Kodagu: ಪ್ಲ್ಯಾನ್ ಮಾಡಿಯೇ ಕೊಡಗಿನಲ್ಲಿರುವ ಆಸ್ತಿ ಮಾರಾಟ ಮಾಡಿದ್ರಾ ಮುರುಘಾ ಸ್ವಾಮಿ?

ಕೊಡಗಿನಲ್ಲಿರುವ ಎಲ್ಲಾ ಆಸ್ತಿಯನ್ನು ಸಂಪೂರ್ಣ ಹಾಳು ಮಾಡಿದ್ದೇ ಶಿವಮೂರ್ತಿ ಹಾಗೂ ಈಗ ಇರುವ ಮ್ಯಾನೇಜರ್ ಎಂದು ಅವಾಚ್ಯ ಶಬ್ಧಗಳಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ ಹಿಂದಿನ ಅರ್ಚಕ. ಅದು ಕೂಡ ನ್ಯೂಸ್ 18 ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. 

ಮುರುಘಾ ಸ್ವಾಮಿ

ಮುರುಘಾ ಸ್ವಾಮಿ

  • Share this:
ಮಡಿಕೇರಿ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ (Murugha Mutt) ಶಿವಮೂರ್ತಿ ಮುರುಘಾ ಶರಣರು (Murugha Shivamurthy Swamiji) ಕೊಡಗಿನಲ್ಲಿದ್ದ ಆಸ್ತಿಯನ್ನು ಪ್ಲಾನ್ ಮಾಡಿ ಮಾರಾಟ (Property Sale) ಮಾಡಿದ್ರಾ ಅನ್ನೋ ಅನುಮಾನ ದಟ್ಟವಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ (Somavarapet, Kodagu) ತಾಲ್ಲೂಕಿನ ವಿವಿಧೆಡೆ ಇದ್ದ 1,800 ಕ್ಕೂ ಹೆಚ್ಚು ಎಕರೆ ಭೂಮಿ ಪೈಕಿ ಈಗ ಕೇವಲ 600 ಎಕರೆಯಷ್ಟು ಮಾತ್ರವೇ ಮಠದ ಹೆಸರಿನಲ್ಲಿ ಉಳಿದಿದೆ. ಕೊಡಗಿನ ಹಾಲೇರಿ ರಾಜರು (Haleri Kings) ಮುರುಘಾ ಮಠಕ್ಕೆ ಅಂದು ಇಷ್ಟು ಭೂಮಿಯನ್ನು ಜಹಾಗೀರಿಯಾಗಿ ನೀಡಿದ್ದರು ಎಂದು ಮುರುಘಾ ಮಠದ ಕೊಡಗಿನಲ್ಲಿರುವ ಆಸ್ತಿಗಳ ಜವಾಬ್ದಾರಿ ಹೊತ್ತಿರುವ ಮ್ಯಾನೇಜರ್ ಶಶಿಧರ್ ಅವರೇ ಹೇಳಿದ್ದಾರೆ.

ಮಾದಾಪುರದಲ್ಲಿ 600 ಎಕರೆ, ಸೋಮವಾರಪೇಟೆ ಸಮೀಪದ ಬೇಳೂರಿನಲ್ಲಿ 800 ಎಕರೆ ಹಾಗೇ ಅಭಿಮಠದಲ್ಲಿ 200ಕ್ಕೂ ಹೆಚ್ಚು ಎಕರೆ ಹಾಗೂ ಶನಿವಾರಸಂತೆ ಸಮೀಪದ ಚಂಗಡಹಳ್ಳದಲ್ಲಿರುವ ಭೂಮಿ ಸೇರಿ ಒಟ್ಟು 1800 ಎಕರೆ ಭೂಮಿ ಇತ್ತು. ಇದೆಲ್ಲವನ್ನೂ ಸಾಕಷ್ಟು ಜನರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಹೆಸರಿಗೆ ಹೋಗಿ ಈಗ ಮೂರು ಕಡೆಯಿಂದ ಕೇವಲ 600 ಎಕರೆ ಭೂಮಿ ಉಳಿದಿದೆ ಎನ್ನುತ್ತಾರೆ ಮ್ಯಾನೇಜರ್ ಶಶಿಧರ್.

ಸ್ಥಳೀಯರಿಂದ ಜಮೀನು ಖರೀದಿ

ವಿಪರ್ಯಾಸವೆಂದರೆ ಭೂಮಿಯನ್ನು ತೆಗೆದುಕೊಂಡಿರುವ ರೈತರು ನ್ಯೂಸ್ 18ನ ಗುಪ್ತ ಕಾರ್ಯಾಚರಣೆಯಲ್ಲಿ ಬೇರೆಯದೇ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಮುರುಘಾ ಮಠದ ಆಸ್ತಿಯನ್ನು ಹಿಂದಿನಿಂದಲೂ ಸಾಕಷ್ಟು ಜನರು ಖರೀದಿ ಮಾಡಿದ್ದಾರೆ. ಇತ್ತೀಚೆಗೂ ಸಾಕಷ್ಟು ರೈತರಿಗೆ ಶಶಿಧರ್ ಮತ್ತು ಸ್ವಾಮೀಜಿ ಸೇರಿ ಪ್ಲ್ಯಾನ್ ಮಾಡಿ ಭೂಮಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ವತಃ ನಾಲ್ಕೈದು ಎಕರೆ ಭೂಮಿ ಕೊಂಡಿರುವ ರೈತರೊಬ್ಬರು ಬಾಯ್ಬಿಟ್ಟಿದ್ದಾರೆ.

Is Murugha Shivamurthy swamy sold kodagu property by planning rsk mrq
ಕೊಡಗು


ಲೀಜ್ ಆಧಾರದಲ್ಲಿ ಭೂಮಿ

ಮಠದ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಹೌದಲ್ಲವೇ ಎಂಬ ಪ್ರಶ್ನೆಗೆ ಮಾರುವಂತಿಲ್ಲ ಎಂದು ಹೇಳುತ್ತಾರೆ. ಆದ್ದರಿಂದಲೇ ಮ್ಯಾನೇಜರ್ ಶಶಿಧರ್ ಅವರಿಗೆ ಸ್ವಾಮೀಜಿ ಪವರ್ ಆಫ್ ಅಟಾರ್ನಿ ಕೊಟ್ಟಿದ್ದು, ಶಶಿಧರ್ ಅವರು ಒಬ್ಬೊಬ್ಬ ರೈತರಿಗೆ ಐದು ಎಕರೆ, 10 ಎಕರೆಯಂತೆ ನೂರಾರು ಎಕರೆ ಭೂಮಿಯನ್ನು ಲೀಜ್ ಆಧಾರದಲ್ಲಿ ನೀಡುತ್ತಿದ್ದಾರೆ. ನಂತರ ಅದೇ ರೈತರಿಂದ ಎಕರೆಗೆ ಮೂರು ಲಕ್ಷದಿಂದ 5 ಲಕ್ಷ ರೂಪಾಯಿಯಂತೆ ಪಡೆದುಕೊಂಡು ಬಳಿಕ ಉಳುತ್ತಿದ್ದವರ ಹೆಸರಿಗೆ ಎಸಿ ಕೋರ್ಟ್ ಮೂಲಕ ದಾಖಲೆ ಮಾಡಿಕೊಡುತ್ತಿದ್ದಾರೆ. ಇಂತಹ ಒಂದೆರಡಲ್ಲ, ನೂರಾರು ಪ್ರಕರಣಗಳು ಇವೆ ಎಂದು ಭೂಮಿಯನ್ನು ಕೊಂಡ ರೈತರು ನ್ಯೂಸ್ 18 ಬಳಿ ಹೇಳಿದ್ದಾರೆ.

ಇದನ್ನೂ ಓದಿ:  Muruga Mutt Case: ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ, ಅಟ್ರಾಸಿಟಿ ಪ್ರಕರಣವೂ ದಾಖಲು!

ಪವರ್ ಆಫ್ ಅಟಾರ್ನಿಯನ್ನು ಶಶಿಧರ್​ಗೆ ಬೇಕೆಂದೇ ನೀಡಲಾಗಿದ್ದು, ಭೂಮಿ ಮಾರಾಟ ಮಾಡುವುದೆಲ್ಲವೂ ಸ್ವಾಮೀಜಿಗೆ ಗೊತ್ತೇ ಇದೆ. ಇದೆಲ್ಲ ಮಾಹಿತಿ ಸ್ವಾಮೀಜಿಗೆ ಗೊತ್ತಿದ್ದೇ, ಸಾವಿರಾರು ಎಕರೆ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎನ್ನುತ್ತಾರೆ ರೈತರು.

Is Murugha Shivamurthy swamy sold kodagu property by planning rsk mrq
ಮುರುಘಾಶ್ರೀ


ಸ್ವಾಮೀಜಿ ನೇಮಕ ಮಾಡದಿರೋದು ಅನುಮಾನಕ್ಕೆ ಕಾರಣ

ನಾಲ್ಕೈದು ವರ್ಷಗಳ ಹಿಂದೆ ಸೋಮವಾರಪೇಟೆ ಸಮೀಪದ ಅಭಿಮಠದಲ್ಲಿ ಸ್ವಾಮೀಜಿ ಇದ್ದರು. ಅನಾರೋಗ್ಯದಿಂದ ಸ್ವಾಮೀಜಿ ಮೃತಪಟ್ಟ ಮೇಲೆ ಅಲ್ಲಿಗೆ ಸ್ವಾಮೀಜಿಯನ್ನೇ ನೇಮಕ ಮಾಡದೇ ಇರುವುದರ ಹಿಂದೇ ಇಂತಹ ಉದ್ದೇಶಗಳಿವೆ. ಸ್ವಾಮೀಜಿಯನ್ನು ನೇಮಕ ಮಾಡಿದರೆ ಅವರ ಹೆಸರಿಗೆ ಆಸ್ತಿ ಹೋಗುತ್ತದೆ ಎಂದು ತಿಳಿದು ಯಾರನ್ನೂ ನೇಮಕ ಮಾಡಲಿಲ್ಲ ಎಂದು ರೈತರು ಹೇಳಿದ್ದಾರೆ.

Is Murugha Shivamurthy swamy sold kodagu property by planning rsk mrq
ಕೊಡಗಿನಲ್ಲಿರುವ ಆಸ್ತಿ


ಮುರುಘಾ ಶ್ರೀ ವಿರುದ್ಧ ಹಳೆಯ ಅರ್ಚಕ ಆಕ್ರೋಶ

ಇನ್ನೂ ಒಂದು ಸತ್ಯ ಎಂದರೆ ಕೊಡಗಿನಲ್ಲಿ ಮುರುಘಾ ಮಠದ ಶಾಖೆಯೊಂದರಲ್ಲಿ ಈ ಹಿಂದೆ ಪೂಜೆ ಮಾಡಿಕೊಂಡಿದ್ದ ಅರ್ಚಕನನ್ನು ಶಿವಮೂರ್ತಿ ಶರಣರು ಹೊರಹಾಕಿದ್ದರಂತೆ. ಅದ್ಯಾಕೆ ಎಂದು ಕೇಳಿದರೆ, ಈ ಮನುಷ್ಯನಿಗೆ ನೀಚ ಕೆಲಸಗಳನ್ನು ಮಾಡುವುದಕ್ಕೆ ಯಾರು ಸಹಕಾರ ನೀಡುತ್ತಿದ್ದರೋ, ಅವರನ್ನು ಮಾತ್ರ ಮಠದಲ್ಲಿ ಉಳಿಸಿಕೊಂಡ, ಯಾರು ಹಿಂದೆ ಇದ್ದ ಮಲ್ಲಿಕಾರ್ಜುನ ನಿರಂಜನಾ ಸ್ವಾಮಿ ಅವರ ನಿಯತ್ತಿನಂತೆ ಇದ್ದರೋ ಅವರೆಲ್ಲರನ್ನೂ ಹೊರಹಾಕಿದ್ದಾರಂತೆ.

ಇದನ್ನೂ ಓದಿ: Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್

ಕೊಡಗಿನಲ್ಲಿರುವ ಎಲ್ಲಾ ಆಸ್ತಿಯನ್ನು ಸಂಪೂರ್ಣ ಹಾಳು ಮಾಡಿದ್ದೇ ಶಿವಮೂರ್ತಿ ಹಾಗೂ ಈಗ ಇರುವ ಮ್ಯಾನೇಜರ್ ಎಂದು ಅವಾಚ್ಯ ಶಬ್ಧಗಳಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ ಹಿಂದಿನ ಅರ್ಚಕ. ಅದು ಕೂಡ ನ್ಯೂಸ್ 18 ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
Published by:Mahmadrafik K
First published: