ಬೆಂಗಳೂರು: ದಂಡ ವಸೂಲಿ (Fine Collecting) ಮಾಡುವ ವೇಳೆ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಮಾನವೀಯತೆ ಮರೆತ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಹೌದು, ಈ ಸಂಬಂಧ ರಾಕೇಶ್ ಎಂಬವರು ಟ್ವಿಟರ್ ಮೂಲಕ ಬೆಂಗಳೂರು ಪೊಲೀಸರಿಗೆ (Bengaluru Police) ದೂರು ನೀಡಿದ್ದಾರೆ. ಟ್ವೀಟ್ನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್, ಎಸಿಪಿ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ. ಜಯನಗರ ಸಂಚಾರಿ ಪೊಲೀಸರ ಮೇಲೆ ಇಂತಹದೊಂದು ಗಂಭೀರ ಆರೋಪ (Allegation) ಕೇಳಿ ಬಂದಿದೆ. ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಗೆ (Couple) ಕಿರುಕುಳ ನೀಡಲಾಗಿದೆ ಎಂದು ರಾಕೇಶ್ ಆರೋಪ ಮಾಡಿದ್ದಾರೆ.
ರಾಕೇಶ್ ಟ್ವೀಟ್
ಜಯನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯು 02/02/23ರಂದು ನನ್ನ ವೃದ್ಧ ತಂದೆ ಹಾಗೂ ಆಸ್ಪತ್ರೆಗೆ ತೆರಳುತ್ತಿದ್ದ ತಾಯಿಯನ್ನು ತಡೆದು ರಸ್ತೆಯಲ್ಲಿಯೇ 1 ಗಂಟೆಗಳ ಕಾಲ ನಿಲ್ಲಿಸಿ. ಏಕವಚನದಲ್ಲಿ ಮಾತನಾಡಿ ಅಮಾನವೀಯವಾಗಿ ವರ್ತಿಸಿ ದುರ್ನಡತೆ ತೋರಿಸಿರುತ್ತಾರೆ.
03/02/22 ರಂದು ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಅವರ ಗಮನಕ್ಕೂ ಸಹ ತಂದಿರುತ್ತೇನೆ. 3 ಜನ ಪೋಲಿಸರು ನಮ್ಮ ಕುಟುಂಬದವರ ಬಳಿ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಪೊಲೀಸ್ ರಂತೆ ವರ್ತಿಸಿರುವುದು ನಾಚಿಕೆಗೇಡಿನ ಸಂಗತಿ.
ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ 3 ಜನ ಸಿಬ್ಬಂದಿಗಳ ಮೇಲೆ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ನ್ಯಾಯ ಕೊಡಿಸುಬೇಕಾಗಿ ಕೇಳಿಕೋಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿ
ಜೆಪಿ ನಗರದ ನಿವಾಸಿಗಳಾಗಿದ್ದ ಮಂಗಳ ಹಾಗೂ ಮಲ್ಲೇಶ್ ಅನರೋಗ್ಯ ಹಿನ್ನೆಲೆ ದ್ವಿಚಕ್ರ ವಾಹನದ ಮೇಲೆ ಆಸ್ಪತ್ರೆಗೆ ತೆರಳುತ್ತಿದ್ದರು. 45 ವರ್ಷದ ಮಂಗಳ ಅವರು ಸಕ್ಕರೆ ಕಾಯಿಲೆ ಮತ್ತು ಬಿಪಿಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಂಗಂ ಸರ್ಕಲ್ನಲ್ಲಿ ಬೈಕ್ ತಡೆದ ಪೊಲೀಸರು 5 ಸಾವಿರ ದಂಡ ಪಾವತಿಸುವಂತೆ ಒತ್ತಾಯ ಮಾಡಿದ್ದಾರೆ.
ಆದರೆ ದಂಪತಿಯ ಬಳಿ 2 ಸಾವಿರ ಮಾತ್ರ ಹಣವಿದ್ದು ಅಷ್ಟು ಮಾತ್ರ ಕಟ್ಟೋದಾಗಿ ಹೇಳಿದ್ದಾರೆ. ಸಂಚಾರಿ ಪೊಲೀಸ್ ಅಧಿಕಾರಿ ಶಿವಸ್ವಾಮಿ ಎಂಬಾತ 5 ಸಾವಿರ ಕಟ್ಟಲೇಬೇಕೇಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕ್ರಮ ಜರುಗಿಸುವಂತೆ ಮನವಿ
ನಿಂದನೆಯಿಂದ ವಿಚಲಿತರಾದ ಮಲ್ಲೇಶ್ 2 ಕಿಲೋಮೀಟರ್ ನಡೆದು ಮನೆಗೆ ತೆರಳಿ ಹಣ ತಂದು ದಂಡ ಕಟ್ಟಿದ್ದಾರೆ. ಈ ವೇಳೆ ರಸ್ತೆಯಲ್ಲೇ ಮಂಗಳ ಕುಳಿತಿದ್ದರು. ಮಾನವೀಯತೆ ಮರೆತ ಸಂಚಾರಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ರಾಕೇಶ್ ದೂರು ಸಲ್ಲಿಸಿದ್ದಾರೆ.
50% ಡಿಸ್ಕೌಂಟ್ ದಂಡ ಕಟ್ಟಲು ಬಂದ ಬೆಂಗಳೂರು ಸವಾರರಿಗೆ ಬಿಗ್ ಶಾಕ್!
ಬೆಂಗಳೂರಿನಲ್ಲಿ 50ರಷ್ಟು ರಿಯಾಯತಿ ದಂಡ ಕಟ್ಟಲು ಬಂದವರಿಗೆ ಶಾಕ್ ಆಗಿದೆ ಕಾರಣ ಫೇಕ್ ಪ್ಲೇಟ್ ಧರಿಸಿ ಓಡಾಡುವ ಸಂಖ್ಯೆ ಹೆಚ್ಚಾಗಿದ್ದು ಪೊಲೀಸರಿಗೆ ತಲೆನೋವಾಗಿದೆ.
ಇದನ್ನೂ ಓದಿ: MP Ramesh Jigajinagi: ತಮ್ಮದೇ ಪಕ್ಷದ ನಾಯಕರಿಗೆ ಎಚ್ಚರಿಕೆ ಕೊಟ್ಟ ಬಿಜೆಪಿ ಸಂಸದ ಜಿಗಜಿಣಗಿ
ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ. ಹೌದು, ರಾಜ್ಯ ಸರ್ಕಾರ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿ ಮಾಡಲು ಫೆ.11ರ ವರೆಗೂ ಡಿಸ್ಕೌಂಟ್ ನೀಡಿ ಅವಕಾಶ ನೀಡಿದೆ. ಇದರಿಂದ ಹಲವರು ತಮ್ಮ ಬೈಕ್ ಮೇಲಿರುವ ದಂಡ ಪಾವತಿ ಮಾಡಲು ಮುಂದಾಗುತ್ತಿದ್ದು, ಆದರೆ ಹಲವು ಬೈಕ್ ಸವಾರರಿಗೆ ನಕಲಿ ನಂಬರ್ ಪ್ಲೇಟ್ ಹಾವಳಿ ಶಾಕ್ ನೀಡಿದೆ.
ನಾವೇಕೆ ದಂಡ ಕಟ್ಟಬೇಕು?
ಈ ಕುರಿತಂತೆ ಪೊಲೀಸರಿಗೆ ದೂರು ನೀಡಿರುವ ಹಲವು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದು, ಬೇರೆ ಯಾರೋ ಮಾಡಿದ ತಪ್ಪಿಗೆ ನಾವು ಏಕೆ ದಂಡ ಕಟ್ಟಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ