Rat Snake Poison: ಕೇರೆ ಹಾವಿಗೆ ಬಾಲದಲ್ಲಿ ವಿಷ ಇದೆಯೇ? ನಾಗರ ಹಾವಿಗೂ ಕೇರೆ ಹಾವಿಗೂ ಏನು ಸಂಬಂಧ?

ಹಾವುಗಳ ಲೋಕದ ನಾನಾ ರೀತಿಯ ನಮ್ಮ ಅನುಮಾನಗಳಿಗೆ ಸ್ವಾರಸ್ಯಕರವಾಗಿ ಉತ್ತರಿಸಿದ್ದಾರೆ ಕರ್ನಾಟಕ ಅರಣ್ಯ ಇಲಾಖೆಯ ಸಂಜಯ ಹೊಯ್ಸಳ. ನೀವೂ ತಿಳಿದುಕೊಳ್ಳಿ.

ಕೇರೆ ಹಾವು

ಕೇರೆ ಹಾವು

  • Share this:
ನಮ್ಮ ಮನೆ, ಕಚೇರಿ ಅಥವಾ ನಮ್ಮ ಪರಿಸರದ ಸುತ್ತಮುತ್ತ ಎಲ್ಲಾದರೂ ಹಾವು ಕಾಣಿಸಿಕೊಂಡರೆ ಹಾವು ಹಾವು ಎಂದು ಹೆದರಿ ಗಲಾಟೆ ಮಾಡುವುದರ ಬದಲಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಕ್ಷಣ ಫೋನ್ ಮಾಡುವುದು ಒಳಿತು. ನಮ್ಮ ಸುತ್ತಮುತ್ತಲು ಕಂಡುಬರುವ ಅತಿ ಸಾಮಾನ್ಯ ಹಾವು ಕೇರೆ ಹಾವು. ಇದು ವಿಷಕಾರಿಯೇ? ಕೇರೆ ಹಾವು (Rat Snake) ಕಚ್ಚುತ್ತದೆಯೇ? ಕೇರೆ ಹಾವಿನಿಂದ ಅಪಾಯ ಇದೆಯೇ?ಕೇರೆ ಹಾವಿಗೂ ನಾಗರ ಹಾವಿಗೂ (Cobra) ಏನು ಸಂಬಂಧ? ಏನು ವ್ಯತ್ಯಾಸ?  ಹೀಗೆ ನಾನಾ ರೀತಿಯ ನಮ್ಮ ಅನುಮಾನಗಳಿಗೆ ಸ್ವಾರಸ್ಯಕರವಾಗಿ ಉತ್ತರಿಸಿದ್ದಾರೆ ಕರ್ನಾಟಕ ಅರಣ್ಯ ಇಲಾಖೆಯ ಸಂಜಯ ಹೊಯ್ಸಳ. ನೀವೂ ತಿಳಿದುಕೊಳ್ಳಿ.

ನಾಗರಹಾವನ್ನು ಬಿಟ್ಟರೆ ಅತಿಹೆಚ್ಚು ಕತೆ, ಕಟ್ಟುಕತೆಗಳಿರುವುದು ಬಹುಶಃ ಕೇರೆ ಹಾವಿನ ಬಗ್ಗೆಯೇ ಎನಿಸುತ್ತದೆ. ಅಂತಹ ಕತೆಗಳಲ್ಲಿ ಪ್ರಮುಖವಾಗಿ ಒಂದು ಕಟ್ಟುಕತೆ ಎಂದರೆ "ನಾಗರಹಾವು ಮತ್ತು ಕೇರೆಹಾವುಗಳು ಬೆದೆಯಾಡುತ್ತವೆ" ಎಂಬುದು. ಇನ್ನು ಕೆಲವರು ಮುಂದೆ ಹೋಗಿ ನಾಗರ ಹಾವು ಗಂಡು, ಕೇರೆ ಹಾವು ಹೆಣ್ಣು ಎನ್ನುವುದು. ವಾಸ್ತವವಾಗಿ ಕೇರೆ ಹಾವು ಕೇರೆ ಹಾವಿನೊಂದಿಗೆ ನಾಗರಹಾವು ನಾಗರಹಾವಿನೊಂದಿಗೆ ಬೆದೆ/ ಅಧಿಪತ್ಯಕ್ಕಾಗಿ ಹೋರಾಡುತ್ತವೆ. (Combat fight)

ಈ ಕಟ್ಟುಕಥೆಗೆ ಕಾರಣ ಏನು?
ಈ ರೀತಿ ಕಟ್ಟು ಕತೆ ಚಾಲ್ತಿಯಲ್ಲಿ  ಬರುವುದಕ್ಕೆ ಮುಖ್ಯ ಕಾರಣ ಕೇರೆಹಾವು ಹಾಗೂ ನಾಗರಹಾವು ನೋಡಲು ಹೋಲಿಕೆ ಇರುವುದು ಮುಖ್ಯ ಕಾರಣವಾಗಿದೆ. ಇದರ ಜೊತೆಗೆ ಕೆಳಗಿನ ಚಿತ್ರ ನೋಡಿದಾಗ ನನಗನಿಸಿದ್ದು, ಕೇರೆ ಹಾವಿನಲ್ಲಿಯೇ ಭಿನ್ನ ಭಿನ್ನ ಬಣ್ಣಗಳಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಭಿನ್ನ ಬಣ್ಣದ ಕೇರೆಹಾವುಗಳನ್ನು ಜನ ಅಕ್ಕಪಕ್ಕದಲ್ಲಿ ನೋಡಿದಾಗ ಒಂದು ಕೇರೆಹಾವು ಮತ್ತೊಂದು ನಾಗರಹಾವು ಎಂದುಕೊಳ್ಳುವುದು ಸ್ವಲ್ಪಮಟ್ಟಿಗೆ ಸಹಜವಾದದ್ದದ್ದೆ.

ಒಂದೇ ಪ್ರಭೇದದ ಹಾವುಗಳು ಹೀಗೆ ಭಿನ್ನಭಿನ್ನ ಬಣ್ಣಹೊಂದಿರುವುದು ಸಾಮಾನ್ಯವಾದದ್ದು. ಕೇರೆ ಹಾವನಲ್ಲಂತೂ ಇದೆ ಸ್ವಲ್ಪ ಜಾಸ್ತಿಯೆ. ಕೊಳಕು ಮಂಡಲ, ನಾಗರಹಾವಿನಲ್ಲಿಯೂ ಕೂಡ ಈ ರೀತಿ‌ ಭಿನ್ನ ಬಣ್ಣಗಳಿಗೆ.

ಉದಾಹರಣೆ ಗಮನಿಸಿ
ನಮ್ಮ ರಾಜ್ಯದಲ್ಲಿ ನಾಗರಹಾವಿನಲ್ಲಿ ಒಂದೇ ಪ್ರಭೇದ (Spectacled cobra) ಇದ್ದರೂ, ಗೋಧಿ ನಾಗರ, ಕರಿ ನಾಗರ ಅಂತೆಲ್ಲಾ ನಾಗರಹಾವಿನ ಪ್ರಭೇದಗಳನ್ನು ಹುಟ್ಟು ಹಾಕಿರುವುದನ್ನು ಕಾಣಬಹುದು.

ಕೇರೆಹಾವಿನ ಬಗ್ಗೆ ಇರುವ ಮತ್ತೊಂದು ಜನಪ್ರಿಯ ಸುಳ್ಳುಕತೆಯೆಂದರೆ ಕೇರೆಹಾವಿಗೆ ಹಲ್ಲಲ್ಲಿ ವಿಷವಿಲ್ಲ, ಬಾಲದಲ್ಲಿ ವಿಷವಿದೆ ಎನ್ನುವುದು. ಕೇರೆಹಾವು ಪೂರ್ಣ ವಿಷರಹಿತ ಹಾವಾಗಿದ್ದು ಆ ರೀತಿ ಬಾಲದಲ್ಲಿ ಯಾವುದೇ ಕಾರಣಕ್ಕೂ ವಿಷ ಹೊಂದಿರುವುದಿಲ್ಲ‌.

ಇದನ್ನೂ ಓದಿ: Future Of Internet: ಭವಿಷ್ಯದ ಅಂತರ್ಜಾಲಕ್ಕಾಗಿ 60 ದೇಶಗಳು ಸಹಿ, ಭಾರತ ಸಹಿ ಹಾಕಿಲ್ಲ ಏಕೆ?

ಮುಖ್ಯವಾಗಿ ಕೇರೆಹಾವನ್ನು 'ರೈತನ ಮಿತ್ರ' ಎನ್ನುತ್ತಾರೆ. ಇದಕ್ಕೆ ಕಾರಣ ಅದರ‌ ಹೆಸರಲ್ಲೆ (Rat snake) ಇರುವ ರೈತನ ಶತೃವಾದ ಇಲಿಯನ್ನು ಅತಿಹೆಚ್ಚು ಪ್ರಮಾಣದಲ್ಲಿ ಭಕ್ಷಿಸಿ, ಮಾನವರಿಗೆ ಪೂರ್ಣ ನಿರುಪದ್ರವಿಯಾಗಿ ಬೆಳೆ ರಕ್ಷಣೆ ಮಾಡುವುದು.

ಕೊಳಕು ಮಂಡಲ ವಿಷಕಾರಿಯೇ?
ಕೇರೆಹಾವು ಸಂಪೂರ್ಣ ವಿಷರಹಿತ ಹಾವು (Nonvenomous). ಕೊಳಕುಮಂಡಲ ಭಾರತದ ನಾಲ್ಕು ಅಗ್ರಸಾಲಿನ ವಿಷಕಾರಿ ಹಾವುಗಳಲ್ಲಿ ಒಂದು. ಭಾರತದಲ್ಲಿ ಹಾವು ಕಡಿತದಿಂದ ಸಾವನ್ನಪ್ಪುವ ಜನರಲ್ಲಿ ಅತಿಹೆಚ್ಚು ಜನರ ಸಾವಿಗೆ ಕಾರಣವಾಗುವ ಹಾವಲ್ಲಿ ಪ್ರಮುಖವಾದದ್ದು ಕೊಳಕುಮಂಡಲ. ಕುದುರುಬೆಳ್ಳ ಹಾವು ಅನ್ನೊದು ಬಹುಶಃ ಸ್ಥಳೀಯ ಹೆಸರಿರಬಹುದು.

ಇದನ್ನೂ ಓದಿ: Maralu Mitra App: ಸುಲಭವಾಗಿ ಮನೆ ಕಟ್ಟಿ! ಮರಳು ಮಿತ್ರ ಆ್ಯಪ್​ನಲ್ಲೇ ಮರಳು ಬುಕ್ ಮಾಡಿ!

ಹಾವು ಎಂದರೇ ಭಯ ಎಂಬ ಅನ್ವರ್ಥನಾಮ ನಮ್ಮಲ್ಲಿದೆ. ಆದರೆ ಎಲ್ಲ ಹಾವುಗಳೂ ಅಪಾಯಕಾರಿ ಅಲ್ಲ. ಅಷ್ಟಕ್ಕೂ ಹಾವುಗಳು ಮನುಷ್ಯರ ಶತ್ರುಗಳೇ ಅಲ್ಲ. ಹಾವು ನಮ್ಮಂತೆಯೇ ಒಂದು ಜೀವಿ. ಹಾವುಗಳ ಸಂತತಿ ಇದ್ದರೇ ಮನುಷ್ಯ ಮಾಡುವ ಕೃಷಿ ಮುಂತಾದ ಕಾರ್ಯಗಳು ಸಾಂಗವಾಗುತ್ತವೆ.

ಬರಹ-  ಸಂಜಯ್ ಹೊಯ್ಸಳ
ಕರ್ನಾಟಕ ಅರಣ್ಯ ಇಲಾಖೆ
Published by:guruganesh bhat
First published: