R.Ashok: ‘ಹಿಜಾಬ್ ವಿವಾದದ ಹಿಂದೆ ಐಸಿಸ್​ ಕೈವಾಡ’, ಕಂದಾಯ ಸಚಿವ ಆರ್​. ಅಶೋಕ್​ ಆರೋಪ

ಹಿಜಾಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಇದರ ಹಿಂದೆ ಐಸಿಸ್, ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಅಂತ‌ ಆರ್ ಅಶೋಕ್ ಆರೋಪಿಸಿದ್ದಾರೆ.

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

  • Share this:
ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ (Congress) ವಿಧಾನಸಭಾ ಅಧಿವೇಶದಲ್ಲಿ ಹೋರಾಟ ಮುಂದುವರೆದಿದೆ. ಈಶ್ವರಪ್ಪ ರಾಷ್ಟ್ರದ ಸಾರ್ವಭೌಮತ್ವದ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದ್ದು, ಕಾಂಗ್ರಸ್ ನಾಯಕರ ಆರೋಪಕ್ಕೆ ಕಂದಾಯ ಸಚಿವ ಆರ್​ ಅಶೋಕ್ (Minister R. Ashok) ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಕಾಂಗ್ರೆಸ್ ವಿಧಾನಸಭಾ ಅಧಿವೇಶನದಲ್ಲಿ ಹಿಜಾಬ್ ವಿಚಾರ ಯಾಕೆ ಚರ್ಚೆ ಮಾಡುತ್ತಿಲ್ಲ ಅಂತ ಪ್ರಶ್ನಿಸಿದ್ರು. ಇನ್ನು ಕಾಂಗ್ರೆಸ್​ನ ಪರಿಸ್ಥಿತಿ ಊರಿಗೆ ಮನುಷ್ಯನಲ್ಲ ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬಂತಾಗಿದೆ ಎಂದು ಕುಟುಕಿದ್ರು. ಹಿಜಾಬ್ ಪರವಾಗಿ ಎಂದು ಹೇಳಲು ಡಿ.ಕೆ.ಶಿವಕುಮಾರ್ ಬಿಡ್ತಿಲ್ಲ. ನಾವು ಹಿಂದೂ ಪರವಾಗಿ ಎಂದು ಹೇಳಲು ಸಿದ್ದರಾಮಯ್ಯ ಬಿಡ್ತಿಲ್ಲ. ಇದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಫೈಟ್  ಅಷ್ಟೇ. ವಿಧಾನಸಭೆಯಲ್ಲಿ ಹಿಜಾಬ್ ಕೇಸರಿ ಶಾಲು ವಿವಾದದ (Hijab controversy) ಬಗ್ಗೆ ಯಾಕೆ ಮಾತಾಡ್ತಿಲ್ಲ ಅಂತ ಸಚಿವ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಆರ್​ ಅಶೋಕ್ ಕಿಡಿ

ಜನಗಳ ಸಮಸ್ಯೆ ಬಗ್ಗೆ ಚರ್ಚೆ ಮಾಡೋದಕ್ಕೆ ವಿಧಾನಸಭೆ ನಡೆಯುತ್ತದೆ‌‌.ಲಕ್ಷಾಂತರ ವಿದ್ಯಾರ್ಥಿಗಳಿಗೆ ಇವತ್ತು ಸಮಸ್ಯೆಯಾಗಿದೆ. ಆ ಕಾಳಜಿ ಕಾಂಗ್ರೆಸ್ ಗೆ ಬೇಕಲ್ವಾ. ಎಲ್ಲಿದೆ ಈ ಕಾಳಜಿ, ಈ ಬಗ್ಗೆ ಚರ್ಚೆ ಮಾಡಬೇಕಿತ್ತಲ್ವಾ. ಯಾಕೆ ಮಾಡಲ್ಲ ಗೊತ್ತಾ ಈ ಬಗ್ಗೆ ಚರ್ಚೆ ಮಾಡಿದ್ರೆ ಕಾಂಗ್ರೆಸ್​ಗೆ ವೋಟು ಬೀಳಲ್ಲ ಅನ್ನೋ ಭಯ ಅಂದ್ರು ಅಶೋಕ್,  ವೋಟುಗಳನ್ನು ಕಳೆದುಕೊಳ್ಳುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ತೀರ್ಮಾನಿಸಿದೆ. ಅದಕ್ಕೆ ಕಾಂಗ್ರೆಸ್ ಈಶ್ವರಪ್ಪ ಅವರ ವಿಚಾರ ಹಿಡಿದುಕೊಂಡಿದ್ದಾರೆ ಅಂತ ಸಚಿವ ಆರ್ ಅಶೋಕ್ ಆರೋಪಿಸಿದ್ರು.

ಇದನ್ನೂ ಓದಿ: Hijab Row: ಕುಂಕುಮ, ಬಳೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳುತ್ತೇವೆ ಹುಷಾರ್: Muthalik

‘ಜನರ ದುಡ್ಡು ತಗೊಂಡು ವಿಧಾನಸೌಧದಲ್ಲಿ ನಿದ್ದೆ’
ಬಿಜೆಪಿ ಈ ಹಿಂದೆ ಸದನದಲ್ಲಿ ರೈತರ ಬಗ್ಗೆ, ಬಡವರ ಪರವಾಗಿ ಹೋರಾಟ ಮಾಡಿದೆ. ಆದರೆ ಈಗ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಡವರ ಪ್ರಶ್ನೆ ಏನು ಬರುತ್ತೆ? ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕೇವಲ ನಾಯಕರ ಸ್ವಾರ್ಥ ಮಾತ್ರ ಇದೆ. ಒಂದು ಸದನಕ್ಕೆ ಪ್ರತಿ ದಿನ ಒಂದು ಕೋಟಿ ಖರ್ಚಾಗುತ್ತದೆ. ಜನಗಳ ದುಡ್ಡು ತಗೊಂಡು ವಿಧಾನಸೌಧದಲ್ಲಿ ಆರಾಮವಾಗಿ ನಿದ್ದೆ ಹೊಡೆದ್ರೆ ಏನು ಅರ್ಥ ಬರುತ್ತದೆ ಎಂದ್ರು. ಜನರಿಗೆ ಮೋಸ ಮಾಡಿದಾಗೆ ಅಲ್ವಾ. ಕಾಂಗ್ರೆಸ್ ಅವರಿಗೆ ಬುದ್ದಿ, ಮಾನ ಮರ್ಯಾದೆ ಏನಾದರೂ ಇದ್ರೆ ಜನಗಳ‌ ವಿಷಯ ಚರ್ಚೆ ಮಾಡಲಿ ಅಂತ ಸಚಿವ ಆರ್ ಅಶೋಕ್ ಕಿಡಿಕಾರಿದ್ರು.

‘ವಿಧಾನಸೌಧ ಇರೋದು ಕುಸ್ತಿ ಆಡೋಕೆ ಅಲ್ಲ’

ಜನರ ಸಮಸ್ಯೆ ಬಿಟ್ಟು ಈಶ್ವರಪ್ಪ, ಡಿ.ಕೆ ಶಿವಕುಮಾರ್ ಹೊಡೆದಾಡೋದು ಸರಿಯಲ್ಲ. ಇದಕ್ಕೆ ವಿಧಾನಸಭೆಗೆ ಬರೋದಾ. ಕೆಂಗಲ್‌ ಹನುಮಂತಯ್ಯ ವಿಧಾನಸೌಧ ಬಡವರಿಗೋಸ್ಕರ ಕಟ್ಟಿರೋದು. ಅದು ಬಿಟ್ಟು ಕುಸ್ತಿ ಆಡೋಕೆ ಅಲ್ಲ.ಕಾಂಗ್ರೆಸ್ ನವರು ಹಿಜಾಬ್, ಕೇಸರಿ ಬಗ್ಗೆ ನಿಲುವೇನು ಎಂದು ಹೇಳಬೇಕು. ಲಕ್ಷಾಂತರ ಜನ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಹೋಗಬೇಕು. ಶಾಲೆಗೆ ಹೋಗೊದು ವಿದ್ಯಾಭ್ಯಾಸಕ್ಕೆ ಹೊರತು ಮತ ಪ್ರಚಾರಕ್ಕೆ ಅಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆ ವ್ಯವಸ್ಥೆಯನ್ನು ಕೊಡುವ ತೀರ್ಮಾನದ ವೇದಿಕೆ ವಿಧಾನಸಭೆ ಆಗಬೇಕು. ವಿಧಾನಸಭೆಗೆ ಅಗೌರವ ಕೊಡುವ ಕಾಂಗ್ರೆಸ್ ನ್ನು ಮುಂದಿನ ದಿನ ಜನ ರಾಜ್ಯದಿಂದ ಓಡಿಸುತ್ತಾರೆ ಅಂತಾ ಮಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: Hijab And Saffron Shawl: ಹಿಜಾಬ್-ಕೇಸರಿ ವಿವಾದದ ನಡುವೆ ನೀಲಿ ಶಾಲ್ ಧರಿಸಿ ಬಂದು ವಿದ್ಯಾರ್ಥಿಗಳು; ಪ್ರಾಂಶುಪಾಲರು ಶಾಕ್!

‘ಹಿಜಾಬ್ ವಿವಾದದ ಹಿಂದೆ ಐಸಿಸ್​ ಕೈವಾಡ’

ಮಂಗಳೂರಿನ ಕಾರ್ಯಕ್ರಮ ಬಳಿಕ ಉಡುಪಿಗೆ ತೆರಳಿದ ಆರ್ ಅಶೋಕ್  ಹಿಜಾಬ್ ಹೋರಾಟ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಭಟನೆ ಮಾಡುತ್ತಿರುವುದು ವಿದ್ಯಾರ್ಥಿನಿಯರ ತಪ್ಪಿನಿಂದ ಅಲ್ಲ. ಪ್ರತಿಭಟನೆಯ ಹಿಂದೆ ಬಹಳಷ್ಟು ಜನ ಇದ್ದಾರೆ. ಹೋರಾಟ ಹಿಂದೆ ವಿದೇಶಿ ಕೈವಾಡ ಷಡ್ಯಂತ್ರ ಇದೆ. ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ. ಇಷ್ಟು ವೇಗವಾಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಹಿಜಾಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಇದರ ಹಿಂದೆ ಐಸಿಸ್, ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಅಂತ‌ ಆರ್ ಅಶೋಕ್ ಆರೋಪಿಸಿದ್ದಾರೆ.
Published by:Pavana HS
First published: