• Home
  • »
  • News
  • »
  • state
  • »
  • Karnataka Politics: ರಾಜ್ಯದಲ್ಲಿ ಮರುಕಳಿಸಲಿದೆಯಾ 1999ರ ರಾಜಕೀಯ?

Karnataka Politics: ರಾಜ್ಯದಲ್ಲಿ ಮರುಕಳಿಸಲಿದೆಯಾ 1999ರ ರಾಜಕೀಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡೋದು ಬಹುತೇಕ ಖಚಿತವಾಗಿದೆ. ಆದ್ದರಿಂದ ಮೂರು ಪಕ್ಷಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದು, ಕ್ಯಾಂಡಿಡೇಟ್ ಶೋಧದಲ್ಲಿವೆ.

  • Share this:

ವಿಧಾನಸಭಾ ಚುನಾವಣೆಗೆ (Assembly Election 2023) ಇನ್ನು ಏಳೆಂಟು ತಿಂಗಳು ಬಾಕಿ ಉಳಿದಿದೆ. ಈ  ನಿಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷ ಮತ್ತು ಪ್ರಾದೇಶಿಕ ಪಕ್ಷ ಯಾತ್ರೆಗಳ ಹೆಸರಿನಲ್ಲಿ ಚುನಾವಣೆ ಅಖಾಡಕ್ಕೆ (Election Campaign) ಧುಮುಕಿವೆ. ಈಗಾಗಲೇ ದೇಶದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿರುವ ಕಾಂಗ್ರೆಸ್​ಗೆ (Congress) ಕರ್ನಾಟಕದ ಚುನಾವಣೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಇತ್ತ ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ (BJP) ಕರ್ನಾಟಕ ಚುನಾವಣೆ (Karnataka Elections) ಪ್ರತಿಷ್ಠೆಯ ಕಣವಾಗಿದ್ದು, ಈ ಫಲಿತಾಂಶ ಲೋಕಸಭಾ ಚುನಾವಣೆಯ (Loksabha Elections) ದಿಕ್ಸೂಚಿ ಎಂದೇ ಬಿಂಬಿತವಾಗಿದೆ. ಈ ಕಾರಣದಿಂದಾಗಿ ಬಿಜೆಪಿ ಸಹ ಜನಸಂಕಲ್ಪ ಯಾತ್ರೆ (Jana Sankalpa Yatre) ಆರಂಭಿಸಿದೆ.


ಇನ್ನು ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ಚುನಾವಣೆಗೂ ತನ್ನದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಂದ್ರ, ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಆರ್​ಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ.


ಇನ್ನು ರಾಜ್ಯದಲ್ಲಿ ಕಳೆದ 12 ದಿನಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಿಂಚಿನ ಸಂಚಾರದ ಜೊತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನ ಆರಂಭಿಸಿದೆ.


ಮರುಕಳಿಸಲಿದೆಯಾ 1999ರ ರಾಜಕೀಯ?


ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡೋದು ಬಹುತೇಕ ಖಚಿತವಾಗಿದೆ. ಆದ್ದರಿಂದ ಮೂರು ಪಕ್ಷಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದು, ಕ್ಯಾಂಡಿಡೇಟ್ ಶೋಧದಲ್ಲಿವೆ.


ಇನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ನಾಯಕರು, ಸ್ಟಾರ್​ ಪ್ರಚಾರಕರನ್ನು ಚುನಾವಣೆ ಕ್ಯಾಂಪೇನ್​ಗೆ ತರವು ಸಾಧ್ಯತೆಗಳಿವೆ. ಈ ನಡುವೆ ರಾಜ್ಯದಲ್ಲಿ 1999ರ ರಾಜಕೀಯ ಮರುಕಳಿಸಲಿದೆಯಾ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.


is 1999 politics repeats in karnataka mrq
ಪ್ರಿಯಾಂಕಾ ಗಾಂಧಿ ವಾದ್ರಾ


ಬಳ್ಳಾರಿಯಿಂದ ಸ್ಪರ್ಧಿಸಲು ಪ್ರಿಯಾಂಕಾ ಗಾಂಧಿ ಒಲವು?


ಹೌದು, 2024ರ ಲೋಕಸಭಾ ಚುನಾವಣೆಗೆ ಬಳ್ಳಾರಿಯಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪ್ರಿಯಾಂಕಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧೆ ಅಸಾಧ್ಯವಾಗಿದೆ. ಬಳ್ಳಾರಿ ಕ್ಷೇತ್ರ 2008ರಿಂದ ಎಸ್​ಟಿ ಮೀಸಲು ಕ್ಷೇತ್ರವಾಗಿದೆ.


ಇದನ್ನೂ ಓದಿ:  BBMP: ನೆರೆ, ಬರ ನಿರ್ವಹಣೆ ಮಾಡದಷ್ಟು ಆರ್ಥಿಕ ದಿವಾಳಿಯಾಗಿದ್ಯಾ ಬಿಬಿಎಂಪಿ? ವಿಶ್ವಬ್ಯಾಂಕ್ ಬಳಿ ಸಾಲು ಕೇಳಲು ಚಿಂತನೆ


ಅಕ್ಟೋಬರ್ 18ರಂದು ಕಾಂಗ್ರೆಸ್ ಸಮಾವೇಶ?


ಮೀಸಲು ತೆರವಾದರೆ ಮಾತ್ರ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲು ಸಾಧ್ಯತೆ ಇದೆ. ಅಕ್ಟೋಬರ್ 18ರಂದು ಬಳ್ಳಾರಿಯಲ್ಲಿ ನಡೆಯಲಿರುವ ಪಕ್ಷದ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧೀ ಭಾಗಿಯಾಗುವ ಸಾಧ್ಯತೆಗಳಿವೆ.  ಬಳ್ಳಾರಿಯ ಸಮಾವೇಶದಲ್ಲಿ ಐದು ಲಕ್ಷ ಜನರನ್ನು ಸೇರಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಸಮಾವೇಶಕ್ಕೆ ಕಾರ್ಯಕರ್ತರನ್ನು ಕರೆತರಲು ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ಸೂಚನೆ ಸಹ ನೀಡಲಾಗಿದೆ.


is 1999 politics repeats in karnataka mrq
ಪ್ರಿಯಾಂಕಾ ಗಾಂಧಿ ವಾದ್ರಾ


ಅಜ್ಜಿ, ತಾಯಿ ಬಳಿಕ ಕರ್ನಾಟಕದತ್ತ ಮೊಮ್ಮಗಳು?


ಈ ಹಿಂದೆ ಅಂದ್ರೆ 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. 1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾ ಗಾಂಧಿ ಸ್ಪರ್ಧೆ ಮಾಡಿದ್ದರು. ಅಜ್ಜಿ, ತಾಯಿ ಬಳಿಕ ಮೊಮ್ಮಗಳು ಕರ್ನಾಟಕದಿಂದ ಸ್ಪರ್ಧೆ ಮಾಡಲು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಅಜ್ಜಿ ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆಗೆ ರಾಹುಲ್ ಭೇಟಿ: ಮರುಕಳಿಸುತ್ತಾ ಇತಿಹಾಸ?


ಇಂದು ಕಾಂಗ್ರೆಸ್ ಯಾವ ಸ್ಥಿತಿಯಲ್ಲಿದೆಯೋ ಅಂದು(1978ರಲ್ಲಿ) ಕೂಡಾ ಈ ಪಕ್ಷಕ್ಕೆ ಭಾರೀ ಕುಸಿತ ಕಂಡಿತ್ತು. ತುರ್ತು ಪರಿಸ್ಥಿತಿ ಘೋಷಣೆಯು ಇಂದಿರಾ ಗಾಂಧಿಯವರಿಂದ ಪ್ರಧಾನ ಮಂತ್ರಿ ಸ್ಥಾನವನ್ನು ಕಸಿದುಕೊಂಡಿತ್ತು. ಇಷ್ಟೇ ಅಲ್ಲದೆ ಅವರು ಸಂಸತ್ತಿನ ಸದಸ್ಯತ್ವವನ್ನೂ ಕಳೆದುಕೊಂಡಿದ್ದರು. ಅಂದು ಕರ್ನಾಟಕ ಕಾಂಗ್ರೆಸ್​ಗೆ ಮರುಜನ್ಮ ನೀಡಿತ್ತು

Published by:Mahmadrafik K
First published: