• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Rohini Sindhuri: 'So Madly Beautiful, 8 ಡಿಲಿಟೆಡ್​ ಫೋಟೋ ಸೀಕ್ರೆಟ್' -ರೋಹಿಣಿ ವಿರುದ್ಧ ರೂಪಾ ಮತ್ತೊಂದು ಬಾಂಬ್

Rohini Sindhuri: 'So Madly Beautiful, 8 ಡಿಲಿಟೆಡ್​ ಫೋಟೋ ಸೀಕ್ರೆಟ್' -ರೋಹಿಣಿ ವಿರುದ್ಧ ರೂಪಾ ಮತ್ತೊಂದು ಬಾಂಬ್

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ಇವತ್ತು ರೋಹಿಣಿ ಸಿಂಧೂರಿ Get well soon ಅಂತ ಹೇಳಿದ್ದಾರೆ. ಅವರ ಡಿಲಿಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ಎಂದು ಮೊಬೈಲ್ ಸ್ಕ್ರೀನ್​ ಶಾಟ್​ ಒಂದರ ಫೋಟೋ ಶೇರ್ ಮಾಡಿ ಐಪಿಎಸ್​ ಹಿರಿಯ ಅಧಿಕಾರಿ ಡಿ ರೂಪಾ ಪ್ರಶ್ನಿಸಿದ್ದಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ತಮ್ಮ ವಿರುದ್ಧ ಸಾಲು ಸಾಲು ದೂರು ನೀಡಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ (IPS Officer D Roopa) ಅವರ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ  (IAS Officer Rohini Sindhuri) ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Chief Secretary Vandita Sharma) ಅವರಿಗೆ ಇಂದು ದೂರು ದಾಖಲು ಮಾಡಿದ್ದಾರೆ. ಇತ್ತ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಅವರು ಕೂಡ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ‌‌ (Bagalgunte Police Station) ಡಿ ರೂಪಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮತ್ತೆ ರೋಹಿಣಿ ಅವರ ವಿರುದ್ಧ ತಮ್ಮ ಆರೋಪಗಳನ್ನು ಮುಂದುವರಿಸಿರುವ ಡಿ ರೂಪಾ ಅವರು, ರೋಹಿಣಿ ಸಿಂಧೂರಿ ಅವರು ನಗ್ನ ಫೋಟೋಗಳನ್ನು ಕಳುಹಿಸಿದ್ದಾರೆ. ಆ ಮೂಲಕ ಐಎಎಸ್ ಅಧಿಕಾರಿ ನಿಯಮಗಳನ್ನು ಮುರಿದಿದ್ದಾರೆ. ಅಲ್ಲದೆ ಎಷ್ಟೋ ಸಂಸಾರ ಹಾಳು ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ನಡುವೆ ತಮ್ಮ ಮಗನ ಬಗ್ಗೆ ಯಾರು ಮಾತನಾಡಬಾರದು ಎಂದು ದಿವಂಗತ ಐಎಎಸ್​ ಅಧಿಕಾರಿ ಡಿಕೆ ರವಿ (DK Ravi) ಅವರ ತಾಯಿ ಅವರು ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.


ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಹೊಸ ಬಾಂಬ್!


ಇವತ್ತು ರೋಹಿಣಿ ಸಿಂಧೂರಿ Get well soon ಅಂತ ಹೇಳಿದ್ದಾರೆ. ಅವರ ಡಿಲಿಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ಎಂದು ಮೊಬೈಲ್ ಸ್ಕ್ರೀನ್​ ಶಾಟ್​ ಒಂದರ ಫೋಟೋ ಶೇರ್ ಮಾಡಿ ಪ್ರಶ್ನಿಸಿದ್ದಾರೆ. ಅಲ್ಲದೆ ಫೋಟೋದಲ್ಲಿ ಇರುವ ನಂಬರ್ ರೋಹಿಣಿ ಸಿಂಧೂರಿ ಅವರದ್ದೇ ಅಲ್ವಾ? ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ: Rohini Sindhuri: ರೋಹಿಣಿ ಸಿಂಧೂರಿಗೆ ಶಾಕ್​; ಐಎಎಸ್​​ ಅಧಿಕಾರಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ


ಡಿ ರೂಪಾ ಅವರ ಪೋಸ್ಟ್​ನಲ್ಲಿ ಏನಿದೆ?


Get well soon ಅಂತಾ ನನಗೆ ಹೇಳಿದ್ದಾರಲ್ಲ ಮಾಧ್ಯಮಗಳಲ್ಲಿ ಇವತ್ತು ರೋಹಿಣಿ ಸಿಂಧೂರಿ, ಅವರ ಡಿಲಿಟೆಡದದ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ನಂಬರ್ ಅವರದ್ದೇ ಅಲ್ವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ? ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ.


ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತುಪಡಿಸಿರುವಾಗ ಪ್ರಾಥಮಿಕ ವಿಚಾರಣೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆದದ್ದು ಯಾರು? ಯಾವುದು? ಅವರೇ ಉತ್ತರಿಸಬೇಕು. Get well soon ಅಂತಾ ಹೇಳುವುದರ ಮೂಲಕ ಮಾನಸಿಕ ಅಸ್ವಸ್ಥತೆ ಬಗ್ಗೆ ಅವರ ಅಭಿಪ್ರಾಯ ಎಷ್ಟು ಚೀಪ್​ ಆಗಿದೆ ಅಂತಾ ತೋರಿಸುತ್ತದೆ. ಅಲ್ಲದೆ, ಇದು ಖಚಿತವಾಗಿ ಇದು ಮಾನನಷ್ಟವಾಗಿದೆ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳುವ ಮೂಲಕ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಐಪಿಎಸ್ ಅಧಿಕಾರಿ ಡಿ ರೂಪಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್​


ಇದನ್ನೂ ಓದಿ: D Roopa-Rohini Sindhuri: ಡಿಕೆ ರವಿ ಮಾನಸಿಕ ಅಸ್ವಸ್ಥ ಎಂದರೆ ನನಗೆ ನೋವಾಗುತ್ತೆ, ಅವಮಾನ ಮಾಡ್ಬೇಡಿ; ಕುಸುಮಾ ಪರೋಕ್ಷ ವಾರ್ನಿಂಗ್


ಅಲ್ಲದೆ, ಇದೇ ವೇಳೆ ಮತ್ತೊಂದು ಪೋಸ್ಟ್​ನಲ್ಲಿ ರೋಹಿಣಿ ಸಿಂಧೂರಿ ಅವರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆಯೂ ಪ್ರಶ್ನಿಸಿದ್ದಾರೆ. ಮಾಧ್ಯಮ ಮಿತ್ರರೇ ಪದೇ ಪದೇ ನನ್ನ ಪ್ರತಿಕ್ರಿಯೆ ಕೇಳುವ ಬದಲು ರೋಹಿಣಿ ಸಿಂಧೂರಿಯನ್ನು ಕೇಳಿ. ಕೆಳಗಿನ ದೂರಿನಲ್ಲಿ ಲೋಕಾಯುಕ್ತದಲ್ಲಿ ರಿಜಿಸ್ಟರ್ ಆಗಿದೆ. ಆಕೆಗೆ 3ನೇ ರಿಮೈಂಡರ್ ಬಂದಿದೆ, ಇದಕ್ಕೆ ಉತ್ತರ ಕೊಡಲು ಹೇಳಿ. ಈ ಬಗ್ಗೆ ಇನ್ನೂ ಉತ್ತರ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.

Published by:Sumanth SN
First published: