• Home
  • »
  • News
  • »
  • state
  • »
  • Karnataka Politics: ಜೆಡಿಎಸ್ ಹಾದಿ ಹಿಡಿಯುತ್ತಾ ಕಾಂಗ್ರೆಸ್? ಗೊಂದಲ ಹೆಚ್ಚುತ್ತಾ, ಕಡಿಮೆಯಾಗುತ್ತಾ?

Karnataka Politics: ಜೆಡಿಎಸ್ ಹಾದಿ ಹಿಡಿಯುತ್ತಾ ಕಾಂಗ್ರೆಸ್? ಗೊಂದಲ ಹೆಚ್ಚುತ್ತಾ, ಕಡಿಮೆಯಾಗುತ್ತಾ?

ಕಾಂಗ್ರೆಸ್ ಧ್ವಜ

ಕಾಂಗ್ರೆಸ್ ಧ್ವಜ

ಈ ನಡುವೆ ಚುನಾವಣಾ ತಂತ್ರಗಾರಿಕೆ ರಚನೆಯಲ್ಲಿ ಜೆಡಿಎಸ್ (JDS)​ ಪಕ್ಷವನ್ನು ಫಾಲೋ ಮಾಡುತ್ತಿದೆಯಾ ಎಂಬ ಚರ್ಚೆಗಳು ಶುರುವಾಗಿವೆ. ಆದ್ರೆ ಈ ತಂತ್ರಗಾರಿಕೆ ಪ್ರಯೋಗಿಸಿದ್ರೆ ಕೈ ಅಂಗಳದಲ್ಲಿಯ ಗೊಂದಲ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿವೆ.

  • News18 Kannada
  • Last Updated :
  • Karnataka, India
  • Share this:

ಬುಧವಾರವಷ್ಟೇ ಕಾಂಗ್ರೆಸ್​ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಸ್ವೀಕಾರ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ತವರು ರಾಜ್ಯ ಕರ್ನಾಟದಲ್ಲಿ ಚುನಾವಣೆ (Karnataka Election) ಗೆಲ್ಲುವ ಬಹುದೊಡ್ಡ ಸವಾಲು ಇದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಯಾವೆಲ್ಲ ರಾಜಕೀಯ ತಂತ್ರಗಳನ್ನು ಪ್ರಯೋಗಿಸ್ತಾರೆ ಎಂಬುದರ ಬಗ್ಗೆ ಕೈ (Congress) ಅಂಗಳದಲ್ಲಿ ಚರ್ಚೆಗಳು ನಡೆಯುತ್ತಿವೆ. ಇತ್ತ ವಿಧಾನಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಸಾಲು ಸಾಲು ಯಾತ್ರೆ, ಉತ್ಸವಗಳನ್ನು ಆಯೋಜನೆ ಮಾಡುತ್ತಿದೆ. ಈ ನಡುವೆ ಚುನಾವಣಾ ತಂತ್ರಗಾರಿಕೆ ರಚನೆಯಲ್ಲಿ ಜೆಡಿಎಸ್ (JDS)​ ಪಕ್ಷವನ್ನು ಫಾಲೋ ಮಾಡುತ್ತಿದೆಯಾ ಎಂಬ ಚರ್ಚೆಗಳು ಶುರುವಾಗಿವೆ. ಆದ್ರೆ ಈ ತಂತ್ರಗಾರಿಕೆ ಪ್ರಯೋಗಿಸಿದ್ರೆ ಕೈ ಅಂಗಳದಲ್ಲಿಯ ಗೊಂದಲ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿವೆ.


2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುವ ಪರಿಸ್ಥಿತಿ ಇದೆ ಎಂದು ರಾಜಕೀಯ ತಜ್ಞರು ವಿಮರ್ಶೆ ಮಾಡುತ್ತಿದ್ದಾರೆ. ಈ ಹಿನ್ನೆಲೆ 2023ರ ಚುನಾವಣೆ ಗೆಲ್ಲೋಕೆ ಕಾಂಗ್ರೆಸ್ ಭರ್ಜರಿ ರಣತಂತ್ರ ರಚನೆ ಮಾಡುತ್ತಿದೆ.


ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ಚರ್ಚೆ


ಚುನಾವಣೆಗೆ ಇನ್ನೂ 6 ತಿಂಗಳು ಇದ್ದಂತೆಯೇ ಟಿಕೆಟ್ ಘೋಷಣೆ ಮಾಡುವ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳ ವರದಿಯೊಂದನ್ನು ನೀಡಿದ್ದಾರಂತೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ 100 ರಿಂದ 150 ಟಿಕೆಟ್ ಅನೌನ್ಸ್​ ಮಾಡುವ ಕುರಿತು ಚರ್ಚೆಗಳು ನಡೆದಿವೆಯಂತೆ. ದೆಹಲಿಯ ಕೆ.ಸಿ.ವೇಣುಗೋಪಾಲ್‌ ಮನೆಯಲ್ಲಿ ಈ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ತಿಳಿದು ಬಂದಿದೆ.


is congress plan to follow jds election strategy mrq
ಕಾಂಗ್ರೆಸ್


ಈಗ ಸುನೀಲ್ ಕನಗೂಲು ರೆಡಿ ಮಾಡಿರುವ ಲಿಸ್ಟ್​ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.


ಟಿಕೆಟ್ ಘೋಷಣೆ ಯಾಕೆ?


ಈಗಲೇ 100-150 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ರೆ ಅಭ್ಯರ್ಥಿಗಳಿಗೆ ಚುನಾವಣೆ ಪ್ರಚಾರ ಮಾಡಲು ಸಮಯ ಸಿಗುತ್ತದೆ. ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಬಂಡಾಯ ಏಳುವವರು ಮೊದಲೇ ಎದ್ದರೆ ಸಮಸ್ಯೆ ಇರಲ್ಲ. ಎಲ್ಲರನ್ನೂ ಒಗ್ಗೂಡಿಸಿ ತಂತ್ರಗಾರಿಕೆ ಮಾಡಲು ಅನುಕೂಲವಾಗಲಿದೆ. ಪಕ್ಷ ಸಂಘಟನೆ, ಗೆಲುವಿನ ತಂತ್ರಗಾರಿಕೆ ಮಾಡಲು ಇದು ಸಹಕಾರಿಯಾಗಲಿದೆ ಎಂಬುವುದು ಕಾಂಗ್ರೆಸ್ ಲೆಕ್ಕಾಚಾರ ಆಗಿದೆ.


ಡಿಕೆಶಿ-ಸಿದ್ದು ಪ್ರತ್ಯೇಕ ಪ್ರವಾಸಕ್ಕೆ ಒಪ್ಪಿಗೆ


ರಾಜ್ಯ ಕಾಂಗ್ರೆಸ್ ನಾಯಕರ ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪ್ರವಾಸಕ್ಕೆ ಹೋಗಲು ಅನುಮತಿ ಸಿಕ್ಕಿದೆ. ಪ್ರತ್ಯೇಕ ಪ್ರವಾಸ ಬೇಡ ಎಂದು ಕೆಲವು ನಾಯಕರು ಸಲಹೆ ನೀಡಿದ್ದರು. ನಿನ್ನೆ ಖರ್ಗೆ, ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ತಲಾ ಇಬ್ಬರು ನಾಯಕರು 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸೂಚನೆ ಬಂದಿದೆ.


ಇದನ್ನೂ ಓದಿ:  Praveen Nettar: ಪ್ರವೀಣ್ ನೆಟ್ಟಾರು ಕೇಸ್​ನಲ್ಲಿ ಅವರಿಬ್ಬರ ಕೈವಾಡ ರಿವೀಲ್?  PFI ಮುಖಂಡರು ಅಲ್ಲಿಗೆ ಹೋಗಿದ್ದು ಹತ್ಯೆಗಾ?


ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​


ಜೆಡಿಎಸ್​ ನಾಯಕರು, ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.


Congress and JDS leaders lash out against the BJP government
ಕಾಂಗ್ರೆಸ್, ಜೆಡಿಎಸ್​, ಬಿಜೆಪಿ


ಮೈಸೂರು ಜಿಲ್ಲಾ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ


* ಚಾಮುಂಡೇಶ್ವರಿ – ಜಿ. ಟಿ. ದೇವೇಗೌಡ


* ಹುಣಸೂರು – ಜಿ. ಟಿ. ಹರೀಶ್ ಗೌಡ


* ಕೆ. ಆರ್. ನಗರ – ಸಾ. ರಾ. ಮಹೇಶ್


* ಎಚ್. ಡಿ. ಕೋಟೆ – ಜಯಪ್ರಕಾಶ್


* ಪಿರಿಯಾಪಟ್ಟಣ – ಕೆ. ಮಹದೇವ್


* ಟಿ. ನರಸೀಪುರ – ಅಶ್ವಿನ್


ಇದನ್ನೂ ಓದಿ:  Crime News: ಪತ್ನಿಯನ್ನ ಕೊಂದು, ಬೆಡ್​ಶೀಟ್​​ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ


2023ಕ್ಕೆ ಮಿಷನ್​ 123


2023ಕ್ಕೆ ಮಿಷನ್​ 123 ಶುರು ಮಾಡಿರುವ ಕುಮಾರಸ್ವಾಮಿ ಈಗ 126 ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಇದರಲ್ಲಿ ನಿಖಿಲ್​ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡ ಪುತ್ರ ಹರೀಶ್​​ಗೂ ಟಿಕೆಟ್​ ಖಚಿತವಾಗಿದೆ .

Published by:Mahmadrafik K
First published: