• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡ್ತಾರಾ ವಿನಯ್ ಕುಲಕರ್ಣಿ?

Karnataka Elections: ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡ್ತಾರಾ ವಿನಯ್ ಕುಲಕರ್ಣಿ?

ಬಸವರಾಜ್ ಬೊಮ್ಮಾಯಿ ಮತ್ತು ವಿನಯ್ ಕುಲಕರ್ಣಿ

ಬಸವರಾಜ್ ಬೊಮ್ಮಾಯಿ ಮತ್ತು ವಿನಯ್ ಕುಲಕರ್ಣಿ

ಈ ಕುರಿತು ಪ್ರತಿಕ್ರಿಯಿಸಿರುವ ವಿನಯ್ ಕುಲಕರ್ಣಿ, ಸರ್ವೆಯಲ್ಲಿ ನನ್ನ ಹೆಸರು ಕೇಳಿ ಬಂದಿತ್ತು. ಆಗ ಮುಖಂಡರು ಕೂಡ ನನ್ನನ್ನು ಕರೆದು ಮಾತನಾಡಿದ್ದಾರೆ. ಆದರೆ ನಾನು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

  • Share this:

ಧಾರವಾಡ: ವಿಧಾನಸಭಾ ಚುನಾವಣೆ (Karnataka Elections) ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿವೆ. ಟಿಕೆಟ್ ಹಂಚಿಕೆಗೂ ಮುನ್ನ ಆಂತರಿಕ ಸಮೀಕ್ಷೆ (Internal Survey) ನಡೆಸಿರುವ ರಾಜಕೀಯ ಪಕ್ಷಗಳು ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬುದನ್ನ ನಿರ್ಧರಿಸುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulakarni) ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಕಾಂಗ್ರೆಸ್ (Congress) ನಡೆಸಿದ ಆಂತರಿಕ ಸಮೀಕ್ಷೆಯಲ್ಲಿಯೂ ಸಿಎಂಗೆ ವಿನಯ್ ಕುಲಕರ್ಣಿ ಪ್ರಬಲ ಎದುರಾಳಿ ಆಗ್ತಾರೆ ಅಂತ ಹೇಳಿದೆಯಂತೆ. ಈ ಹಿನ್ನೆಲೆ ವಿನಯ್ ಕುಲಕರ್ಣಿ ಅವರ ಹೆಸರು ಶಿಗ್ಗಾವಿ (Shiggaon) ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ವಿನಯ್ ಕುಲಕರ್ಣಿ, ಸರ್ವೆಯಲ್ಲಿ ನನ್ನ ಹೆಸರು ಕೇಳಿ ಬಂದಿತ್ತು. ಆಗ ಮುಖಂಡರು ಕೂಡ ನನ್ನನ್ನು ಕರೆದು ಮಾತನಾಡಿದ್ದಾರೆ. ಆದರೆ ನಾನು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.


ಅಲ್ಲಿ ಹಲವಾರು ಜನ ಆಕಾಂಕ್ಷಿಗಳಿದಾರೆ. ಅವರ ಮನಸ್ಸಿಗೆ ನೋವು ಮಾಡಿ ನಾನು ಹೋಗುವುದು ಸರಿಯಲ್ಲ. ಆ ಕ್ಷೇತ್ರದಲ್ಲಿ ಅವರೆಲ್ಲ ಸಾಕಷ್ಟು ದಿನದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಹೋಗಿ ಅವರಿಗೆ ಅಡೆ ತಡೆ ಮಾಡುವುದು ಸರಿಯಲ್ಲ. ಆದರೆ ಪಕ್ಷ ಅಂತಹ ತೀರ್ಮಾನ ಈಗಂತೂ ತೆಗೆದುಕೊಂಡಿಲ್ಲ. ಆ ರೀತಿ ಆದರೆ ಮುಂದೆ ನೋಡೋಣ ಎಂದರು.


Cm bommai speech in science fair
ಸಿಎಂ ಬೊಮ್ಮಾಯಿ


ಮೂವರು ಹಾಲಿ ಶಾಸಕರಿಗೆ ಸಿಗುತ್ತಾ ಶಾಕ್?


ಧಾರವಾಡ (Dharwad) ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿ ರಾಜಕೀಯ ಅಂಗಳದಲ್ಲಿ ಈ ಚರ್ಚೆಗಳು ಆರಂಭಗೊಂಡಿವೆ. ಇಬ್ಬರು ಬಿಜೆಪಿ ಮತ್ತು ಓರ್ವ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಸಿಗೋದು ಡೌಟ್ ಎಂಬ ಮಾತುಗಳು ಧಾರವಾಡ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.


ಯಾರಿಗೆಲ್ಲಾ ಟಿಕೆಟ್​ ಡೌಟ್?


ಹುಬ್ಬಳ್ಳಿ - ಧಾರವಾಡ ಸೆಂಟ್ರಲ್, ಕಲಘಟಗಿ ಹಾಗೂ ಕುಂದಗೋಳ ಕ್ಷೇತ್ರದ ಶಾಸಕರು ಡೇಂಜರ್ ಝೋನ್ ನಲ್ಲಿದ್ದಾರಂತೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagdish Shettar), ಕಲಘಟಗಿ ಶಾಸಕ ಸಿ.ಎಂ.ನಿಂಬೆಣ್ಣನವರ (MLA CM Nimbennavar), ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿಗೆ (Kusumavati Shivalli) ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.
ಶೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಚುನಾವಣೆಗೆ ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಟಿಕೆಟ್ ಹಂಚಿಕೆ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರ ನಾಯಕರು‌ ಕಮಿಟಿ ಮಾಡ್ತಾರೆ. ಆದಷ್ಟು ಬೇಗ ಸ್ಕ್ರೀನಿಂಗ್ ಕಮಿಟಿ‌ ಮಾಡಲು ಹೇಳಿದ್ದೇವೆ. ಅತಿ ಶೀಘ್ರದಲ್ಲಿ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ಸಂಸದ ಡಿಕೆ ಸುರೇಶ್ (MP DK Suresh) ಹೇಳಿದರು.


ಬಿಜೆಪಿ ಜನರನ್ನು ಭ್ರಮೆಯಲ್ಲಿ ಇಟ್ಟಿದ್ದಾರೆ. ಕೇವಲ ಪ್ರಚಾರದಲ್ಲಿ ಇಟ್ಟಿದ್ರು, ಜನರು ಕೂಡ ಬದಲಾಗಿದ್ದಾರೆ. ಈ ಸರ್ಕಾರ ತೊಲಗಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಕೇಂದ್ರ ನಾಯಕರು ಸರ್ವೆ ಮಾಡಿಸಿದ್ದಾರೆ ಎಂದರು.


ಇದನ್ನೂ ಓದಿ:  Siddaramaiah: ಬಿಜೆಪಿಯವರು ಯಡಿಯೂರಪ್ಪ ಅವರನ್ನೇ ಪಂಚರ್ ಮಾಡಿದ್ದಾರೆ; ಸಿದ್ದರಾಮಯ್ಯ


ಸಿಟಿ ರವಿ ವಿರುದ್ಧ ಡಿಕೆ ಸುರೇಶ್ ಕಿಡಿ


ಸಿ.ಟಿ.ರವಿ (CT Ravi) ಹೇಳಿಕೆ ನೋಡಿದ್ರೆ ಕೋಮು ಗಲಭೆ ಮುನ್ಸೂಚನೆ ನೀಡಿದ್ದಾರೆ. ಕರಾವಳಿ ಭಗಾದಲ್ಲಿ ಅಶಾಂತಿ‌ ಮೂಡಿಸಲು‌ಹೊರಟಿದ್ದಾರೆ. ಪಾಕಿಸ್ತಾನ ಬಗ್ಗೆ ಹೇಳಿಕೆ ನೀಡಿದ್ದಾರೆ. ಪದೇ ಪದೇ ಪಾಕಿಸ್ತಾನ ಎಳೆದು ತರುತ್ತಿದ್ದಾರೆ. ಹಾಗಾಗಿ ಸಿ.ಟಿ.ರವಿ ಮೇಲೆ ಕ್ರಮವಹಿಸಬೇಕು. ಬಿಜೆಪಿ ನಾಯಕರು‌ ನೀಚರು ಯಾವ ಹಂತಕ್ಕೆ ಬೇಕಾದ್ರು ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.

Published by:Mahmadrafik K
First published: