ಖಾಕಿಯಿಂದ ಫ್ಯಾಷನ್ ಲೋಕದತ್ತ ಐಪಿಎಸ್ ಅಧಿಕಾರಿ: ಕೆಲಸ ತೊರೆದರಾ ರೂಪ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ


Updated:August 11, 2018, 10:32 PM IST
ಖಾಕಿಯಿಂದ ಫ್ಯಾಷನ್ ಲೋಕದತ್ತ ಐಪಿಎಸ್ ಅಧಿಕಾರಿ: ಕೆಲಸ ತೊರೆದರಾ ರೂಪ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

Updated: August 11, 2018, 10:32 PM IST
ಕಿರಣ್​ ಕೆ. ಎನ್​, ನ್ಯೂಸ್​ 18 ಕನ್ನಡ

ಬೆಂಗಳೂರು(ಆ.11): ರೂಪಾ ಡಿ. ಹೆಸರು ಕೇಳಿದಾಗಲೇ ಮನದಲ್ಲಿ ಖಾಕಿ ಧರಿಸಿದ ಆ ಖಡಕ್​ ಐಪಿಎಸ್​ ಅಧಿಕಾರಿಯ ಚಿತ್ರವೊಂದು ಮನದಲ್ಲಿ ಮೂಡುತ್ತದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ದಿಟ್ಟ ಮಹಿಳಾ ಅಧಿಕಾರಿಯವರು. ಸರ್ಕಾರದ ಕೆಂಗಣ್ಣಿಗೀಡಾಗಿದ್ದರೂ, ತಮ್ಮ ಕರ್ತವ್ಯ ನಿಷ್ಠೆಯಿಂದ ಜನರ ಮನೆಮಾತಾದ ಪೊಲೀಸ್​ ಅಧಿಕಾರಿ. ಆದರೀಗ ಖಾಕಿ ಸಮವಸ್ತ್ರ ಧರಿಸಿ ಡ್ಯೂಟಿ ಮಾಡುತ್ತಿದ್ದ ಡಿ. ರೂಪಾ ಫ್ಯಾಷನೇಬಲ್​ ಗೌನ್​ ಧರಿಸಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಅರೇ ಇದೇನಪ್ಪಾ... ಯಾಕೆ ಹೀಗೆ ಮಾಡಿದ್ರು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಾದ್ರೆ ನಿಮ್ಮೆಲ್ಲಾ ಗೊಂದಲಗಳಿಗೆ ತೆರೆ ಎಳೆಯಲಿದೆ ಈ ಸ್ಟೋರಿ.

ಹೌದು ಸರ್ಕಾರಕ್ಕೇ ನಡುಕ ಹುಟ್ಟಿಸಿದ್ದ ಡಿ. ರೂಪಾ ಇದೀಗ ನೀಲಿ ಬಣ್ಣದ ಫ್ಯಾಷನೇಬಲ್​ ಗೌನ್​ ಧರಿಸಿ ಭರ್ಜರಿಯಾಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಹೀಗಂತ ಅವರು ಪೊಲೀಸ್​ ಇಲಾಖೆಗೆ ವಿದಾಯ ಹೇಳಿದ್ದಾರೆ ಅಂತಂದುಕೊಳ್ಳಬೇಡಿ...! ಹೌದು ಇವರು ಈ ಫೋಟೋ ಶೂಟ್​​ ಮಾಡಿಸಿದ್ದು ಮಹಿಳಾ ಸಬಲೀಕರಣಕ್ಕಾಗಿ.

ಕಡುನೀಲಿ ಬಣ್ಣದ ಗೌನ್​ನಲ್ಲಿ ಮಿಂಚುತ್ತಿರುವ ಐಪಿಎಸ್​ ಅಧಿಕಾರಿ ಡಿ. ರೂಪಾ


ಖ್ಯಾತ ಡಿಸೈನರ್​ ಮೀನು ಸರವಣನ್​ ಡಿಸೈನ್​ ಮಾಡಿರುವ ಕಡು ನೀಲಿ ಬಣ್ಣದ ಗೌನ್​ನಲ್ಲಿ ರೂಪಾ ಮಿಂಚುತ್ತಿದ್ದಾರೆ. ರೂಪಾ ಅವರ ಮನೆಯಲ್ಲೇ ನಡೆದಿರುವ ಈ ಫೋಟೋ ಶೂಟ್​ನಲ್ಲಿ ಯಾವ ಮಾಡೆಲ್​ಗೂ ಕಮ್ಮಿ ಇಲ್ಲದಂತೆ ಐಪಿಎಸ್​ ಅಧಿಕಾರಿ ಮಿಂಚುತ್ತಿದ್ದಾರೆ. ಅವರು ಧರಿಸಿದ್ದ ಈ ಕಡುನೀಲಿ ಬಣ್ಣದ ಗೌನ್​ ಪ್ರಚಾರಕ್ಕೆಂದೇ ಬಳಸುತ್ತಿದ್ದು, ಅವರಿಗಾಗಿಯೇ ಈ ಹೊಸ ವಿನ್ಯಾಸವನ್ನು ತಯಾರಿಸಲಾಗಿತ್ತೆಂಬ ಮಾತುಗಳು ಕೇಳಿ ಬಂದಿವೆ.ಮಾಡೆಲ್​ಗಳಿಗೇ ಸೆಡ್ಡು ಹೊಡೆಯುವಂತಿರುವ ಈ  ಫೋಟೋ ಶೂಟ್​ ನೋಡಿದ ಹಲವಾರು ಮಂದಿ ಅವರು ಪೊಲೀಸ್​ ವೃತ್ತಿಯನ್ನು ತೊರೆಯುತ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿರುವ ಐಪಿಎಸ್​ ಅಧಿಕಾರಿ ಡಿ. ರೂಪಾ ಪೊಲೀಸ್​ ವೃತ್ತಿ ಬಿಡುವ ಮಾತೇ ಇಲ್ಲ ಎಂದು ಎಲ್ಲಾ ಗೊಂದಲಗಳನ್ನು ದೂರ ಮಾಡಿದ್ದಾರೆ.
Loading...

ಈ ಫೋಟೋ ಶೂಟ್​ ನೋಡಿ ಪೋಲೀಸ್​ ಕೆಲಸ ತೊರೆಯುತ್ತೇನೆ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ಆದರೆ ನನ್ನ ಈಗಿನ ವೃತ್ತಿ ಬಿಟ್ಟು ಮಾಡೆಲಿಂಗ್​ಗೆ ನಾನು ಹೋಗುವುದಿಲ್ಲ. ಇದು ಅಸಾಧ್ಯದ ಮಾತು. ಆದರೆ ಈ ಮೂಲಕ ಕೇವಲ ಮಾಡೆಲ್ಸ್​ ಹಾಗೂ ನಟಿಯರು ಮಾತ್ರ ಸ್ಟೈಲಿಶ್ ಆಗಿರುವುದಲ್ಲ. ಬದಲಾಗಿ ಓರ್ವ ಸಬಲೀಕೃತ ಮಹಿಳೆಯೂ ಫ್ಯಾಷನೇಬಲ್​ ಆಗಿ ಇರಬಲ್ಲಳು. ಸಾಮಾನ್ಯ ಮಹಿಳೆಯರೂ ಸ್ಟೈಲಿಷ್ ಐಕಾನ್​ ಆಗಬಲ್ಲರು ಎಂಬ ಸಂದೇಶ ನೀಡಬೇಕೆಂದು ನಾನು ಸೇರಿದಂತೆ ಇನ್ನೂ ಮೂರು ನಾಲ್ಕು ಮಂದಿಯಿಂದ ಹೀಗೆ ಫೋಟೋ ಶೂಟ್​ ಮಾಡಿಸಿದ್ದಾರೆ.

ಡಿ. ರೂಪಾ, ಐಪಿಎಸ್​ ಅಧಿಕಾರಿ


ಗೌನ್​ನಲ್ಲಿ ಮಿಂಚಿದ ಪೊಲೀಸ್​ ಅಧಿಕಾರಿ ಡಿ. ರೂಪಾ ಇದು ಸಾಮಾನ್ಯ ಮಹಿಳೆಯರಿಗೆ ಮನೋಸ್ಥೈರ್ಯ ತುಂಬಲು ಮಾಡಿದ್ದು. ತನಗೇನಿದ್ದರೂ ಖಾಕಿ ಸಮವಸ್ತ್ರವೇ ಅಚ್ಚುಮೆಚ್ಚು. ಇದನ್ನು ತಾನ್ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾನ್ಯ ಮಹಿಳೆಯರು ಯಾವುದೇ ಕಾರಣಕ್ಕೂ ತಾವು ಇತರರಿಗಿಂತ ಕಡಿಮೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದೆಂಬ ಮಾತನ್ನೂ ಹೇಳಿದ್ದಾರೆ.

 
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ