ಏಪ್ರಿಲ್ ನಲ್ಲಿ ಕೊರೊನಾ ನಾಲ್ಕನೇ ಅಲೆ ಬರುತ್ತಾ? ಪ್ರಶ್ನೆಗೆ ಸಚಿವ K.Sudhakar ಹೇಳಿದ್ದು ಹೀಗೆ

ಏಪ್ರಿಲ್ ನಲ್ಲಿ ನಾಲ್ಕನೇ ಅಲೆ ಬರುತ್ತೆ  ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಆ ರೀತಿಯಲ್ಲಿ ಏನೂ ಇಲ್ಲ, ಅದನ್ನು ನಾವು ಗಮನಿಸುತ್ತಿದ್ದೇವೆ ಎಂದು ತಿಳಿಸಿದರು.

ಸಚಿವ ಸುಧಾಕರ್

ಸಚಿವ ಸುಧಾಕರ್

  • Share this:
ಇಂದಿನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಹೈದರಾಬಾದ್ ಬಯೋಲಾಜಿಕಲ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ‘ಕೊರ್ಬೆವ್ಯಾಕ್ಸ್’ ಲಸಿಕೆ (Corbevax vaccine) ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಇಂದು ಬೆಳಗ್ಗೆ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ (Vaccination Campaign) ಅಧಿಕೃತವಾಗಿ ಚಾಲನೆ ನೀಡಲಾಯ್ತು. ರಾಜ್ಯಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು ಚಿಣ್ಣರಿಗೆ ‘ಕೊರ್ಬಿವ್ಯಾಕ್ಸ್’ ಲಸಿಕೆ ನೀಡಲಾಗುತ್ತದೆ. ರಾಜಧಾನಿಯಲ್ಲಿ 6-7 ಲಕ್ಷ ಮಕ್ಕಳಿಗೆ (Children) ಕೊರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ. 2008, 2009, 2010 ರಲ್ಲಿ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.  ಎಲ್ಲಾ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಕೇಂದ್ರ ಆರಂಭಿಸಲಾಗಿದೆ.

ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದರು. ಸಣ್ಣ‌ಮಕ್ಕಳಿಗೆ ಬಹಳ ಬೇಗ ಲಸಿಕೆ ಬರಬೇಕು ಅಂತಾ ಬಹಳ ನಿರೀಕ್ಷೆ ಹಾಗೂ ಬೇಡಿಕೆ ಇತ್ತು ಎಂದರು.

12 ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ಯಾವಾಗ?

ಕೋರ್ಬಿವ್ಯಾಕ್ಸ್ ನ್ನು ಮಕ್ಕಳಿಗೆ ನೀಡಿ ಚಾಲನೆ ನೀಡಿದ್ದೇವೆ. 20 ಲಕ್ಷ ಮಕ್ಕಳು ಈ ವಯೋಮಿತಿಯಲ್ಲಿದ್ದಾರೆ. 180 ಕೋಟಿ ಲಸಿಕೆ ಈ ರಾಜ್ಯದಲ್ಲಿ ನೀಡಿದ್ದೇವೆ. ಒಂದು ವರ್ಷದಲ್ಲಿ ಲಸಿಕೆ ನೀಡಿರೋದು ಇದೇ ಮೊದಲು‌ ಮತ್ತು ಇದು ಇತಿಹಾಸ. 12 ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ನೀಡೋ ವಿಚಾರದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ:  ಇಂದಿನಿಂದ 12-14 ವರ್ಷದ ಮಕ್ಕಳಿಗೆ Covid Vaccine; ಈ ವಿಷಯಗಳು ನೆನಪಿರಲಿ

ಮುಂದಿನ ದಿನಗಳಲ್ಲಿ ಆ ಮಕ್ಕಳಿಗೂ ಲಸಿಕೆ ಬರಲಿದೆ. ಕೆಲವು ಕಡೆ ಕೊರೊನಾ ಪ್ರಕರಣಗಳ ಹೆಚ್ಚುತ್ತಿರುವ ಕುರಿತು ಸುಧಾಕರ್ ಪ್ರತಿಕ್ರಿಯಿಸಿದರು. ಎಲ್ಲಿ ಸಂಖ್ಯೆ ಏರಿಕೆ, ಕ್ರಮಗಳ ಬಗ್ಗೆ ಗಮನಿಸುತ್ತಿದ್ದೇವೆ. ಏಪ್ರಿಲ್ ನಲ್ಲಿ ನಾಲ್ಕನೇ ಅಲೆ ಬರುತ್ತೆ  ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಆ ರೀತಿಯಲ್ಲಿ ಏನೂ ಇಲ್ಲ, ಅದನ್ನು ನಾವು ಗಮನಿಸುತ್ತಿದ್ದೇವೆ ಎಂದು ತಿಳಿಸಿದರು.

ಕೊರೊನಾ ನಿಯಮಗಳ ಪಾಲನೆ ಇಲ್ಲ

ಕೊರೊನಾ ನಿಯಮಗಳನ್ನ ಯಾರೂ ಈಗ ಸರಿಯಾಗಿ ಫಾಲೋ ಮಾಡ್ತಿಲ್ಲ. ಕೊರೊನಾ ನಿಯಮಗಳನ್ನು ಫಾಲೋ ಮಾಡಿದ್ರೆ ನಾಲ್ಕನೇ ಅಲೆ ಎದುರಿಸಬಹುದು.ಮೂರನೇ ಅಲೆಯಲ್ಲಿ ಪರಿಣಾಮ ಆಗಲಿಲ್ಲ. ಅದೇ ರೀತಿಯಲ್ಲಿ ಮುಂದಿನ ಅಲೆಯಲ್ಲಿ ಯಾವುದೇ ದುಷ್ಪರಿಣಾಮ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ  ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಏನೂ ಕ್ರಮ ಕೈಗೊಳ್ಳಬೇಕೊ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಲಸಿಕೆ ಏಕೆ ಅಗತ್ಯ?
ಲಸಿಕೆ ಪಡೆಯುವುದರಿಂದ ಮಗುವಿಗೆ ಸೋಂಕು ತಗುಲುವುದನ್ನು ಮತ್ತು ಕರೋನವೈರಸ್ ಹರಡುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಯುನಿಸೆಫ್ ಪ್ರಕಾರ, ಕೋವಿಡ್ -19 ಲಸಿಕೆ ಪಡೆದ ಮಕ್ಕಳಲ್ಲಿ ಒಂದು ವೇಳೆ ಕೋವಿಡ್ -19 ಸೋಂಕು ಪತ್ತೆ ಆದರೂ ಅದು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯುತ್ತದೆ.

ಮಕ್ಕಳು ಕೂಡ ದೊಡ್ಡವರಂತೆ ಕೋವಿಡ್​ 19 ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೋವಿಡ್ 19 ಲಸಿಕೆಯನ್ನು ಪಡೆಯುವುದರಿಂದ ಮಗುವನ್ನು ಕೋವಿಡ್​​ ನಿಂದ ರಕ್ಷಿಸಬಹುದು. ಇದು ಮಕ್ಕಳಿಗೆ ಪ್ರತಿರಕ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯದ ಕರೋನವೈರಸ್ ನಿಂದ ಎದುರಾಗುವ ಅಪಾಯವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ದೊಡ್ಡವರಂತೆ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಾರಾ ಮಕ್ಕಳು
ಕೆಲವು ಮಕ್ಕಳು ಚುಚ್ಚುಮದ್ದನ್ನು ಪಡೆದಾಗ ಸೌಮ್ಯವಾದ ನೋವು ಮತ್ತು ಊತವನ್ನು ಅನುಭವಿಸಬಹುದು. ಸಾಮಾನ್ಯಕ್ಕಿಂತ ಹೆಚ್ಚು ದಣಿವಿನ ಅನುಭವವಾಗಬಹುದು ಎಂದು UNICEF ತಿಳಿಸಿದೆ. ಕೆಲವರಲ್ಲಿ ತಲೆನೋವು, ದೇಹದ ನೋವು, ಮತ್ತು ಜ್ವರ ಮತ್ತು ಶೀತ ಕೂಡ ಸಾಧ್ಯ. ಈ ಅಡ್ಡಪರಿಣಾಮಗಳು ಸಾಮಾನ್ಯವಾಗಿ ಒಂದು ದಿನ ಅಥವಾ ಎರಡು ದಿನಗಳಲ್ಲಿ ಸಂಪೂರ್ಣವಾಗಿ ಹೋಗುತ್ತದೆ.

ಇದನ್ನೂ ಓದಿ:  America v/s China: ಚೀನಾಕ್ಕೆ "ಹುಷಾರ್" ಎಂದಿದ್ದೇಕೆ ಅಮೆರಿಕಾ? 'ಡ್ರ್ಯಾಗನ್ ರಾಷ್ಟ್ರ'ದ ವಿರುದ್ಧ ತಿರುಗಿ ಬೀಳ್ತಾನಾ 'ದೊಡ್ಡಣ್ಣ'?

ಲಸಿಕೆ ಪಡೆಯುವ ಮುನ್ನ ಈ ಮುನ್ನೆಚ್ಚರಿಕೆ ಪಾಲಿಸಿ
ಖಾಲಿ ಹೊಟ್ಟೆಯಲ್ಲಿ ಲಸಿಕೆ ಪಡೆಯದಿರುವುದು ಒಳ್ಳೆಯದು.
ಲಸಿಕೆ ಪಡೆದ ಬಳಿಕ ವ್ಯಾಕ್ಸಿನೇಷನ್ ಸ್ಥಳದಲ್ಲಿ 30 ನಿಮಿಷಗಳ ಕಾಲ ಕಾಯಿರಿ.
ವ್ಯಾಕ್ಸಿನೇಷನ್ ಸಮಯದಲ್ಲಿ ಕೋವಿಡ್ -19 ನಡವಳಿಕೆಯನ್ನು ಅನುಸರಿಸಬೇಕು, ಉದಾಹರಣೆಗೆ ಕೈಗಳನ್ನು ಸ್ವಚ್ಛಗೊಳಿಸುವುದು, ಮುಖವಾಡವನ್ನು ಧರಿಸುವುದು ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಅವಶ್ಯ.
Published by:Mahmadrafik K
First published: