HOME » NEWS » State » IT CITY BANGLORE GETS ANOTHER OVERNIGHT EXPRESS TRAIN TO GOA MAK

ಮಂಗಳೂರು, ಉಡುಪಿ, ಕಾರವಾರ ಮೂಲಕ ಬೆಂಗಳೂರಿಂದ ಗೋವಾಗೆ ಸದ್ಯದಲ್ಲೇ ಹೊಸ ರೈಲು

ಬೆಂಗಳೂರಿನಿಂದ ಗೋವಾಕ್ಕೆ ಈಗಾಗಲೇ ಒಂದು ರೈಲು ಸಂಚಾರ ಇದೆ. ಆದರೆ, ಇದು ಹುಬ್ಬಳ್ಳಿ, ಧಾರವಾಡ ಮೂಲಕ ಗೋವಾ ತಲುಪುವುದರಿಂದ ಸಂಚಾರದ ಅವಧಿ 2 ರಿಂದ 3 ಗಂಟೆ ಹೆಚ್ಚಾಗಿದೆ. ಆದರೆ, ಈಗ ಹೊಸದಾಗಿ ಆರಂಭಿಸಲಿರುವ ಮಾರ್ಗದಲ್ಲಿ ಕರಾವಳಿಯ ಹಲವು ಭಾಗದ ಜನರಿಗೆ ಈ ಸೇವೆ ವಿಸ್ತರಿಸುವುದಲ್ಲದೆ ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ.

MAshok Kumar | news18-kannada
Updated:February 13, 2020, 11:51 AM IST
ಮಂಗಳೂರು, ಉಡುಪಿ, ಕಾರವಾರ ಮೂಲಕ ಬೆಂಗಳೂರಿಂದ ಗೋವಾಗೆ ಸದ್ಯದಲ್ಲೇ ಹೊಸ ರೈಲು
ಸಾಂದರ್ಭಿಕ ಚಿತ್ರ
  • Share this:
ಬೇಸಿಗೆ ರಜೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಬೆಂಗಳೂರಿನ ಜನ ತಮ್ಮ ರಜಾದಿನಗಳನ್ನು ಕಳೆಯುವ ಸಲುವಾಗಿ ಬೆಂಗಳೂರು-ಗೋವಾ ನಡುವೆ ಪ್ರತಿದಿನ ಮತ್ತೊಂದು ರೈಲು ಶೀಘ್ರದಲ್ಲೇ ಸಂಚರಿಸಲಿದೆ. ಯಶವಂತಪುರದಿಂದ ಸಂಚಾರ ಆರಂಭಿಸಲಿರುವ ಈ ನೂತನ ವಾಸ್ಕೋಡಾಗಾಮ ರೈಲು 696 ಕಿಮೀ ದೂರವನ್ನು 16 ಗಂಟೆಯಲ್ಲಿ ಸಂಚರಿಸಲಿದ್ದು, ಇದರ ಕಾರ್ಯಾರಂಭದ ದಿನವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಪಶ್ಚಿಮ ರೈಲು ವಿಭಾಗದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, “ಕರ್ನಾಟಕದ ಕರಾವಳಿ ಜನರ ಒತ್ತಾಯದ ಮೇರೆಗೆ ಹಾಗೂ ರೈಲಿನಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಈ ರೈಲು ಸಂಚಾರವನ್ನು ಆರಂಭಿಸಲು ಉದ್ದೇಶಿಸಲಾಗಿದೆ.  ಪ್ರತಿ ದಿನ 06587/06588 ಸಂಖ್ಯೆಯ ವಾಸ್ಕೊಡಾಗಾಮ ರೈಲು ಯಶವಂತಪುರದಿಂದ ಸಂಜೆ 6.45ಕ್ಕೆ ಹೊರಟು ಮರುದಿನ ಬೆಳಗ್ಗೆ 10.30ರ ಸುಮಾರಿಗೆ ಗೋವಾ ತಲುಪಲಿದೆ.

ಅದೇ ರೈಲು ಮತ್ತೆ ಸಂಜೆ 4.30ಕ್ಕೆ ಗೋವಾದಿಂದ ಹೊರಟು ಬೆಳಗ್ಗೆ 9 ಗಂಟೆಗೆ ಬೆಂಗಳೂರು ತಲುಪಲಿದೆ. ಈ ರೈಲು ಹಾಸನ, ಪಡಿಲ್ (ಮಂಗಳೂರು), ಉಡುಪಿ, ಕುಮಟ ಮತ್ತು ಕಾರವಾರ ಮೂಲಕ ಗೋವಾ ತಲುಪಲಿದ್ದು, ಈ ಸೇವೆಯಿಂದ ಅನೇಕರು ಉಪಯೋಗ ಪಡೆಯಲಿದ್ದಾರೆ” ಎಂದು ತಿಳಿಸಿದ್ದಾರೆ.

ಬೆಂಗಳೂರಿನಿಂದ ಗೋವಾಕ್ಕೆ ಈಗಾಗಲೇ ಒಂದು ರೈಲು ಸಂಚಾರ ಇದೆ. ಆದರೆ, ಇದು ಹುಬ್ಬಳ್ಳಿ, ಧಾರವಾಡ ಮೂಲಕ ಗೋವಾ ತಲುಪುವುದರಿಂದ ಸಂಚಾರದ ಅವಧಿ 2 ರಿಂದ 3 ಗಂಟೆ ಹೆಚ್ಚಾಗಿದೆ. ಆದರೆ, ಈಗ ಹೊಸದಾಗಿ ಆರಂಭಿಸಲಿರುವ ಮಾರ್ಗದಲ್ಲಿ ಕರಾವಳಿಯ ಹಲವು ಭಾಗದ ಜನರಿಗೆ ಈ ಸೇವೆ ವಿಸ್ತರಿಸುವುದಲ್ಲದೆ ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ” ಎಂದು ಹಲವು ಪ್ರಯಾಣಿಕರು ಹೊಸ ರೈಲಿನ ಸಂಚಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪ್ರೇಮಿಗಳ ದಿನವನ್ನು ವಿರೋಧಿಸಿ ಕರಪತ್ರ ಹಂಚಲಿರುವ ಮುತಾಲಿಕ್; ಯುವಕ-ಯುವತಿಯರನ್ನು ಗುರಿಯಾಗಿಸಿ ಕಾರ್ಯಕ್ರಮ
First published: February 13, 2020, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories