ದಕ್ಷಿಣ ಭಾರತದಲ್ಲಿ (South India) ಬಿಜೆಪಿ (BJP) ಆರ್ಭಟ ಇನ್ನು ಮುಂದೆ ನಡೆಯೋಲ್ಲ ಅನ್ನೋದನ್ನು ಮತಪ್ರಭುಗಳು ಕರ್ನಾಟಕ ಎಲೆಕ್ಷನ್ನಲ್ಲಿ (Karnataka Election) ತೋರಿಸಿಕೊಟ್ಟಿದ್ದಾರೆ ಅಂದರೆ ತಪ್ಪಾಗಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಪಾರುಪತ್ಯ ಹೊಂದಿದ್ದ ಬಿಜೆಪಿ (BJP) ಪಕ್ಷ ಇದೀಗ ಇಲ್ಲಿಂದಲೂ ಗಂಟು ಮೂಟೆ ಕಟ್ಟಿದೆ. ಈಗಾಗಲೇ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ (Kerala) , ಆಂಧ್ರ ಪ್ರದೇಶ (Andhra Pradesh), ತೆಲಂಗಾಣದ (Telangana) , ಪಾಂಡಿಚೇರಿಯಲ್ಲಿ ಬಿಜೆಪಿ ಸಮರ್ಥವಾಗಿ ಸಾಧ್ಯವಾಗಿರಲಿಲ್ಲ. ಕೊನೆ ಪಕ್ಷ ಕರ್ನಾಟಕ ಗೆಲ್ಲುವ ಮೂಲಕ ದಕ್ಷಿಣದಲ್ಲಿ ಹಿಡಿತ ಸಾಧಿಸಬೇಕೆಂಬ ಮೋದಿ ಆಸೆ ನುಚ್ಚು ನೂರಾಗಿದೆ.
ಕಳಚಿದ ಕೊನೆ ಕರ್ನಾಟಕ ಕೊಂಡಿ!
ಇಲ್ಲಿಯವರೆಗೂ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ದಕ್ಷಿಣ ಭಾರತಕ್ಕೂ ಬಿಜೆಪಿ ಹೈಕಮಾಂಡ್ಗೆ ಇದ್ದ ಒಂದೇ ಒಂದು ಕೊಂಡಿಯಂದರೆ ಕರ್ನಾಟಕ. ಅದು ಕೂಡ ಈಗ ಕಳಚಿದೆ.
ಜನರ ನಾಡಿ ಮಿಡಿತ ಅರಿಯುವಲ್ಲಿ ಸೋತ ಬಿಜೆಪಿ!
ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟು ಇತರೆ ರಾಜ್ಯಗಳಲ್ಲಿ ಪಾರುಪತ್ಯ ಸಾಧಿಸಲೇಬೇಕೆಂದು ಮೋದಿ ಸಿಕ್ಕಾಪಟ್ಟೆ ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡು ಸಾಕಷ್ಟು ಭಾರಿ ಎಲ್ಲ ರಾಜ್ಯಗಳಿಗೂ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಜನರೇ ಬಿಜೆಪಿಯನ್ನು ತಿರಸ್ಕರಿಸಿದೆ. ಇದರೊಂದಿಗೆ ಬಿಜೆಪಿ ಪಾರುಪತ್ಯ ಇಲ್ಲಿಗೆ ಅಂತ್ಯವಾಗಲಿದೆ ಅಂತಾನೇ ಹೇಳಬಹುದು. ಡಬಲ್ ಇಂಜಿನ್ ಸರ್ಕಾರ ಅಂತ ಹೇಳಿಕೊಂಡು ಬರ್ತಿದ್ದ ಬಿಜೆಪಿಗೆ ಬಿಗ್ ಶಾಕ್ ಎಂದರೆ ತಪ್ಪಾಗಲ್ಲ.
ಮಹರಾಷ್ಟ್ರ ಬಿಟ್ರೆ ಕರ್ನಾಟಕವೇ ಹೆಚ್ಚಿನ ಟ್ಯಾಕ್ಸ್ ಜನರೇಟ್ ಆಗುವ ರಾಜ್ಯವಾಗಿತ್ತು. ಈ ರಾಜ್ಯ ಕಳೆದುಕೊಳ್ಳುವ ಮೂಲಕ ಕೇಂದ್ರಕ್ಕೆ ದೊಡ್ಡ ಹೊಡೆತ ಇದು ಎಂದರೆ ತಪ್ಪಾಗಲ್ಲ.
ಇದನ್ನೂ ಓದಿ: 'ಸಿದ್ರಾಮಯ್ಯ ಸಾಹೇಬ್ರೇ, ಕಂಗ್ರಾಟ್ಸ್', ಕರೆ ಮಾಡಿ ಅಭಿನಂದಿಸಿದ ತಮಿಳುನಾಡು ಸಿಎಂ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ