BBMP: ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್​ನಲ್ಲಿ ಇಸ್ಕಾನ್ ಊಟ

ಬಡವರ ಅನ್ನದಾನ ಕೇಂದ್ರವನ್ನು ಇನ್ಮುಂದೆ ಇಸ್ಕಾನ್ ನೋಡಿಕೊಳ್ಳಲಿದೆ. ಈ ಕುರಿತಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಇಂದಿರಾ ಕ್ಯಾಂಟೀನ್‌ಲ್ಲಿ ಇಸ್ಕಾನ್ ಊಟ ಸಿಗಲಿದೆ

ಇಂದಿರಾ ಕ್ಯಾಂಟೀನ್​

ಇಂದಿರಾ ಕ್ಯಾಂಟೀನ್​

  • Share this:
ಬೆಂಗಳೂರು (ಮೇ 28): ಇಲ್ಲಿಯವರೆಗೆ ಸರ್ಕಾರಿ ಶಾಲೆಗಳಿಗೆ (School) ಬಿಸಿಯೂಟ ನೀಡುತ್ತಿದ್ದ ಇಸ್ಕಾನ್ ಇನ್ಮುಂದೆ ಇಂದಿರಾ ಕ್ಯಾಂಟೀನ್​ನಲ್ಲಿ (Indira Canteen) ಇಸ್ಕಾನ್ ಊಟ ನೀಡಲಿದೆ. ಬಡವರ ಅನ್ನದಾನ (Annadana) ಕೇಂದ್ರವನ್ನು ಇನ್ಮುಂದೆ ಇಸ್ಕಾನ್ (Iskcon) ನೋಡಿಕೊಳ್ಳಲಿದೆ. ಈ ಕುರಿತಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಇಂದಿರಾ ಕ್ಯಾಂಟೀನ್‌ಲ್ಲಿ ಇಸ್ಕಾನ್ ಊಟ ಸಿಗಲಿದೆ. ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹಾತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್. ಅತ್ಯಂತ ಕಡಿಮೆ ದರದಲ್ಲಿ ಬಡವರ ಹೊಟ್ಟೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯಿದು.

ಇಂದಿರಾ ಕ್ಯಾಂಟಿನ್ ನಡೆಸಲು ಇಸ್ಕಾನ್​ ಸಾಥ್?

ಈ ಯೋಜನೆ ಪಡೆದ ಗುತ್ತಿಗೆದಾರರು ಸಮರ್ಪಕವಾಗಿ ಹಣ ನೀಡ್ತಿಲ್ಲ ಎಂದೇಳಿ ಇಂದಿರಾ ಕ್ಯಾಂಟೀನ್ ನಡೆಸದೆ ಅಲ್ಲಲ್ಲಿ ಬಂದ್ ಆಗ್ತಿತ್ತು. ಇದೀಗ ಇಂದಿರಾ ಕ್ಯಾಂಟಿನ್ ನಡೆಸಲು ಇಸ್ಕಾನ್ ಸಂಸ್ಥೆ ಕೈ ಜೋಡಿಸೋ ಸಾಧ್ಯತೆ ಹೆಚ್ಚಾಗಿದೆ. ಅಂದ್ರೆ ಬಿಬಿಎಂಪಿ ವ್ಯಾಪ್ತಿಯಲ್ಲಿರೋ ಎಲ್ಲಾ 178 ಕ್ಯಾಂಟೀನ್ ಗಳಿಗೆ ಊಟ ನೀಡೋಕೆ ಸಿದ್ದವಾಗ್ತಿದೆ. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತುವ ಬಿಬಿಎಂಪಿ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದೆ.

ಇಸ್ಕಾನ್ ಸಂಸ್ಥೆಯಿಂದ ಅನೇಕ ಬಾರಿ ಪ್ರಸ್ತಾವನೆ

ಇಸ್ಕಾನ್ ಸಂಸ್ಥೆ ಇಂದಿರಾ ಕ್ಯಾಂಟೀನ್ ಗೆ ಆಹಾರ ಪೂರೈಕೆ ಮಾಡ್ಬೇಕು ಅಂತ ಈ ಹಿಂದಿನಿಂದಲೂ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಇಡ್ತಾ ಬರ್ತಿತ್ತು. ಆದ್ರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಳಸೋದಿಲ್ಲ ಅನ್ನೋ ಕಾರಣಕ್ಕೆ ಪ್ರತಿ ಬಾರಿಯೂ ಟೆಂಡರ್ ಕೈ ತಪ್ಪುತ್ತಿತ್ತು. ಇದೀಗ ಟೆಂಡರ್ ನಲ್ಲಿ 4ಜಿ ವಿನಾಯಿತಿ ಪಡೆದು ಆಹಾರ ಪೂರೈಕೆ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ತಿದೆ ಎಂದು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದರು‌‌.

ಇದನ್ನೂ ಓದಿ:Basavaraj Bommai: ಸಿದ್ದರಾಮಯ್ಯ ಆರ್ಯರಾ? ದ್ರಾವಿಡರಾ?; ಮೊದಲು ಸೋನಿಯಾ ಮೂಲ ಹುಡುಕಿ ಎಂದ್ರು ಪ್ರತಾಪ್ ಸಿಂಹ

ಇಷ್ಟು ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ರಿವಾರ್ಡ್ಸ್ ಮತ್ತು ಶೆಫ್ ಟೆಕ್ ಹಾಗೂ ಅದಮ್ಯ ಚೇತನದಿಂದ ಆಹಾರ ಪೂರೈಕೆಯಾಗ್ತಿತ್ತು. ಈ ಸಂಸ್ಥೆಗಳಿಗೆ ಬಿಬಿಎಂಪಿ ಪ್ರತಿ ದಿನ 55 ರೂಪಾಯಿ 30 ಪೈಸೆ ಹಣ ಪ್ರತಿ ದಿನ ನೀಡ್ತಾ ಇತ್ತು. ಆದ್ರೆ ಇಸ್ಕಾನ್ ಸಂಸ್ಥೆ 78 ರೂ ಪ್ರತಿ ದಿನ ಪ್ರತಿಯೂಟಕ್ಕೆ ನೀಡ್ಬೇಕು ಅಂತ ಕೇಳಿಕೊಂಡಿದೆ. ಒಂದು ವೇಳೆ ಹೆಚ್ಚುವರಿ ಹಣ ನೀಡೋಕೆ ಸರ್ಕಾರ ಒಪ್ಪಿದ್ರೂ ಆ ಹೊರೆಯನ್ನ ಬಿಬಿಎಂಪಿ ತನ್ನ ಮೇಲೆ ಹಾಕಿಕೊಳ್ಳಲು ಸಿದ್ಧವಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದರು‌‌.

ಬೆಲೆ ಏರಿಕೆ ಹಿನ್ನೆಲೆ ಊಟದ ದರ ಹೆಚ್ಚಳ

ಇಂದಿರಾ ಕ್ಯಾಂಟೀನ್ ಬಾಕಿ ಹಣ ವಿಚಾರ ಹಿನ್ನೆಲೆ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಬಾಕಿ ಹಣವನ್ನು ಪಾವತಿಸುತ್ತಿದೆ. ಈ ಹಿಂದಿನ ಕಮಿಷಿನರ್ ಗೌರವ್ ಗುಪ್ತಾ ಅವರು ನಾಲ್ಕು ತಿಂಗಳ ಬಿಲ್ ಕ್ಲಿಯರ್ ಮಾಡಿದ್ದರು. ಸಾಧ್ಯವಾದಷ್ಟು ಬಿಲ್ ಕ್ಲಿಯರ್ ಬಿಬಿಎಂಪಿ ಮಾಡಲಾಗುತ್ತಿದೆ ಎಂದು ಹಣಕಾಸು ವಿಭಾಗ ಸ್ಪೆಷೆಲ್ ಕಮಿಷನರ್ ತುಳಸಿ ಮದ್ದಿನೇನಿ ಸ್ಪಷ್ಟಪಡಿಸಿದರು. ಬೆಲೆ ಏರಿಕೆ ಕಾರಣ ಪ್ರತಿದಿನ ಊಟದ ದರ ಇನ್ನೂ ಹೆಚ್ಚಾಗಿದೆ.

Ashwath Narayan: ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲು

ಆದರೆ ಗ್ರಾಹಕರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಈ ಹಿಂದಿನ ರೀತಿಯಲ್ಲಿ ಅಂದ್ರೆ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ತಿಂಡಿಗೆ 5 ರೂ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 10 ರೂ ನಿಗದಿ ಮಾಡಲಿದೆ. ಅದೇನೇ ಇರ್ಲಿ, ಬಿಬಿಎಂಪಿ ಕಳುಹಿಸಿರುವ ಪ್ರಸ್ತಾವನೆಗೆ ಒಂದು ವೇಳೆ ಸರ್ಕಾರ ಅನುಮೋದನೆ ನೀಡಿದ್ದೇ ಆದ್ರೆ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಊಟ ಸಿಟಿ ಮಂದಿ ಸವಿಯಬೇಕಾಗಿದೆ.
Published by:Pavana HS
First published: