ಬೆಂಗಳೂರು ಹೊರವಲಯದಲ್ಲಿ ಇಸ್ರೋ ಗಗನ್ ಯಾನ್: ಸೆ. 8ರ ತನಕ ಸ್ಪೇಸ್ ಎಕ್ಸ್​ಪೋ


Updated:September 6, 2018, 4:43 PM IST
ಬೆಂಗಳೂರು ಹೊರವಲಯದಲ್ಲಿ ಇಸ್ರೋ ಗಗನ್ ಯಾನ್: ಸೆ. 8ರ ತನಕ ಸ್ಪೇಸ್ ಎಕ್ಸ್​ಪೋ

Updated: September 6, 2018, 4:43 PM IST
- ಶ್ಯಾಮ್ ಎಸ್., ನ್ಯೂಸ್18 ಕನ್ನಡ

ಬೆಂಗಳೂರು(ಸೆ. 06): ಇಸ್ರೋದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆ ಗಗನಯಾನವನ್ನು 2021ರ ಡಿಸೆಂಬರ್​ನಲ್ಲಿ ಸಾಕಾರಗೊಳಿಸಲು ಇಸ್ರೋ ವಿಜ್ಞಾನಿಗಳು ಹಲವು ವರ್ಷಗಳಿಂದಲೇ ಪ್ರಯತ್ನ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾನವ ಸಹಿತ ಗಗನಯಾನಕ್ಕೆ 2022 ರ ಡೆಡ್ ಲೈನ್ ಫಿಕ್ಸ್ ಮಾಡಿದ ಮೇಲಂತೂ ಇಸ್ರೋ ಈ ನಿಟ್ಟಿನಲ್ಲಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ.

ಈ ಯೋಜನೆ ಅನುಷ್ಠಾನಕ್ಕೆ ಇಸ್ರೋ ಬದ್ಧವಾಗಿದೆ....ಬಾಹ್ಯಾಕಾಶ ಉದ್ದಿಮೆಗಳ ಸಹಕಾರವೂ ಅಗತ್ಯವಾಗಿದೆ..... 2022 ಇಸವಿ ವೇಳೆಗೆ ಯೋಜನೆ ಜಾರಿಗೆ ಪಿಎಂ ಗಡವು ನೀಡಿದ್ದಾರೆ. ಇಸ್ರೋ ಮಾನವ ಸಹಿತ ಗಗನಯಾನಕ್ಕೆ ಮೊದಲು ಮಾನವರಹಿತ 2 ನೌಕೆ ಉಡಾವಣೆ ಮಾಡಲಿದೆ. 2020 ಡಿಸೆಂಬರ್ ಹಾಗೂ ಜೂನ್ 2021 ರಲ್ಲಿ ಎರಡು ಮಾನವ ರಹಿತ ಗಗನ ನೌಕೆ ಉಡಾವಣೆ ಮಾಡಲಿದೆ. 2021ರ ಡಿಸೆಂಬರ್​ನಲ್ಲಿ ಮಾನವ ಸಹಿತ ಗಗನಯಾನ ಕೈಗೊಳ್ಳಲು ನಿರ್ಧರಿಸಿದೆ. ಮೂರು ಮಂದಿ ಗಗನಯಾತ್ರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ದೇಶದ ಮೊದಲ ಗಗನಯಾತ್ರಿ ರಾಕೇಶ್ ಶರ್ಮರ ಸಹಾಯವನ್ನು ಇಸ್ರೊ ಪಡೆಯಲಿದೆ. ಭಾರತೀಯ ವಾಯುಸೇನೆಯು ಗಗನಯಾತ್ರಿಗಳನ್ನು ಆಯ್ಕೆ ಮಾಡಲಿದೆ. ಒಮ್ಮೆ ಗಗನಯಾತ್ರಿಗಳನ್ನು ಆಯ್ಕೆ ಮಾಡಿದರೆ ಅವರಿಗೆ 2ರಿಂದ 3 ವರ್ಷ ತರಬೇತಿ ನೀಡಬೇಕಾಗುತ್ತದೆ. ಗಗನಯಾನದ ತರಬೇತಿಯನ್ನು ದೇಶ ಮತ್ತು ವಿದೇಶದಲ್ಲಿ ನೀಡಲಿದೆ. ಗಗನಯಾನ ಯೋಜನೆ ಇನ್ನೂ ಪೂರ್ಣರೂಪದಲ್ಲಿ ಪಡೆದಿಲ್ಲ. ಆರಂಭಿಕ ಹಂತದಲ್ಲಿದೆ. ತುರ್ತು ಸಂದರ್ಭ ಎದುರಿಸಲು ಹೆಚ್ಚುವರಿಯಾಗಿ ಮೂವರನ್ನು ಗಗನಯಾನಕ್ಕೆ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ.

ಬೆಂಗಳೂರು ಹೊರಹೊಲಯದಲ್ಲಿರುವ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಬೆಂಗಳೂರು ಸ್ಪೇಸ್ ಎಕ್ಸ್ ಪೋ-2018 ಎಕ್ಸಿಬಿಷನ್ ನಡೆಯುತ್ತಿದೆ. ಅಲ್ಲಿ ಎಲ್ಲರನ್ನೂ ಗಮನ ಸೆಳೆಯುತ್ತಿರುವುದು "ಗಗನ್ ಯಾನ್" ಸ್ಪೇಸ್ ಕ್ರಾಫ್ಟ್ ಮಾಡೆಲ್ ! 2014 ರಲ್ಲಿ ಇದೇ ಗಗನೌಕೆಯ ಮಾದರಿಯನ್ನು ಇಸ್ರೋ ಭೂಮಿಯಿಂದ 200 ಕಿ.ಮಿ ದೂರದ ತನಕ ಹಾರಿಬಿಟ್ಟು ಯಶಸ್ವಿಯಾಗಿ ಭೂಮಿಗೆ ಪ್ಯಾರಾಚೂಟ್ ಮೂಲಕ ಇಳಿಸಿತು. ಸೆ.6ರಿಂದ 8ರ ತನಕ ಬ್ಯಾಂಗಲೂರು ಸ್ಪೇಸ್ ಎಕ್ಸ್ ಪೋ-2018 ನಡೆಯಲಿದೆ. ಸಾಧ್ಯವಾದರೆ ನೀವೂ ಒಮ್ಮೆ ಹೋಗಿಬನ್ನಿ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ