• Home
  • »
  • News
  • »
  • state
  • »
  • Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ

Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ

ಎ ನಾರಾಯಣಸ್ವಾಮಿ

ಎ ನಾರಾಯಣಸ್ವಾಮಿ

ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರಿಸಲು ಅವರೇನು ಸ್ವತಂತ್ರ ಹೋರಾಟಗಾರರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ನಾರಾಯಣ ಸ್ವಾಮಿ, ಇವರೇನು, ಕಾಂಗ್ರೆಸ್ ನವರು ಸ್ವತಂತ್ರ್ಯ ಹೋರಾಟಗಾರರೇ? ಗುಂಡಿಗೆ ಎದೆ ಕೊಟ್ಟಿದ್ದಾರೆಯೇ?

  • Share this:

ಚಿತ್ರದುರ್ಗ: ಕಾಂಗ್ರೆಸ್ (Congress) ಪಕ್ಷ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಕಾಂಗ್ರೆಸ್ ನವರು ಸ್ವತಂತ್ರ್ಯ ಹೋರಾಟಗಾರರೇ? ಗುಂಡಿಗೆ ಎದೆ ಕೊಟ್ಟಿದ್ದಾರೆಯೇ? ಯಾರ್ಯಾರು ಏನೇನು ಮಾಡಿದ್ದರು ಎಂಬ ದಾಖಲೆಗಳಿವೆ. ಕಾಂಗ್ರೆಸ್ RSS ಸಿದ್ಧಾಂತವನ್ನು ವಿರೋಧಿಸುತ್ತಿದೆ. ಬಿಜೆಪಿಗೆ (BJP) ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿಯಿದೆ ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ (Union Minister A Narayan Swamy) ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಇತ್ತೀಚಿನ ಸಭೆಗಳಲ್ಲಿ ಮಾತನಾಡುತ್ತಿದ್ದಾರೆ. ಹಿಂದುಳಿದ ವರ್ಗದ ನಾಯಕ ನಾನೇ  ಎಂದು ಹೇಳಿಕೊಳ್ತಿದ್ದಾರೆ. ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪಗೆ (Former Miniser KS Eshwarappa) ಸವಾಲು ಹಾಕಿದ್ದಾರೆ. ತಾಖತ್ ಇದ್ದರೆ ಕುರುಬ ಸಮುದಾಯವನ್ನು (Kuruba Community) ಎಸ್ ಟಿಗೆ ಸೇರಿಸಲು ಸವಾಲು ಹಾಕಿದ್ದಾರೆ. ಕಾಗಿನೆಲೆ ಸ್ವಾಮೀಜಿಯನ್ನ (Kaginele Swamiji) ಒಳಗೊಂಡಂತೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರತಿಭಟನೆ, ಕಾಲ್ನಡಿಗೆ ಮಾಡಿದ್ರು. ಆದರೆ ಈಶ್ವರಪ್ಪಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಆ ಮೂಲಕ ಹೋರಾಟ ನಡೆಸಿದ್ದ ಕಾಗಿನೆಲೆ ಶ್ರೀಗಳಿಗೆ ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ಹೊರ ಹಾಕಿದರು.


ಮೀಸಲಾತಿ ಹೋರಾಟದ ಸಭೆಯಲ್ಲಿ ಭಾಗವಹಿಸಬೇಕಿತ್ತು. ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು. ಅವರನ್ನ ಬೇಡ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಮಡಿವಾಳ ಸಮಾಜ, ಕುರುಬರ ಸಮಾವೇಶಕ್ಕೆ ಹೋಗ್ತಾರೆ. ನಿನ್ನೆ ಹೊಸದುರ್ಗದ ಭಗಿರಥ. ಮಠದಲ್ಲಿ ನಡೆದ ಭಗೀರಥ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಹಿಂದುಳಿದವರಿಗೆ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುತ್ತಾರೆ.


ಇದನ್ನೂ ಓದಿ:  C T Ravi: ‘ಕಾಂಗ್ರೆಸ್​ನವರು ಚಡ್ಡಿ ಸುಟ್ಕೊಂಡೇ ಇರಲಿ, ನಮ್ಮ ಹಳೇ ಚಡ್ಡಿಗಳು ಇವೆ ಕಳಿಸಿ ಕೊಡುತ್ತೇವೆ, ಸುಟ್ಕಂಡ್ ಇರಿ’


ಯಾರು ಏನು ಮಾಡಿದ್ದಾರೆ ಎಂಬ ದಾಖಲೆಗಳಿವೆ


ಈ ದೇಶದಲ್ಲಿ  ಮೊಟ್ಟ ಮೊದಲ ಬಾರಿಗೆ, ಹಿಂದುಳಿದ ವರ್ಗಗಳ ಶಾಶ್ವಯ ಆಯೋಗ ರಚಿಸಿದ ಹೆಗ್ಗಳಿಕೆ ಬಿಜೆಪಿಗೆ ಇದೆ. ಆದರೆ ಸಮಾಜದ ಏಳಿಗೆಗೆ ಏನೂ ಮಾಡ್ತಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರಿಸಲು ಅವರೇನು ಸ್ವತಂತ್ರ ಹೋರಾಟಗಾರರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ನಾರಾಯಣ ಸ್ವಾಮಿ, ಇವರೇನು, ಕಾಂಗ್ರೆಸ್ ನವರು ಸ್ವತಂತ್ರ್ಯ ಹೋರಾಟಗಾರರೇ? ಗುಂಡಿಗೆ ಎದೆ ಕೊಟ್ಟಿದ್ದಾರೆಯೇ? ಯಾರ್ಯಾರು ಏನೇನು ಮಾಡಿದ್ದರು ಎಂಬ ದಾಖಲೆಗಳಿವೆ.


ಹೆಡ್ಗೆವಾರ್, ಆರ್ ಎಸ್ ಎಸ್ ಸಿದ್ದಾಂತವನ್ನ ಯಾವ ಸಾಹಿತ್ಯದಲ್ಲೂ ಬರೆದಿಲ್ಲ. ಈ ದೇಶದ ಸ್ವಾಸ್ಥ್ಯ ಕೆಡಬಾರದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ ಎಂದಿದ್ದಾರೆ.


ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯೆ


ಇನ್ನೂ ಈಶ್ವರ, ಶಿವನ ದೇಗುಲಗಳನ್ನು ಮಸೀದಿಗಳಲ್ಲಿ ಹುಡುಕುವುದು ಸಂಸ್ಕಾರ ಅಲ್ಲ ಎಂದು ಹೇಳಿದ್ದಾರೆ. ಹಿಂದೂ ಸಂಘಟನೆಗಳಿಂದಲೇ ಮಸೀದಿಗಳಲ್ಲಿ ಮಂದಿರ ಹುಡುಕುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇಲ್ಲ ಎಂದು ಹೇಳಲ್ಲ. ಆದರೇ ಇತಿಹಾಸ ಮೆಲುಕು ಹಾಕುತ್ತಿದ್ದಾರೆ.


ಇದನ್ನೂ ಓದಿ:  BJP Leader ಅನಂತರಾಜು ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್, ರೇಖಾ-ಸುಮಾ ಫೈಟ್, ಪೊಲೀಸರ ಕೈಗೆ ಡೆತ್ ನೋಟ್


ಸ್ವತಂತ್ರದ ಸಮಯದಲ್ಲಿ ಎರಡೂ ದೇಶಗಳು ವಿಭಜನೆ ಆದಾಗ ಅತ್ಯಾಖಂಡವಾಯ್ತು ಅದನ್ನ ಮೆಲುಕು ಹಾಕುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನು ಸಂವಿಧಾನ ವಿರೋಧಿಗಳು ರಾಷ್ಟ್ರ ದ್ರೋಹಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅಂಬೇಡ್ಕರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಒಂದು ನಿಮಿಷವೂ ಕನಿಕರ ಇಲ್ಲದ ಇವರು ರಾಷ್ಟ್ರ ದ್ರೋಹಿಗಳಲ್ಲವೋ, ಸಿದ್ಧರಾಮಯ್ಯ ಆಡಳಿತದಲ್ಲಿ ಟೂರಿಸಂ ನೆಪದಲ್ಲಿ ಮಕ್ಕಳ ಇಬ್ಭಾಗ ಆದಾಗ ರಾಜ್ಯದಲ್ಲಿ ಅಶಾಂತಿ ಸೃಷ್ಠಿ ಎಂದು ಅನ್ನಿಸಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

Published by:Mahmadrafik K
First published: