ಬೆಂಗಳೂರು: ರಾಜಧಾನಿಯಲ್ಲಿ ಚುನಾವಣಾ ನೀತಿ ಸಂಹಿತೆ (Election Code Of Conduct) ಉಲ್ಲಂಘಿಸಿ ರಾತ್ರೋ ರಾತ್ರಿ ಬಸ್ ನಿಲ್ದಾಣ (Bus Stand inauguration) ಉದ್ಘಾಟನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ (BJP MLA M Krishnappa) ವಿರುದ್ಧ ಆರೋಪ ಕೇಳಿ ಬರ್ತಿದೆ. ಎಂ.ಕೃಷ್ಣಪ್ಪ ವಿರುದ್ಧ ಚುನಾವಣಾ ಆಯೋಗ (Election Commission) ಹಾಗೂ ಜಿಲ್ಲಾಧಿಕಾರಿಗಳಿಗೆ ಸಿಂಗಸಂದ್ರ ವಾರ್ಡ್‌ನ ಬಾಬುರೆಡ್ಡಿ ದೂರು ನೀಡಿದ್ದಾರೆ. ನೀತಿ ಸಂಹಿತೆ ಅನ್ವಯ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಕಾಮಗಾರಿ ಉದ್ಘಾಟಿಸುವಂತಿಲ್ಲ. ಆದರೆ ಕೃಷ್ಣಪ್ಪ ರಾತ್ರೋರಾತ್ರಿ ಬಸ್ ನಿಲ್ದಾಣ ನಿರ್ಮಿಸಿ, ಉದ್ಘಾಟಿಸಿದ್ದಾರೆ. ಆದ್ದರಿಂದ ಚುನಾವಣಾ ಆಯೋಗವು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಚಿವ ಮುನಿರತ್ನ ವಿರುದ್ಧವೂ ದೂರು ದಾಖಲು
ಸಚಿವ ಮುನಿರತ್ನ (Munirathna) ಭಾಷಣ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ. ಆರ್ಆರ್ ನಗರ (RR Nagar) ಕ್ಷೇತ್ರದ ಖಾತಾ ನಗರದಲ್ಲಿ ಭಾಷಣದ ವೇಳೆ ಸಚಿವ ಮುನಿರತ್ನ ಹೊಡಿಬಡಿ ಮಾತನಾಡಿದ್ದಾರೆ. ಇಲ್ಲಿಗೆ ಯಾರೇ ಬಂದರೂ ಹೊಡೆದು ಕಳುಹಿಸಿ, ಹೆಂಗೆ ಹೊಡಿಬೇಕು ಅಂದರೆ ಅವರು ತಿರುಗಿ ನೋಡಬಾರದು ಹಂಗೆ ಹೊಡೆದು ಕಳುಹಿಸಿ ಅಂತಾ ಪೊಲೀಸರ (Police) ಮುಂದೆಯೇ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ: Shivamogga: ನಾಲ್ಕೂವರೆ ಕೋಟಿ ಮೌಲ್ಯದ ಸೀರೆ, 1 ಕೋಟಿ 40 ಲಕ್ಷ ನಗದು ವಶಕ್ಕೆ
ಈ ಬಗ್ಗೆ ಆರ್.ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (Kusuma) ಪೊಲೀಸರಿಗೆ ದೂರು ನೀಡಿದ್ದು, ಚುನಾವಣಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ.
ರೆಡ್ಡಿ ಅಬ್ಬರದ ಪ್ರಚಾರ
ಕೊಪ್ಪಳದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಗಂಗಾವತಿ, ಇಂದರಗಿ, ಕೂಕನಪಳ್ಳಿ, ಒನಬಳ್ಳಾರಿಯಲ್ಲಿ KRPP ಪಕ್ಷದಿಂದ ಪ್ರಚಾರ ಮಾಡ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ರೆಡ್ಡಿ ಜನರು ಭವ್ಯ ಸ್ವಾಗತ ಕೋರುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ