ಸ್ಯಾಂಡಲ್​ವುಡ್​ ನಟ ಹಾಗೂ ನಿರ್ಮಾಪಕರ ಮೇಲೆ ರೇಡ್​ ನಡೆಸಲು ಐಟಿ ಸಿದ್ಧತೆ ಹೇಗಿತ್ತು ಗೊತ್ತಾ?

ರೇಡ್​ ಮಾಡಲು ನ್ಯಾಯಾಲಯದಿಂದ ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆಯಬೇಕು. ಬುಧವಾರವೇ ಈ ಪ್ರಕ್ರಿಯೆ ಮುಗಿಸಿಕೊಂಡಿತ್ತು ಆದಾಯ ತೆರಿಗೆ ಇಲಾಖೆ.

Rajesh Duggumane | news18
Updated:January 3, 2019, 1:49 PM IST
ಸ್ಯಾಂಡಲ್​ವುಡ್​ ನಟ ಹಾಗೂ ನಿರ್ಮಾಪಕರ ಮೇಲೆ ರೇಡ್​ ನಡೆಸಲು ಐಟಿ ಸಿದ್ಧತೆ ಹೇಗಿತ್ತು ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 1:49 PM IST
  • Share this:
ಬೆಂಗಳೂರು(ಜ.3): ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತದೆ ಎಂದಾದರೆ ಅದಕ್ಕೆ ಭಾರಿ ಸಿದ್ಧತೆ ಬೇಕಾಗುತ್ತದೆ. ಇಂದು ನಿರ್ಧರಿಸಿ ನಾಳೆ ರೇಡ್​ ಮಾಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಇಂದು ಸ್ಯಾಂಡಲ್​ವುಡ್​ ಸ್ಟಾರ್​ ನಟರು ಹಾಗೂ ಖ್ಯಾತ ನಿರ್ಮಾಪಕರ ಮನೆಯ ಮೇಲೆ ರೇಡ್​ ಮಾಡುವ ಮೊದಲು ಐಟಿ ಭಾರಿ ಸಿದ್ಧತೆಯನ್ನೇ ನಡೆಸಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಯಾಂಡಲ್​ವುಡ್​ಗೆ ಬಿಗ್ ಶಾಕ್ ನೀಡಲು ಐಟಿ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿದ್ದರು. ಕಳೆದ ಒಂದು ವಾರದಿಂದ ಇದಕ್ಕೆ ಸಿದ್ಧತೆ ಕೂಡ ನಡೆದಿತ್ತು. ಸುದೀಪ್​, ಪುನೀತ್​ ರಾಜ್​ಕುಮಾರ್​, ಯಶ್​, ಶಿವರಾಜ್​ಕುಮಾರ್​, ವಿಜಯ್​ ಕಿರಗಂದೂರು, ಜಯಣ್ಣ, ರಾಕ್​ಲೈನ್​ ವೆಂಕಟೇಶ್​, ಸಿಆರ್​ ಮನೋಹರ್​ ಅವರ ಆದಾಯದ ಬಗ್ಗೆ ಐಟಿ ಅಧಿಕಾರಿಗಳು ಸಮಗ್ರ ಮಾಹಿತಿ ಕಲೆ ಹಾಕಿದ್ದರು. ಸೂಕ್ತ ದಾಖಲೆ ಪಡೆದ ನಂತರವೇ ದಾಳಿ ಮಾಡಲು ಅಧಿಕಾರಿಗಳು ಮುಂದಾಗಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; 'ಕೆಜಿಎಫ್​' ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!

ಇನ್ನು, ರೇಡ್​ ಮಾಡಲು ನ್ಯಾಯಾಲಯದಿಂದ ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆಯಬೇಕು. ಬುಧವಾರವೇ ಈ ಪ್ರಕ್ರಿಯೆ ಮುಗಿಸಿಕೊಂಡಿತ್ತು ಆದಾಯ ತೆರಿಗೆ ಇಲಾಖೆ. ಇದಕ್ಕೆ 200 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ವಿಶೇಷ ಎಂದರೆ ಗೋವಾದಿಂದಲೂ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದರು.

ಈ ಮೊದಲು ಪ್ಲಾನ್​ ಮಾಡಿದಂತೆ ಇಂದು ಬೆಳಗ್ಗೆ ಖಾಸಗಿ ವಾಹನಗಳಲ್ಲಿ ಬಂದು ದಾಳಿ ನಡೆಸಿದ್ದಾರೆ. ಸತತ 6 ಗಂಟೆಗಳಿಂದ ಐಟಿ ಪರಿಶೀಲನೆ ಮುಂದುವರೆಯುತ್ತಿದೆ. ಇಷ್ಟೆಲ್ಲ ಸಿದ್ಧತೆ ನಡೆದಿದ್ದರೂ ಎಲ್ಲಿಯೂ ದಾಳಿಯ ಒಂದಿಂಚೂ ಮಾಹಿತಿಯೂ ಹೊರಬಂದಿರಲಿಲ್ಲ.

ಇದನ್ನೂ ಓದಿ: ಚಂದನವನದ​ ನಟ, ನಿರ್ಮಾಪಕರ ಮನೆ ಮೇಲೆ ಏಕಕಾಲದಲ್ಲಿ ಐಟಿ ದಾಳಿ ಹಿಂದಿನ ರಹಸ್ಯವೇನು? 

First published: January 3, 2019, 12:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading