• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • D Roopa-Rohini Sindhuri: 'ಡಿಕೆ ರವಿ-ರೋಹಿಣಿ ಪ್ರೇಮ ಸಲ್ಲಾಪ CBI ಕೊಟ್ಟ ಫೈನಲ್ ರಿಪೋರ್ಟ್​ನಲ್ಲಿತ್ತು'! ಡಿ ರೂಪಾ ಗಂಭೀರ ಆರೋಪ

D Roopa-Rohini Sindhuri: 'ಡಿಕೆ ರವಿ-ರೋಹಿಣಿ ಪ್ರೇಮ ಸಲ್ಲಾಪ CBI ಕೊಟ್ಟ ಫೈನಲ್ ರಿಪೋರ್ಟ್​ನಲ್ಲಿತ್ತು'! ಡಿ ರೂಪಾ ಗಂಭೀರ ಆರೋಪ

ಡಿ ರೂಪಾ Vs ರೋಹಿಣಿ ಸಿಂಧೂರಿ

ಡಿ ರೂಪಾ Vs ರೋಹಿಣಿ ಸಿಂಧೂರಿ

ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್​ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ ಎಂದು ಡಿ ರೂಪಾ ಪ್ರಶ್ನಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕದ ಐಎಎಸ್ ವಸರ್ಸ್ ಐಪಿಎಸ್ ವಾರ್ (Lady Officers) ತಾರಕಕ್ಕೇರಿದ್ದು ಡಿ.ಕೆ ರವಿ (DK Ravi) ಅವರ ಸಾವನ್ನು ಪ್ರಸ್ತಾಪಿಸಿ ಡಿ.ರೂಪಾ  (IPS Officer D. Roopa) ಮತ್ತೆ ಫೇಸ್​ಬುಕ್ ಫೋಸ್ಟ್ ಮಾಡಿದ್ದಾರೆ. ರೋಹಿಣಿ ಸಿಂಧೂರಿ (IAS Officer Rohini Sindhuri) ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್​ನಲ್ಲಿತ್ತು. ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. IAS ಅಧಿಕಾರಿಗಳಿಗೆ ಕಳಿಸಿದ ಚಿತ್ರಗಳು ಉತ್ತೇಜನ ಎಂದು ಅರ್ಥ ಅಲ್ಲವೇ? ಅವರು ಯಾವ ವೇದಿಕೆಗೆ ಹೋದರೂ, ಸತ್ಯ ಸತ್ಯವೇ, ಸತ್ಯ ಮಣಿಸಲು ಸಾಧ್ಯವಿಲ್ಲ ಅಂತಾ ಡಿ.ರೂಪಾ ಪೋಸ್ಟ್ ಮಾಡಿದ್ದಾರೆ.


ಡಿ ರೂಪಾ ಅವರು ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿ ಪ್ರತಿಕ್ರಿಯೆ ನೀಡಿದ್ದ ರೋಹಿಣಿ ಸಿಂಧೂರಿ ಅವರು, ಐಪಿಎಸ್‌ ರೂಪಾ ಅವರದ್ದು, ಇದೊಂದು ಅಭ್ಯಾಸವಾಗಿ ಬಿಟ್ಟಿದೆ. ಮಾನಸಿಕ ಅಸ್ವಸ್ಥತೆ ಒಂದು ದೊಡ್ಡ ಸಮಸ್ಯೆ. ಅದನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಮೂಲಕ ಗುಣಪಡಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾನಸಿಕ ಅಸ್ವಸ್ಥತೆಗೆ ಒಳಗಾದರೆ, ಅದು ಸಮಾಜಕ್ಕೆ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದ್ದರು.


ಡಿ ರೂಪಾ ಟ್ವೀಟ್​​


ಇದನ್ನೂ ಓದಿ: D Roopa-Rohini Sindhuri: ಡಿಕೆ ರವಿ ಮಾನಸಿಕ ಅಸ್ವಸ್ಥ ಎಂದರೆ ನನಗೆ ನೋವಾಗುತ್ತೆ, ಅವಮಾನ ಮಾಡ್ಬೇಡಿ; ಕುಸುಮಾ ಪರೋಕ್ಷ ವಾರ್ನಿಂಗ್


ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿ ರೂಪಾ ಅವರು, ರೋಹಿಣಿ ಸಿಂಧೂರಿ ಕಳುಸಿದ ಸಾಲುಗಳನ್ನು ಕಳಿಸಿದ್ದೀರಿ. ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು ಮಾನಸಿಕ ಅಸ್ವಸ್ಥತೆ ಇಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ? ನನ್ನ ಪ್ರಶ್ನೆ ಇಷ್ಟೇ, ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ.


ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್​ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕ್ಷಮೆ ಕೇಳದಿದ್ದರೆ ಮಾನನಷ್ಠ ಮೊಕದ್ದಮೆ ಹಾಕುತ್ತೇನೆ


ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದ ರೋಹಿಣಿ ಸಿಂಧೂರಿ ಅವರಿಗೆ ತಿರುಗೇಟು ನೀಡಿರುವ ರೂಪಾ ಅವರು, ಮಾನಸಿಕ ಸ್ಥಿಮಿತ ಯಾರು ಕಳೆದುಕೊಂಡಿರುವುದು. ನಿಮ್ಮ ಬಣ್ಣ ಬಯಲಾಯಿತು ಎಂದು ಹತಾಶೆಯ ಮಾತೇ? ಒಂದು ಕಡೆ ಹೇಳಿದ್ದೀರಿ, ಡಿಕೆ ರವಿಗೆ ಮಾನಸಿಕ ಅಸ್ವಸ್ಥತೆ ಇದ್ದದ್ದರಿಂದ ಸತ್ತದ್ದು ಅಂತ. ಇಲ್ಲಿ, ನಿಮ್ಮನ್ನು ಎಕ್ಸ್​ಪೋಸ್ ಮಾಡಿದ್ದಕ್ಕೆ ನನ್ನ ಮೇಲೆ ಈ ಆರೋಪ.


ಡಿ ರೂಪಾ ಟ್ವೀಟ್​​


ನಿಮ್ಮ ಭ್ರಷ್ಟಾಚಾರದ ಚಾಟ್​​ಗಳೂ ನನ್ನ ಬಳಿ ಇವೆ. ನನಗೆ ಕ್ಷಮೆ ಕೇಳದೆ ಇದ್ದರೆ ಇದೆ ನೀವು ಹೇಳಿದ ಮಾತಿಗೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ (Defamation Case) ಹಾಕುತ್ತೇನೆ. ಅಲ್ಲದೆ, ನೀವು ಸೇವಾ ನಿಯಮ ಉಲ್ಲಂಘಿಸಿದ ಬಗ್ಗೆ ಕಾನೂನು ಕ್ರಮ. ನಿಮ್ಮ ಮೋಜಿನ ಸ್ವಿಮ್ಮಿಂಗ್ ಪೂಲ್ ಡಿಸಿ ಮನೆಯಲ್ಲಿ ಸಾರ್ವಜನಿಕ ಹಣದಿಂದ ಕಟ್ಟಿದ್ದು , ಅದೂ ಕೋವಿಡ್​​ ಟೈಂ ಅಲ್ಲಿ ಹಾಗೂ ಹೆರಿಟೇಜ್ ಬಿಲ್ಡಿಂಗ್​ ಕಾಯ್ದೆ ಉಲ್ಲಂಘನೆ ಇವುಗಳ ಬಗ್ಗೆ ಶಿಸ್ತು ಕ್ರಮ, ಇದನ್ನು ನಾನೂ ಫಾಲೋ ಅಪ್ ಮಾಡ್ತೇನೆ. ನೆನಪಿಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.


ನಿಮ್ಮದು ತಪ್ಪಾದ ಸಹಾನುಭೂತಿ


ನಾನು ಯಾಕೆ ಆಕೆಯ ಪಿಕ್ಚರ್ಸ್ ಹಾಕಿದೆ ಅಂತ ಕೇಳುವವರಿಗೆ ನಾನು ಹೇಳೋದು ಇಷ್ಟೇ. ಪೋಟೋಗಳನ್ನು ಕಳಿಸುವಾಕೆಗೆ ಅದರ ದರ್ದು ಇಲ್ಲ ಅಂದ ಮೇಲೆ ಬೇರೆಯವರಿಗೆ ಯಾಕೆ ಇರಬೇಕು. ಈ ರೀತಿಯ ಪಿಕ್ಚರ್ಸ್ (ಎಲ್ಲೂ ಅವರ ಸಾಮಾಜಿಕ ಜಾಲತಾಣದಲ್ಲಿ ಇದುವರೆ ಇಲ್ಲ). ಯಾರು, ಯಾರಿಗೆ, ಯಾಕೆ ಕಳಿಸಿದರು ಅಂತ ಅವರೇ ಅವರ ಬಾಯಿಂದ ಹೇಳಲಿ. ಅದರ ಹಿಂದಿನ ಉದ್ದೇಶ ಏನು. ಸಂಸಾರಗಳಲ್ಲಿ ಹುಳಿ ಹಿಂಡಲು? ಒಬ್ಬ ಹೆಣ್ಣಾಗಿ ಅನೇಕ ಹೆಣ್ಣು ಮಕ್ಕಳಿಗೆ ಮುಳ್ಳು ಆದ ಈಕೆಯ ಮೇಲೆ ಕನಿಕರ ಇಟ್ಟುಕೊಂಡಿರುವ ಕೆಲವರೇ, ಕೇಳಿ, ನಿಮ್ಮದು ತಪ್ಪಾದ ಸಹಾನುಭೂತಿ ಎಂದು ಹೇಳಿದ್ದಾರೆ.


ಇದನ್ನೂ ಓದಿ: Rohini Sindhuri: 'ಸಿಂಧೂರಿ ಫೋಟೋ ಫೇಕ್​ ಅಲ್ಲ, ಇದು ಜಸ್ಟ್ ಸ್ಯಾಂಪಲ್​ ಅಷ್ಟೇ'! ರೋಹಿಣಿ ವಿರುದ್ಧ ಡಿ ರೂಪಾ ಮತ್ತಷ್ಟು ಆರೋಪ


ಸಿಂಧೂರಿ ಅವರೇ, ನಿಮ್ಮ ಈ ಚಾಟ್ಸ್, ಪಿಕ್ಸ್ ನೋಡಿ (ಅಂದರೆ ನಾನು ಈಗಾಗಲೇ ಇಲ್ಲಿ ಹಾಕಿದ ಪಿಕ್ಸ್) ನೋಡಿ ಈ ರಾಜ್ಯದ ಕಾನೂನು ಮಂತ್ರಿಯವರು, 4 ದಿನಗಳ ಹಿಂದೆಯೇ ನಿಮಗೆ ಏನು ಕ್ಲಾಸ್​ ತಗೊಂಡು ಏನು ಬುದ್ಧಿವಾದ ಹೇಳಿದರು ಶಕ್ತಿ ಸೌಧ ವಿಧಾನ ಸೌಧದಲ್ಲಿ ಅದನ್ನೂ ಜನತೆಗೆ ತಿಳಿಸಿ ಎಂದು ಸವಾಲು ಹಾಕಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು