PSI ನೇಮಕಾತಿ ಅಕ್ರಮ ಪ್ರಕರಣ; IPS ಅಧಿಕಾರಿ ಅಮೃತ್ ಪೌಲ್ ಬಂಧನ

ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹಾಗೂ ಅಭ್ಯರ್ಥಿಗಳು ಸೇರಿದಂತೆ ಸಿಐಡಿ ಬೆಂಗಳೂರು ವಿಭಾಗದ ಅಧಿಕಾರಿಗಳು 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಇದೀಗ IPS ಅಧಿಕಾರಿ ಅಮೃತ್ ಪೌಲ್ ಬಂಧಿಸಲಾಗಿದೆ.

ಅಮೃತ್​ ಪೌಲ್​

ಅಮೃತ್​ ಪೌಲ್​

  • Share this:
ಬೆಂಗಳೂರು (ಜು.4) : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (PSI Scam) ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ (Amrit Paul) ಅವರನ್ನು ಸಿಐಡಿ‌ ಪೊಲೀಸರು (CID Police) ಬಂಧಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ಕೆಳ ಹಂತದ ಅಧಿಕಾರಿ- ಸಿಬ್ಬಂದಿಯನ್ನ ಬಂಧನ ಮಾಡುತ್ತಿದ್ದ ಪೊಲೀಸರು‌ ಇದೀಗ ಹಿರಿಯ ಐಪಿಎಸ್ ಅಧಿಕಾರಿಯನ್ನು (Senior IPS Officer) ಬಂಧಿಸಿದ್ದು, ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು. 

ಕೆಲ ದಿನಗಳ ಹಿಂದೆ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ

ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹಾಗೂ ಅಭ್ಯರ್ಥಿಗಳು ಸೇರಿದಂತೆ ಸಿಐಡಿ ಬೆಂಗಳೂರು ವಿಭಾಗದ ಅಧಿಕಾರಿಗಳು 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ರನ್ನು ಐಎಸ್​​ಡಿ ಗೆ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: Bengaluru: ಬೆಂಗಳೂರು ಗಾರ್ಡನ್ ಸಿಟಿಯಿಂದ ಗಾಂಜಾ ಸಿಟಿ ಆಗಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೌರಿಂಗ್ ಆಸ್ಪತ್ರೆಯಲ್ಲಿ ಪೌಲ್  ವೈದ್ಯಕೀಯ ತಪಾಸಣೆ
1995ನೇ ಇಸ್ವಿ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರು ಮೂಲತಃ ಪಂಜಾಬ್‌ನವರು. ಕರ್ನಾಟಕ ಕೇಡರ್‌ನಲ್ಲಿ ಆಯ್ಕೆ ಆಗಿದ್ದ ಅವರ ವಿರುದ್ಧ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ವೇಳೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಿ ವಿಚಾರಣೆ ಕೂಡಾ ನಡೆಸಲಾಗಿತ್ತು. ಇದೀಗ ಅವರ ಬಂಧನವಾಗಿದೆ. ಬಂಧನ ಪ್ರಕ್ರಿಯೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ಪೌಲ್ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ಬೌರಿಂಗ್ ಆಸ್ಪತ್ರೆಯಲ್ಲಿ ಪೌಲ್ ಅವರ ವೈದ್ಯಕೀಯ ತಪಾಸಣೆ ನಡೆಯಿತು.


ಎಡಿಜಿಪಿ ಅಮೃತ್ ಪೌಲ್ ಕೋರ್ಟ್​ಗೆ ಹಾಜರು


ಡಿವೈಎಸ್ಪಿ ಶೇಖರ್ ಅಂಡ್ ಟೀಂ, ಎಡಿಜಿಪಿ ಅಮೃತ್ ಪೌಲ್ ಅವರನ್ನು ಕೋರ್ಟ್​ಗೆ ಕರೆತರಲಾಗಿದೆ. ಸಿಐಡಿ ತಂಡ ಎಡಿಜಿಪಿ ಜೊತೆ ಮತ್ತೆ ನಾಲ್ವರು ಆರೋಪಿಗಳನ್ನು ಕೋರ್ಟ್ ಗೆ ಹಾಜರು ಪಡಿಸಿದೆ. ಈಗಾಗಲೇ ಬಂಧಿತರಾಗಿ ಜೈಲಿನಲ್ಲಿರೋ ನಾಲ್ವರನ್ನು ಬಾಡಿ ವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆದಿದೆ.


ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಬಂಧನ




2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಪ್ರಮೋಷನ್ ಪಡೆದಿದ್ದ ಅಮೃತ್ ಪಾಲ್. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದಿದ್ದು, ಅಮೃತ್ ಪಾಲ್ ವರ್ಗಾವಣೆಗೆ ವಿರೋಧ ಪಕ್ಷಗಳಿಂದ ಒತ್ತಾಯ ಮಾಡಿದ್ರು. ಸಿಐಡಿ ತನಿಖೆ ಬೆನ್ನಲ್ಲೇ ಎತ್ತಂಗಡಿ ಮಾಡಿದ್ದ ಸರ್ಕಾರ. ಏಪ್ರಿಲ್ 27 ರಂದು ನೇಮಕಾತಿ ವಿಭಾಗದಿಂದ ಅಮೃತ್ ಪೌಲ್​ರನ್ನು ಎತ್ತಂಗಡಿ ಮಾಡಲಾಗಿತ್ತು. ನೇಮಕಾತಿ ವಿಭಾಗದ ಹಲವು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರೋದು ಗೊತ್ತಾಗಿತ್ತು. ಈ ಸಂಬಂಧ ಕೆಲ ಅಧಿಕಾರಿಗಳನ್ನ ಬಂಧಿಸಿ ಸಿಐಡಿ ವಿಚಾರಣೆ ನಡೆಸಿದೆ. ಅಮೃತ್ ಪೌಲ್ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ: Yathindra: ಅಪ್ಪನಿಗಾಗಿ ನಾನು ‘ವರುಣ’ ಬಿಟ್ಟುಕೊಡುವೆ ಎಂದ ಯತೀಂದ್ರ; ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸ್ತಾರಾ ಸಿದ್ದು ಪುತ್ರ?

13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಎಡಿಜಿಪಿ

ವಕೀಲರು ಹಾಜರಿಲ್ಲದ ಕಾರಣ ಮತ್ತೆ 10 ನಿಮಿಷ ಮುಂದೂಡಿಕೆ ಮಾಡಿದ್ರು. ವಿಚಾರಣೆ ಮುಂದೂಡಿದ್ದ ಸಂದರ್ಭ ಅಮೃತ್ ಪಾಲ್ ಕಣ್ಣೀರು ಹಾಕಿದ್ದಾರೆ ಕೋರ್ಟ್ ಹಾಲ್ ನ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಅಮೃತ್ ಪೌಲ್ ಪರ ವಕೀಲರಿಂದ ಸಿಐಡಿ ರಿಮೆಂಡ್ ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದ್ದಾರೆ. ಕಕ್ಷಿದಾರರು ತನಿಖೆಗೆ ಸಹಕಾರ ನೀಡ್ತಾ ಇದ್ದಾರೆ. ಹೀಗಾಗಿ ಅವರನ್ನು ಬಂಧನ ಮಾಡಬಾರದು ಎಂದ್ರು . ಆದ್ರೆ ಕೋರ್ಟ್​ ಎಡಿಜಿಪಿ ಅಮೃತ ಪೌಲ್​ ಅವರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

Published by:Pavana HS
First published: