• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • D Roopa-Rohini Sindhuri: 'ಯಾರಿಗೆ ಫೋಟೋ ಕಳುಹಿಸಿದ್ದಾರೆ ಅಂತ ರೋಹಿಣಿ ಹೇಳಲಿ'! ದಾಖಲೆ ಸಮೇತ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟ ಡಿ ರೂಪಾ

D Roopa-Rohini Sindhuri: 'ಯಾರಿಗೆ ಫೋಟೋ ಕಳುಹಿಸಿದ್ದಾರೆ ಅಂತ ರೋಹಿಣಿ ಹೇಳಲಿ'! ದಾಖಲೆ ಸಮೇತ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟ ಡಿ ರೂಪಾ

ಐಪಿಎಸ್​ ಅಧಿಕಾರಿ ಡಿ ರೂಪಾ

ಐಪಿಎಸ್​ ಅಧಿಕಾರಿ ಡಿ ರೂಪಾ

ಇಂದು ನಾನು ಮಾಧ್ಯಮಗಳ ಎದುರು ಮಾತಾಡಬಾರದು ಎಂದುಕೊಂಡಿದ್ದೆ. ಆದರೆ ರೋಹಿಣಿ ಅವರು ಬಂದು ದೂರು ಕೊಟ್ಟಿದ್ದಾರೆ. ಅದಕ್ಕೆ ಅವರು ಮಾತನಾಡಿದ್ದ ಸ್ಥಳದಲ್ಲೇ ಉತ್ತರಿಸಲು ಬಂದಿದ್ದೇನೆ. ರೋಹಿಣಿ ಸಿಂಧೂರಿಯನ್ನ ಯಾರು ರಕ್ಷಿಸ್ತಿದ್ದಾರೆ ಅವರ ಮೇಲೆ ಕೂಡ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯದ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ(IAS Officer Rohini Sindhuri), ಐಪಿಎಸ್​ ಅಧಿಕಾರಿ ಡಿ ರೂಪಾ (IPS Officer D. Roopa) ಅವರ ನಡುವಿನ ಜಟಾಪಟಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಂಗಳ ತಲುಪಿದೆ. ಇಂದು ರೋಹಿಣಿ ಸಿಂಧೂರಿ ಅವರು ಸಿಎಸ್ (Chief Secretary)​ ಅವರಿಗೆ ದೂರು ಸಲ್ಲಿಸಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಸ್​ ವಂದಿತಾ ಶರ್ಮಾ (Vandita Sharma ) ಅವರು ಡಿ ರೂಪಾ ಅವರಿಗೆ ಬುಲಾವ್​ ನೀಡಿದ್ದರು. ಈ ಮೇರೆಗೆ ವಿಧಾನಸೌಧಕ್ಕೆ ಆಗಮಿಸಿದ್ದ ಡಿ ರೂಪಾ ಅವರು ದಾಖಲೆಗಳ ಸಮೇತ ರೋಹಿಣಿ ಸಿಂಧೂರಿ ಅವರ ವಿರುದ್ಧ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ರೂಪಾ ಅವರು, ಯಾರಿಗೆ ಫೋಟೋ (Photo) ಕಳುಹಿಸಿದ್ದಾರೆ ಅಂತ ರೋಹಿಣಿ ಅವರೇ ಹೇಳಲಿ, ನಾನು ಯಾಕೆ ಹೇಳಬೇಕು ಎಂದು ಟಾಂಗ್​ ನೀಡಿದ್ದಾರೆ.


ಸರ್ಕಾರದ ಗಮನಕ್ಕೆ ಇದೆಲ್ಲದರ ಬಗ್ಗೆ ಗಮನಕ್ಕೆ ತಂದಿದ್ದೇನೆ


ಮಾಧ್ಯಮಗಳೊಂದಿಗೆ ಮಾತನಾಡಿದ ರೂಪಾ ಅವರು, ಇಂದು ನಾನು ಮಾಧ್ಯಮಗಳ ಎದುರು ಮಾತಾಡಬಾರದು ಎಂದುಕೊಂಡಿದ್ದೆ. ಆದರೆ ರೋಹಿಣಿ ಅವರು ಬಂದು ದೂರು ಕೊಟ್ಟಿದ್ದಾರೆ. ಆದರೆ ಫೋಟೋಗಳು ವೈಯುಕ್ತಿಕ ಆಗಲ್ಲ. ನಾನು ಈಗಾಗಲೇ ಸರ್ಕಾರದ ಗಮನಕ್ಕೆ ಇದೆಲ್ಲದರ ಬಗ್ಗೆ ಗಮನಕ್ಕೆ ತಂದಿದ್ದೇನೆ. ಯಾರು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ, ಅದೂ ಹೊರಗೆ ಬರಬೇಕು.
ರೋಹಿಣಿ ಅವರ ಮೇಲೆ ಲೋಕಾಯುಕ್ತ ದೂರು ದಾಖಲಾಗಿತ್ತು. ಅದನ್ನು ಮರುತನಿಖೆಗೆ ಅನುಮತಿ‌ಕೊಡುವಂತೆ ಮನವಿ ಮಾಡುತ್ತೇನೆ. ಅವರ ಜಾಲಹಳ್ಳಿ ಮನೆ ಬಗ್ಗೆ ರೋಹಿಣಿ ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಅದರ ತನಿಖೆಗೂ ಮನವಿ ಮಾಡುತ್ತೇನೆ. ರೋಹಿಣಿಗೆ ಯಾವ ಶಕ್ತಿ ತಡೆಯುತ್ತಿದೆ ಗೊತ್ತಿಲ್ಲ. ಅವರ ವಿರುದ್ಧ ಯಾವ ಪ್ರಕರಣದಲ್ಲೂ ಕ್ರಮ ಆಗಿಲ್ಲ ಎಂದು ಹೇಳಿದರು.


ಇದನ್ನೂ ಓದಿ: D Roopa-Rohini Sindhuri: ಡಿಕೆ ರವಿ ಮಾನಸಿಕ ಅಸ್ವಸ್ಥ ಎಂದರೆ ನನಗೆ ನೋವಾಗುತ್ತೆ, ಅವಮಾನ ಮಾಡ್ಬೇಡಿ; ಕುಸುಮಾ ಪರೋಕ್ಷ ವಾರ್ನಿಂಗ್


ಇನ್ನು, ದಾಖಲೆ ಸಂಮೇತ ಸಿ‌ಎಸ್ ಕಚೇರಿಗೆ ಆಗಮಿಸಿದ ಡಿ ರೂಪಾ ಅವರು, ಸುಮಾರು 30 ನಿಮಿಷಗಳ ಕಾಲ ಸಿಎಸ್​ ಅವರಿಗೆ ಮಾಹಿತಿ ನೀಡಿದ್ದಾರೆ. ಸಿಎಸ್​​ ಅವರಿಗೆ ದೂರು ನೀಡಿದ ಬಳಿಕ ಮಾತನಾಡಿದ ರೂಪಾ ಅವರು, ಸಿಎಸ್ ಅವರು ದೂರು ತೆಗೆದುಕೊಂಡಿದ್ದಾರೆ. ಕಂಪ್ಲೀಟ್ ಎಲ್ಲಾ ಮಾಹಿತಿ ಸಿಎಸ್​​ಗೆ ನೀಡಿದ್ದೇನೆ, ವಿಚಾರಣೆ ಮಾಡಿ ತನಿಖೆ ಕೈಗೊಳ್ಳುತ್ತೇನೆ ಎಂದಿದ್ದಾರೆ ಎಂದು ತಿಳಿಸಿ ತಮ್ಮ ಕಚೇರಿಗೆ ತೆರಳಿದರು.


ಇತ್ತ ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರೋಹಿಣಿ ಸಿಂಧೂರಿ ಪತಿ ಸುಧೀರ್‌ ರೆಡ್ಡಿ ಅವರು ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ರೂಪಾ ಅವರ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ, ಸಂಜೆ ವೇಳೆಗೆ ಸುಧೀರ್ ಅವರು ಉತ್ತರ ವಿಭಾಗದ ಡಿಸಿಪಿ ದೇವರಾಜ್ ಅವರ ಭೇಟಿಗೂ ಯಶವಂತಪುರದ ಡಿಸಿಪಿ ಕಚೇರಿಗೆ ಆಗಮಿಸಿದ್ದರು.
ಇದನ್ನೂ ಓದಿ: Rohini Sindhuri: 'So Madly Beautiful, 8 ಡಿಲಿಟೆಡ್​ ಫೋಟೋ ಸೀಕ್ರೆಟ್' -ರೋಹಿಣಿ ವಿರುದ್ಧ ರೂಪಾ ಮತ್ತೊಂದು ಬಾಂಬ್


ತಮ್ಮ ವಿರುದ್ಧ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ರೂಪಾ ಅವರು, ಸಿಂಧೂರಿ ಗಂಡ ಪ್ರೆಸ್​ಮೀಟ್ ಮಾಡುತ್ತಾರೆ ಎಂದರೆ ಏನರ್ಥ? ಸಿಂಧೂರಿಗೆ ಮೀಡಿಯಾ ಮುಂದೆ ಬರಲು ಧೈರ್ಯ ಇಲ್ವಾ? ರೋಹಿಣಿ ಸಿಂಧೂರಿ ಬಳಿ ಉತ್ತರಗಳೇ ಇಲ್ವಾ? ಅವರ ಪತಿ ಫೋನ್ ಹ್ಯಾಕ್ ಮಾಡಿದ್ದಾರೆ ಎಂದರೆ ಏನರ್ಥ? ಇವೆಲ್ಲಾ ನಂಬುವ ಮಾತೇ? ಪಾಪಾ ಎಂದು ವ್ಯಂಗ್ಯವಾಡಿದ್ದರು.

Published by:Sumanth SN
First published: