆ. ರೆಸಿಪ್ಶೆನ್ ಬಳಿ ಬಂದು ಕುಳಿತ ಗುರೂಜಿ ಕಾಲಿಗೆ ಬಿದ್ದು ನಮಸ್ಕರಿಸಿದವಂತೆ ನಾಟಕ ಮಾಡಿ ಏಕಾಏಕಿ ದಾಳಿ ಮಾಡಿ ಹತ್ಯೆಗೈದಿದ್ದಾರೆ. ಇದಕ್ಕೆ ಆಸ್ತಿ ವಿಚಾರವೇ ಕಾರಣ ಎನ್ನಲಾಗಿದೆ. ಮಹಾಂತೇಶ್ ಹೆಸರಿನಲ್ಲಿ ಬೇನಾಮಿಯಾಗಿ ಗುರೂಜಿ ಆಸ್ತಿ ಮಾಡಿದ್ದುದೇ ಅವರ ಸಾವಿಗೆ ಮುಳುವಾಗಿದೆ ಎನ್ನಲಾಗಿದೆ.

ಆಸ್ತಿ ವಿಚಾರಕ್ಕೆ ನಡೆಯಿತಾ ಕೊಲೆ?

ನಾಲ್ಕು ವರ್ಷದ ಹಿಂದೆ ಮಹಾಂತೇಶ್ ಮತ್ತು ಮಂಜುನಾಥರನ್ನು ಗುರೂಜಿ ಕೆಲಸದಿಂದ ತೆಗೆದು ಹಾಕಿದ್ದ. ಆಗಿನಿಂದಲೂ ಇವರ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳೋಕೆ ಗುರೂಜಿ ಯತ್ನಿಸಿದ್ರು. ಆದರೆ ಪ್ರಯೋಜನವಾಗಿರಲಿಲ್ಲ. ಆಸ್ತಿಯನ್ನು ತನ ಹೆಸರಿಗೆ ಬರೆದುಕೊಡುವಂತೆ ಪದೇ ಪದೇ ವಾರ್ನ್ ಮಾಡ್ತಿದ್ದರಿಂದ ಕುಪಿತಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Breaking News: ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ನಲ್ಲಿ ಇಬ್ಬರು ಅರೆಸ್ಟ್! ನಾಲ್ಕೇ ಗಂಟೆಗಳಲ್ಲಿ ಕೋಳ ತೊಡಿಸಿದ ಪೊಲೀಸರು

ಕಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹ

ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿ, ವಿಚಾರಣೆಗೆ ಗುರಿಪಡಿಸಿದ್ದಾರೆ. ಕೊಲೆ ಸುದ್ದಿ ತಿಳಿದ ಕೂಡಲೇ ಗುರೂಜಿ ಕುಟುಂಬದ ಸದಸ್ಯರು ಕಿಮ್ಸ್ ಶವಾಗಾರಕ್ಕೆ ಬಂದು ತಮ್ಮ ತಂದೆಯ ಮುಖ ನೋಡಿ ವಾಪಸ್ ಹೋಗಿದ್ದಾರೆ. ಗುರೂಜಿ ಶವ ಕಿಮ್ಸ್ ಶವಾಗಾರದಲ್ಲಿಯೇ ಇದ್ದು, ಅಂತ್ಯಕ್ರಿಯೆಗೆ ನಾಳೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಾಳೆ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ

ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿ ಗುರೂಜಿ ಅವರೇ ಕೊಂಡು ಕೊಂಡಿದ್ದ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಗುರೂಜಿ ಕೊಲೆಯಾದ ಸುದ್ದಿ ತಿಳಿದು ಆತನ ಕಛೇರಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೂ ಕಿಮ್ಸ್ ಶವಾಗಾರದ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: Chandrashekhar Guruji ಹತ್ಯೆ ಬಗ್ಗೆ ಆರೋಪಿ ಕೊಟ್ಟಿದ್ದನಾ ಸುಳಿವು? ಸಂಭವಾಮಿ ಯುಗೇ ಯುಗೇ ಎಂದಿದ್ದೇಕೆ ಹಂತಕ?

ಪೊಲೀಸರಿಂದ ಚುರುಕುಗೊಂಡ ತನಿಖೆ

ಇಬ್ಬರೂ ಆರೋಪಿಗಳನ್ನು ಬಂಧಿಸಿರೋ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ. ಇನ್ನು ವಶಕ್ಕೆ ಪಡೆದಿದ್ದ ಮಹಾಂತೇಶ್ ಶಿರೂರ ಪತ್ನಿಯನ್ನು ವಿಚಾರಣೆಯ ನಂತರ ಬಿಟ್ಟು ಕಳುಹಿಸಿಕೊಡಲಾಗಿದೆ. ಕೆಲ ಮಾಜಿ ನೌಕರರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೊಲೆಯಲ್ಲಿ ಯಾರ ಯಾರ ಪಾತ್ರವಿದೆ, ಕೊಲೆಗೆ ಕಾರಣ ಏನೂ ಎಂಬಿತ್ಯಾದಿಯ ತನಿಖೆ ಮಾಡಲಾಗುತ್ತಿದೆ.
Published by:Annappa Achari
First published: