PSI Exams Scam: ಮೂರು ಬಾರಿ ಪರೀಕ್ಷೆಯಲ್ಲಿ ಫೇಲ್, 4ನೇ ಬಾರಿ 20 ಪ್ರಶ್ನೆಗೆ ಉತ್ತರಿಸಿ 121 ಅಂಕ ಪಡೆದ!

ಈ ಹಿಂದೆ ಮೂರು ಬಾರಿ PSI ಪರೀಕ್ಷೆ ಬರೆದಿದ್ದ ವೀರೇಶ್ ಪಾಸ್ ಆಗಿರಲಿಲ್ಲ. ವಯಸ್ಸು ಮೀರಿ ಹೋಗುತ್ತೆ ಅನ್ನೋ ಭಯದಲ್ಲಿ ಅಕ್ರಮವಾಗಿ ನೇಮಕಾತಿ ಪಡೆಯಲು ಮುಂದಾಗಿದ್ದನು. ಇದೀಗ ವೀರೇಶ್ ಬರೆದ OMR ಶೀಟ್ ನಿಂದಲೇ ಅಕ್ರಮ ಬಯಲಿಗೆ ಬಂದಿದೆ.

ವಶಕ್ಕೆ ಪಡೆದ ಅಭ್ಯರ್ಥಿ

ವಶಕ್ಕೆ ಪಡೆದ ಅಭ್ಯರ್ಥಿ

  • Share this:
PSI ಪರೀಕ್ಷೆಯಲ್ಲಿ ಅಕ್ರಮ (PSI Exams Scams) ನಡೆದಿರೋದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Police) ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವೀರೇಶ್ ವಶಕ್ಕೆ ಪಡೆದ ವಿದ್ಯಾರ್ಥಿ. ಈ ಹಿಂದೆ ಮೂರು ಬಾರಿ PSI ಪರೀಕ್ಷೆ ಬರೆದಿದ್ದ ವೀರೇಶ್ ಪಾಸ್ ಆಗಿರಲಿಲ್ಲ. ವಯಸ್ಸು ಮೀರಿ ಹೋಗುತ್ತೆ ಅನ್ನೋ ಭಯದಲ್ಲಿ ಅಕ್ರಮವಾಗಿ ನೇಮಕಾತಿ ಪಡೆಯಲು ಮುಂದಾಗಿದ್ದನು. ಇದೀಗ ವೀರೇಶ್ ಬರೆದ OMR ಶೀಟ್ ನಿಂದಲೇ ಅಕ್ರಮ ಬಯಲಿಗೆ ಬಂದಿದೆ. ವೀರೇಶ್ ತಂದೆ ಕಲಬುರಗಿ ಜಿಲ್ಲೆಯ ಸೇಡಂ (Sedam, Kalaburagi) ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ (Head Constable) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ವೀರೇಶ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅಕ್ರಮದಲ್ಲಿ ಹಲವು ಅಭ್ಯರ್ಥಿಗಳು ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.

ಕಳೆದ ವರ್ಷ ವೀರೇಶ್ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ (Jnana Jyoti English Medium School) ಕೇಂದ್ರದಲ್ಲಿ PSI ಪರೀಕ್ಷೆ ಬರೆದಿದ್ದನು. ಕೇವಲ 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ ವೀರೇಶ್ ಗೆ 121 ಅಂಕಗಳು ಬಂದಿರೋದು ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ವೀರೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ವೀರೇಶ್ ಪರೀಕ್ಷೆ ಬರೆದಿದ್ದ ಶಾಲೆ ಬಿಜೆಪಿ ಮುಖಂಡ(BJP Leader)ರೊಬ್ಬರಿಗೆ ಸೇರಿದೆ ಎಂದು ವಿಜಯವಾಣಿ ವರದಿ ಮಾಡಿದೆ.

ಸಿಐಡಿ ಅಧಿಕಾರಿಗಳಿಂದ ಶೋಧ ಕಾರ್ಯ

ಸದ್ಯ ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಪತ್ತೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಅಕ್ರಮದಲ್ಲಿ ಮಹಿಳಾ, ಪುರುಷ ಅಭ್ಯರ್ಥಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೊಠಡಿಯೇ ಮೇಲ್ವಿಚಾರಕರು ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಕಳೆದ ವರ್ಷ 545 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು.

ಇದನ್ನೂ ಓದಿ:  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

ಜೂನ್ ತಿಂಗಳಲ್ಲಿ UGC NET ಪರೀಕ್ಷೆ

ಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆ-ನೆಟ್ (NET) ಪರೀಕ್ಷೆಯನ್ನು ಈ ವರ್ಷದ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲಿದೆ ಎಂದು ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಭಾನುವಾರ (ಏಪ್ರಿಲ್ 10) ತಿಳಿಸಿದ್ದಾರೆ. ಆದರೆ UGC-NET ಪರೀಕ್ಷೆಯ ದಿನಾಂಕವನ್ನು (ಡಿಸೆಂಬರ್ 2021 ಮತ್ತು ಜೂನ್ 2022 ವಿಲೀನ) ಇನ್ನೂ ಬಹಿರಂಗಪಡಿಸಲಾಗಿಲ್ಲ. NTA ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಯನಿವರ್ಸಿಟಿ ಗ್ರಾಂಟ್ಸ್ ಕಮಿಶನ್ ಮಾಹಿತಿ ನೀಡಿದೆ. NTA ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಯುಜಿಸಿ ತಿಳಿಸಿದೆ.

ಟ್ವಿಟರ್​ನಲ್ಲಿ ಈಕುರಿತು ಮಾಹಿತಿ ನೀಡಿದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಅವರು ಮುಂದಿನ UGC-NET ಅನ್ನು ಜೂನ್ 2022 ರ ಮೊದಲ/ಎರಡನೇ ವಾರದಲ್ಲಿ ನಡೆಸಲಾಗುವುದು. ಎಂದು ಸ್ಪಷ್ಟಪಡಿಸಿದ್ದಾರೆ.

UGC NET ಪರೀಕ್ಷೆಯ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ: ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ

ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಿವಿಯ ವಿದ್ಯಾರ್ಥಿಗಳಿಂದಲೇ ರಾಮನವಮಿ ಆಚರಿಸಿದ್ದ‌ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.

ವಿಶ್ವನಾಥ್, ನರೇಂದ್ರ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ಕೂಡಾ ಎಬಿವಿಪಿ ಸಂಘಟನೆಗೆ ಸೇರಿದವರಾಗಿದ್ದಾರೆ. ಘಟನೆ ಖಂಡಿಸಿ ಇಂದು ಎಬಿವಿಪಿಯಿಂದ ಪ್ರತಿಭಟನೆ ನಡೆಸಲು ಮುಂದಾಗಿದೆ.
Published by:Mahmadrafik K
First published: