• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rohini Sindhuri Vs D Roopa: ಡಿ ರೂಪಾ ಆಡಿಯೋ ವೈರಲ್​​; ಐಪಿಎಸ್​ ಅಧಿಕಾರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಗಂಗರಾಜು 'ಫೋಟೋ ಬಾಂಬ್'

Rohini Sindhuri Vs D Roopa: ಡಿ ರೂಪಾ ಆಡಿಯೋ ವೈರಲ್​​; ಐಪಿಎಸ್​ ಅಧಿಕಾರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಗಂಗರಾಜು 'ಫೋಟೋ ಬಾಂಬ್'

ರೋಹಿನಿ ಸಿಂಧೂರಿ ವಸರ್ಸ್ ಡಿ ರೂಪಾ

ರೋಹಿನಿ ಸಿಂಧೂರಿ ವಸರ್ಸ್ ಡಿ ರೂಪಾ

ಒಂದು ಹೆಣ್ಣಾಗಿ ಅಂತಹ ಫೋಟೋಗಳನ್ನು ಕಳುಹಿಸಿ ಈ ಬಗ್ಗೆ ಧ್ವನಿ ಎತ್ತಿ ಎಂದರೆ ಹೇಗೆ? ನಿಮ್ಮದು ಒಂದು ಫೋಟೋ ನಿನ್ನೆ ನನಗೆ ಬಂದಿದೆ. ನಾನು ಅದನ್ನು ಬಿಡುಗಡೆ ಮಾಡಲು ಆಗುತ್ತಾ ಎಂದು ಸಾಮಾಜಿಕ ಕಾರ್ಯಕರ್ತ ಗಂಗರಾಜು ಪ್ರಶ್ನಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಐಪಿಎಸ್​ ಹಿರಿಯ ಅಧಿಕಾರಿ ಡಿ ರೂಪಾ (IPS Officer D Roopa) ಹಾಗೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ನಡುವಿನ ಕದನ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಫೋಸ್ಟ್ ಫೈಟ್ ಆಯ್ತು, ಬಂಗಲೆ ಬಡಿದಾಟವಾಯಿತು, ಈಗ ಆಡಿಯೋ ಸಮರ ಶುರುವಾಗಿದೆ. ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಐಪಿಎಸ್​ ಅಧಿಕಾರಿ ಡಿ ರೂಪಾ ಮಾತಾಡಿರುವ 25 ನಿಮಿಷದ ಆಡಿಯೋ ವೈರಲ್ ಆಗಿದೆ. ಸಾಮಾಜಿಕ ಕಾರ್ಯಕರ್ತ ಗಂಗರಾಜು (Activist Gangaraju) ನಡುವೆ ನಡೆದ ಸಂಭಾಷಣೆಯ ಆಡಿಯೋ ಮತ್ತಷ್ಟು ಕಿಚ್ಚು ಹಚ್ಚಿಸಿದೆ. ಈ ನಡುವೆ ವೈರಲ್​ ಆಡಿಯೋ (Viral Audio) ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗರಾಜು ಅವರು ರೂಪಾ ಅವರ ವಿರುದ್ಧವೇ ಕಿಡಿಕಾರಿದ್ದಾರೆ.


ಆಡಿಯೋದಲ್ಲಿ ಡಿ ರೂಪಾ  ಮಾಡಿರುವ ಆರೋಪಗಳೇನು?


ಡಿ ರೂಪಾ ಹಾಗೂ ಗಂಗರಾಜು ಅವರ ನಡುವೆ ನಡೆದಿದೆ ಎನ್ನಲಾಗಿರುವ ಆಡಿಯೋದಲ್ಲಿ ಐಪಿಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮತ್ತಷ್ಟು ಅರೋಪಗಳನ್ನು ಮಾಡಿದ್ದಾರೆ. ಲ್ಯಾಂಡ್ ತೆಗೆದುಕೊಳ್ಳುವ ವಿಚಾರದಲ್ಲಿ ನನ್ನ ಗಂಡನ ಹತ್ತಿರ ಹೆಲ್ಪ್ ತೆಗೆದುಕೊಂಡಿದ್ದಾಳೆ.


ರೋಹಿಣಿ ಫ್ಯಾಮಿಲಿಯದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್ ಇದೆ. ನನ್ನ ಗಂಡನ ಚಾಟ್ ಮಾಡಿ ಸಾಕಷ್ಟು ಸಹಾಯ ಪಡೆದಿದ್ದಾಳೆ. ಆಕೆಯಿಂದ ನನ್ನ ಸಂಸಾರವೇ ಸರಿ ಇಲ್ಲ. ಆಕೆ ಕ್ಯಾನ್ಸರ್ ಇದ್ದಂತೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ ಎಂದೆಲ್ಲಾ ಡಿ ರೂಪಾ, ಗಂಗರಾಜು ಜೊತೆ ಮಾತಾಡಿದ್ದಾರೆ.




ಇದನ್ನೂ ಓದಿ: Rohini Sindhuri Vs D Roopa: ನಾನು ಗಟ್ಟಿಗಿತ್ತಿ, ಹೋರಾಡುತ್ತೇನೆ; ಆಡಿಯೋ ಲೀಕ್​ ಬೆನ್ನಲ್ಲೇ ಡಿ ರೂಪಾ ಮತ್ತೊಂದು ಪೋಸ್ಟ್


ಗಂಗರಾಜು ಹೇಳಿದ್ದೇನು?


ಒಂದು ಹೆಣ್ಣಾಗಿ ಅಂತಹ ಫೋಟೋಗಳನ್ನು ಕಳುಹಿಸಿ ಈ ಬಗ್ಗೆ ಧ್ವನಿ ಎತ್ತಿ ಎಂದರೆ ಹೇಗೆ? ನಿಮ್ಮದು ಒಂದು ಫೋಟೋ ನಿನ್ನೆ ನನಗೆ ಬಂದಿದೆ. ನಾನು ಅದನ್ನು ಬಿಡುಗಡೆ ಮಾಡಲು ಆಗುತ್ತಾ? ನಿಮ್ಮ ಮೊಬೈಲ್​ನಿಂದಲೇ ಅದೇ ರೀತಿ ಫೋಟೋನಾ ಯಾರಿಗೋ ಕಳುಹಿಸಿದ್ದೀರಿ ಎಂದಿದ್ದಾರೆ.


ನಾವು ಅಂತಹ ಫೋಟೋವನ್ನು ಬಿಡುಗಡೆ ಮಾಡಲು ಆಗುತ್ತಾ? ನಿಮಗೂ ನಮಗೂ ಇರುವ ವ್ಯತ್ಯಾಸ ಇಷ್ಟೇ. ಒಂದು ವೇಳೆ ಈಗ ಅವರು ಅಂತಹ ಫೋಟೋ ಬಂದಿಲ್ಲ ಎಂದು ವಾದ ಮಾಡಿದರೆ, ನಾನು ಅದನ್ನು ಅವರಿಗೆ ಕಳುಹಿಸುತ್ತೇನೆ. ಆ ಫೋಟೋಗೆ ಯಾರೋ ಒಬ್ಬ ವ್ಯಕ್ತಿ ಹೇಗೆ ರಿಯಾಕ್ಟ್ ಮಾಡಿದ್ದಾರೆ ಅಂತ ನನಗೂ ಗೊತ್ತಿದೆ ಎಂದು ಗಂಗರಾಜು ಹೊಸ ಬಾಂಬ್​ ಹಾಕಿದ್ದಾರೆ.


ಹೆಣ್ಣು ಮಕ್ಕಳು ಕಿತ್ತಾಡೋದು ಸರಿ ಅಲ್ಲ!


ವೈಯುಕ್ತಿಕ ಫೋಟೋಗಳು ಯಾರಿಗೋ ಕಳುಹಿಸಿ, ಯಾರೋ ನೋಡಿರುತ್ತಾರೆ. ಆದರೆ ನಾವು ಅದನ್ನು ಇಟ್ಟುಕೊಂಡು ಹೀಗೆ ಮಾಡಲು ಆಗೋದಿಲ್ಲ. ಇಂತಹ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಇಬ್ಬರು ಹೆಣ್ಣು ಮಕ್ಕಳು ಕಿತ್ತಾಡೋದು ಸರಿ ಅಲ್ಲ ಹೇಳುತ್ತೇನೆ. ನಾವು ನೋಡುವ ದೃಷ್ಠಿ ಒಳ್ಳೆದು ಇದ್ದರೆ, ಎಲ್ಲವೂ ಸರಿ ಇರುತ್ತೆ. ನೀವು ಒಂದು ಹೆಣ್ಣಾಗಿ ಆ ಫೋಟೋಗಳನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೀರಿ.




ರೋಹಿಣಿ, ರೂಪಾ ಅವರಿಂದ ನನಗೆ ಏನು ಆಗಬೇಕಿಲ್ಲ


ನಾನು ಪೊಲೀಸ್​ ಠಾಣೆಗೆ ಹೋಗೋದಿಲ್ಲ, ಪೊಲೀಸರಿಂದ ನನಗೆ ನ್ಯಾಯ ಸಿಗುವುದಿಲ್ಲ. ಆದ್ದರಿಂದ ನೇರ ಕೋರ್ಟಿಗೆ ಹೋಗುತ್ತೇನೆ. ಅಲ್ಲಿಯೇ ನನಗೆ ನ್ಯಾಯ ಸಿಗುತ್ತದೆ. ಇಷ್ಟು ದಿನ ನಾನು ಯಾಕೆ ಮಾಧ್ಯಮದ ಎದುರು ಬಂದಿರಲಿಲ್ಲ ಎಂದರೆ, ನನ್ನ ತಂದೆಗೆ ಆರೋಗ್ಯ ಸಮಸ್ಯೆ ಇತ್ತು. ಅವರು ನನಗೆ ಮುಖ್ಯ ಆಗಿದ್ದರು. ಆದ್ದರಿಂದ ಈಗ ಬಂದಿದ್ದೇನೆ. ನಾನು ಈಗ ರೋಹಿಣಿ ಅವರ ಬೆಂಬಲಕ್ಕೆ ಬಂದಿಲ್ಲ. ರೋಹಿಣಿ, ರೂಪಾ ಅವರಿಂದ ನನಗೆ ಏನು ಆಗಬೇಕಿಲ್ಲ. ಆದ್ದರಿಂದ ನಾನು ಈಗ ರೂಪಾ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ: Namma Metro: ಈವರೆಗೆ 38 ಜನರನ್ನು ಬಲಿ ಪಡೆದ ನಮ್ಮ ಮೆಟ್ರೋ ಕಾಮಗಾರಿ; ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ


ಇದೇ ವೇಳೆ ರೋಹಿಣಿ ಸಿಂಧೂರಿ ಮತ್ತು ಸಾ.ರಾ ಮಹೇಶ್​ ಅವರ ಸಂಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗಂಗರಾಜು ಅವರು, ರೂಪಾ ಅವರು ಕರೆ ಮಾಡಿದ್ದಾಗ ನಾನು ಇದೇ ಪ್ರಶ್ನೆಯನ್ನು ಹಾಕಿದ್ದೆ. ನನ್ನ ವಿರುದ್ಧ 9 ಕೇಸ್​​ ಹಾಕಿದ್ದಾಗ ನನಗೂ ಇನ್ಸ್​​ಪೆಕ್ಟರ್ ಕಮಿಷನರ್ ಭೇಟಿ, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಎಂದು ಹೇಳಿದ್ದರು. ಆಗ ನಾನು ಹೇಳಿದ್ದೆ, ಪ್ರಕರಣ ವಿಚಾರಣೆ ಮಾಡಲು ಇಮ್ಸ್​​ಪೆಕ್ಟರ್​ಗಳು ಸುಪ್ರೀಂ, ನೀವು ನನ್ನನ್ನು ವಿಚಾರಣೆಗೆ ಕರೆದಿದ್ದೀರಿ, ಬಂದಿದ್ದೀನಿ. ವಿಚಾರಣೆ ಮಾಡಿ ನನ್ನ ದಾಖಲೆಗಳನ್ನು ಪರಿಶೀಲನೆ ಮಾಡಿ. ಅದರಲ್ಲಿ ತಪ್ಪಿದ್ದರೆ ಕೇಸ್​ ಮಾಡಿ ಬಿ ರಿಪೋರ್ಟ್​​ ಹಾಕಿ, ಕ್ರಮಕೈಗೊಳ್ಳಿ ಅಂತ ಹೇಳಿದ್ದೆ.




ಏಕೆಂದರೆ ನಾನು ಯಾವುದೇ ತಪ್ಪು ಮಾಡಿರಲಿಲ್ಲ. ಆದ್ದರಿಂದ ಸಂಧಾನಕ್ಕೆ ಹೋಗಲಿಲ್ಲ. ಸಿಂಧೂರಿ ಅವರು ಸಾ.ರಾ ಮಹೇಶ್ ಅವರ ಬಳಿ ಹೋಗಿರುವುದು ನಿಜ. ಸಿಂಧೂರಿ ತಪ್ಪು ಮಾಡಿದರೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿತ್ತು. ರೂಪಾ ಅವರು 30ನೇ ತಾರೀಖು ನನ್ನ ಬಳಿ ಕರೆ ಮಾಡಿ ಮಾತನಾಡಿದ್ದರು. ಆ ಬಳಿಕ ನಾನು ರೋಹಿಣಿ ಅವರೊಂದಿಗೂ ನಾನು ಮಾತನಾಡಿದ್ದೇನೆ ಎಂದು ಹೇಳಿದರು.

Published by:Sumanth SN
First published: