Bengaluru: ಬೆಂಗಳೂರಿಗೆ ಎರಡು ದಿನ ನೀರು ಬಂದ್; ಮಿತ ಬಳಕೆಗೆ BWSSB ಮನವಿ

ಟಿಕೆ ಹಳ್ಳಿ ಜಲರೇಚಕ ಯಂತ್ರಗಾರದ ಮೂಲಕವೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದ್ರೆ ಯಂತ್ರಗಾರ ಜಲಾವೃತಗೊಂಡಿರುವ ಕಾರಣ ಬೆಂಗಳೂರಿಗೆ ಪೂರೈಕೆಯಾಗುವ (Bengaluru Water) ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಾ ಅನ್ನೋ ಆತಂಕ ಎದುರಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾನುವಾರ ಸುರಿದ ಮಳೆ (Karnataka Rains) ರಾಜ್ಯದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕೆಲವು ಮಳೆ (Rainfall) ಪ್ರಮಾಣ ಕಡಿಮೆಯಾದರೂ ಅದರ ಅನಾಹುತಗಳು ನಿಂತಿಲ್ಲ. ನಿನ್ನೆ ಸುರಿದ ಮಳೆಗೆ ಮಂಡ್ಯದ (Mandya) ಮಳವಳ್ಳಿಯ ಟಿಕೆ ಹಳ್ಳಿಯಲ್ಲಿರುವ (TK Halli, Malavalli) ಜಲರೇಚಕ ಯಂತ್ರಗಾರ (Hydraulic Pumps / Hydro Pumps) ಜಲಾವೃತಗೊಂಡಿದೆ. ಟಿಕೆ ಹಳ್ಳಿ ಜಲರೇಚಕ ಯಂತ್ರಗಾರದ ಮೂಲಕವೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದ್ರೆ ಯಂತ್ರಗಾರ ಜಲಾವೃತಗೊಂಡಿರುವ ಕಾರಣ ಬೆಂಗಳೂರಿಗೆ ಪೂರೈಕೆಯಾಗುವ (Bengaluru Water) ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಾ ಅನ್ನೋ ಆತಂಕ ಎದುರಾಗಿದೆ. ಇನ್ನು ಈ ವಿಷಯ ತಿಳಿಯುತ್ತಲೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮಂಡ್ಯದತ್ತ ತುರ್ತು ಪ್ರವಾಸ ಬೆಳೆಸಿದ್ದಾರೆ.

ಟಿಕೆ ಹಳ್ಳಿ ಕಾವೇರಿ ನೀರು ಸಂರಕ್ಷಣಾ ಘಟಕ ನೀರಿನಲ್ಲಿ ಮುಳುಗಡೆ ಹಿನ್ನೆಲೆ ಇಂದು ಮತ್ತೆ ನಾಳೆ ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಕಾವೇರಿ 3ನೇ ಹಂತ ಹಾಗೂ 4ನೇ ಹಂತದ ನೀರು ಸರಬರಾಜು ಯಂತ್ರಗಳು ನೀರಿನಲ್ಲಿ ಮುಳುಗಡೆಯಾಗಿರುವ ಪರಿಣಾಮ ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ ಎದುರಗಾಲಿದೆ ಕಾವೇರಿ ನೀರಿನ ಸಮಸ್ಯೆ ಎದುರಾಗಲಿದೆ.

ನೀರನ್ನು ಮಿತವಾಗಿ ಬಳಸುವಂತೆ ಸೂಚನೆ

ಪ್ರತಿದಿನ ಟಿಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1450 MLD ನೀರು ಸರಬರಾಜು ಆಗುತ್ತಿತ್ತು. ಆದರೆ ನಿನ್ನೆ ರಾತ್ರಿ ಸೇರಿದಂತೆ 600 MLD ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 MLD ನೀರು ಸರಬರಾಜು ಸ್ಥಗಿತಗೊಂಡಿದೆ.  ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ. ಮತ್ತೆ ಇದೇ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆಗಳಿವೆ. BWSSB ಯಿಂದ ಅಧಿಕೃತ ಸೂಚನೆ ಬರುವವರೆಗೆ ಮಿತವಾಗಿ ನೀರು ಬಳಕೆಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ:  Baby Elephant: ಕಾಡಿನಿಂದ ನಾಡಿಗೆ ಬಂದು ಮಕ್ಕಳ ಜೊತೆ ಆಟವಾಡಿದ ಮರಿ ಆನೆ! ಎಷ್ಟು ಮುದ್ದಾಗಿದೆ ನೋಡಿ

ಮಂಡ್ಯಕ್ಕೆ ಅಧಿಕಾರಿಗಳು

BWSSBಅಧ್ಯಕ್ಷ, ಇಂಜಿನಿಯರ್ ಇನ್ ಚೀಫ್, ಚೀಫ್ ಇಂಜಿನಿಯರ್ ಗಳು ಮಂಡ್ಯಕ್ಕೆ ತೆರಳಿದ್ದು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ BWSSB ಚೀಫ್ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

ತಗ್ಗು ಪ್ರದೇಶಗಳು ಜಲಾವೃತ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಆರಂಭವಾದ ಮಳೆ ಇಂದು ಬೆಳಗಿನ ಜಾವದವರೆಗೂ ಸುರಿದಿದೆ. ಭಾರೀ ಮಳೆಗೆ ತಗ್ಗು ಪ್ರದೇಶಗಳ ಜಲಾವೃತಗೊಂಡಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪೂರ್ಣ ಕೆರೆಯಂತಾಗಿದೆ. ರಾತ್ರಿ 10 ಗಂಟೆಯಿಂದಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ಎರಡು ಕಾರ್​​ಗಳು ಜಖಂ

ಬೆಂಗಳೂರಿನ ಹಲವು ಬಡಾವಣೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರೆ, ಹಲಸೂರು, ಜೀವನ್‌ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರ ಕ್ರಾಸ್ ಜಲಾವೃತಗೊಂಡಿದೆ. ಮಹಾಲಕ್ಷ್ಮೀ ಲೇಔಟ್​​ನ ತರಕಾರಿ ಮಾರ್ಕೆಟ್​​ ಬಳಿ ಎರಡು ಬೃಹತ್ ಮರಗಳು ಕಾರ್ ಮೇಲೆ ಬಿದ್ದಿವೆ. ಎರಡು ಕಾರ್​​ಗಳು ಸಂಪೂರ್ಣ ಜಖಂ ಆಗಿದ್ದು, BBMP ಅರಣ್ಯ ಸಿಬ್ಬಂದಿ ರಾತ್ರಿಯೇ ತೆರವು ಮಾಡಿದ್ದಾರೆ.

ತುಂಬಿ ಹರಿಯುತ್ತಿರುವ ನದಿಗಳು

ಮಹಾರಾಷ್ಟ್ರ (Maharashtra Rains) ಮತ್ತು ಬೆಳಗಾವಿ (Belagavi Rains) ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕ (North Karnataka) ಭಾಗದ ನದಿಗಳು (Rivers) ತುಂಬಿ ಹರಿಯುತ್ತಿದ್ದು, ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Murugha Shri case: ಮುರುಘಾ ಸ್ವಾಮೀಜಿಗೆ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನ

ಮಲಪ್ರಭಾ ನದಿಗೆ ಹೆಚ್ಚಿನ ನೀರು

ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಗೋವನಕೊಪ್ಪ ಹಳೆ ಸೇತುವೆ ಜಲಾವೃತಗೊಂಡಿದೆ. ಸದ್ಯ ಜನರು ಹೊಸ ಸೇತುವೆ ಮೂಲಕ ಸಂಚಾರ ಮಾಡುತ್ತಿದ್ದಾರೆ. ನವಿಲು ತೀರ್ಥ ಜಲಾಶಯದಿಂದ 7 ಸಾವಿರ ಕ್ಯೂಸೆಕ್ಸಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ.
Published by:Mahmadrafik K
First published: