ಬೆಂಗಳೂರು: ಸಾರಿಗೆ ಸಚಿವ ಬಿ.ಶ್ರೀರಾಮುಲು (Transport B Sriramulu) ಬಿಜೆಪಿ (BJP) ಮೇಲೆ ಮುನಿಸಿಕೊಂಡ್ರಾ ಅನ್ನೋ ಪ್ರಶ್ನೆ ಮುನ್ನಲೆಗೆ ಬಂದಿದೆ. ಕಾರಣ ನಿನ್ನೆ ನಡೆದ ಒಂದು ಕಾರ್ಯಕ್ರಮ. ಸಾರಿಗೆ ಇಲಾಖೆಯ ಕಾರ್ಯಕ್ರಮವಾಗಿದ್ರೂ ಸ್ವತಃ ಶ್ರೀರಾಮುಲು ಗೈರಾಗಿದ್ದರು. ಸಾರಿಗೆ ಇಲಾಖೆಯ ಬಹುದೊಡ್ಡ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಶ್ರೀರಾಮುಲು ತಮ್ಮ ಅಸಮಾಧಾನ ಹೊರ ಹಾಕಿದ್ರಾ ಅನ್ನೋ ಚರ್ಚೆಗಳು ಕಮಲ ಮನೆಯಲ್ಲಿ ನಡೆಯುತ್ತಿವೆ. ಆದರೆ ಶ್ರೀರಾಮುಲು ಅವರ ಮುನಿಸು ಪಕ್ಷದ ಮೇಲಾ ಅಥವಾ ಸಿಎಂ ಮೇಲಾ ಅಥವಾ ತಮ್ಮದೇ ಇಲಾಖೆಯ ಮೇಲೆನಾ ಅನ್ನೋದರ ಸ್ಪಷ್ಟತೆ ಸಿಗಬೇಕಿದೆ. ಕೊರೊನಾ (Corona Virus) ವೇಳೆ ಆರೋಗ್ಯ ಇಲಾಖೆಯನ್ನು ಶ್ರೀರಾಮುಲು ಅವರಿಂದ ಹಿಂಪಡೆದು ಸಾರಿಗೆ ಇಲಾಖೆ ನೀಡಲಾಗಿತ್ತು. ಆರಂಭದಲ್ಲಿ ಸಾರಿಗೆ ಇಲಾಖೆಯಲ್ಲಿ ಕಾಣಿಸಿಕೊಂಡ ಶ್ರೀರಾಮುಲು, ಈಗ ಮಹತ್ವದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಈ ಬಾರಿ ತನ್ನ ಇತಿಹಾಸದಲ್ಲೇ ಕೆಎಸ್ಆರ್ಟಿಸಿ ಅದ್ಧೂರಿ ಬಸ್ ಖರೀದಿ ಮಾಡಿದೆ. ಈ ಬಸ್ ಉದ್ಘಾಟನೆ ಕಾರ್ಯಕ್ರಮಕ್ಕೂ ಶ್ರೀರಾಮುಲು ಗೈರಾಗಿದ್ದರು. ಫೆಬ್ರವರಿ 24ರಂದು ಕಲಾಸಿಪಾಳ್ಯ ಬಸ್ ಉದ್ಘಾಟನೆಗೂ ಸಚಿವರು ಗೈರಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರಿಗೆ ಸಚಿವರೇ ಇಲ್ಲದೇ ಸಿಎಂ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ.
ಯಾಕೆ ಈ ಮುನಿಸು?
ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿರುವ ಶ್ರೀರಾಮುಲು ಈ ಬಾರಿ ಚುನಾವಣೆಯಲ್ಲಿ ಬಳ್ಳಾರಿಗೆ ಎಂಟ್ರಿ ಕೊಡುವ ಕನಸು ಕಾಣುತ್ತಿದ್ದಾರೆ. ಆದ್ರೆ ಬಿಜೆಪಿ ಇದಕ್ಕೆ ಇವರೆಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗ್ತಿದೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಅವರನ್ನೇ ಮತ್ತೊಮ್ಮೆ ಕಣಕ್ಕಿಳಿಸುವ ಕುರಿತು ಬಿಜೆಪಿ ಆಂತರಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿಗೆ ಹೋಗಲು ಮುಂದಾಗಿರೋ ಶ್ರೀರಾಮುಲು ಅವರಿಗೆ ಪಕ್ಷ ಯಾವುದೇ ಗ್ರೀನ್ ಸಿಗ್ನಲ್ ನೀಡದ ಕಾರಣ ಸಚಿವರು ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕಾರ್ಯಕರ್ತನಿಗೆ ಜೆಡಿಎಸ್ ಟಿಕೆಟ್
ಹಾಸನ JDS ಟಿಕೆಟ್ ಫೈಟ್‌ಗೆ (Hassan JDS Ticket) ನಾಳೆ ತೆರೆ ಬೀಳಲಿದೆ. ಅದರ ಬಗ್ಗೆ ಶೃಂಗೇರಿಯಲ್ಲಿ ಮಾತಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy), ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಜೆಡಿಎಸ್ ಟಿಕೆಟ್ ನೀಡುತ್ತೇವೆ ಎಂದರು.
ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿದೆ. ಆ ವಿಶ್ವಾಸಕ್ಕೆ ನಾನು ಧಕ್ಕೆ ತರೋದಿಲ್ಲ. ನಾಳೆ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ಮಾಡ್ತೀನಿ. ನಾಳೆಯ ಸಭೆಗೆ ರೇವಣ್ಣರನ್ನೂ ಕರೆಯುತ್ತಿಲ್ಲ. ಸ್ವರೂಪ್ರನ್ನೂ ಸಭೆಗೆ ಆಹ್ವಾನ ನೀಡಿಲ್ಲ. ಆದರೆ, ಕಾರ್ಯಕರ್ತರ ಅಭಿಪ್ರಾಯದಂತೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೆಚ್ಡಿಕೆ ಹೇಳಿದರು.
ಇದನ್ನೂ ಓದಿ: Kalasipalya Bus Terminal: 63 ಕೋಟಿ ರೂಪಾಯಿ ವೆಚ್ಚದ ಕಲಾಸಿಪಾಳ್ಯದ ಬಸ್ ಟರ್ಮಿನಲ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಎನ್.ಆರ್ ಸಂತೋಷ್ಗೆ ತರಾಟೆ
ಅರಸೀಕೆರೆ ಕ್ಷೇತ್ರದ (Arasikere( ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್.ಆರ್ ಸಂತೋಷ್‍ರನ್ನು (NR Santhosg) ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಅರಸೀಕೆರೆ ತಾಲೂಕಿನ ಗೊಲ್ಲರಹಟ್ಟಿಗೆ ಎನ್.ಆರ್ ಸಂತೋಷ್ ತಮ್ಮ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಬಂದಿದ್ರು. ಸೊಸೈಟಿ ವಿಚಾರವಾಗಿ ಮಾತನಾಡಿದರು.
ಇದರಿಂದ ಕೆರಳಿದ ಗ್ರಾಮಸ್ಥರು ಎನ್.ಆರ್ ಸಂತೋಷ್‍ರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನಮ್ಮೂರ ಸೊಸೈಟಿ ಬಗ್ಗೆ ಮಾತನಾಡಲು ನೀನ್ಯಾರು? ನಾವೆಲ್ಲ ಕಷ್ಟಪಟ್ಟು ಸೊಸೈಟಿಗೆ 1 ಕೋಟಿ ದುಡ್ಡು ಹಾಕಿಸಿದ್ದೀವಿ. ಗ್ರಾಮಕ್ಕೆ ಬಂದಿದ್ದೀಯಾ ವೋಟು ಕೇಳಿಕೊಂಡು ಹೋಗು. ನೀನು ಬಂದು ಊರಿಗೆ ಊರನ್ನೇ ಹೊಡೆದಾಡಿಸ್ತಿಯಾ ಎಂದು ಹರಿಹಾಯ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ