Arun Kumar Puthila ಮುಂದಿನ ನಿರ್ಧಾರ ಬಿಜೆಪಿಗೆ ಮತ್ತೊಂದು ಶಾಕ್ ಕೊಡುತ್ತಾ?

ಅರುಣ್ ಕುಮಾರ್‌ ಪುತ್ತಿಲ

ಅರುಣ್ ಕುಮಾರ್‌ ಪುತ್ತಿಲ

Dakshina Kannada: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣಕುಮಾರ್ ಪುತ್ತಿಲ ಹೆಸರು ಟ್ರೆಂಡ್​ನಲ್ಲಿದೆ. ಪುತ್ತಿಲ ಅವರನ್ನೇ ಎಂಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

ಮಂಗಳೂರು: ಬಿಜೆಪಿಯಿಂದ (BJP) ಬಂಡಾಯ ಬಾವುಟ ಹಿಡಿದು ಹೊರ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಅಲ್ಪಮತಗಳ ಹಿನ್ನಡೆಯಲ್ಲಿ ಸೋಲು ಅನುಭವಿಸಬೇಕಾಯ್ತು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೇ (Puttur Assembly Constituency) ಸಂಚಲನ ಸೃಷ್ಟಿಸಿದ್ದ ಅರುಣ್ ಕುಮಾರ ಪುತ್ತಿಲ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಗೆ (Ashok Rai) ಟಫ್​ ನೀಡಿದ್ದರು. ಇದೀಗ ಅರುಣ್ ಕುಮಾರ್ ಪುತ್ತಿಲ ಮುಂದಿನ ನಿರ್ಧಾರ ಏನು ಎಂಬುದರ ಬಗ್ಗೆ ಕರಾವಳಿ ಅಂಗಳದಲ್ಲಿ ಚರ್ಚೆಗಳು ಆರಂಭಗೊಂಡಿವೆ. ಚುನಾವಣೆಯಲ್ಲಿ ಸೋತರೂ ಕಾರ್ಯಕರ್ತರ ಮನ ಗೆದ್ದಿರುವ ಪುತ್ತಿಲಗಾಗಿ ಒಂದೇ ದಿನದಲ್ಲಿ 50ಕ್ಕೂ ಅಧಿಕ ವಾಟ್ಸಪ್ ಗ್ರೂಪ್​ಗಳಲ್ಲಿ ರಚನೆ ಮಾಡಲಾಗಿದೆ.


ಕೇವಲ ಪುತ್ತೂರು ಮಾತ್ರವಲ್ಲದೇ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತಿಲ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಪುತ್ತಿಲ ಅಭಿಮಾನಿಗಳು ಬಹುತೇಕ ಹಿಂದೂ ಸಂಘಟನೆಗೆ ಸೇರಿದವರಾಗಿದ್ದರಿಂದ ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಗಳಿವೆ.


ಕಟೀಲ್​ಗೆ ಕೊಡ್ತಾರಾ ಶಾಕ್!


ಒಂದು ವೇಳೆ ಅರುಣ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ ಹಾಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಗೆಲುವು ಕಷ್ಟವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ಈಗಾಗಲೇ ಕರಾವಳಿ ಭಾಗದಲ್ಲಿ ಆರಂಭಗೊಂಡಿವೆ. ಆದರೆ ಈವರೆಗೂ ಅರುಣಕುಮಾರ್ ಪುತ್ತಿಲ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.




ಪ್ರಧಾನಿ ಮೋದಿಗೆ ಪತ್ರ


ನಳಿನ್ ಕುಮಾರ್ ಕಟೀಲ್​ ಅವರಿಂದ ಪುತ್ತೂರು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯ್ತು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ ಪುತ್ತಿಲ್ ಅವರಿಗೆ ಟಿಕೆಟ್ ನೀಡಬೇಕು ಎಂದು ಚಿಂತಕರಾದ ಆದರ್ಶ ಗೋಖಲೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.


ಇದನ್ನೂ ಓದಿ:  Karnataka Polls Results: ಚುನಾವಣೆಯಲ್ಲಿ ಬಿಜೆಪಿ ಸೋಲು; ಅಡ್ಡಂಡ ಕಾರ್ಯಪ್ಪ ರಾಜೀನಾಮೆ


ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣಕುಮಾರ್ ಪುತ್ತಿಲ ಹೆಸರು ಟ್ರೆಂಡ್​ನಲ್ಲಿದೆ. ಪುತ್ತಿಲ ಅವರನ್ನೇ ಎಂಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.

First published: