• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Rohini Sindhuri: 'ಸಿಂಧೂರಿ ಫೋಟೋ ಫೇಕ್​ ಅಲ್ಲ, ಇದು ಜಸ್ಟ್ ಸ್ಯಾಂಪಲ್​ ಅಷ್ಟೇ'! ರೋಹಿಣಿ ವಿರುದ್ಧ ಡಿ ರೂಪಾ ಮತ್ತಷ್ಟು ಆರೋಪ

Rohini Sindhuri: 'ಸಿಂಧೂರಿ ಫೋಟೋ ಫೇಕ್​ ಅಲ್ಲ, ಇದು ಜಸ್ಟ್ ಸ್ಯಾಂಪಲ್​ ಅಷ್ಟೇ'! ರೋಹಿಣಿ ವಿರುದ್ಧ ಡಿ ರೂಪಾ ಮತ್ತಷ್ಟು ಆರೋಪ

ರೋಹಿಣಿ ಸಿಂಧೂರಿ/ ಡಿ.ರೂಪಾ

ರೋಹಿಣಿ ಸಿಂಧೂರಿ/ ಡಿ.ರೂಪಾ

ಇದು ಜಸ್ಟ್ ಸ್ಯಾಂಪಲ್​ ಅಷ್ಟೇ. ಇಂತಹ ಫೋಟೋಗಳನ್ನು ಒಬ್ಬ ಐಎಎಸ್‌ ಅಧಿಕಾರಿ ಎಲ್ಲರಿಗೂ ಮಾದರಿಯಾಗಬೇಕಾದವರು ಪುರುಷ ಅಧಿಕಾರಿಗೆ ಯಾಕೆ? ಕಳಿಸಬೇಕು. ಈಗ ಸಂಧಾನ ವಿಚಾರ ಕೇಳಿ ಬಂದ ಕಾರಣ ಎಲ್ಲಾ ಅಂಶಗಳ ಬಗ್ಗೆ ಬರೆದಿದ್ದೇನೆ ಎಂದು ಐಪಿಎಸ್ ಅಧಿಕಾರಿ ಡಿ ರೂಪಾ ಸ್ಪಷ್ಟನೆ ನೀಡಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕದಲ್ಲಿ (Karnataka) ಮಹಿಳಾ ಐಎಎಸ್​​-ಐಪಿಎಸ್ (IAS-IPS)​​​ ನಡುವೆ ವಾರ್​​​​ ಶುರುವಾಗಿದೆ. IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಐಪಿಎಸ್​​ ಡಿ.ರೂಪಾ (D.Roopa) 19 ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಮಾಧ್ಯಮಗಳೊಂದಿಗೆ ಮಾತನಾಡಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದು, ಸಿಂಧೂರಿ ಅವರ ಫೋಟೋಗಳು (Photo) ಫೇಕ್​ ಅಲ್ಲ. ಇದು ಜಸ್ಟ್ ಸ್ಯಾಂಪಲ್​ ಅಷ್ಟೇ. ನಾನು ಯಾವುದೇ ತನಿಖಾ ಸಂಸ್ಥೆಗೆ (Investigative Agency) ನನಗೆ ಸಿಕ್ಕಿರುವ ಫೋಟೋಗಳನ್ನು ಹಾಗೂ ಸಾಕ್ಷಿಗಳನ್ನು ನೀಡಲು ಸಿದ್ಧವಾಗಿದ್ದೇನೆ ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾ ಸ್ಪಷ್ಟನೆ ನೀಡಿದ್ದಾರೆ.


ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಐಪಿಎಸ್​ ಅಧಿಕಾರಿ ಡಿ. ರೂಪಾ ಅವರು, ಶಾಸಕರಾದ ಸಾ.ರಾ ಮಹೇಶ್​ ಅವರೊಂದಿಗೆ ಸಂಧಾನ ಅಂತ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಈ ರೀತಿ ಯಾವ ಐಎಎಸ್‌ ಅಧಿಕಾರಿ ಸಂಧಾನಕ್ಕೆ ಅವಕಾಶ ಇದೆ ಅಂತ ನನಗೆ ಗೊತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಪೇಪರ್ ಇರುವಾಗ ಯಾಕೆ ಸಂಧಾನಕ್ಕೆ ಹೋಗಬೇಕು. ಏನು ತಪ್ಪು ಮಾಡಿದ್ದಾರೆ.


ಭಾರತದ ಇತಿಹಾಸದಲ್ಲಿ ನಾನು ಇದೇ ಮೊದಲು ಓರ್ವ ಐಎಎಸ್​ ಅಧಿಕಾರಿ ಸಂಧಾನಕ್ಕೆ ಹೋಗಿದ್ದು ಕೇಳಿದ್ದು, ನಮ್ಮ ಮನೆಯವರು ಐಎಎಸ್​ ಮೌನೀಶ್ ಮೌದ್ಗಿಲ್ ಸೇರಿದಂತೆ ನಾವು ಅನೇಕ ಸಂದರ್ಭದಲ್ಲಿ ನಾವು ರೋಹಿಣಿ ಅವರಿಗೆ ಸಹಾಯ ಮಾಡಿದ್ದೇವೆ. ಅವರಿಗೆ ನಮ್ಮ ಮನೆಯವರು ಸಾಕಷ್ಟು ಡ್ರಾಪ್ಟ್ ರೆಡಿ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Rohini Sindhuri ಖಾಸಗಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಡಿ ರೂಪಾ


ಅಲ್ಲದೆ, ಐಎಎಸ್​ ಅಧಿಕಾರಿ ಶಿಲ್ಪಾ ನಾಗ್ ಜೊತೆ ಜಗಳ ಮಾಡಿಕೊಂಡಿದ್ದರು. ಅನೇಕ ಬೇರೆ ಘಟನೆಗಳು ಆಕೆ ಬಗ್ಗೆ ತಿಳಿದಿದ್ದರಿಂದ ಈಗ ಬರೆದಿದ್ದೇನೆ. ಇವರು ಕೆಲವು ಕಳಿಸಬಾರದ ಪಿಕ್ಸ್​​ಗಳನ್ನು ಕಳಿಸಿದ್ದನ್ನ ಹೇಳಿದ್ದೀನಿ. ಈಗಲೇ ಯಾಕೆ ಕಳುಹಿಸಿದ್ದೀರಿ ಎಂದರೆ ನನಗೆ ಒಂದು ತಿಂಗಳ ಹಿಂದೆ ಈ ಫೋಟೋಗಳು ಸಿಕ್ಕಿತ್ತು.


ಇದು ಜಸ್ಟ್ ಸ್ಯಾಂಪಲ್​ ಅಷ್ಟೇ. ಇಂತಹ ಫೋಟೋಗಳನ್ನು ಒಬ್ಬ ಐಎಎಸ್‌ ಅಧಿಕಾರಿ ಎಲ್ಲರಿಗೂ ಮಾದರಿಯಾಗಬೇಕಾದವರು ಪುರುಷ ಅಧಿಕಾರಿಗೆ ಯಾಕೆ? ಕಳಿಸಬೇಕು. ಈಗ ಸಂಧಾನ ವಿಚಾರ ಕೇಳಿ ಬಂದ ಕಾರಣ ಎಲ್ಲಾ ಅಂಶಗಳ ಬಗ್ಗೆ ಬರೆದಿದ್ದೇನೆ ಎಂದು ವಿವರಿಸಿದರು.


ನನಗೆ ಫೋಟೋ ಸಿಕ್ಕ ಕೂಡಲೇ ಯಾರಿಗೆ ವರದಿ ನೀಡಬೇಕೋ ಅದನ್ನು ಮಾಡಿದ್ದೇನೆ. ಸರ್ಕಾರಕ್ಕೆ ತನಿಖೆಗೆ ಕೊಟ್ಟಿದ್ದಿನಿ, ಇದು ಪ್ರೈವೇಟ್ ವಿಚಾರ ಅಂತ ಬರಲ್ಲ. ಈ ಬಗ್ಗೆ ಹೆಚ್ಚು ಈಗ ಕೇಳಬೇಡಿ, ಅದು ಸರ್ಕಾರದ ಮಟ್ಟದಲ್ಲಿ ತನಿಖೆಯಲ್ಲಿದೆ. ಸರ್ವಿಸ್ ರೂಲ್ ಪ್ರಕಾರ ಇಂಟಿಗ್ರಿಟಿ ಇರಬೇಕು. ಅನೇಕ ಪಾಯಿಂಟ್ಸ್ ಸೀರಿಯಸ್ ಇದೆ.


ಇದನ್ನೂ ಓದಿ: IAS Vs IPS War: ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಆರೋಪಗಳ ಸುರಿಮಳೆ
ಕೋವಿಡ್ ಸಮಯದಲ್ಲಿ ಜನ ಸಾಯುತ್ತಿದ್ದರೆ ಇವರು ಸಾರ್ವಜನಿಕರ ಹಣ ಬಳಸಿ ಸ್ವಿಮ್ಮಿಂಗ್ ಫೂಲ್ ಕಟ್ಟಿಸುತ್ತಾರೆ. ಆಕೆಗೆ ಮಾನವೀಯತೆ ಇದೆಯೇ. ಪ್ರಾಥಮಿಕ ತನಿಖೆ ನಡೆದು ಆರೇಳು ತಿಂಗಳು ಆಯ್ತು, ಇನ್ನೂ ಡಿಇ ಆಗಿಲ್ಲ. ಅವರು ಸಿಂಪತಿ ಗಿಟ್ಟಿಸಿಕೊಂಡು ಅವರ ಮೇಲೆ ಯಾವುದೇ ಕ್ರಮ ಆಗದಂತೆ ನೋಡಿ ಕೊಳ್ಳುತ್ತಿದ್ದಾರೆ. ಇದರಲ್ಲಿ ಪರ್ಸನಲ್ ಏನು ಇಲ್ಲ. ನನಗೆ ಈಗ ಪಿಕ್ಸ್ ಸಿಕ್ಕಿದೆ ಕಳುಹಿಸಿದ್ದೇನೆ. ಕೆಲವರಿಗೆ ವಾಯ್ಸ್ ಇರುತ್ತೆ, ನನ್ನಂತವರು ಮಾತನಾಡುತ್ತಾರೆ. ಯಾರು ತಪ್ಪು ಮಾಡುತ್ತಾರೆ ಅವರು ಉತ್ತರಿಸಬೇಕು ಎಂದರು.

Published by:Sumanth SN
First published: