• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MP DK Suresh: ರಾಜಕೀಯ ಸಾಕಾಯ್ತಾ? ಅಚ್ಚರಿಗೆ ಕಾರಣವಾಯ್ತು ಸಂಸದರ ಶಾಕಿಂಗ್ ಹೇಳಿಕೆ

MP DK Suresh: ರಾಜಕೀಯ ಸಾಕಾಯ್ತಾ? ಅಚ್ಚರಿಗೆ ಕಾರಣವಾಯ್ತು ಸಂಸದರ ಶಾಕಿಂಗ್ ಹೇಳಿಕೆ

ಡಿಕೆ ಸುರೇಶ್, ಸಂಸದ

ಡಿಕೆ ಸುರೇಶ್, ಸಂಸದ

Loksabha Election 2024: ನನಗೆ ರಾಜಕಾರಣ ಬೇಕೋ ಅಥವಾ ಬೇಡವೋ ಅಂತ ಅನ್ನಿಸಿದೆ. ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆಯುತ್ತೇನೆ ಎಂದು ಹೇಳಿದರು.

  • Share this:

ತುಮಕೂರು: ಸಂಸದ ಡಿಕೆ ಸುರೇಶ್ (MP DK Suresh) ಅವರಿಗೆ ರಾಜಕೀಯ ಸಾಕಾಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ. ತುಮಕೂರಿನ ಕುಣಿಗಲ್ (Kunigal, Tumakuru) ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ಡಿಕೆ ಸುರೇಶ್ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಈ ಹೇಳಿಕೆ ಗಮನಿಸಿದ್ರೆ ಮುಂದಿನ ಚುನಾವಣೆಯಲ್ಲಿ (Loksabha Election 2024) ಡಿಕೆ ಸುರೇಶ್ ಸ್ಪರ್ಧೆ ಮಾಡಲ್ವಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕೆಲವರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಚುನಾವಣೆಗೆ (Election) ಸ್ಪರ್ಧೆ ಮಾಡಬೇಕಾ ಅನ್ನೋದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.


ಚುನಾವಣೆಯಲ್ಲಿ ಸ್ಪರ್ಧೆ ಮಾಡೋದರ ಬಗ್ಗೆ ನಾನು ಇನ್ನೂ ಗೊಂದಲದಲ್ಲಿದ್ದೇನೆ. ಯಾಕಂದ್ರೆ ನನಗೆ ರಾಜಕಾರಣ ಬೇಕೋ ಅಥವಾ ಬೇಡವೋ ಅಂತ ಅನ್ನಿಸಿದೆ. ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆಯುತ್ತೇನೆ ಎಂದು ಹೇಳಿದರು.


ನನ್ನ ಗುರಿ ಇರೋದು ನಿಮ್ಮಗಳ ಸೇವೆ ಮಾಡೋದು.  ಕುಣಿಗಲ್​ನ್ನು ಒಂದು ಮಾದರಿ ತಾಲೂಕನ್ನಾಗಿ ಮಾಡಬೇಕು ಅನ್ನೋದು ನನ್ನ ಆಶಯ ಎಂದು ಹೇಳಿದರು.


2019ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದು ಇವರು ಒಬ್ಬರೇ!


2019ರ ಲೋಕಸಭಾ ಚುನಾವಣೆಯನ್ನು ಜೆಡಿಎಸ್ ಜೊತೆ ಮೈತ್ರಿಕೊಂಡು ಎದುರಿಸಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಎರಡೂ ಪಕ್ಷಗಳಿಗೆ ಕೇವಲ ತಲಾ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಿಕ್ಕಿತ್ತು. ಕಾಂಗ್ರೆಸ್​ನಿಂದ ಡಿಕೆ ಸುರೇಶ್ ಮಾತ್ರ ಗೆದ್ದಿದ್ದರು.


MP DK Suresh Slams to Mysuru MP Pratap Simha on Congress govt Scheme AKD
ಸಂಸದ ಡಿಕೆ ಸುರೇಶ್


ಬಿಎಸ್​ವೈಗೆ ರಿಲೀಫ್


ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್​ ರದ್ದುಪಡಿಸಿದೆ. ಹೈಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣವನ್ನು ವಜಾ ಮಾಡಿ ಆದೇಶಿಸಿದೆ.
ಇದನ್ನೂ ಓದಿ:  Uttara Kannada Artist: ಮರದ ತುಂಡು ಸಿಕ್ರೆ ಇವ್ರು ಕೈಯಲ್ಲೇ ಆಟಿಕೆ ಮಾಡ್ತಾರೆ!


ಈ ಮೂಲಕ ಎಂಟು ವರ್ಷದ ಹಿಂದಿನ ಪ್ರಕರಣದಿಂದ ಬಿಎಸ್​ವೈಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಸಿಎಜಿ ವರದಿ ಆಧರಿಸಿದ 15 ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿತ್ತು. ಹಿಂದಿನ ತೀರ್ಪು ಆಧರಿಸಿ 2015ರ ಡಿಸೆಬರ್ 19ರ ಕೇಸ್​ನ್ನು ಹೈಕೋರ್ಟ್ ರದ್ದುಪಡಿಸಿದೆ.

First published: