HOME » NEWS » State » IS BELAGAVI AND DHARAWAD STARTED FIGHTING OVER SHARING MALAPRABHA WATER CSB GNR

ಮಲಪ್ರಭಾ ನದಿ ನೀರು ಹಂಚಿಕೆ ವಿಚಾರ: ಬೆಳಗಾವಿ ಮತ್ತು ಧಾರವಾಡ ನಡುವೆ ಸಂಘರ್ಷಕ್ಕೆ ಕಾರಣವಾಯಿತೇ?

ಹೌದು, ಮಲಪ್ರಭಾ ಜಲಾಶಯದಿಂದ ಧಾರವಾಡ ಜಿಲ್ಲೆಯ 390 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹೊಸ ಯೋಜನೆ ಇದಾಗಿದೆ. ಹೀಗಾಗಿ ಈ ವಿಚಾರವೇ ಧಾರವಾಡ ಮತ್ತು ಬೆಳಗಾವಿ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ.

news18-kannada
Updated:February 29, 2020, 5:45 PM IST
ಮಲಪ್ರಭಾ ನದಿ ನೀರು ಹಂಚಿಕೆ ವಿಚಾರ: ಬೆಳಗಾವಿ ಮತ್ತು ಧಾರವಾಡ ನಡುವೆ ಸಂಘರ್ಷಕ್ಕೆ ಕಾರಣವಾಯಿತೇ?
ಮಹದಾಯಿ
  • Share this:
ಬೆಳಗಾವಿ(ಫೆ.29): ಬರಪೀಡಿತ ಉತ್ತರ ಕರ್ನಾಟಕದ ಕೆಲ ಭಾಗಗಳಿಗೆ ಮಹದಾಯಿ ನೀರು ಹರಿಸಬೇಕೆಂದು ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ. ಕೊನೆಗೂ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಕರ್ನಾಟಕ ಮಹದಾಯಿ ನದಿಯಿಂದ 13.05 ಟಿಎಂಸಿ ನೀರು ಬಳಸಬಹುದಾಗಿದೆ.

ಇನ್ನು, ಸದ್ಯ ಉತ್ತರ ಕರ್ನಾಟಕದ ಜನ ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಿದ ಕಾರಣ ಭಾರೀ ಸಂತಸದಲ್ಲಿದ್ದಾರೆ. ಈ ಭಾಗದ ರೈತರು ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಭಿನಂಧಿಸಿದ್ದಾರೆ. ಅನೇಕ ಕಡೆಗಳಲ್ಲಿ ಸಿಹಿ ಹಂಚಿ ಸಂಭ್ರಮಸಿದ್ದಾರೆ. ಈ ಸಂತಸದ ಸುದ್ದಿ ಮಧ್ಯೆ ಮುಂದಿನ ದಿನಗಳಲ್ಲಿ ಮಲಪ್ರಭಾ ನದಿ ನೀರಿಗಾಗಿ ಬೆಳಗಾವಿ ಮತ್ತು ಧಾರವಾಡದ ನಡುವೆ ಸಂಘರ್ಷ  ಏರ್ಪಡುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ಹೌದು, ಮಲಪ್ರಭಾ ಜಲಾಶಯದಿಂದ ಧಾರವಾಡ ಜಿಲ್ಲೆಯ 390 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹೊಸ ಯೋಜನೆ ಇದಾಗಿದೆ. ಹೀಗಾಗಿ ಈ ವಿಚಾರವೇ ಧಾರವಾಡ ಮತ್ತು ಬೆಳಗಾವಿ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ.

ಎರಡು ಜಿಲ್ಲೆಗಳಿಗೂ ಅಂದಾಜು 2 ಟಿಎಂಸಿ ನೀರು ಬೇಕಾಗಬಹುದು. ಆದರೆ, ಮಲಪ್ರಭಾ ಡ್ಯಾಂ ನೀರು ಮಾತ್ರ ಅಚ್ಚುಕಟ್ಟು ಪ್ರದೇಶ ಜನರಿಗೇ ಸಾಕಗುತ್ತಿಲ್ಲ. ಜತಗೆ ಕಳಸಾ, ಬಂಡೂರಿ ಯೋಜನೆಯ ನೀರು ಸಹ ಬಂದಿಲ್ಲ.

ಈಗಾಗಲೇ ಧಾರವಾಡ ಜಿಲ್ಲೆಯ 390 ಗ್ರಾಮಗಳ ಕುಡಿಯುವ ನೀರಿಯ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಬೆಳಗಾವಿ ಕನ್ನಡ ಪರ ಹೋರಾಟಗಾರ ಅಶೋಕ್​​ ಚಂದರಗಿ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಕೆ ಮಾಡಿದ್ದಾರೆ. ಮಲಪ್ರಭಾ ಡ್ಯಾಂ ನಿರ್ಮಾಣ ಮೂಲ ಉದ್ದೇಶವೇ ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿ ಬೈಲಹೊಂಗಲ ಪ್ರದೇಶಗಳಿಗೆ ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆ ಮಾಡುವುದು. ಹಾಗೆಯೇ ಬಾಲಕೋಟೆ ಜಿಲ್ಲೆಯ ಬದಾಮಿ, ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಪ್ರದೇಶಕ್ಕೂ ಕೃಷಿಗೆ ನೀರು ಹಂಚಿಕೆ ಮಾಡುವುದು. ಈ ಮಧ್ಯೆ ಧಾರವಾಡದ ಜಿಲ್ಲೆಯ ಹೊಸ ಯೋಜನೆಯಿಂದ ಈ ಭಾಗದ ರೈತರಿಗೆ ಅನ್ಯಾವಾಗಲಿದೆ ಎಂದು ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರ; ಕೊನೆಗೂ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಇನ್ನು, ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಯೋಜನೆ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಪಡೆದುಕೊಳ್ಳುತ್ತೇನೆ. ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ.ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನಿರ್ಮಾಣವಾಗಿರುವ ಮಲಪ್ರಭಾ ಡ್ಯಾಂ 37.73 ಟಿಎಂಸಿ ನೀರು ಸಾಮರ್ಥ್ಯವನ್ನು ಹೊಂದಿದೆ. 1972ರಲ್ಲಿ ಡ್ಯಾಂ ನಿರ್ಮಾಣವಾಗಿದ್ದು, ಈವರೆಗೂ ಕೇವಲ 6 ಸಲ ಮಾತ್ರ ಭರ್ತಿಯಾಗಿದೆ. ಪ್ರತಿ ವರ್ಷ 18ರಿಂದ 20 ಟಿಎಂಸಿ ನೀರು ಡ್ಯಾಂ ನಲ್ಲಿ ಶೇಕರಣೆ ಆಗುತ್ತದೆ. ಈ ನೀರನ್ನು ಮಲಪ್ರಭಾ ಎಡದಂಡೆ ಕಾಲುವೆ ಮೂಲಕ  ಸವದತ್ತಿ ರಾಮದುರ್ಗ ಹಾಗೂ ಬದಾಮಿ ಹರಿಸಲಾಗುತ್ತದೆ. ಜತೆಗೆ ಬಲದಂಡೆ  ಕಾಲುವೆ ಮೂಲಕ ನರಗುಂದ, ನವಲಗುಂದ ಹಾಗೂ ರೋಣ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.

ಇನ್ನು, ಹುಬ್ಬಳ್ಳಿ ನಗರಕ್ಕೆ 120 ಎಂಎಲ್ ಡಿ ನೀರು ಪ್ರತಿದಿನ ಕುಡಿಯುವ ನೀರಿನ ಸಂಬಂಧ ಪೂರೈಸಲಾಗುತ್ತದೆ. ಧಾರವಾಡಕ್ಕೆ ಕುಡಿಯುವ ನೀರಿಗಾಗಿ ಪ್ರತಿನಿತ್ಯ 73 ಎಂಎಲ್ ಡಿ ನೀರು ಪೂರೈಸಲಾಗುತ್ತಿದೆ. ಜತೆಗೆ ಗದಗ ನಗರಕ್ಕೆ ಕುಡಿಯುವ ನೀರಿನ ಸಂಬಂಧ ಪ್ರತಿ ವರ್ಷ 0.6 ಟಿಎಂಸಿ ನೀರು ಮಲಪ್ರಭೆಯಿಂದ ಪೂರೈಕೆಯಾಗುತ್ತಿದೆ. ಬೇಸಿಗೆ ಕಾಲದ ಸಂದರ್ಭದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿಯೇ ನೀರಿನ ಕೊರತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಮೊತ್ತೊಂದು ಯೋಜನೆ ಬಗ್ಗೆ ಬೆಳಗಾವಿ ಭಾಗದ ರೈತರು ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ಕುರಿತಂತೆ ಮಾತಾಡಿದ ಸಚಿವ ಜಗದೀಶ ಶೆಟ್ಟರ್, ಮಲಪ್ರಭಾ ನದಿಯಿಂದ ಈಗಾಗಲೇ ಅನೇಕ ಕಡೆಗಳಿಗೆ ನೀರು ಪೂರೈಕೆಯಾಗುತ್ತಿದೆ. ಅಂದಾಜು ನೂರಾರು  ಗ್ರಾಮಗಳಿಗೆ ಇದರ ಉಪಯೋಗ ಸಿಗಲಿದೆ. ಕುಡಿಯವ ನೀರಿ ಸಂಬಂಧ ನಮ್ಮ ನಮ್ಮಲ್ಲೇ  ವ್ಯತ್ಯಾಸ ಬೇಡ. ಕಳಸಾ ಬಂಡೂರಿ ನೀರು ಬಂದರೆ ಬೆಳಗಾವಿ, ಧಾರವಾಡ  ಉಪಯೋಗವಾಗಲಿದೆ. ವಿವಾದ ಸೃಷ್ಟಿಸುವುದರಿಂದ ನಾವೇ ಹಾಳಾಗುತ್ತೇವೆ ಬೇರೆ ಎನು ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕಳಸಾ ಬಂಡೂರಿ ಯೋಜನೆಯಿಂದ ರಾಜ್ಯ ಸರ್ಕಾರ 7.56 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು. ಆದರೆ, ರಾಜ್ಯಕ್ಕೆ ಕಳಸಾದಿಂದ ಸಿಕಿದ್ದು 1.72 ಟಿಎಂಸಿ ನೀರು. ಇನ್ನು ಬಂಡೂರಿಯಿಂದ 2.18 ಟಿಎಂಸಿ ನೀರು. ಇದು 18 ವರ್ಷಗಳ ಹಿಂದೆ ಅಂದಿನ ಜನಸಂಖ್ಯೆ ಹಾಗೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಹಿನ್ನೆಲೆಯ್ಲಲಿ ರಾಜ್ಯ ಸರ್ಕಾರ ಬೇಡಿಕೆಯಾಗಿದೆ. ಹುಬ್ಬಳಿ ಹಾಗೂ ಧಾರವಾಡಕ್ಕೆ ಕುಡಿಯುವ ನೀರಿನ ಸಂಬಂಧ ಮಲಪ್ರಭಾ ನದಿಯಿಂದ ನೀರು ಪೂರೈಸಲಾಗಿದೆ. ಕಳಸಾ ಬಂಡೂರಿ ಯೋಜನೆ ನೀರು ಮಲಪ್ರಭೆ ಸೇರುವ ಮುನ್ನವೇ ಮೊತ್ತೊಂದು ವಿವಾದ ಭುಗಿಲೇಳುವ ಲಕ್ಷಣಗಳು ಕಾಣಿಸಿವೆ. ಈ ಬಗ್ಗೆ ಬೆಳಗಾವಿ ಜಿಲ್ಲೆಯ ರೈತರು ರಮೇಶ ಜಾರಕಿಹೊಳಿ ಮಾಹಿತಿ ನೀಡಿ ಯೋಜನೆಗೆ ವಿರೋಧಿಸುವಂತೆ ಮನವಿ ಮಾಡಿದ್ದಾರೆ.
Youtube Video
First published: February 29, 2020, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories