ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಘೋಷಣೆಗೂ ಮುನ್ನವೇ ಸಂಚಲನ ಸೃಷ್ಟಿಸುತ್ತಿದೆ. ಇದಕ್ಕೆ ಕಾರಣ ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಕಮ್ ಬ್ಯಾಕ್. ಬಿಜೆಪಿ (BJP) ಸೇರಲು ಜನಾರ್ದನ ರೆಡ್ಡಿ ಇಂಗಿತ ವ್ಯಕ್ತಪಡಿಸಿದ್ದಾರೆ. ಆದ್ರೆ ರಾಜ್ಯ ಬಿಜೆಪಿ ನಾಯಕರು ಜನಾರ್ದನ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳಬೇಕಾ ಅನ್ನೋ ಗೊಂದಲದಲ್ಲಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ಜನಾರ್ದನ ರೆಡ್ಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಭೇಟಿ ಜೊತೆ ಸ್ಥಳೀಯ ಮುಖಂಡರ ಜೊತೆ ರಹಸ್ಯವಾಗಿ ಚರ್ಚೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸಚಿವ ಶ್ರೀರಾಮುಲು (Minister Sriramulu) ಮಾತ್ರ ಗೆಳೆಯನನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸೋದಾಗಿ ಹೇಳಿರುವ ಜನಾರ್ದನ ರೆಡ್ಡಿ ಹೊಸ ಪಕ್ಷ ಅಂದೇ ಘೋಷಣೆ ಮಾಡ್ತಾರಾ ಅನ್ನೋ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.
ಜನಾರ್ದನ ರೆಡ್ಡಿ ಅವರು ಪಕ್ಷವನ್ನು ತಮ್ಮ ಬೆಂಬಲಿಗರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಕಳೆದ ವಾರವೇ ದೆಹಲಿಗೆ ತೆರಳಿದ್ದ ಜನಾರ್ದನ ರೆಡ್ಡಿ ಪಕ್ಷ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ರು ಎಂದು ತಿಳಿದು ಬಂದಿದೆ. ಸದ್ಯ ನೋಂದಣಿ ಕಾರ್ಯ ಕೊನೆ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ಪ್ರಗತಿ ಪಕ್ಷ?
ಇಷ್ಟು ದಿನ ಜನಾರ್ದನ ರೆಡ್ಡಿ ಅವರ ನೂತನ ಪಕ್ಷದ ಹೆಸರು ಕಲ್ಯಾಣ ಕರ್ನಾಟಕ ಪಕ್ಷ ಎಂದು ಹೇಳಲಾಗುತ್ತಿತ್ತು. ಇದೀಗ ನೂತನ ಪಾರ್ಟಿಗೆ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಎಂದು ಹೆಸರಿಡಲು ಬೆಂಬಲಿಗರು ಮುಂದಾಗಿದ್ದಾರೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ನೋಂದಣಿ ಸಂಬಂಧಿಸಿದ ಕಾರ್ಯಗಳಲ್ಲಿ ಜನಾರ್ದನ ರೆಡ್ಡಿ ಬೆಂಬಲಿಗರು ನಿರತರಾಗಿದ್ದಾರೆ ಎಂದು ವರದಿಯಾಗಿದೆ.
72 ಗಂಟೆಯ ನಂತರ ಎಲ್ಲಾ ಉತ್ತರ
ರಾಯಚೂರಿನ ಮಸ್ಕಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಪ್ರಮುಖರನ್ನ ಭೇಟಿಯಾಗಲು ಮಸ್ಕಿಗೆ ಬಂದಿದ್ದೇನೆ. ಬಹಳ ಕಾರ್ಯಕ್ರಮಕ್ಕೆ ಮಸ್ಕಿಗೆ ಬಂದಿದ್ದೇನೆ. ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ ಎಂದರು.
ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ. ಸಾರ್ವಜನಿಕ ಜೀವನಕ್ಕೆ ಮರಳಲು ಓಡಾಡಲು ಬರುತ್ತಿದ್ದೇನೆ. ಡಿ.25 ಕ್ಕೆ ಎಲ್ಲವನ್ನೂ ಹೇಳುತ್ತೇನೆ.ನನ್ನ ಜೊತೆ ಯಾರು ಇರ್ತಾರೆ ಯಾರು ಬರ್ತಾರೆ ಅನ್ನೋದನ್ನ 25 ಕ್ಕೆ ಹೇಳುತ್ತೇನೆ. ಎಲ್ಲಾ ಪ್ರಶ್ನೆ ಗಳಿಗೆ 25 ನೇ ತಾರೀಕು ಉತ್ತರ ಸಿಗುತ್ತೆ ಎಂದು ಹೇಳಿ ಯಾವುದೇ ಗುಟ್ಟನ್ನು ಬಿಟ್ಟುಕೊಡಲಿಲ್ಲ.
ನೀವೇನು ಕೇಳಿದ್ರೂ ಡಿ.25ಕ್ಕೆ ನನ್ನ ಉತ್ತರ
ಡಿಸೆಂಬರ್ 25ರಂದು ನಡೆಸುವ ಸುದ್ದಿಗೋಷ್ಠಿಯಲ್ಲಿ ಎಲ್ಲಾ ಉತ್ತರಗಳಿಗೆ ಉತ್ತರ ಸಿಗುತ್ತದೆ. ಎಲ್ಲದಕ್ಕೂ ಒಂದೇ ಉತ್ತರ ಡಿಸೆಂಬರ್ 25 ಎಂದ ಅವರು ಇನ್ನೂ 72 ಗಂಟೆಗಳವರೆಗೆ ದಯವಿಟ್ಟು ತಡೆಯಿರಿ ಎಂದು ಹೇಳಿದರು.
ಡಿಸೆಂಬರ್ 25 ರಂದು ನೀವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.ಈಗ ನೀವೇನೆ ಕೇಳಿದ್ರು ನನ್ನ ಉತ್ತರ ಡಿ. 25ರಂದು ನೀಡ್ತೇನೆ. ಕೇಳಿದ ಪ್ರತಿಯೊಂದು ಪ್ರಶ್ನೆಗೆ 25ರಂದು ಎಂದು ಉತ್ತರ ಹೇಳಿದರು.
ಇದನ್ನೂ ಓದಿ: Janardhan Reddy: ಹೊಸ ಪಕ್ಷ ಸ್ಥಾಪನೆಯಾದ್ರೆ ಗೆಳೆಯರು ನಿಮ್ಮ ಜೊತೆ ಬರ್ತಾರಾ? ಪ್ರಶ್ನೆಗೆ ಗಣಿ ಧಣಿ ಉತ್ತರ ಹೀಗಿತ್ತು
10 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ
ಇನ್ನು ಉತ್ತರ ಕರ್ನಾಟಕದ ಸುಮಾರು 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಾರ್ದನ ರೆಡ್ಡಿ ಮುಂದಾಗಿದ್ದಾರಂತೆ. ಇದರಲ್ಲಿ ಸುಮಾರು 10ರಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಗುರಿಯನ್ನು ಜನಾರ್ದನ ರೆಡ್ಡಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇನ್ನು ತಾವು ಗಂಗಾವತಿಯಿಂದಲೇ ಸ್ಪರ್ಧೆ ಮಾಡೋದಾಗಿ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ