ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಇಬ್ಬರು ಮಕ್ಕಳೊಂದಿಗೆ (Children) ತಾಯಿ (Mother)ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ್ದಾರೆ. ಈ ಘಟನೆ ಶಿಡ್ಲಘಟ್ಟ (Sidlaghatta ) ತಾಲೂಕಿನ ಯಣ್ಣೂರು ಗ್ರಾಮದಲ್ಲಿ ನಡೆದಿದೆ. 40 ವರ್ಷದ ತಾಯಿ ನೇತ್ರಾ, ಮಕ್ಕಳಾದ 9 ವರ್ಷದ ಸ್ನೇಹ, 12 ವರ್ಷದ ವರ್ಷಿತ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ (Family Feud) ಹಿನ್ನೆಲೆ ಪತಿಯೇ (Husband) ಪತ್ನಿ, ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ತಂದೆ ಸೊಣ್ಣಪ್ಪ ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಸದ್ಯ ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪತ್ನಿ ಮತ್ತು ಮಕ್ಕಳಿಗೆ ಬೆಂಕಿ ಹಚ್ಚುವ ಮುನ್ನ ಪತಿ ಎಲ್ಲರಿಗೂ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಆ ಬಳಿಕ ಮೂವರಿಗೂ ಬೆಂಕಿ ಹಚ್ಚಿ ಸುಟ್ಟು ಹಾಕಿ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಆ ಬಳಿಕ ಆತನೂ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: SiddaraMaiah: ಸಿ ಟಿ ರವಿ ವಿರುದ್ಧ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದ ಆರೋಪ; ದ್ವೇಷ ಬಿಟ್ಟು ರವಿ ಪರ ನಿಂತ ಸಿದ್ದರಾಮಯ್ಯ!
ಪತ್ನಿಯನ್ನು ಕೊಲೆಗೈದು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ ಗಂಡ
ಚಾಮನರಾಜನಗರ: ಪತ್ನಿಯನ್ನು (Wife) ಬರ್ಬರವಾಗಿ ಕೊಲೆ ಮಾಡಿದ ಪತಿ ಅದನ್ನು ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್‌ಗೆ (Whatsapp Status) ಹಾಕಿ ಬಳಿಕ ತಾನು ಆತಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ (Tamil Nadu) ಧರ್ಮಪುರಿ ಜಿಲ್ಲೆ ಎರಭಯ್ಯನಹಳ್ಳಿಯ ಮಹದೇಶ್ವರ ಬೆಟ್ಟದ (Mahadeshwara Hills) ನಾಗಮಲೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮುನಿರಾಜು ಎಂದು ಗುರುತಿಸಲಾಗಿದೆ. ಈತ ಸಾಯುವುದಕ್ಕೂ ಮುನ್ನ ಪತ್ನಿ ಲಕ್ಷ್ಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾನೆ.
ಪತ್ನಿಯನ್ನು ಕೊಲೆಗೈದ ಬಳಿಕ ವಿಡಿಯೋ ಮಾಡಿರುವ ಮುನಿರಾಜು, ಪತ್ನಿ ಲಕ್ಷ್ಮಿಯನ್ನು ತೊಡೆ ಮೇಲೆ ಮಲಗಿಸಿಕೊಂಡು ಗೋಳಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೊಲೆ ಬಳಿಕ ಲಕ್ಷ್ಮಿ ತಲೆಯಿಂದ ರಕ್ತ ಸುರಿಯುತ್ತಿದ್ದರು ಆರೋಪಿ ವಿಡಿಯೋ ಮಾಡಿದ್ದು, ಈ ವೇಳೆ ನನ್ನನ್ನು ಕೊಲೆಗಾರನನ್ನಾಗಿ ಮಾಡಿಬಿಟ್ಟೆ. ಹೊರಟು ಹೋದ ಲಕ್ಷ್ಮಿ, ದೇವರೆ ನಿನ್ನ ಕೊಲೆ ಮಾಡಲು ನನ್ನ ಕಳುಹಿಸಿದ್ದಾನೆ. ನೋಡಿ ಈ ಕಲ್ಲು ಬಳಸಿಕೊಂಡೆ ಕೊಲೆ ಮಾಡಿದ್ದೇನೆ. ನನ್ನಿಂದ ತಡೆದುಕೊಳ್ಳು ಆಗಿಲ್ಲ. ನನ್ನ ಲಕ್ಷ್ಮಿಯನ್ನು ನಾನೇ ಕೊಲೆ ಮಾಡಿದ್ದು ಎಂದು ಅಳುತ್ತಾ ಮಾತನಾಡಿದ್ದಾನೆ.
ಇದನ್ನೂ ಓದಿ: BS Yediyurappa: 'ಬದುಕಿನ ಕೊನೆಯುಸಿರು ಇರುವವರೆಗೂ'; ನನ್ನ ಕೊನೆಯ ಸದನ ಎಂದು ಭಾವುಕರಾದ ಮಾಜಿ ಸಿಎಂ ಬಿಎಸ್ವೈ
ಇನ್ನು, ಮೃತ ಮಹಿಳೆ ಪತಿಯನ್ನು ಬಿಟ್ಟು ಬಂದು ಬೇರೆ ಪುರುಷನೊಂದಿಗೆ ನಾಗಮಲೆಯಲ್ಲಿ ವಾಸಿಸುತ್ತಿದ್ದಳಂತೆ. ತನ್ನನ್ನು ದೂರ ಮಾಡಿ ಪರಪುರುಷನೊಂದಿಗೆ ಪತ್ನಿ ವಾಸಿಸುತ್ತಿದ್ದ ಕಾರಣ ಮುನಿರಾಜ್ ಬೇಸತ್ತಿದ್ದ ಎನ್ನಲಾಗಿದೆ. ಇದೇ ಕಾರಣದಿಂದ ಇಂದು ಪತ್ನಿ ಬಳಿಗೆ ಬಂದಿದ್ದ ಆತ ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದಿದ್ದಾನೆ ಎನ್ನಲಾಗಿದೆ.
ಪತ್ನಿಯನ್ನು ಕೊಲೆಗೈದ ಬಳಿಕ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್‌ಗೆ ಅಪ್ಡೇಟ್ ಮಾಡಿದ್ದು, ಬಳಿಕ ತಾನು ಸ್ಥಳದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ