Dr.Rajkumar : ಅಣ್ಣಾವ್ರ ಸಿನಿಮಾದಿಂದ ಕನ್ನಡ ಕಲಿತು ಕನ್ನಡಿಗರ ಮನಗೆದ್ದ ಐಪಿಎಸ್ ಅಧಿಕಾರಿ

Kolar IPS Officer : ನಮ್ಮ ನಾಡಿನಲ್ಲಿ ಅನೇಕ ಜನರು ಹೊರ ರಾಜ್ಯದಿಂದ ಬಂದವರ ಜೊತೆಗೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಾರೆ.. ಕನ್ನಡ ಕಬ್ಬಿಣದ ಕಡಲೆ ಎಂದು ಕೊಂಡು ಕನ್ನಡ ಕಲಿಯುವ ಗೋಜಿಗೆ ಹೋಗುವುದಿಲ್ಲ.. ಆದರೆ ಕೆಲವರು ಮಾತ್ರ ಕರ್ನಾಟಕಕ್ಕೆ ಬಂದ ಕೂಡಲೇ ಕನ್ನಡ ಕಲಿಯಲು ಆರಂಭಿಸಿ ಕನ್ನಡ ಪ್ರೇಮವನ್ನ ಮೆರೆಯುತ್ತಾರೆ.. ಇಲ್ಲೊಬ್ಬ ಐಪಿಎಸ್ ಅಧಿಕಾರಿ ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿ ಕನ್ನಡ ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..

 ಐಪಿಎಸ್ ಅಧಿಕಾರಿ

ಐಪಿಎಸ್ ಅಧಿಕಾರಿ

 • Share this:
  ಕನ್ನಡ ಚಿತ್ರರಂಗದ(sandalwood) ಧ್ರುವತಾರೆ, ನಟಸಾರ್ವಭೌಮ,  ಚಂದನವನದ ರಾಜ, ಕನ್ನಡಿಗರ(Kannadigas) ಪಾಲಿನ ಅಣ್ಣಾವ್ರು, ವರನಟ ಡಾ. ರಾಜ್ ಕುಮಾರ್(Rajkumar) ಅವರ ಸಿನಿಮಾಗಳನ್ನು (Cinema)ನೋಡದ ವ್ಯಕ್ತಿಯೇ ಇಲ್ಲ. ಸಿನಿಮಾದಲ್ಲಿ ಯಾವ ಸಂದೇಶಗಳನ್ನು ನೀಡುತ್ತಿದ್ದರೋ ಅದೇ ರೀತಿ ಬದುಕನ್ನ ಕಟ್ಟುನಿಟ್ಟಾಗಿ ಪಾಲಿಸಿದರು ಡಾ.. ರಾಜಕುಮಾರ್. ಸಾವಿರಾರು ಜನಗಳ ಪಾಲಿಗೆ ರಾಜಕುಮಾರ್ ಅವರ ಸಿನಿಮಾಗಳು ಸ್ಪೂರ್ತಿ ಆಗುತ್ತಿದ್ದವು... ರಾಜಕುಮಾರ್ ನಟಿಸಿದ ಬಂಗಾರದಂತಹ ಮನುಷ್ಯ(Bangarada Manushya) ಸಿನಿಮಾ ನೋಡಿ ಅದೆಷ್ಟು ಜನ ಯುವಕರು ಪಟ್ಟಣ (Town)ಬಿಟ್ಟು ಹಳ್ಳಿಗೆ(Village) ಬಂದು ಮತ್ತೆ ವ್ಯವಸಾಯದಲ್ಲಿ ತೊಡಗಿಕೊಂಡರು ಅಂದ್ರೆ ರಾಜ್ ಅವರ ಸಿನಿಮಾಗಳಲ್ಲಿ ಬದುಕಿನ ಸಾರ ಅಷ್ಟರಮಟ್ಟಿಗೆ ಇತ್ತು ಎಂದು ಅರ್ಥ. ಸದಾ ಕಾಲಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿರುವ ರಾಜಕುಮಾರ್ ಅವರು ಈಗ ಐಪಿಎಸ್ ಅಧಿಕಾರಿ ಒಬ್ಬರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ...

  ಅಣ್ಣಾವ್ರ ಸಿನಿಮಾ ನೋಡಿ ಕನ್ನಡ ಕಲಿತ ಐಪಿಎಸ್ ಅಧಿಕಾರಿ

  ಸಾಮಾನ್ಯವಾಗಿ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿಯುವುದಕ್ಕಿಂತ,ಅವರ ಮಾತೃ ಭಾಷೆಯನ್ನು ಉಳಿಸಿ ಬೆಳೆಸುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ.  ಹೀಗಾಗಿ ನಮ್ಮ ನಾಡಿನಲ್ಲಿ ಅನೇಕ ಜನರು ಹೊರ ರಾಜ್ಯದಿಂದ ಬಂದವರ ಜೊತೆಗೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಾರೆ.. ಕನ್ನಡ ಕಬ್ಬಿಣದ ಕಡಲೆ ಎಂದು ಕೊಂಡು ಕನ್ನಡ ಕಲಿಯುವ ಗೋಜಿಗೆ ಹೋಗುವುದಿಲ್ಲ.

  ಆದರೆ ಕೆಲವರು ಮಾತ್ರ ಕರ್ನಾಟಕಕ್ಕೆ ಬಂದ ಕೂಡಲೇ ಕನ್ನಡ ಕಲಿಯಲು ಆರಂಭಿಸಿ ಕನ್ನಡ ಪ್ರೇಮವನ್ನ ಮೆರೆಯುತ್ತಾರೆ. ಇಲ್ಲೊಬ್ಬ ಐಪಿಎಸ್ ಅಧಿಕಾರಿ ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿ ಕನ್ನಡ ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..

  ಹೌದು. ಕೋಲಾರ ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿ ಯಾಗಿರುವ ಡಿ. ಕಿಶೋರ್ ಬಾಬು ಅವರು, ಅಣ್ಣಾವ್ರ ಸಿನಿಮಾಗಳನ್ನು ನೋಡಿ ಕನ್ನಡ ಮಾತನಾಡಲು ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..

  ಇದನ್ನೂ ಓದಿ :ಚಂದನವನದಿಂದ ಕಾಣೆಯಾದ `ಬೆಟ್ಟದ ಹೂ’: ಅಣ್ಣಾವ್ರ ಮತ್ತು ಅಪ್ಪು ಸಾವಿನಲ್ಲಿ ಸಾಮ್ಯತೆ!

  ಮಾತೃಭಾಷೆ ತೆಲುಗು ಆದ್ರೂ ಕನ್ನಡದ ಮೇಲೆ ಪ್ರೀತಿ

  ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಕಿಶೋರ್ ಬಾಬು ಅವರು ಮೂಲತಃ ಆಂಧ್ರಪ್ರದೇಶದವರು. 2013ರಲ್ಲಿ ಐಪಿಎಸ್ ಪರೀಕ್ಷೆ ಪಾಸ್​ ಮಾಡಿದ ನಂತರ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂತು. ಹೀಗಾಗಿ 2014ರಲ್ಲಿ ಅವರು ಕರ್ನಾಟಕದ ವಿಜಯಪುರಕ್ಕೆ ಬಂದರು.ಕರ್ನಾಟಕಕ್ಕೆ ಬಂದು ತನ್ನ ಕೆಲಸ ಆರಂಭಿಸಿದ ಕಿಶೋರ್​ ಬಾಬು ಅವರಿಗೆ ಭಾಷೆ ಅನ್ನೋದು ಎಂದಿಗೂ ಸಮಸ್ಯೆಯಾಗಿ ಕಂಡು ಬಂದಿಲ್ಲ.

  ಸಾಮಾನ್ಯವಾಗಿ ಕೋಲಾರ ಆಂಧ್ರಪ್ರದೇಶದ ಗಡಿಯಲ್ಲಿ ಇರುವುದರಿಂದ ಹೆಚ್ಚಾಗಿ ತೆಲುಗು ಮಾತನಾಡುವವರು ಸಿಕ್ತಾರೆ.. ಆದರೆ ತೆಲುಗು ಭಾಷೆಯ ಜೊತೆಗೆ ಕನ್ನಡ ಕಲಿತಿರುವ ಕಿಶೋರಬಾಬು ಅವರು ಕನ್ನಡದಲ್ಲಿಯೇ ಎಲ್ಲರ ಜೊತೆ ಮಾತನಾಡುತ್ತಾರೆ..

  ಡಾ.ರಾಜ್​ ಅವರು ನಟಿಸಿರುವ ಮಯೂರ, ಶ್ರೀಕೃಷ್ಣದೇವರಾಯ, ಬಬ್ರುವಾಹನ, ಎರಡು ಕನಸು, ಭಕ್ತಪ್ರಹಲ್ಲಾದ, ಜೀವನ ಚೈತ್ರ ಸೇರಿದಂತೆ ಹತ್ತಾರು ರಾಜ್​​ಕುಮಾರ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ರಾಜಕುಮಾರ್ ಅವರ ಬಾಯಿಂದ ಬರುವ ಕನ್ನಡವನ್ನು ಕೇಳುವುದು ಒಂದು ರೀತಿಯ ಸೊಗಸು ಅವರ ಬಾಯಿಂದ ಬರುವ ಕನ್ನಡ ಕೇಳಲು ಇಂಪಾಗಿರುತ್ತದೆ.. ಹೀಗಾಗಿ ನಾನು ಅವರ ಸಿನಿಮಾಗಳನ್ನು ನೋಡಿ ಕನ್ನಡ ಕರೆದುಕೊಂಡು ಕಿಶೋರಬಾಬು ಅವರು ಹೇಳುತ್ತಾರೆ.

  ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದ ಕಿಶೋರಬಾಬು

  ಇನ್ನು ಕೆಲವು ತಿಂಗಳುಗಳ ಹಿಂದಷ್ಟೇ ನಟ ಪುನೀತ್ ರಾಜಕುಮಾರ್ ನಿಧನರಾಗಿದ್ದ ಬೇಳೆ ಕಿಶೋರಬಾಬು ಅವರು ಸಂತಾಪ ಸೂಚಿಸಿದ್ರು. ಪುನೀತ್​​ ಸೇವಾ ಮನೋಭಾವದ ಕುರಿತು ತುಂಬು ಹೃದಯದಿಂದ ಹೊಗಳಿದ್ರು . ಅವರ ಅಕಾಲಿಕ ನಿಧನಕ್ಕೆ ಬೇಸರ ವ್ಯಕ್ತಪಡಿಸಿ ಕಂಬನಿ ಮಿಡಿದರು. ಪುನೀತ್​ ಅವರ ಹಲವು ಸಿನಿಮಾಗಳನ್ನು ನೋಡಿದ್ದೇನೆ ಎಂದು ಕಿಶೋರ್ ಬಾಬು ಅವರು ಬೇಸರ ಹೊರಹಾಕಿದ್ರು..

  ಇದನ್ನೂ ಓದಿ : ಅಣ್ಣಾವ್ರ ಸಿನಿಮಾ ಟೈಟಲ್ ಮರುಬಳಕೆ: ರಾಜ್​ಕುಮಾರ್ ಅಭಿಮಾನಿಗಳ ಪ್ರತಿಭಟನೆ..!

  ಇನ್ನು ಕಿಶೋರ್ ಬಾಬು ಅವರು ಬಿಜಾಪುರ ಮಾತ್ರವಲ್ಲದೆ ಮೈಸೂರು ಭಾಗದ ಮಂಡ್ಯ, ಹಾಸನ ಜಿಲ್ಲೆಯ ಹೊಳೆನರಸಿಪುರ, ನಂತರ ರಾಯಚೂರು, ಗುಲ್ಬರ್ಗದಲ್ಲಿ ಸೇವೆ ಸಲ್ಲಿಸಿ ಈಗ ಕೋಲಾರದಲ್ಲಿ ಜಿಲ್ಲಾವರಿಷ್ಠಾಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.
  Published by:ranjumbkgowda1 ranjumbkgowda1
  First published: