HOME » NEWS » State » IS THERE ANY POLITICAL REASON BEHIND IT RAID ON RASHMIKA MANDANNA HOUSE SESR

ರಶ್ಮಿಕಾ ಮಂದಣ್ಣ ಕುಟುಂಬಕ್ಕೆ ಡಿಕೆಶಿ, ಜಾರ್ಜ್ ಜೊತೆ ಆತ್ಮೀಯತೆ? ಐಟಿ ದಾಳಿಗೆ ಇದೇ ಕಾರಣವಾ?

ಮೂಲಗಳ ಪ್ರಕಾರ ಐಟಿ ದಾಳಿ ನಡೆದಿರುವುದು ರಶ್ಮಿಕಾ ಬದಲು ಅವರ ತಂದೆ ಮಂದಣ್ಣ ಅವರಿಗಿರುವ ಆಸ್ತಿ ಕಾರಣ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ರಶ್ಮಿಕಾ ತಂದೆ ಮಂದಣ್ಣ ಕೂಡ ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ವ್ಯಕ್ತಿ.

Seema.R | news18-kannada
Updated:January 16, 2020, 2:13 PM IST
ರಶ್ಮಿಕಾ ಮಂದಣ್ಣ ಕುಟುಂಬಕ್ಕೆ ಡಿಕೆಶಿ, ಜಾರ್ಜ್ ಜೊತೆ ಆತ್ಮೀಯತೆ? ಐಟಿ ದಾಳಿಗೆ ಇದೇ ಕಾರಣವಾ?
ಅಪ್ಪ ಮಂದಣ್ಣ ಜೊತೆ ರಶ್ಮಿಕಾ
  • Share this:
ಬೆಂಗಳೂರು(ಜ. 16): ನಟಿ ರಶ್ಮಿಕಾ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಎರಡು ತಂಡ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಸಿನಿರಂಗದಲ್ಲಿ ಕಡಿಮೆ ಅವಧಿಯಲ್ಲಿ ಉತ್ತುಂಗಕ್ಕೆರಿದ ನಟಿ ರಶ್ಮಿಕಾ ಆದಾಯ ಮಾಹಿತಿ ಬಹಿರಂಗ ಪಡೆಸದೇ ಇರುವುದು ಕಾರಣ ಎಂಬ ಮಾತಿನ ಜೊತೆಗೆ ರಾಜಕೀಯ ನಂಟು ಕೂಡ ತಳುಕು ಹಾಕಿಕೊಂಡಿದೆ. 

ವಿರಾಜಪೇಟೆಯಲ್ಲಿರುವ ರಶ್ಮಿಕಾ ಅವರ ಮನೆ ಮೇಲೆ ದಾಳಿ ಮಾಡಿದ 9  ಅಧಿಕಾರಿಗಳು, ನಟಿಯ ಆಸ್ತಿ ದಾಖಲೆಗಳ ವಿವರ ಪಡೆಯುತ್ತಿದ್ದಾರೆ. ಈ ವೇಳೆ ರಶ್ಮಿಕಾ ಅವರ ತಾಯಿ ಸುಮನ್​ ಅವರು ಮಾತ್ರ ಮನೆಯಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ರಶ್ಮಿಕಾ ಹೈದ್ರಾಬಾದ್​ನಲ್ಲಿದ್ದು, ತೆಲುಗು ಚಿತ್ರವೊಂದರ ಡಬ್ಬಿಂಗ್​ ಕಾರ್ಯದಲ್ಲಿ ನಿರತರಾಗಿದ್ದಾರೆ.

ಐಟಿ ದಾಳಿಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ದುಬಾರಿ ಸಂಭಾವನೆ ಪಡೆಯುವ ನಟಿಯಲ್ಲ. ನನ್ನ ಸಿನಿ ಜೀವನವನ್ನು ಈಗಷ್ಟೇ ಆರಂಭಿಸಿದ್ದೇನೆ. ಸ್ಯಾಂಡಲ್​ವುಡ್​ನಲ್ಲಿ ನನ್ನನ್ನು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಜನ ಕರೆಯುವಾಗ ನನಗೆ ಅಚ್ಚರಿಯಾಗುತ್ತದೆ. ನನ್ನ ಬ್ಯಾಂಕ್​ ಖಾತೆಯಲ್ಲಿ ಯಾವುದೇ ಹಣವಿಲ್ಲ ಎಂದಿದ್ದಾರೆ.

ರಾಜಕೀಯ ನಂಟು?

ಮೂಲಗಳ ಪ್ರಕಾರ ಐಟಿ ದಾಳಿ ನಡೆದಿರುವುದು ರಶ್ಮಿಕಾ ಬದಲು ಅವರ ತಂದೆ ಮಂದಣ್ಣ ಅವರಿಗಿರುವ ಆಸ್ತಿ ಕಾರಣ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ರಶ್ಮಿಕಾ ತಂದೆ ಮಂದಣ್ಣ ಕೂಡ ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ವ್ಯಕ್ತಿ. ಕಾಫಿ ಎಸ್ಟೇಟ್​ ಜೊತೆ ರಶ್ಮಿಕಾ ಇನ್ಫ್ರಾಸ್ಟ್ರಾಕ್ಚರ್​ ಅಂಡ್​ ಡೆವಲಪ್​ಮೆಂಟ್​ ಕಂಪನಿ ಮಾಲೀಕ. ಇದರ ಜೊತೆ ಅವರು ವಿರಾಜಪೇಟಯಲ್ಲಿ ಸೆರೆನಿಟಿ ಎಂಬ ಹಾಲ್​ ಕೂಡ ಹೊಂದಿದ್ದಾರೆ.

ವಿಶೇಷ ಎಂದರೆ, ಇದೇ ಸೆರೆನಿಟಿ ಹಾಲ್​ನಲ್ಲಿ ರಶ್ಮಿಕಾ ಹಾಗೂ ರಕ್ಷಿತ್​ ನಿಶ್ಚಿತಾರ್ಥವಾಗಿತ್ತು. ಈ ಹಾಲ್​ನಲ್ಲಿ ಕಾಂಗ್ರೆಸ್​ನ ಇಬ್ಬರು ನಾಯಕರು ಹೂಡಿಕೆ ಮಾಡಿದ್ದು, ಆ ನಂಟಿನ ಹಿನ್ನೆಲೆಯಲ್ಲಿಯೇ ಈ ದಾಳಿ ನಡೆದಿದೆ ಎನ್ನಲಾಗಿದೆ.

ಇದನ್ನು ಓದಿ: ತೆಲುಗಿನ ಸಕ್ಸಸ್​ ರಶ್ಮಿಕಾಗೆ ತಂದಿತಾ ಕಿರಿಕ್​?; ಕೊಡಗಿನ ಬೆಡಗಿ ಮೇಲೆ ಐಟಿ ಕಣ್ಣು ಬಿದ್ದಿದ್ದೇಕೆ?ಇನ್ನು, ಈ ಹಿಂದೆ ರಶ್ಮಿಕಾ ತಂದೆ ಪಟ್ಟಣ ಪಂಚಾಯತ್​ ಸದಸ್ಯರಾಗಿದ್ದವರು. ಈ ವೇಳೆ ಅವರಿಗೆ ಈ ಹಾಲ್​ ಕಟ್ಟಲು ಕಾಂಗ್ರೆಸ್​ ಇಬ್ಬರು ನಾಯಕರು ಹಣ ಹೂಡಿದ್ದಾರೆ. ಅದೇ ಕಾರಣದಿಂದ ಈ ದಾಳಿ ನಡೆದಿರುವ ಸಾಧ್ಯತೆ ಕುರಿತು ಮಾತು ಕೇಳಿಬಂದಿದೆ.

ಯಾರವರು?

ಇನ್ನು, ಕೊಡಗಿನ ಮೂಲದವರೇ ಆದ ಜಾರ್ಜ್​ ಹಾಗೂ ಡಿಕೆ ಶಿವಕುಮಾರ್ ಅವರೇ​ ಆ ಇಬ್ಬರು ಕಾಂಗ್ರೆಸ್​ ನಾಯಕರು ಎನ್ನಲಾಗಿದೆ. ಈಗಾಗಲೇ ಬೇನಾಮಿ ಆಸ್ತಿ ಪ್ರಕರಣದಲ್ಲಿ ಈ ಇಬ್ಬರು ನಾಯಕರು ಐಟಿ ವಿಚಾರಣೆ ಎದುರಿಸುತ್ತಿದ್ದು, ಇದೇ ಕಾರಣಕ್ಕೆ ಈಗ ರಶ್ಮಿಕಾ ಮನೆ ಮೇಲೆ ದಾಳಿ ನಡೆಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
Published by: Seema R
First published: January 16, 2020, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories