ಪ್ರಧಾನಿ ಹುದ್ದೆಯಲ್ಲಿರುವವರು ಮಠಕ್ಕೆ ತೆರಳಿ ರಾಜಕೀಯ ಭಾಷಣ ಮಾಡುವುದು ಸರಿಯಾ?; ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ಶಾಲಾ ಮಕ್ಕಳ ಎದುರು ರಾಜಕೀಯ ಭಾಷಣ ಮಾಡಿದ ಪ್ರಧಾನಿ ಮೋದಿ ಅವರ ಈ ನಡೆಗೆ ಇದೀಗ ದೇಶದಾದ್ಯಂತ ಭಾರೀ ಆಕ್ರೋಶ . ರಾಜ್ಯದ ಮಾಜಿ ಸಂಸದ ಹಾಗೂ ಲೋಕಸಭಾ ಮಾಜಿ ವಿರೋಧ ಪಕ್ಷದ ನಾಯಕರೂ ಆಗಿದ್ದ ಮಲ್ಲಿವ್ಯಕ್ತವಾಗುತ್ತಿದೆಕಾರ್ಜುನ ಖರ್ಗೆ ಸಹ ಪ್ರಧಾನಿ ಮೋದಿ ಅವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

news18-kannada
Updated:January 4, 2020, 4:42 PM IST
ಪ್ರಧಾನಿ ಹುದ್ದೆಯಲ್ಲಿರುವವರು ಮಠಕ್ಕೆ ತೆರಳಿ ರಾಜಕೀಯ ಭಾಷಣ ಮಾಡುವುದು ಸರಿಯಾ?; ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ
ಮಲ್ಲಿಕಾರ್ಜುನ ಖರ್ಗೆ
  • Share this:
ಬೆಂಗಳೂರು (ಜನವರಿ. 04); ದೇಶದ ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ ಶಾಲಾ ಮಕ್ಕಳ ಎದುರು ರಾಜಕೀಯ ಭಾಷಣ ಮಾಡಿದ್ದು ಎಷ್ಟು ಸರಿ? ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಗುರುವಾರ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿದ್ದರು. ಅಲ್ಲದೆ, ಶಾಲಾ ಮಕ್ಕಳ ಎದುರು ಪಾಕಿಸ್ತಾನ, ಇಮ್ರಾನ್ ಖಾನ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಾಚಾಮಗೋಚರ ದಾಳಿ ನಡೆಸಿದ್ದರು. ಅಲ್ಲದೆ, ಕೇಂದ್ರದ ಸಿಎಎ ಮತ್ತು ಎನ್ಆರ್​ಸಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದರು.

ಶಾಲಾ ಮಕ್ಕಳ ಎದುರು ರಾಜಕೀಯ ಭಾಷಣ ಮಾಡಿದ ಪ್ರಧಾನಿ ಮೋದಿ ಅವರ ಈ ನಡೆಗೆ ಇದೀಗ ದೇಶದಾದ್ಯಂತ ಭಾರೀ ಆಕ್ರೋಶ . ರಾಜ್ಯದ ಮಾಜಿ ಸಂಸದ ಹಾಗೂ ಲೋಕಸಭಾ ಮಾಜಿ ವಿರೋಧ ಪಕ್ಷದ ನಾಯಕರೂ ಆಗಿದ್ದ ಮಲ್ಲಿವ್ಯಕ್ತವಾಗುತ್ತಿದೆಕಾರ್ಜುನ ಖರ್ಗೆ ಸಹ ಪ್ರಧಾನಿ ಮೋದಿ ಅವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಇಂದು ಬೆಂಗಳೂರಿನಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಅವರು, “ಸಿದ್ದಗಂಗಾ ಮಠ ರಾಜ್ಯದಲ್ಲಿ ಅದ್ಭುತವಾದ ಕೆಲಸ ಮಾಡಿದೆ. ಮಠದ ಹಾಗೂ ದಿವಂಗತ ಶಿವಕುಮಾರ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯ. ಆದರೆ, ಇಂತಹ ಮಠದಲ್ಲಿ ಶಾಲಾ ಮಕ್ಕಳ ಎದುರು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಭಾಷಣ ಮಾಡಿದ್ದು ಸರಿಯಾ? ವಿರೋಧ ಪಕ್ಷಗಳ ವಿರುದ್ಧ ಶಾಲಾ ಮಕ್ಕಳ ಎದುರು ದಾಳಿ ನಡೆಸುವ ಅಗತ್ಯತೆ ಇತ್ತಾ?” ಎಂದು ಪ್ರಶ್ನಿಸಿದ್ದಾರೆ.

“ಜೂನ್-ಜುಲೈ ತಿಂಗಳಲ್ಲಿ ಇಡೀ ರಾಜ್ಯ ನೆರೆಗೆ ತುತ್ತಾಗಿತ್ತು. ಆದರೆ, ಆ ಸಂದರ್ಭದಲ್ಲಿ ಕನಿಷ್ಟ ಜನರಿಗೆ ಧೈರ್ಯ ತುಂಬುವುದಕ್ಕೂ ಸಹ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಿರಲಿಲ್ಲ. ಆ ಸಂದರ್ಭದಲ್ಲಿ ಕರ್ನಾಟಕದ ಜನ ಅವರಿಗೆ ನೆನಪಾಗಿರಲಿಲ್ಲ. ಸುಖ ದುಖಃ ನೋಡಲು ಬಂದಿರಲಿಲ್ಲ. ಆದರೆ, ಇದೀಗ ಸಿಎಎ ಹಾಗೂ ಎನ್ಆರ್​ಸಿ ಬಗ್ಗೆ ಹೇಳಲಿಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಕಾಯ್ದೆಯನ್ನು ವಿರೋಧ ಮಾಡುವವರ ಬಾಯಿ ಮುಚ್ಚಿಸುವ ಸಲುವಾಗಿ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದಿಂದ ನೆರೆ ನಿರಾಶ್ರಿತರಿಗೆ ಯಾವುದೇ ಲಾಭ ಇಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೆಚ್ಯೂರಿಟಿ, ಬುದ್ದಿ ಎರಡೂ ಇಲ್ಲದ ಮನುಷ್ಯ; ಮೋದಿ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿರುವ ಮಹೇಂದ್ರ ಕುಮಾರ್
First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ