ಡ್ರಗ್ಸ್‌ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಕಾರ್ತಿಕ್ ರಾಜ್‌ ಬಿಜೆಪಿ ಕಾರ್ಯಕರ್ತನಾ?; ಹೊರ ಬೀಳುತ್ತಿವೆ ಸ್ಫೋಟಕ ಮಾಹಿತಿ!

2017ರಲ್ಲಿ  ಆರೋಪಿ ಕಾರ್ತಿಕ್‌ ರಾಜ್‌ ಶಿವಾಜಿ ನಗರದಲ್ಲಿ ಬಿಜೆಪಿ ಯುವಮೋರ್ಚ ಕಾರ್ಯಕರ್ತನಾಗಿ ಸೇರ್ಪಡೆಯಾಗಿದ್ದರು. ಸ್ವತಃ ಜನಾರ್ದನ ರೆಡ್ಡಿ ಪಕ್ಷದ ಲೆಟರ್‌ ಹೆಡ್‌ನಲ್ಲಿ ಆತನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಬರೆಯಲಾಗಿದ್ದ ಪ್ರಮಾಣ ಪತ್ರವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಅಲ್ಲದೆ, ಪೋಟೋಗೂ ಫೋಸ್‌ ನೀಡಿದ್ದರು.

news18-kannada
Updated:September 3, 2020, 6:35 PM IST
ಡ್ರಗ್ಸ್‌ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಕಾರ್ತಿಕ್ ರಾಜ್‌ ಬಿಜೆಪಿ ಕಾರ್ಯಕರ್ತನಾ?; ಹೊರ ಬೀಳುತ್ತಿವೆ ಸ್ಫೋಟಕ ಮಾಹಿತಿ!
2017ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಡ್ರಗ್ಸ್‌ ಪೆಡ್ಲ್‌ ಕಾರ್ತಿಕ್‌ ರಾಜ್.
  • Share this:
ಬೆಂಗಳೂರು (ಸೆಪ್ಟೆಂಬರ್‌ 03); ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿ ಇದೀಗ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿದ್ದರುವ ಆರೋಪಿ ಕಾರ್ತಿಕ್‌ ರಾಜ್‌ ಬಿಜೆಪಿ ಪಕ್ಷದ ಕಾರ್ಯಕರ್ತನೇ? ಹೀಗೊಂದು ಪ್ರಶ್ನೆ ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಕ್ರಮ ಡ್ರಗ್ಸ್‌ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸಿಸಿಬಿ ಪೊಲೀಸರು ಕೈಗೆ ತೆಗೆದುಕೊಂಡ ದಿನಗಳಿಂದ ಒಂದರ ಹಿಂದೆ ಒಂದರಂತೆ ಆಘಾತಕಾರಿ ಮಾಹಿತಿಗಳು ಇದೀಗ ಹೊರಬೀಳುತ್ತಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಈ ನಡುವೆ ಇದೀಗ ವಿಚಾರಣೆಯ ನಡುವೆ ಆರೋಪಿ ಕಾರ್ತಿಕ್‌ ರಾಜ್ ಮತ್ತು ಮಾಜಿ ಸಚಿವ ಜನಾರ್ಧನ ರೆಡ್ಡಿ ಜೊತೆಗಿರುವ ಪೋಟೋವೊಂದು ಬಹಿರಂಗವಾಗಿದ್ದು ಹತ್ತಾರು ಅನುಮಾನ ಮತ್ತು ಪ್ರಶ್ನೆಗಳಿಗೆ ವೇದಿಕೆ ಕಲ್ಪಿಸಿದೆ.

ಕಳೆದ ಗುರುವಾರ ಬೆಂಗಳೂರಿನ ಪೊಲೀಸರು ಅಕ್ರಮ ಡ್ರಗ್ಸ್‌ ಜಾಲವನ್ನು ಭೇದಿಸಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ ಡ್ರಗ್ಸ್‌ ಜಾಲದ ಜೊತೆಗೆ ಸ್ಯಾಂಡಲ್‌ವುಡ್‌ ನಂಟು ಇರುವುದು ತಿಳಿದುಬಂದಿತ್ತು. ಇನ್ನೂ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿಕೆಯೊಂದಿಗೆ ಈ ಅನುಮಾನ ನಿಜ ಎಂಬುದು ಸ್ಪಷ್ಟವಾಗಿತ್ತು. ಇದರ ಬೆನ್ನಿಗೆ ಕಾರ್ಯಾಚರಣೆಗೆ ಇಳಿದಿದ್ದ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾಗುವ ರಾಹುಲ್ ಎಂಬಾತನನ್ನು ವಶಕ್ಕೆ ಪಡೆದಿತ್ತು. ಆದರೆ, ವಿಚಾರಣೆ ವೇಳೆ ರಾಹುಲ್‌ ಎಂಬ ವ್ಯಕ್ತಿ ಬಾಯಿಬಿಟ್ಟ ಆ ಹೆಸರು ಮಾತ್ರ ಇದೀಗ ಸ್ವತಃ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಡ್ರಗ್ಸ್‌ ಆರೋಪಿ ಬಿಜೆಪಿ ಕಾರ್ಯಕರ್ತನೇ?

ಅಕ್ರಮ ಡ್ರಗ್ಸ್‌ ಜಾಲದ ಸುದ್ದಿ ಸದ್ದು ಮಾಡಲು ಶುರು ಮಾಡಿದ ದಿನದಿಂದ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ತೊಡಗಿದ್ದವು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರ ಬಂಧನಕ್ಕೆ ಒಳಗಾಗಿರುವ ಆರೋಪಿ ಕಾರ್ತಿಕ್‌ ರಾಜ್ ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಆರೋಪಿಸಲಾಗುತ್ತಿರುವುದು ಆಡಳಿತರೂಢ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೌದು..! ಅಕ್ರಮ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ತಿಕ್‌ ರಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆದರೆ, ವಿಚಾರಣೆ ವೇಳೆ ಈತನ ಹಿನ್ನೆಲೆ ಕೆದಕಿದ ಪೊಲೀಸರು ಸ್ವತಃ ಧಂಗಾಗಿದ್ದಾರೆ. ಪ್ರಸ್ತುತ ಸಿಸಿಬಿ ವಶದಲ್ಲಿರುವ ಈ ಡ್ರಗ್ ಪೆಡ್ಲರ್ ಗೂ ರಾಷ್ಟ್ರೀಯ ಪಕ್ಷಕ್ಕೂ ನಂಟು ಇದೆ ಎಂದು ಹೇಳಲಾಗುತ್ತಿದೆ.

2017ರಲ್ಲಿ  ಆರೋಪಿ ಕಾರ್ತಿಕ್‌ ರಾಜ್‌ ಶಿವಾಜಿ ನಗರದಲ್ಲಿ ಬಿಜೆಪಿ ಯುವಮೋರ್ಚ ಕಾರ್ಯಕರ್ತನಾಗಿ ಸೇರ್ಪಡೆಯಾಗಿದ್ದರು. ಸ್ವತಃ ಜನಾರ್ಧನ ರೆಡ್ಡಿ ಪಕ್ಷದ ಲೆಟರ್‌ ಹೆಡ್‌ನಲ್ಲಿ ಆತನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಬರೆಯಲಾಗಿದ್ದ ಪ್ರಮಾಣ ಪತ್ರವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಅಲ್ಲದೆ, ಪೋಟೋಗೂ ಫೋಸ್‌ ನೀಡಿದ್ದರು. ಈ ಫೋಟೋದಲ್ಲಿ ಕಾರ್ತಿಕ್ ರಾಜ್, ಗಾಲಿ ಜನಾರ್ಧನ ರೆಡ್ಢಿ ಜೊತೆಗೆ ನಟ ಸಾಯಿಕುಮಾರ್ ಅವರೂ ಸಹ ಇದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈತ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಹೀಗಾಗಿ ಆಡಳಿತ ಪಕ್ಷದಲ್ಲೇ ಇದ್ದು, ಕಾರ್ತಿಕ್‌ ರಾಜ್ ಈ ನೀಚ ಡ್ರಗ್ಸ್‌ ದಂಧೆಗೆ ಇಳೆದನೇ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಮೂಡಿದೆ.ಇದನ್ನೂ ಓದಿ : ಜಿಎಸ್‌ಟಿ ಪಾಲಿಗೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ, ಸಾಲ ಪಡೆಯಲು ಸಿದ್ದರಾದ ಯಡಿಯೂರಪ್ಪ

ಅಸಲಿಗೆ 2018 ನವೆಂಬರ್‌ 3 ರಂದು ಸಿಸಿಬಿ ಪೊಲೀಸರು 1.5 ಕೆಜಿ ಕೊಕೇನ್ ಅನ್ನು ಸೀಜ್ ಮಾಡಿದ್ದರು. ಅಂದಿನ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ನೇತೃತ್ವದಲ್ಲಿ ಮೂವರ ಬಂಧನ ಆಗಿತ್ತು. ಈ ವೇಳೆ ಪ್ರತೀಕ್ ಶೆಟ್ಟಿ ಎಂಬಾತನನ್ನು ಬಂಧನ ಮಾಡಲಾಗಿತ್ತು.  ಹೀಗೆ ಬಂಧನ‌ವಾಗಿದ್ದ ಪ್ರತೀಕ್ ಶೆಟ್ಟಿಯ ಸ್ನೇಹಿತನೇ ಈ ಕಾರ್ತಿಕ್ ರಾಜ್.

ಕಾರ್ತಿಕ್ ರಾಜ್ ಹೆಸರು ಅಂದು ಡ್ರಗ್ಸ್‌ ಮಾಫಿಯಾ ಜೊತೆ ಥಳಕು ಹಾಕಿಕೊಂಡಿದ್ದರೂ ಸೂಕ್ತವಾದ ಸಾಕ್ಷ್ಯ ಗಳು ಸಿಕ್ಕಿರಲಿಲ್ಲ. ಹೀಗಾಗಿ ಆತನನ್ನು ಬಿಟ್ಟುಕಳಿಸಲಾಗಿತ್ತು. ಆದರೆ, ಪೊಲೀಸರು ಇಂದು ಈಗ ಹಳೆ ಪ್ರಕರಣ ಕೇಸ್ ಪೈಲ್ ಅನ್ನು ಮತ್ತೆ ಹೊರತೆಗೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
Published by: MAshok Kumar
First published: September 3, 2020, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading