ಬೆಳಗಾವಿ: ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷವಾಗಿರುವ (Political Party) ಜೆಡಿಎಸ್ ಚುನಾವಣೆ (Assembly Election) ಘೋಷಣೆಗೂ ಮುನ್ನವೇ ಅಬ್ಬರದ ಪ್ರಚಾರ ನಡೆಸುತ್ತಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಇತ್ತ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಯಾರು ಸಿಎಂ ಅಭ್ಯರ್ಥಿ (CM Candidate) ಎಂದು ಇನ್ನು ಘೋಷಣೆ ಆಗಿಲ್ಲ. ಸಿಎಂ ಕುರ್ಚಿಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಅವರನ್ನು ಸಿಎಂ ಮಾಡಲು ಬಿಜೆಪಿ ಮುಂದಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಆದ್ರೆ ಬಿಜೆಪಿ ಇದನ್ನು ಅಲ್ಲಗಳೆದಿತ್ತು. ಇದೀಗ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ಹೇಳಿಕೆಯಲ್ಲಿ ಮುಂದಿನ ಸಿಎಂ ಯಾರು ಅನ್ನೋದರ ಸುಳಿವನ್ನು ನೀಡಿದ್ದಾರೆ.
ನಾಗನೂರಲ್ಲಿ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, 'ಲಿಂಗಾಯತ ಸಿಎಂ' ಟ್ರಂಪ್ ಕಾರ್ಡ್ ಯೂಸ್ ಮಾಡಿದ್ದಾರೆ. ಅಂದರೆ ಲಿಂಗಾಯತ ನಾಯಕರೊಬ್ಬರು ಸಿಎಂ ಆಗ್ತಾರೆ ಅನ್ನೋ ಸುಳಿವು ನೀಡಿದ್ದಾರೆ.
ಜಾರಕಿಹೊಳಿ ಹೇಳಿಕೆ ಹಿಂದಿನ ರಹಸ್ಯ ಏನು?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಲಿಂಗಾಯತ ನಾಯಕರು ತಿರುಗಿ ಬಿದ್ದಿದ್ದಾರೆ. ಈ ಸಮಯದಲ್ಲಿ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಬಿಜೆಪಿ ವಿರುದ್ಧ ತಿರುಗಿ ಬಿದ್ದಿರೋ ಲಿಂಗಾಯತ ಸಮುದಾಯ ಮನವೊಲೈಕೆಗೆ ಹೀಗೆ ಹೇಳಿದ್ರಾ? ಅಥವಾ ನಿಜವಾಗಿಯೂ ಲಿಂಗಾಯತ ಮುಖಂಡರಿಗೆ ಸಿಎಂ ಕುರ್ಚಿ ಫಿಕ್ಸ್ ಆಗಿದೆಯಾ ಎಂಬ ಚರ್ಚೆಗಳು ನಡೆದಿವೆ.
ಇದನ್ನೂ ಓದಿ: Tipu Sultan ಕೊಂದ ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳಲ್ಲ; ಮೈಸೂರು ರಂಗಾಯಣ ನಿರ್ದೇಶಕ
ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು?
ವೀರಶೈವ ಲಿಂಗಾಯತ ಸಮಾಜದ ಮತ ವಿಭಜನೆ ಆಗಬಾರದು. ದಯಮಾಡಿ ತಮ್ಮ ಮತ ಬೇರೆ ಪಕ್ಷಕ್ಕೆ ಹೋಗಬಾರದು. ಏಕೆಂದರೆ ಸಿಎಂ ಸ್ಥಾನ ಅಷ್ಟೊಂದು ಸರಳ ಅಲ್ಲ. 6 ಕೋಟಿ ಜನಸಂಖ್ಯೆಯಲ್ಲಿ 224 ಜನಕ್ಕೆ ಎಂಎಲ್‌ಎ ಆಗುವ ಹಣೆಬರಹ ಇರುತ್ತೆ.ಅದರಲ್ಲಿ 34 ಜನರಿಗೆ ಮಂತ್ರಿ ಆಗುವ ಹಣೆಬರಹವನ್ನು ದೇವರು ಬರೆದಿರುತ್ತಾನೆ. ಈ 6 ಕೋಟಿ ಜನಸಂಖ್ಯೆಯಲ್ಲಿ ಒಬ್ಬನೇ ಸಿಎಂ ಆಗುವ ಹಣೆಬರಹ ಬರೆದಿರುತ್ತಾನೆ. ಮುಖ್ಯಮಂತ್ರಿ ಸ್ಥಾನ ವೀರಶೈವ ಲಿಂಗಾಯತ ಸಮಾಜದ ಕೈಯಲ್ಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಲಿಂಗಾಯತ ಸಮುದಾಯದ ಬಳಿ ಮನವಿ
2023ಕ್ಕೆ ಮನಸ್ಸು ಮಾಡಿದ್ರೆ ಮತ್ತೆ ಲಿಂಗಾಯತ ಸಮಾಜಕ್ಕೆ ಸಿಎಂ ಸ್ಥಾನ ಉಳಿಯುತ್ತದೆ. ಅದಕ್ಕೆ ರಾಜ್ಯದ ಎಲ್ಲ ಲಿಂಗಾಯತ ಸಮಾಜಕ್ಕೆ ವಿನಂತಿ ಮಾಡ್ತೀನಿ.ಮತಗಳನ್ನು ವಿಭಜನೆ ಮಾಡಬೇಡಿ, ತಾವೆಲ್ಲ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: Congress: ಸಿದ್ದರಾಮಯ್ಯ ನಿರ್ಧಾರ ಹಿಂದಿದ್ಯಾ ರಾಹುಲ್ ಗಾಂಧಿ ಸಲಹೆ? ರಾಜ್ಯ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್
ಸಿಎಂ ಸ್ಥಾನ ತಪ್ಪಿಸಬೇಡಿ
2023ಕ್ಕೆ ಮತ್ತೆ ಬಿಜೆಪಿ ಸರ್ಕಾರ ಬರುತ್ತೆ, ಮತ್ತೆ ಲಿಂಗಾಯತ ಸಿಎಂ ಈ ರಾಜ್ಯದಲ್ಲಿ ಆಗ್ತಾರೆ. ಅದಕ್ಕೆ ಈ ಅವಕಾಶ ದಯಮಾಡಿ ಕಳೆದುಕೊಳ್ಳಲು ಹೋಗಬೇಡಿ. ತಾವು ಆಶೀರ್ವಾದ ಮಾಡಿದ್ರೆ ಮತ್ತೆ ಐದು ವರ್ಷ ವೀರಶೈವ ಲಿಂಗಾಯತ ಸಿಎಂ ಆಗುವ ಅವಕಾಶವಿದೆ. ತಮ್ಮ ಸಮಾಜಕ್ಕೆ ಸಿಎಂ ಸ್ಥಾನ ಆಗುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ