• Home
  • »
  • News
  • »
  • state
  • »
  • Janardhan Reddy: 2013ರ ರಾಜಕೀಯ ಸನ್ನಿವೇಶ ಸೃಷ್ಟಿಯಾಗುತ್ತಾ? ಡಿಸಿಎಂ ಆಗ್ತಾರಾ ಶ್ರೀರಾಮುಲು?

Janardhan Reddy: 2013ರ ರಾಜಕೀಯ ಸನ್ನಿವೇಶ ಸೃಷ್ಟಿಯಾಗುತ್ತಾ? ಡಿಸಿಎಂ ಆಗ್ತಾರಾ ಶ್ರೀರಾಮುಲು?

ಜನಾರ್ದನ ರೆಡ್ಡಿ, ಮಾಜಿ ಸಚಿವ

ಜನಾರ್ದನ ರೆಡ್ಡಿ, ಮಾಜಿ ಸಚಿವ

ಜನಾರ್ದನ ರೆಡ್ಡಿ ಹೊಸ ಪಕ್ಷದ ಘೋಷಣೆ ಕಲ್ಯಾಣ ಕರ್ನಾಟಕ ಭಾಗದ ನಾಯಕರಿಗೆ ತಲೆಬಿಸಿಯುಂಟು ಮಾಡಿದೆ. ಈ ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಜನಾರ್ದನ ರೆಡ್ಡಿಯನ್ನು ಎದುರಿಸೋದು ಸ್ಥಳೀಯ ನಾಯಕರಿಗೆ ದೊಡ್ಡ ಸವಾಲು ಆಗೋದು ಖಚಿತವಾಗಿದೆ.

  • Share this:

ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ಹೊಸ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Party) ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರಗಳು ಆರಂಭಗೊಂಡಿವೆ. ಮತ್ತೊಂದು ಕಡೆ ಬಿಜೆಪಿ (BJP) ಹೊಸ ಟೆನ್ಷನ್ ಶುರುವಾಗಿದೆ. ತಮ್ಮ ಇಡೀ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರಿಗೆ ಬಹುಪರಾಕ್ ಹೇಳಿರುವ ಜನಾರ್ದನ ರೆಡ್ಡಿ ನೇರವಾಗಿಯೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಕಷ್ಟ ಕಾಲದಲ್ಲಿ ತಮಗೆ ಸಾಥ್ ನೀಡಿದ್ಯಾರು ಎಂಬುದರ ವಿವರವಾಗಿ ಹೇಳಿದರು. ಇದೇ ವೇಳೆ ರಾಜ್ಯ ಬಜೆಪಿಯಲ್ಲಿ ಮೂಲ ನಾಯಕರನ್ನು ಕಡೆಗಣನೆ ಮಾಡಿ, ವಲಸಿಗರಿಗೆ ಮಣೆ ಹಾಕುವ ಕೆಲಸ ನಡೆಯುತ್ತಿದ್ದು, ಇದೊಂದು ರೀತಿ ಮೈತ್ರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹೇಳಿಕೆ ಮೂಲಕ ಅತೃಪ್ತ ಬಿಜೆಪಿ ನಾಯಕರನ್ನು (BJP Leaders) ಜನಾರ್ದನ ರೆಡ್ಡಿ ಸೆಳೆಯುವ ಸಾಧ್ಯತೆಗಳಿವೆ. ಇದೇ ವೇಳೆ ಗೆಳೆಯ ಶ್ರೀರಾಮುಲು (Minister Sriramulu) ಮತ್ತು ಸೋದರ ಸೋಮಶೇಖರ್ ರೆಡ್ಡಿ (Somashekhar Reddy) ಅವರನ್ನ ಪಕ್ಷಕ್ಕೆ ಆಹ್ವಾನಿಸಲ್ಲ ಎಂದು ಸ್ಪಷ್ಟಪಡಿಸಿದರು.


ರೆಡ್ಡಿ ನಡೆಯಿಂದ ರಾಜ್ಯ ಬಿಜೆಪಿ ನಾಯಕರಿಗೆ ಟೆನ್ಷನ್


ಹೌದು, ಜನಾರ್ದನ ರೆಡ್ಡಿ ಹೊಸ ಪಕ್ಷದ ಘೋಷಣೆ ಕಲ್ಯಾಣ ಕರ್ನಾಟಕ ಭಾಗದ ನಾಯಕರಿಗೆ ತಲೆಬಿಸಿಯುಂಟು ಮಾಡಿದೆ. ಈ ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಜನಾರ್ದನ ರೆಡ್ಡಿಯನ್ನು ಎದುರಿಸೋದು ಸ್ಥಳೀಯ ನಾಯಕರಿಗೆ ದೊಡ್ಡ ಸವಾಲು ಆಗೋದು ಖಚಿತವಾಗಿದೆ.


ಡಿಸಿಎಂ ಆಗ್ತಾರಾ ಶ್ರೀರಾಮುಲು?


ಬಳ್ಳಾರಿ ಭಾಗದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೆಂದರೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್ ರೆಡ್ಡಿ. ಹೀಗಾಗಿ ಇಬ್ಬರು ನಾಯಕರಿಗೆ ಉನ್ನತ ಸ್ಥಾನ ನೀಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಚುನಾವಣೆ ಎದುರಿಸಲು ಮುಂದಾಗಬಹುದು.


Former Minister Gali janardhan Reddy address press meet and announce new political party mrq
ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ


ಈಗಾಗಲೇ ಬಿಜೆಪಿಯಲ್ಲಿ ಸಂಪುಟ ಕಸರತ್ತು ನಡೆಯುತ್ತಿದೆ. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ, ಕೆ.ಎಸ್,ಈಶ್ವರಪ್ಪ ಜೊತೆಯಲ್ಲಿಯೇ ಸೋಮಶೇಖರ್ ರೆಡ್ಡಿ ಅವರನ್ನು ಸಂಪುಟಕ್ಕೆ ಬರಮಾಡಿಕೊಳ್ಳಬಹುದು. ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದಲೂ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.


ಇಬ್ಬರಿಗೂ ಸಿಗುತ್ತಾ ಉನ್ನತ ಸ್ಥಾನಮಾನ?


ಬಳ್ಳಾರಿ ಭಾಗದಲ್ಲಿ ಜನಾರ್ಧನ ರೆಡ್ಡಿ ಅವರನ್ನು ರಾಜಕೀಯವಾಗಿ ಎದುರಿಸಲು ಶ್ರೀರಾಮುಲು ಅವರನ್ನು ಡಿಸಿಎಂ ಮಾಡಿದ್ರೂ ಅಚ್ಚರಿಪಡಬೇಕಿನಲ್ಲ. ಶ್ರೀರಾಮುಲು ಮತ್ತು ಸೋಮಶೇಖರ್ ರೆಡ್ಡಿ ಅವರಿಗೆ ಉನ್ನತ ಹುದ್ದೆ ನೀಡುವ ಮೂಲಕ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗದಂತೆ ನೋಡಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ.


2013ರ ರಾಜಕೀಯ ಸನ್ನಿವೇಶ?


ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ 2013ರ ರಾಜಕೀಯ ಸನ್ನಿವೇಶ ಸೃಷ್ಟಿಯಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150+ ಸ್ಥಾನ ಗೆಲ್ಲುವ ಬಿಗ್ ಟಾಸ್ಕ್​ಗೆ ಜನಾರ್ದನ ರೆಡ್ಡಿ ಆಗಬಹುದು.


2013ರಲ್ಲಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಮತ್ತು ಶ್ರೀರಾಮುಲು ನಾಯಕತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಬಿಜೆಪಿಯ ಮತಗಳನ್ನು ವಿಂಗಡನೆ ಮಾಡಿತ್ತು. ಇದರ ಲಾಭ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.


ಇದನ್ನೂ ಓದಿ:  Janardhan Reddy: ಹೊಸ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ; ಮನೆ ಮನೆಗೂ ಬರ್ತಿನಿ ಎಂದ ಗಣಿಧಣಿ


ಈಗ 2023 ರಲ್ಲಿ ಜನಾರ್ದನ ರೆಡ್ಡಿಯವರ ಕೆಆರ್‌‌ಪಿಪಿ ಹೊಸ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಎದುರಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.


ಪತ್ನಿ ಜೊತೆ ಜನಾರ್ದನ ರೆಡ್ಡಿ


ಪಕ್ಷ ಸಂಘಟನೆಯಲ್ಲಿ ಅರುಣಾ ಲಕ್ಷ್ಮಿ


ಮೊದಲ ಬಾರಿಗೆ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಲಿದ್ದಾರೆ. ನಾಳೆಯಿಂದಲೇ ಪಕ್ಷ ಸಂಘಟನೆಯಲ್ಲಿ ಅರುಣಾ ಲಕ್ಷ್ಮಿ ಭಾಗಿಯಾಗಲಿದ್ದಾರೆ.

Published by:Mahmadrafik K
First published: