HOME » NEWS » State » IPS OFFICER AJAY HILORI WIFE CASE GET NEW TWIST RMD

ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಮನೆಯ ಗಲಾಟೆಗೆ ಹೊಸ ಟ್ವಿಸ್ಟ್!

 ನಾವು ಉಳಿದುಕೊಳ್ಳುವ ಪ್ಲಾಟ್​​ಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನೆರೆಮನೆಯ ಮಹಿಳೆ ವಂದನಾ ನಿಂದನೆ ಮಾಡಿದ್ದಾರೆ. ಮಕ್ಕಳು ತಂದೆಯೊಂದಿಗೆ ಜೋರಾಗಿ ಮಾತನಾಡುತ್ತಿದ್ದ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹನಿ ಹಿಲೋರಿ ದೂರು ನೀಡಿದ್ದಾರೆ.

news18-kannada
Updated:July 6, 2020, 7:52 AM IST
ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಮನೆಯ ಗಲಾಟೆಗೆ ಹೊಸ ಟ್ವಿಸ್ಟ್!
ಅಜಯ್​ ಹಿಲೊರಿ
  • Share this:
ಬೆಂಗಳೂರು (ಜು.6): ಐಎಂಎ ಹಗರಣದ ಆರೋಪಿ ಹಾಗೂ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಕೌಂಟುಬಿಕ ಗಲಾಟೆ ಹೊಸ ತಿರುವು ಪಡೆದುಕೊಂಡಿದೆ. ನೆರೆ ಮನೆಯ ಮಹಿಳೆ ವಂದನಾ ಸುಧಾ ವೆಂಕಟೇಶ್ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಅಜಯ್​ ಪತ್ನಿ ಹನಿ ಹಿಲೋರಿ ದೂರು ದಾಖಲು ಮಾಡಿದರೆ, ವಂದನಾ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ನಾವು ಉಳಿದುಕೊಳ್ಳುವ ಪ್ಲಾಟ್​​ಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನೆರೆಮನೆಯ ಮಹಿಳೆ ವಂದನಾ ನಿಂದನೆ ಮಾಡಿದ್ದಾರೆ. ಮಕ್ಕಳು ತಂದೆಯೊಂದಿಗೆ ಜೋರಾಗಿ ಮಾತನಾಡುತ್ತಿದ್ದ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹನಿ ಹಿಲೋರಿ ದೂರು ನೀಡಿದ್ದಾರೆ.

ಪೋನ್​ನಲ್ಲಿ ಮಕ್ಕಳು ಮಾತಾಡ್ತಿದ್ದಾಗ ನಿಮಗೆಲ್ಲಾ ಕೊರೊನಾ ಬರಲಿ, ಏನ್ ಜೋರಾಗಿ ಮಾತಾಡ್ತಿದ್ದೀರಿ ಎಂದು ಬೈದು ಹೋಗಿದ್ದರು. ಪೊಲೀಸ್ರಿಗೆ ಮಾಹಿತಿ ನೀಡಿದ್ದು,ಸಿಬ್ಬಂದಿ ಬಂದು ಬುದ್ಧಿವಾದ ಹೇಳಿದಾಗ ಅವರನ್ನೂ ಬೈದಿದ್ದರು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪೊಲೀಸರು ಹೋದ ಬಳಿಕ ಸಂಜೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಮನೆಯಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಹನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಇನ್ನು, ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿರುವ ವಂದನಾ ಫೇಸ್ ಬುಕ್ ನಲ್ಲಿ ಹನಿ ಹಿಲೋರಿ ವಿರುದ್ಧ ಪೋಸ್ಟ್ ಮಾಡಿದ್ದರು. “ಅಜಯ್​ ಹಿಲೋರಿ ನಾವು ಉಳಿದುಕೊಳ್ಳುವ ಅಪಾರ್ಟ್​ಮೆಂಟ್​ನಲ್ಲಿಯೇ ಉಳಿದುಕೊಳ್ಳುತ್ತಾರೆ. ಅವರ ಮಕ್ಕಳು (ಸುಮಾರು 8 ಮಕ್ಕಳು) ಆಡುವಾಗ ದೊಡ್ಡಾದಾಗಿ ಕೂಗುತ್ತಾರೆ. ಈ ವಿಚಾರವಾಗಿ ನಾನು ಅವರ ತಾಯಿಗೆ ತಿಳಿಸಿದ್ದೆ,” ಎಂದು ಪತ್ರದ ಆರಂಭದಲ್ಲಿ ಹೇಳಿಕೊಂಡಿದ್ದರು.

"ಈ ಘಟನೆ ನಂತರ 8 ಪೊಲೀಸ್​ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದರು. ಅಲ್ಲದೆ, ನೀವು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದೀರಿ ಎಂದು ಕೂಗಾಟ ನಡೆಸಿದ್ದರು. ನನ್ನ ಒಪ್ಪಿಗೆ ಇಲ್ಲದೆ ವಿಡಿಯೋ ಶೂಟ್​ ಕೂಡ ಮಾಡಿದ್ದರು. ನಾನು ನೇರವಾಗಿ ಹಿಲೊರಿ ಮನೆಗೆ ತೆರಳಿ ‘ಈ ರೀತಿಯ ಬೆದರಿಕೆ ತಂತ್ರಗಳನ್ನು ಉಪಯೋಗಿಸಬೇಡಿ’ ಎಂದಿದ್ದೆ. ಈ ವೇಳೆ ಹಿಲೊರಿ ಹೆಂಡತಿ ನನ್ನ ಮೇಲೆ ಉಗುಳಿ ಕೆಟ್ಟ ಪದಗಳಿಂದ ಬೈದಿದ್ದರು.  ಹಿಲೊರಿಗೆ ಕೊರೋನಾ ಪಾಸಿಟಿವ್​ ಇದೆ! ಅವರ ಹೆಂಡತಿ ನನ್ನ ಮೇಲೆ ಉಗುಳುತ್ತಾರೆ. ಎಷ್ಟೊಂದು ವಿಚಿತ್ರ! ಈ ಬಗ್ಗೆ ಯಾರು ಕೂಡ ಕ್ರಮ ಕೈಗೊಳ್ಳುವುದಿಲ್ಲ,” ಎಂದು ಬೇಸರ ಹೊರಹಾಕಿದ್ದರು.

ಸದ್ಯ ಎಫ್​ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.
Published by: Rajesh Duggumane
First published: July 6, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading